ಸೆರೆಯಲ್ಲಿರುವ ವೀರು ಸ್ನೇಹಿತನ ಮುಂದೆ ವಿಜಯಾಂಬಿಕಾ ಆಕ್ರೋಶ, ಶ್ರಾವಣಿಯನ್ನ ಎತ್ತಿಕೊಂಡು ದೇವಾಲಯ ಪ್ರವೇಶಿಸಿದ ಸುಬ್ಬು; ಶ್ರಾವಣಿ ಸುಬ್ರಹ್ಮಣ್ಯ
ಶ್ರಾವಣಿಯನ್ನು ಎತ್ತಿಕೊಂಡು ಸುಬ್ಬು ದೇವಾಲಯದ ಮೆಟ್ಟಿಲು ಹತ್ತುವಂತೆ ಅಜ್ಜಿ ಮಾಡಿದ ಪ್ಲಾನ್ ಸಕ್ಸಸ್. ಸೆರೆಯಲ್ಲಿರುವ ವೀರು ಸ್ನೇಹಿತನ ಎದುರು ವಿಜಯಾಂಬಿಕಾ ಆಕ್ರೋಶ. ಶ್ರೀವಲ್ಲಿ ಜೊತೆ ಡಾನ್ಸ್ ಮಾಡಿ, ಅವಳನ್ನ ಸೊಸೆಯೆಂದು ಕರೆದ ಕಾಂತಮ್ಮ. ಪ್ರೀತಿ ಬಗ್ಗೆ ಸುಬ್ಬು ಮಾತು ಕೇಳಿ ಶ್ರಾವಣಿಗೆ ಖುಷಿ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 9ರ ಸಂಚಿಕೆಯ ವಿವರ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 9ರ ಸಂಚಿಕೆಯಲ್ಲಿ ಸುಬ್ಬು ಹಾಗೂ ಶ್ರಾವಣಿ ಮದುವೆಗೆ ಯಾವುದೇ ವಿಘ್ನ ಬಾರದಿರಲಿ ಎಂದು ದೇವಸ್ಥಾನಕ್ಕೆ ಕರೆದಕೊಂಡು ಬರುತ್ತಾರೆ ಲಲಿತಾದೇವಿ. ಅಲ್ಲಿ ಪ್ರೀತಿಸುತ್ತಿರುವ ಅಥವಾ ಮದುವೆಯಾಗುತ್ತಿರುವ ಹುಡುಗಿಯನ್ನು ಎತ್ತಿಕೊಂಡು ದೇವಾಲಯದ ಮೆಟ್ಟಿಲು ಹತ್ತಿ ದೇವಸ್ಥಾನ ಪ್ರವೇಶಿಸಬೇಕಿರುತ್ತದೆ. ಆದರೆ ಸುಬ್ಬುಗೆ ಶ್ರಾವಣಿ ತನ್ನನ್ನು ಪ್ರೀತಿ ಮಾಡುತ್ತಿರುವುದು, ಅಜ್ಜಿ ಹಾಗೂ ಶ್ರಾವಣಿ ಅವಳ ಮದುವೆ ತನ್ನ ಜೊತೆಗೆ ಆಗುತ್ತದೆ ಅಂದುಕೊಂಡಿರುವುದು, ಇದ್ಯಾವುದರ ಪರಿವೆಯೂ ಇಲ್ಲರುವುದಿಲ್ಲ. ಅವನು ಅವನ ಪಾಡಿಗೆ ಮೆಟ್ಟಿಲು ಹತ್ತಿ ಹೋಗುತ್ತಿರುತ್ತಾನೆ. ಎರಡು ಬಾರಿ ವಾಪಾಸ್ ಕರೆದರೂ ಅವನು ಶ್ರಾವಣಿಯನ್ನು ಎತ್ತಿಕೊಂಡು ಹೋಗುವುದಿಲ್ಲ ಎಂದು ಅರಿವಾದಾಗ ಅಜ್ಜಿ ಒಂದು ಸಖತ್ ಪ್ಲಾನ್ ಮಾಡ್ತಾರೆ.
ಶ್ರಾವಣಿಯನ್ನು ಎತ್ತಿಕೊಂಡು ಮೆಟ್ಟಿಲು ಹತ್ತಿದ ಸುಬ್ಬು
ಮೆಟ್ಟಿಲು ಹತ್ತಿ ಹೋಗುತ್ತಿರುವ ಸುಬ್ಬುವನ್ನು ಮರಳಿ ಕರೆವ ಲಲಿತಾದೇವಿ ‘ನೀನು ನನಗೆ ಮೆಟ್ಟಿಲು ಹತ್ತೋಕೆ ಸಹಾಯ ಮಾಡಬೇಡ, ಆದರೆ ಅದರ ಬದಲು ನಾನು ಹೇಳಿದ ಒಂದು ಕೆಲಸ ಮಾಡಬೇಕು, ಅದೇನೆಂದರೆ ನನ್ನ ಬದಲು ನನ್ನ ಮೊಮ್ಮಗಳು ಶ್ರಾವಣಿಯನ್ನು ಎತ್ತಿಕೊಂಡು ಮೆಟ್ಟಿಲು ಹತ್ತಬೇಕು. ಅವಳಿಗೆ ಮೆಟ್ಟಿಲು ಹತ್ತಲು ಕಷ್ಟವಾಗುತ್ತದೆ‘ ಎಂದು ಹೇಳುತ್ತಾರೆ. ತಾನು ಕೆಲಸ ಮಾಡುವ ಮನೆಯವರ ಸೇವೆ ಮಾಡುವುದೇ ಭಾಗ್ಯ ಎಂದುಕೊಂಡಿರುವ ಸುಬ್ಬು ಮರು ಮಾತನಾಡದೇ ಶ್ರಾವಣಿಯನ್ನು ಎತ್ತಿಕೊಂಡು ಮೆಟ್ಟಿಲು ಹತ್ತಲು ಶುರು ಮಾಡುತ್ತಾನೆ. ಶ್ರಾವಣಿ ಖುಷಿಯಿಲ್ಲಿ ತೇಲಾಡುತ್ತಾಳೆ. ಅಜ್ಜಿಗೂ ತನ್ನ ಪ್ಲಾನ್ ಸಕ್ಸಸ್ ಆಗಿದ್ದಕ್ಕೆ ತುಂಬಾನೇ ಖುಷಿ ಆಗಿರುತ್ತದೆ.
ಪ್ರೀತಿ ಬಗ್ಗೆ ಸುಬ್ಬು ಮಾತು, ಮನದಾಳದಲ್ಲಿ ನೋವು
ಮೆಟ್ಟಿಲು ಹತ್ತುವಾಗ ಅಲ್ಲಿರುವ ಜೋಡಿಗಳು ಜಗಳ ಮಾಡುವುದು ನೋಡಿ ಸುಬ್ಬು ‘ಇದೇನು ಹೀಗೆಲ್ಲಾ ಜಗಳ ಆಡ್ತಾರೆ‘ ಅಂತಾನೆ. ಅದಕ್ಕೆ ಶ್ರಾವಣಿ ‘ಪ್ರೀತಿ ಅಂದ್ರೆ ಹಾಗೆ ಸುಬ್ಬು, ನಿಂಗೆ ಈ ಪ್ರೀತಿ ಬಗ್ಗೆಲ್ಲಾ ಏನೂ ಅನ್ನಿಸೊಲ್ವಾ‘ ಕೇಳ್ತಾಳೆ. ಅದಕ್ಕೆ ಸುಬ್ಬು ‘ನಂಗೆ ಈಗೀನ ಪ್ರೀತಿಯೆಲ್ಲಾ ಇಷ್ಟ ಆಗೊಲ್ಲ ಮೇಡಂ. ನಂಗೆ, ಪ್ರೀತಿ ಅಂದ್ರೆ ಮನಸ್ಸಿನಲ್ಲಿ, ಕಣ್ಣಲ್ಲಿ ತೋರಿಸಬೇಕು. ಪ್ರೀತಿ ಎಂದಿಗೂ ಒತ್ತಾಯದಿಂದ ಬರಬಾರದು, ಅದು ತಾನಾಗಿ ಮೊಗ್ಗಾಗಿ ಅರಳಬೇಕು. ಮನಸ್ಸಿಲ್ಲದ ಪ್ರೀತಿ, ಮದುವೆ ಎಂದಿಗೂ ನಮ್ಮದಾಗಲು ಸಾಧ್ಯವಿಲ್ಲ‘ ಎಂದು ಪ್ರೀತಿಯ ಬಗ್ಗೆ ತನ್ನ ಅಭಿಪ್ರಾಯ ಹೇಳುತ್ತಾನೆ. ಜೊತೆಗೆ ತಾನು ಇಷ್ಟವಿಲ್ಲದ ಮದುವೆ ಆಗುತ್ತಿರುವ ಬಗ್ಗೆ ಬೇಸರದ ಮಾತನ್ನೂ ಹೇಳುತ್ತಾನೆ. ಸುಬ್ಬುಗೆ ಪ್ರೀತಿಯ ಬಗ್ಗೆ ಇರುವ ಅಭಿಪ್ರಾಯ ಕೇಳಿ ಶ್ರಾವಣಿಗೆ ಖುಷಿಯಾಗುತ್ತೆ.
ಪ್ರಥ್ವಿರಾಜ್ ಮುಂದೆ ವಿಜಯಾಂಬಿಕಾ ಆಕ್ರೋಶ
ವೀರೇಂದ್ರ ಸ್ನೇಹಿತ ಪ್ರಥ್ವಿರಾಜ್‌ನನ್ನು ಸೆರೆಯಲ್ಲಿ ಇಟ್ಟಿರುವ ವಿಜಯಾಂಬಿಕಾ ಅವನ ಮುಂದೆ ತಾನು ವೀರು ಹಾಗೂ ಶ್ರಾವಣಿಯನ್ನು ದೂರ ಮಾಡಿರುವುದು, ನಂದಿನಿಯನ್ನು ಕೊಂದಿರುವುದು ಎಲ್ಲವನ್ನೂ ಬಯಲು ಮಾಡುತ್ತಾಳೆ. ಅಲ್ಲದೇ ಪ್ರಥ್ವಿರಾಜ್‌ಗೂ ನಂದಿನಿಗೂ ಸಂಬಂಧ ಕಲ್ಪಿಸಿರುವುದು, ಶ್ರಾವಣಿ ಪ್ರಥ್ವಿರಾಜ್ ಮಗಳೆಂದು ವೀರೇಂದ್ರನನ್ನು ನಂಬಿಸಿ ಅಪ್ಪ–ಮಗಳನ್ನು ದೂರ ಮಾಡಿರುವುದು ಇದೆಲ್ಲವನ್ನೂ ಹೇಳಿ ಪ್ರಥ್ವಿರಾಜ್ ಆಕ್ರೋಶಕ್ಕೆ ಒಳಗಾಗುವಂತೆ ಮಾಡುತ್ತಾಳೆ. ತನಗೆ ಅಧಿಕಾರ ಸಿಗದ ಕಾರಣಕ್ಕೆ ತಾನು ಇಷ್ಟೆಲ್ಲಾ ಮಾಡಿರುವುದು ಎಂದು ಕೂಡ ಆಕೆ ಹೇಳುತ್ತಾಳೆ. ಇಷ್ಟೇ ಅಲ್ಲ, ಆ ಶ್ರಾವಣಿ ಹಾಗೂ ವೀರು ಬಾಳನ್ನು ಇನ್ನಷ್ಟು ನರಕ ಮಾಡುತ್ತೇನೆ, ಅವಳು ವಿಲವಿಲ ಒದ್ದಾಡಬೇಕು ಹಾಗೆ ಮಾಡುತ್ತೇನೆ ಎಂದೆಲ್ಲಾ ರೋಷದಲ್ಲಿ ಹೇಳುತ್ತಾಳೆ, ಮಾತ್ರವಲ್ಲ ನಾ ಮಾಡಿರುವ ಅನಾಚಾರಗಳನ್ನೆಲ್ಲಾ ಕೇಳಿಸಿಕೊಳ್ಳಲು ನನಗೊಂದು ಜೀವ ಬೇಕು, ಆ ಜೀವ ನೀನಾಗಿರಬೇಕು. ಅದಕ್ಕಾಗಿ ನಾನು ನಿನ್ನನ್ನು ಇನ್ನೂ ಕೊಲ್ಲದೇ ಬಿಟ್ಟಿದ್ದೇನೆ‘ ಎಂದು ಹೇಳುತ್ತಾಳೆ. ಕೈಕಾಲು ಕಟ್ಟಿ ಹಾಕಿದ್ರೂ ವಿಜಯಾಂಬಿಕಾ ಮಾತು ಕೇಳಿ ರೋಷದಲ್ಲಿ ಕಿರುಚಾಡುವ ಪ್ರಥ್ವಿರಾಜ್ ಶ್ರಾವಣಿಗೆ ಏನು ಮಾಡಬೇಡ ಎಂದು ಅಂಗಲಾಚಿ ಬೇಡಿಕೊಳ್ಳುತ್ತಾನೆ. ಆದರೆ ವಿಜಯಾಂಬಿಕಾ ಅವನ ಮಾತಿಗೆ ಬೆಲೆ ಕೊಡದೇ ಅಲ್ಲಿಂದ ಹೊರಟು ಬಿಡುತ್ತಾಳೆ.
ವಿಜಯಾಂಬಿಕಾ ಅಂದುಕೊಂಡಂತೆ ವೀರು ಹಾಗೂ ಶ್ರಾವಣಿ ಬಾಳನ್ನು ನರಕ ಮಾಡ್ತಾಳಾ, ಸುಬ್ಬು ಮನಸ್ಸಿನಲ್ಲೂ ಶ್ರಾವಣಿ ಬಗ್ಗೆ ಪ್ರೀತಿ ಇದ್ಯಾ, ಆ ಕಾರಣಕ್ಕೆ ಸುಬ್ಬು ಶ್ರಾವಣಿಯನ್ನು ಎತ್ತಿಕೊಂಡು ಬೆಟ್ಟ ಹತ್ತಲು ಸಾಧ್ಯವಾಯ್ತಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ
‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.
ಪಾತ್ರ ಪರಿಚಯ
ವೀರೇಂದ್ರ– ಮೋಹನ್
ವಿಜಯಾಂಬಿಕಾ – ಸ್ನೇಹ ಈಶ್ವರ್
ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್
ಸುಬ್ಬು – ಅಮೋಘ್
ಪದ್ಮನಾಭ – ಬಾಲರಾಜ್
ಪಿಂಕಿ – ಪ್ರತಿ ಶೆಟ್ಟಿ
ಮದನ್ – ಅರ್ಥವ
ಕಾಂತಮ್ಮ – ಭವಾನಿ ಪ್ರಕಾಶ್
ವಂದನಾ – ಜ್ಯೋತಿ