ಪ್ರಿ ವೆಡ್ಡಿಂಗ್ ಶೂಟ್‌ಗೆ ಹೋದ ಶ್ರಾವಣಿಗೆ ಕಾದಿತ್ತು ಆಘಾತ, ತಿಳಿಯಿತು ಮದನ್ ಜೊತೆ ಮದುವೆ ಅನ್ನೋ ಸತ್ಯ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಸುಬ್ಬು ಜೊತೆ ಖುಷಿ ಖುಷಿಯಾಗಿ ಪ್ರಿ ವೆಡ್ಡಿಂಗ್ ಶೂಟ್‌ಗೆ ಹೋದ ಶ್ರಾವಣಿಗೆ ಕಾದಿರುತ್ತೆ ಬಿಗ್ ಶಾಕ್. ತಾನು ಮದುವೆಯಾಗುತ್ತಿರುವುದು ಮದನ್ ಜೊತೆ ಎಂದು ತಿಳಿದು ಕುಸಿದ ಹೋಗುತ್ತಾಳೆ ಮಿನಿಸ್ಟರ್ ಮಗಳು. ಶ್ರಾವಣಿ ಮನೆಯಲ್ಲಿ ಅಮ್ಮ–ಮಗಳ ಸಮ್ಮಿಲನ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 14ರ ಸಂಚಿಕೆಯಲ್ಲಿ ಏನೇನಾಯ್ತು ನೋಡಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 13ರ ಸಂಚಿಕೆಯಲ್ಲಿ ಮದುವೆ ಸೀರೆ ಖರೀದಿಗೆ ಬಂದಿದ್ದ ಸುಬ್ಬು ಶ್ರಾವಣಿ ಪ್ರಿ ವೆಡ್ಡಿಂಗ್ ಶೂಟ್ ನಡೆಯುವ ಸ್ಥಳಕ್ಕೆ ಹೊರಡುತ್ತಾರೆ. ಸುಬ್ಬು ಜೊತೆಗೆ ತನ್ನ ಪ್ರಿ ವೆಡ್ಡಿಂಗ್ ಶೂಟ್ ಎಂದು ತಿಳಿದುಕೊಂಡಿದ್ದ ಶ್ರಾವಣಿ ಆಕಾಶದಲ್ಲಿ ತೇಲುತ್ತಿರುತ್ತಾಳೆ. ಫೋಟೊಶೂಟ್ ನಡೆಯುವ ಜಾಗಕ್ಕೆ ಹೋದಾಗ ಸುಬ್ಬುಗೆ ರೆಡಿ ಆಗಲು ಹೇಳುತ್ತಾಳೆ ಶ್ರಾವಣಿ. ಆಗ ಸುಬ್ಬು ‘ನಾನ್ಯಾಕೆ ಮೇಡಂ ರೆಡಿ ಆಗ್ಬೇಕು, ನೀವು ರೆಡಿ ಆಗಿ‘ ಎಂದು ಹೇಳುತ್ತಾನೆ. ಶ್ರಾವಣಿಗೆ ಸುಬ್ಬು ಯಾಕೆ ರೆಡಿ ಆಗುತ್ತಿಲ್ಲ ಎನ್ನುವುದು ಅರ್ಥ ಆಗುವುದಿಲ್ಲ. ಈ ಗೊಂದಲದಲ್ಲೇ ಡ್ರೆಸ್ಸಿಂಗ್ ರೂಮ್‌ಗೆ ಹೋಗಿ ಚೆಂದದ ಗೌನ್ ತೊಟ್ಟು ರೆಡಿಯಾಗಿ ಬರುತ್ತಾಳೆ. ಅವಳನ್ನು ನೋಡಿ ಸುಬ್ಬು ಮೆಚ್ಚುಗೆಯ ಮಾತುಗಳನ್ನಾಡುತ್ತಾನೆ.
ಶ್ರಾವಣಿಗೆ ಶಾಕ್ ಮೇಲೆ ಶಾಕ್
‘ಸುಬ್ಬು ಮದುವೆ ಗಂಡು ರೆಡಿ ಆಗೋದು ಬೇಡ್ವಾ, ಹೆಣ್ಣು ಮಾತ್ರ ರೆಡಿ ಆಗೋದಾ‘ ಅಂತ ಪ್ರಶ್ನೆ ಕೇಳ್ತಾಳೆ. ಆಗ ಸುಬ್ಬು ‘ಯಾರ್ ಮೇಡಂ ಹೇಳಿದ್ದು ಗಂಡು ರೆಡಿಯಿಲ್ಲ ಅಂತ. ಅಲ್ಲಿ ನೋಡಿ ಮದುವೆ ಗಂಡು ರೆಡಿ‘ ಎಂದು ಆ ಕಡೆ ತೋರಿಸುತ್ತಾನೆ. ಅಲ್ಲಿ ಮದನ್ ಮದುವೆ ಹುಡುಗನ ಗೆಟಪ್‌ನಲ್ಲಿ ಬರುತ್ತಾನೆ. ಮದನ್‌ನನ್ನು ನೋಡಿ ಶ್ರಾವಣಿಗೆ ದಿಕ್ಕೇ ತೋಚದಂತಾಗುತ್ತದೆ. ಅವನ್ಯಾಕೆ ಇಲ್ಲಿಗೆ ಬಂದ ಎನ್ನುವುದೂ ಅರ್ಥವಾಗುವುದಿಲ್ಲ. ಏನು ಮಾಡಬೇಕು ಎಂದು ಕೂಡ ತಿಳಿಯದೇ ಗಾಬರಿಯಲ್ಲಿ ನಿಂತು ಬಿಡುತ್ತಾಳೆ. ಅವಳಿಗೇ ಅರಿಯದಂತೆ ಕಣ್ಣೀರು ಹರಿಯುತ್ತದೆ. ಫೋಟೊಗ್ರಾಫರ್ ಸ್ಮೈಲ್ ಅಂದ್ರೂ ಅವಳಿಗೆ ನಗಲು ಸಾಧ್ಯವಾಗುವುದಿಲ್ಲ. ಅಷ್ಟೊತ್ತಿಗೆ ಮದನ್ ಸುಬ್ಬು ಬಳಿ ಕಾರಲ್ಲಿ ಮದುವೆ ಇನ್ವಿಟೇಷನ್ ಇದೆ, ತೆಗೆದುಕೊಂಡು ಬಾ ಎಂದು ಕಳುಹಿಸುತ್ತಾನೆ.
ಮದುವೆ ಕಾಗದ ನೋಡಿ ಕುಸಿದು ಹೋಗುವ ಶ್ರಾವಣಿ
ಆ ಕ್ಷಣದವರೆಗೂ ತಾನು ಸುಬ್ಬುವನ್ನೇ ಮದುವೆಯಾಗೋದು ಅಂತ ಕನಸು ಕಂಡಿದ್ದ ಶ್ರಾವಣಿಯ ಮುಂದೆ ಮದುವೆ ಕಾಗದ ಹಿಡಿಯುತ್ತಾನೆ ಮದನ್. ಅದರಲ್ಲಿ ಮದನ್ ಹಾಗೂ ಶ್ರಾವಣಿ ಅಂತಿರುವುದನ್ನು ನೋಡಿ ಶ್ರಾವಣಿಗೆ ದಿಕ್ಕು ತೋಚದಂತಾಗುತ್ತದೆ. ತನ್ನ ಮದುವೆ ನಡೆಯುತ್ತಿರುವುದು ಸುಬ್ಬ ಜೊತೆಗಲ್ಲ, ಮದನ್ ಜೊತೆಗೆ ಎನ್ನುವ ಘೋರ ಸತ್ಯ ಆಕೆಗೆ ತಿಳಿಯುತ್ತದೆ. ಸುಬ್ಬುಗೂ ಆಕೆ ಇದ್ದಕ್ಕಿದ್ದ ಹಾಗೆ ಡಲ್ ಆಗಿರುವುದು ಯಾವ ಕಾರಣಕ್ಕೆ ಎಂಬುದು ಅರ್ಥ ಆಗುವುದಿಲ್ಲ.
ತಾನೆಲ್ಲಿ ಮೋಸ ಹೋದೆ ಎಂದು ಕಂಡುಕೊಂಡ ಶ್ರಾವಣಿ
ಫೋಟೊಶೂಟ್ ಮುಗಿಸಿ ಅಳುತ್ತಾ ಮನೆಗೆ ಓಡಿ ಬರುವ ಶ್ರಾವಣಿಗೆ ತಾನೆಲ್ಲಿ ಮೋಸ ಹೋದೆ, ತನ್ನ ಮದುವೆ ಮದನ್‌ಗೆ ಜೊತೆ ಫಿಕ್ಸ್ ಆಗಿದ್ದು ಹೇಗೆ ಅನ್ನೋದು ಅರಿವಾಗುತ್ತದೆ. ತಾನೇ ಇಲ್ಲದ್ದನ್ನು ಕಲ್ಪಿಸಿಕೊಂಡು ಯಾರು ಹೇಳಿದ್ದನ್ನೂ ಸರಿಯಾಗಿ ಕೇಳಿಸಿಕೊಳ್ಳದೇ ತನ್ನ ಬಾಳಿಗೆ ತಾನೇ ಬೆಂಕಿ ಇಟ್ಟುಕೊಂಡೆ ಎನ್ನುವುದು ಅರಿವಾಗುತ್ತದೆ. ಅಪ್ಪ ತನ್ನ ಮದುವೆ ಅಂತ ಇಷ್ಟೆಲ್ಲಾ ಖುಷಿಯಾಗಿದ್ದಾರೆ, ಈಗ ನಾನೇನು ಮಾಡಲಿ, ನನ್ನ ಮುಂದಿನ ದಾರಿ ಏನು ಎಂದು ತೋಚದೇ ಅಳುತ್ತಾ ಮಲಗಿ ಬಿಡುತ್ತಾಳೆ.
ಕಣ್ಣೆದುರು ಬಂದ ಅಮ್ಮ, ಶ್ರಾವಣಿ ಧಾರೆ ಹರಿಸುವ ಶ್ರಾವಣಿ
ಅಳುತ್ತಾ ಮಲಗಿದ ಶ್ರಾವಣಿ ತನಗೆ ಗೊತ್ತಿಲ್ಲದೇ ನಿದ್ದೆಗೆ ಜಾರುತ್ತಾಳೆ. ಸ್ವಲ್ಪ ಹೊತ್ತಿಗೆ ಶ್ರಾವಣಿಯ ಕೋಣೆಯೊಳಗೆ ಬರುತ್ತಾಳೆ ಆಕೆಯ ಅಮ್ಮ ನಂದಿನಿ. ‘ಮಗಳೇ ಶ್ರಾವಣಿ, ಕಂದಮ್ಮ‘ ಎಂದು ಆಕೆ ಕರೆಯುತ್ತಾಳೆ. ಶ್ರಾವಣಿಗೆ ಎಲ್ಲೋ ಯಾರೋ ಕರೆದಂತಾಗಿ ಎದ್ದು ನೋಡಿದರೆ ಅಮ್ಮಾ ಬಂದು ನಿಂತಿರುತ್ತಾಳೆ. ‘ಮಗಳೇ, ಕಂದಮ್ಮಾ‘ ಎಂದು ಅಮ್ಮ ಕರೆಯುವುದು ನೋಡಿ ಆರಂಭದಲ್ಲಿ ಅಚ್ಚರಿಗೊಳ್ಳುವ ಶ್ರಾವಣಿಗೆ ಅಮ್ಮ ತನ್ನ ಕೋಣೆಯಲ್ಲೇ ಬಂದು ನಿಂತಿರುವುದು ಅರಿವಾಗುತ್ತದೆ. ಓಡಿ ಹೋಗಿ ‘ಅಮ್ಮಾ, ನೀನು ನಿಜವಾಗ್ಲೂ ಬಂದಿದ್ದೀಯಾ‘ ಎಂದು ಹೇಳಿ ತಾಯಿಯನ್ನು ತಬ್ಬಿಕೊಂಡು ಅಳಲು ಶುರು ಮಾಡುತ್ತಾಳೆ.
ಸತ್ತು ಹೋಗಿರುವ ಶ್ರಾವಣಿ ಅಮ್ಮ ನಂದಿನಿ ಶ್ರಾವಣಿ ಕೋಣೆಯಲ್ಲಿ ಕಾಣಿಸಿದ್ದಾದರೂ ಹೇಗೆ, ಮದನ್ ಜೊತೆ ತನ್ನ ಮದುವೆ ಎಂದು ತಿಳಿದ ಶ್ರಾವಣಿ ಮುಂದೇನು ಮಾಡ್ತಾಳೆ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ
‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.
ಪಾತ್ರ ಪರಿಚಯ
ವೀರೇಂದ್ರ– ಮೋಹನ್
ವಿಜಯಾಂಬಿಕಾ – ಸ್ನೇಹ ಈಶ್ವರ್
ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್
ಸುಬ್ಬು – ಅಮೋಘ್
ಪದ್ಮನಾಭ – ಬಾಲರಾಜ್
ಪಿಂಕಿ – ಪ್ರತಿ ಶೆಟ್ಟಿ
ಮದನ್ – ಅರ್ಥವ
ಕಾಂತಮ್ಮ – ಭವಾನಿ ಪ್ರಕಾಶ್
ವಂದನಾ – ಜ್ಯೋತಿ
