ಅಪ್ಪನಿಗೆ ನೋವಾಗುತ್ತೆ, ಮದುವೆ ನಿಲ್ಲಿಸಬೇಡ ಎಂದು ಅಜ್ಜಿಗೆ ಹೇಳಿದ ಶ್ರಾವಣಿ ಮುಂದಿನ ನಡೆ ಏನು? ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಕನಸಿನಲ್ಲಿ ಬಂದ ನಂದಿನಿ ಮಗಳಿಗೆ ಪ್ರೀತಿ ಗೆಲ್ಲುತ್ತೆ, ನಿನ್ನ ಜೊತೆ ನಾನಿದ್ದೀನಿ ಅಂತ ಧೈರ್ಯ ಹೇಳ್ತಾರೆ. ಇತ್ತ ಮದುವೆ ಕಾಗದ ನೋಡಿ ರಂಪಾಟ ಮಾಡುವ ಲಲಿತಾದೇವಿಗೆ ಮೊಮ್ಮಗಳ ಸಮಾಧಾನದ ಮಾತು. ವೀರು ಗೆಳೆಯ ಪ್ರಥ್ವಿರಾಜ್‌ಗೆ ಶ್ರಾವಣಿ ಮದುವೆ ಮದನ್ ಜೊತೆ ಎಂಬ ಸತ್ಯ ಹೇಳಿದ ವಿಜಯಾಂಬಿಕಾ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 15ರ ಸಂಚಿಕೆಯಲ್ಲಿ ಏನೇನಾಯ್ತು ನೋಡಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 15ರ ಸಂಚಿಕೆಯಲ್ಲಿ ಮನೆಯೊಳಗೆ ಅದರಲ್ಲೂ ತನ್ನ ಕೋಣೆಯೊಳಗೆ ಬಂದ ಅಮ್ಮನನ್ನು ಕಂಡು ಸಂತಸಗೊಂಡ ಶ್ರಾವಣಿ ಅಳುತ್ತಾ ತಬ್ಬಿಕೊಂಡು ತನ್ನ ಜೀವನದಲ್ಲಿ ನಡೆದಿರುವುದನ್ನೆಲ್ಲಾ ಹೇಳುತ್ತಾಳೆ. ತಾನು ಸುಬ್ಬುವನ್ನು ಪ್ರೀತಿಸಿದ್ದು, ಆದರೆ ಅಪ್ಪನ ಮಾತನ್ನ ತಪ್ಪಾಗಿ ಅರ್ಥೈಸಿಕೊಂಡು ಮದನ್ ಜೊತೆ ಮದುವೆಗೆ ಒಪ್ಪಿದ್ದು, ಫೋಟೊಶೂಟ್‌ಗೆ ಹೋಗುವವರೆಗೂ ಹುಡುಗ ಸುಬ್ಬುವೇ ಎಂದು ಅಂದುಕೊಂಡಿದ್ದು ಎಲ್ಲವನ್ನೂ ಹೇಳುತ್ತಾಳೆ. ಜೊತೆ ಸುಬ್ಬು ಇಲ್ಲದೇ ತಾನು ಬದುಕಲು ಸಾಧ್ಯವೇ ಇಲ್ಲ, ಹಾಗಂತ ಅಪ್ಪನ ಮನಸ್ಸು ನೋಯಿಸೋದು ಇಷ್ಟ ಇಲ್ಲ ಅಂತ ಕಣ್ಣೀರಿಡುತ್ತಾಳೆ. ಅಮ್ಮನ ಮಡಿಲಲ್ಲಿ ಮಲಗಿ ಮಗುವಾಗ ಶ್ರಾವಣಿಗೆ ಧೈರ್ಯ ಹೇಳುವ ನಂದಿನಿ ನಿಜವಾದ ಪ್ರೀತಿಗೆ ಎಂದಿಗೂ ಸೋಲಾಗುವುದಿಲ್ಲ. ನಿನ್ನ ಪ್ರೀತಿ ನಿಜವಾಗಿದ್ದರೆ ಖಂಡಿತ ಅದು ಗೆಲ್ಲುತ್ತದೆ. ನಿನ್ನ ಜೊತೆ ನಾನಿದ್ದೀನಿ ಕಂದಾ, ನಾನು ಯಾವಾಗಲೂ ನಿನ್ನೊಂದಿಗೇ ಇರುತ್ತೇನೆ‘ ಎಂದು ಧೈರ್ಯ ತುಂಬುತ್ತಾಳೆ. ನೀನು ಈಗ ಬಂದಿದ್ದಿಯಲ್ಲಮ್ಮ, ಇನ್ನು ನನನ್ನು ಬಿಟ್ಟು ಎಲ್ಲಿಗೂ ಹೋಗಬೇಡ, ನೀನು ನನ್ನ ಜೊತೆಗೆ ಇರಬೇಕು, ನೀನು ಎಲ್ಲೂ ಹೋಗೊಲ್ಲ ಅಲ್ವಾ ಅಮ್ಮಾ ಎನ್ನುತ್ತಾ ತಾಯಿಯ ಮಡಿಲಲ್ಲಿ ಮಗಲುವ ಶ್ರಾವಣಿಗೆ ತಕ್ಷಣಕ್ಕೆ ಎಚ್ಚರವಾಗುತ್ತದೆ. ಆದರೆ ಅಲ್ಲಿ ನೋಡಿದರೆ ಅವಳ ಅಮ್ಮ ಇರುವುದಿಲ್ಲ. ಆಗ ತಾನು ಕಂಡಿದ್ದು ಕನಸು ಎಂಬುದು ಅರಿವಾದರೂ ತನ್ನ ತಾಯಿ ತನ್ನ ಜೊತೆಗೆ ಇದ್ದಾಳೆ ಎನ್ನುವುದು ಶ್ರಾವಣಿಗೆ ಖುಷಿ ನೀಡುವ ವಿಚಾರವಾಗಿರುತ್ತದೆ.
ಮದುವೆ ಕಾಗದ ನೋಡಿ ಲಲಿತಾದೇವಿ ರಂಪಾಟ
ಶ್ರಾವಣಿ–ಮದನ್ ಮದುವೆ ಕಾಗದ ಹಿಡಿದು ಅಜ್ಜಿಯ ಬಳಿ ಬರುವ ಪಿಂಕಿ ಮದುವೆ ಕಾಗದ ನೋಡುವಂತೆ ಹೇಳುತ್ತಾಳೆ. ಮದುವೆ ಕಾಗದವನ್ನು ಮೊದಲ ಬಾರಿಗೆ ನೋಡಿದ ಲಲಿತಾದೇವಿಯವರಿಗೆ ಇನ್ನಿಲ್ಲದ ಕೋಪ ಬರುತ್ತದೆ. ಕಾರಣ ಸುಬ್ರಹ್ಮಣ್ಯನ ಹೆಸರು ಇರಬೇಕಾದ ಜಾಗದಲ್ಲಿ ಮದನ್ ಹೆಸರು ಇರುತ್ತದೆ. ಇದನ್ನು ಲಲಿತಾದೇವಿ ಊಹಿಸಿಯೂ ಇರುವುದಿಲ್ಲ. ಕೂಡಲೇ ಕೋಪ ಮಾಡಿಕೊಂಡು ವೀರೇಂದ್ರನನ್ನು ಕರೆಯುತ್ತಾ ‘ಈ ಮನೆಯಲ್ಲಿ ಎಲ್ಲವೂ ಅವರು ಇಷ್ಟ ಬಂದ ಹಾಗೆ ನಡೆಯುತ್ತಿದೆ, ನನ್ನ ಮೊಮ್ಮಗಳು ಇಷ್ಟ ಪಟ್ಟಿದ್ದು ಸುಬ್ಬುವನ್ನು, ಆದರೆ ಈ ವೀರು ಮದನ್ ಜೊತೆ ಅವಳ ಮದುವೆ ಮಾಡುತ್ತಿದ್ದಾನೆ, ಏನಾಗಿದೆ ಇವನಿಗೆ, ಇದನ್ನು ನಾನು ಒಪ್ಪೊಲ್ಲ, ಈ ಮದುವೆ ಮಾಡೋಕೆ ಬಿಡೊಲ್ಲ‘ ಎಂದು ಕೋಪದಲ್ಲಿ ಕಿರುಚುತ್ತಾ ವೀರು ರೂಮ್ ಕಡೆಗೆ ಹೊರಟ ಅಜ್ಜಿಯನ್ನು ತಡೆದು ನಿಲ್ಲಿಸುತ್ತಾಳೆ ಶ್ರಾವಣಿ.
ಮದುವೆ ನಿಲ್ಲಿಸಬೇಡ, ಆದರೆ ನಾನು ಮದನ್ ಜೊತೆ ಮದುವೆ ಆಗೊಲ್ಲಎಂದ ಶ್ರಾವಣಿ
ಕೋಪದಲ್ಲಿರುವ ಅಜ್ಜಿಗೆ ಸಮಾಧಾನ ಮಾಡುವ ಶ್ರಾವಣಿ ‘ಅಜ್ಜಿ ಈ ಮದುವೆ ನಾನು ಒಪ್ಪಿದ ಮೇಲೆಯೇ ಮುಂದುವರಿದಿದ್ದು. ಆದರೆ ನಾನು ಮಾಡಿಕೊಂಡ ಯಡವಟ್ಟು ನನ್ನ ಜೀವನಕ್ಕೆ ಕುಣಿಕೆಯಾಗಿದೆ. ನಾನು ತಪ್ಪು ತಿಳಿದಿದ್ದು ಮಾತ್ರವಲ್ಲ, ನೀನು ಕೂಡ ಅದೇ ಹಾದಿ ಹೋಗುವಂತೆ ಮಾಡಿದೆ. ಈಗ ತುಂಬಾ ಮುಂದುವರಿದಾಗಿದೆ. ಅಪ್ಪ ನನ್ನ ಮದುವೆ ನೆಪದಲ್ಲಿ ನೀನು ಅವರು ಒಂದಾದ್ರಿ ಅಂತ ಖುಷಿಯಾಗಿದ್ದಾರೆ. ನನಗೆ ಸುಬ್ಬುವಷ್ಟೇ ನನ್ನ ಅಪ್ಪ ಕೂಡ ಮುಖ್ಯ ಅಜ್ಜಿ. ನನ್ನ ಕಾರಣಕ್ಕೆ ನಿಮ್ಮ ಮತ್ತು ಅವರ ಮಧ್ಯೆ ಮನಸ್ತಾಪ ಬರುವುದು ನನಗೆ ಇಷ್ಟವಿಲ್ಲ. ಅಪ್ಪ ಅವರ ಅಕ್ಕನನ್ನು ಬಹಳ ನಂಬುತ್ತಾರೆ. ಅವರು ಹೇಳಿದ್ದಕ್ಕೆ ಇಲ್ಲ ಎನ್ನುವುದಿಲ್ಲ. ಈ ಮದುವೆ ಕೂಡ ಅವರ ಅಕ್ಕ ಆಸೆಯಂತೆ ಆಗುತ್ತಿರುವುದು. ನೀನು ಚಿಂತೆ ಮಾಡಬೇಡ, ನಾನು ಮದನ್‌ನನ್ನು ಮದುವೆ ಆಗುವುದಿಲ್ಲ. ಆದರೆ ಈ ಮದುವೆ ಕೂಡ ನಿಲ್ಲುವುದಿಲ್ಲ. ನನ್ನ ಜೊತೆ ನನ್ನ ಅಮ್ಮ ಇದ್ದಾರೆ, ನಾನು ಅದಕ್ಕೆ ಧೈರ್ಯವಾಗಿದ್ದೀನಿ‘ ಎಂದು ಹೇಳಿ ಸಮಾಧಾನ ಮಾಡುತ್ತಾಳೆ.
ಪ್ರಥ್ವಿರಾಜ್‌ಗೆ ಮದನ್ ಜೊತೆ ಶ್ರಾವಣಿ ಮದುವೆ ಎನ್ನುವ ವಿಜಯಾಂಬಿಕಾ
ವೀರೇಂದ್ರ ಕುಟುಂಬ ಹಾಗೂ ಸಾಲಿಗ್ರಾಮದ ದೊಡ್ಡಮನೆಯ ಮೇಲೆ ದ್ವೇಷ ಕಾರುವ ವಿಜಯಾಂಬಿಕಾ ಆ ಮನೆಯನ್ನು ನಾಶ ಮಾಡಿಯೇ ಮಾಡುತ್ತೇನೆ ಎಂದು ಪಣ ತೊಟ್ಟಿರುತ್ತಾಳೆ. ಅದಕ್ಕಾಗಿ ನಂದಿನಿಯ ಕೊಲೆ ಅವಳು ವೀರೇಂದ್ರನ ಗೆಳೆಯ ಪ್ರಥ್ವಿರಾಜ್ ಜೊತೆ ಓಡಿ ಹೋಗಿದ್ದಾಳೆ ಎಂದು ಕಥೆ ಕಟ್ಟಿ ನಂಬಿಸಿ ಇರುತ್ತಾಳೆ. ನಂದಿನಿಯನ್ನು ಕೊಲೆ ಮಾಡಿ, ಪ್ರಥ್ವಿರಾಜ್‌ನನ್ನು ಕೂಡಿ ಹಾಕಿರುತ್ತಾಳೆ. ಆದರೆ ಆಕೆ ತಾನು ಮಾಡಿದ ಎಲ್ಲಾ ಕೆಟ್ಟ ಕೆಲಸಗಳನ್ನು ಪ್ರಥ್ವಿರಾಜ್ ಮುಂದೆ ಆಗಾಗ ಬಂದು ಹೇಳುತ್ತಿರುತ್ತಾಳೆ. ಇದೀಗ ಶ್ರಾವಣಿ–ಮದನ್ ಮದುವೆ ವಿಚಾರ ಹೇಳಲು ಪ್ರಥ್ವಿರಾಜ್ ಮುಂದೆ ಬರುವ ವಿಜಯಾಂಬಿಕಾ ಆರಂಭದಲ್ಲಿ ನಂದಿನಿ ಮಗಳು ಶ್ರಾವಣಿಗೆ ಮದುವೆ ಎಂದು ಹೇಳಿ ಪ್ರಥ್ವಿರಾಜ್‌ಗೆ ಖುಷಿ ಪಡಿಸುವ ವಿಜಯಾಂಬಿಕಾ ಕೊನೆಯಲ್ಲಿ ತನ್ನ ಮಗ ಮದನ್ ಜೊತೆ ಶ್ರಾವಣಿ ಮದುವೆಯಾಗುತ್ತಿರುವುದು ಎಂದು ಹೇಳಿ ಬೇಸರ ಮೂಡುವಂತೆ ಮಾಡುತ್ತಾಳೆ. ಮಾತ್ರವಲ್ಲ ನೀನು ಈ ಮದುವೆಗೆ ಬರಬೇಕು, ಹೇಗೆ ಬರುತ್ತೀಯಾ ನಿನಗೆ ಬಿಟ್ಟಿದ್ದು, ನಾನು ನಿನ್ನನ್ನು ಬಿಡುಗಡೆ ಮಾಡುತ್ತೇನೆ. ಆದರೆ ನೀನು ಬಿಡುಗಡೆಯಾಗುವ ಹೊತ್ತಿಗೆ ನಿನ್ನ ಸ್ನೇಹಿತ ವೀರೇಂದ್ರ, ದೊಡ್ಡಮನೆ, ಶ್ರಾವಣಿ, ಲಲಿತಾದೇವಿ ಎಲ್ಲರೂ ನಾಶವಾಗಿ ಇರ್ತಾರೆ ಎಂದು ಎಂದಿನಂತೆ ತನ್ನ ಅಟ್ಟಹಾಸ ಮೆರೆಯುತ್ತಾಳೆ.
ವಿಜಯಾಂಬಿಕಾ ಅಂದುಕೊಂಡಿದ್ದೆಲ್ಲವೂ ನೆರವೇರಲು ಸಾಧ್ಯವೇ, ಶ್ರಾವಣಿ ಮನಸ್ಸಿನಲ್ಲಿ ಏನು ಓಡುತ್ತಿದೆ, ಅವಳ ಮುಂದಿನ ದಾರಿ ಏನು, ಮದನ್ ಜೊತೆ ಮದುವೆಯಾಗುತ್ತಿಲ್ಲ, ಆದರೂ ಈ ಮದುವೆ ನಡೆಯುತ್ತೆ ಅಂತ ಶ್ರಾವಣಿ ಹೇಳ್ತಾ ಇರೋದು ಏಕೆ, ಈ ಎಲ್ಲವನ್ನು ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ
‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.
ಪಾತ್ರ ಪರಿಚಯ
ವೀರೇಂದ್ರ– ಮೋಹನ್
ವಿಜಯಾಂಬಿಕಾ – ಸ್ನೇಹ ಈಶ್ವರ್
ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್
ಸುಬ್ಬು – ಅಮೋಘ್
ಪದ್ಮನಾಭ – ಬಾಲರಾಜ್
ಪಿಂಕಿ – ಪ್ರತಿ ಶೆಟ್ಟಿ
ಮದನ್ – ಅರ್ಥವ
ಕಾಂತಮ್ಮ – ಭವಾನಿ ಪ್ರಕಾಶ್
ವಂದನಾ – ಜ್ಯೋತಿ
