ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ: ನನ್ನ ಮನಸ್ಸಲ್ಲಿ ಇರೋದು ನೀವೇ ಮೇಡಂ ಎಂದ ಸುಬ್ಬು, ಮತ್ತೆ ಅಪಾರ್ಥ ಮಾಡಿಕೊಂಡ ಶ್ರಾವಣಿ
ಕನ್ನಡ ಸುದ್ದಿ  /  ಮನರಂಜನೆ  /  ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ: ನನ್ನ ಮನಸ್ಸಲ್ಲಿ ಇರೋದು ನೀವೇ ಮೇಡಂ ಎಂದ ಸುಬ್ಬು, ಮತ್ತೆ ಅಪಾರ್ಥ ಮಾಡಿಕೊಂಡ ಶ್ರಾವಣಿ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ: ನನ್ನ ಮನಸ್ಸಲ್ಲಿ ಇರೋದು ನೀವೇ ಮೇಡಂ ಎಂದ ಸುಬ್ಬು, ಮತ್ತೆ ಅಪಾರ್ಥ ಮಾಡಿಕೊಂಡ ಶ್ರಾವಣಿ

ಎಲ್ಲವನ್ನೂ ಧೈರ್ಯವಾಗಿ ಎದುರಿಸಿ ಪ್ರೀತಿಸಿದ ಹುಡುಗನನ್ನು ಪಡೆದೇ ತೀರುತ್ತೇನೆ ಎಂದುಕೊಂಡ ಶ್ರಾವಣಿಗೆ ಸುಬ್ಬು ತನ್ನ ಪ್ರೀತಿಯ ಬಗ್ಗೆ ಶ್ರೀವಲ್ಲಿ ಬಳಿ ಹೇಳಿದ್ದು ನೆನಪಾಗುತ್ತೆ. ಇತ್ತ ಸುಬ್ಬು ಮನೆಯಲ್ಲಿ ಚಪ್ಪರ ಶಾಸ್ತ್ರದ ಸಂಭ್ರಮವಿದ್ದರೆ, ಅತ್ತ ಶ್ರಾವಣಿ ಮನೆಯಲ್ಲಿ ಮದುವೆ ಸಡಗರ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 16ರ ಸಂಚಿಕೆಯಲ್ಲಿ ಏನೇನಾಯ್ತು ನೋಡಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 16ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 16ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 16ರ ಸಂಚಿಕೆಯಲ್ಲಿ ಶ್ರಾವಣಿಯನ್ನು ಹೊತ್ತು ದೇವಸ್ಥಾನಕ್ಕೆ ಹೋಗುವಾಗ ಸುಬ್ಬು ಪ್ರೀತಿ ಬಗ್ಗೆ ಹೇಳಿರುವ ಮಾತು ಶ್ರಾವಣಿಗೆ ನೆನಪಾಗುತ್ತದೆ. ಎಲ್ಲವನ್ನು, ಎಲ್ಲರನ್ನು ಎದುರಿಸಿ ಪ್ರೀತಿ ಪಡೆಯುತ್ತೇನೆ ಎಂದು ಧೈರ್ಯವಾಗಿ ಮದುವೆ ಕಾರ್ಯಕ್ರಮಗಳಿಗೆ ಅಣಿಯಾಗಲು ಹೊರಟ ಶ್ರಾವಣಿಗೆ ಸಡನ್ ಆಗಿ ಸುಬ್ಬು ಶ್ರೀವಲ್ಲಿ ಬಳಿ ತನ್ನ ಮನಸ್ಸಲ್ಲಿ ಒಬ್ಬಳು ಹುಡುಗಿ ಇದ್ದಾಳೆ, ಅವಳನ್ನು ನಾನು ನನ್ನ ಮನಸ್ಸಿನಲ್ಲಿ ದೇವತೆಯಂತೆ ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದು ನೆನಪಾಗುತ್ತದೆ. ಆಗ ಶ್ರಾವಣಿಗೆ ಸುಬ್ಬು ಮನಸ್ಸಿನಲ್ಲಿ ಇರುವ ಹುಡುಗಿ ಯಾರೆಂದು ತಿಳಿಯುವ ಕುತೂಹಲ ಮೂಡುತ್ತದೆ.

ಸುಬ್ಬು ಮನೆಯಲ್ಲಿ ಚಪ್ಪರದ ಶಾಸ್ತ್ರದ ಸಂಭ್ರಮ

ಸುಬ್ಬು ಮನೆಯಲ್ಲಿ ಮದುವೆ ಕಳೆ ತುಂಬಿರುತ್ತದೆ. ನೆಂಟರಿಷ್ಟರೆಲ್ಲಾ ಮದುವೆಗೆ ಬಂದಿರುತ್ತಾರೆ. ಮನೆಯೆಲ್ಲಾ ಸಿಂಗಾರಗೊಂಡಿರುತ್ತದೆ. ಎಲ್ಲರೂ ಸಂಭ್ರಮದಿಂದ ಓಡಾಡುತ್ತಿರುತ್ತಾರೆ. ಸುಬ್ಬು ಹಾಗೂ ಪದ್ಮನಾಭ ಮಾತ್ರ ಶ್ರಾವಣಿ ಮನೆಗೆ ಹೋಗಿರುತ್ತಾರೆ. ಚಪ್ಪರ ಶಾಸ್ತ್ರದ ಹೊತ್ತಿಗೆ ಸುಬ್ಬು ಬರಬಹುದು ಎಂದುಕೊಂಡಿದ್ದ ಇಂದ್ರಮ್ಮ ಆಗಲೂ ಬಾರದೇ ಇದ್ದಾಗ ತಕರಾರು ತೆಗೆಯುತ್ತಾರೆ. ಕೊನೆಗೆ ಅವರನ್ನು ಸಮಾಧಾನ ಮಾಡುವ ವಿಶಾಲಾಕ್ಷ್ಮೀ ಹಾಗೂ ಮನೆಯವರು ಚಪ್ಪರ ಪೂಜೆ ಶುರು ಮಾಡುತ್ತಾರೆ. ಆದರೆ ಕಾಂತಮ್ಮನಿಗೆ ಮಾತ್ರ ಎಲ್ಲೋ ಏನೋ ಯಡವಟ್ಟಾಗಬಹುದು ಎನ್ನುವ ಸೂಚನೆ ಸಿಗುತ್ತದೆ. ಅದನ್ನು ತನ್ನ ಮಗ ಸುಂದರನ ಬಳಿ ಹೇಳಿಕೊಳ್ಳುತ್ತಾಳೆ.

ಪ್ರಥ್ವಿರಾಜ್ ಕೈಯಲ್ಲಿದೆ ವಿಜಯಾಂಬಿಕಾ ಗುಟ್ಟು ರಟ್ಟು ಮಾಡುವ ಅಸ್ತ್ರ

ಸೆರೆಯಲ್ಲಿರುವ ವೀರು ಗೆಳೆಯ ಪ್ರಥ್ವಿರಾಜ್ ಮುಂದೆ ವಿಜಯಾಂಬಿಕಾ ತನ್ನ ಕರ್ಮಕಾಂಡಗಳನ್ನೆಲ್ಲಾ ಬಿಚ್ಚಿಡುತ್ತಾಳೆ. ಮಾತ್ರವಲ್ಲ ತನ್ನ ಮಗನ ಜೊತೆಗೆ ಶ್ರಾವಣಿ ಮದುವೆ ಎಂದು ಹೇಳಿದಾಗ ರೋಷಗೊಳ್ಳುವ ಪ್ರಥ್ವಿರಾಜ್ ವಿಜಯಾಂಬಿಕಾ ಕತ್ತು ಹಿಸುಕಲು ನೋಡುತ್ತಾನೆ. ಅವನಿಗೆ ಬೈದು ತನ್ನ ಚೇಲಾಗಳ ಬಳಿ ಸೆಕ್ಯೂರಿಟಿ ಹೆಚ್ಚು ಮಾಡಿ, ಯಾವುದೇ ಕಾರಣಕ್ಕೂ ಇವನು ತಪ್ಪಿಸಿಕೊಂಡು ಹೋಗಬಾರದು ಎಂದು ಹೇಳಿ ಅಲ್ಲಿಂದ ಹೊರಡುತ್ತಾಳೆ. ಆದರೆ ಪ್ರಥ್ವಿರಾಜ್ ಮಾತ್ರ ತನ್ನ ಪ್ರಾಣ ಹೋದರೂ ಸರಿ ನಾನು ಶ್ರಾವಣಿ ಮದುವೆಯನ್ನು ಮದನ್ ಜೊತೆ ಆಗಲು ಬಿಡುವುದಿಲ್ಲ, ನಾನು ದೊಡ್ಡ ಮನೆಗಾಗಿ ಜೀವ ಕೊಟ್ಟರೂ ಸರಿ, ಆದರೆ ನನ್ನ ಕೈಯಲ್ಲಿರುವ ಈ ವಸ್ತುವನ್ನು ದೊಡ್ಡ ಮನೆಯವರಿಗೆ ತಲುಪಿಸಬೇಕು, ಅದಕ್ಕೂ ಮೊದಲು ಹೇಗಾದರೂ ಇಲ್ಲಿಂದ ತಪ್ಪಿಸಿಕೊಳ್ಳಬೇಕು ಎಂದು ಪಣ ತೊಡುತ್ತಾನೆ. ವಿಜಯಾಂಬಿಕಾ ಅಸಲಿಯತ್ತು ಬಯಲು ಮಾಡುವ ದೊಡ್ಡ ಅಸ್ತ್ರವೇ ಪ್ರಥ್ವಿರಾಜ್ ಕೈಯಲ್ಲಿರುತ್ತದೆ. ಅವಳು ಅವನನ್ನು ಕೂಡಿ ಹಾಕಿದ ದಿನದಿಂದ ಆತ ಅದನ್ನು ತನ್ನ ಮುಷ್ಟಿಯಲ್ಲಿ ಇರಿಸಿಕೊಂಡೇ ಇರುತ್ತಾನೆ.

ಸುಬ್ಬು ಮಾತು ಕೇಳಿ ಶ್ರಾವಣಿಗೆ ಅಚ್ಚರಿ

ಸುಬ್ಬು ಮನಸ್ಸಲ್ಲಿ ಇರುವ ಹುಡುಗಿ ಯಾರು ಎಂದು ತಿಳಿದುಕೊಳ್ಳಬೇಕು ಎಂದು ಯೋಚಿಸುತ್ತಿರುವ ಹೊತ್ತಿನಲ್ಲೇ ಶ್ರಾವಣಿ ಎದುರು ಬರುತ್ತಾನೆ ಸುಬ್ಬು. ಮೇಡಂ ಕೆಳಗಡೆ ಎಲ್ಲಾ ತಯಾರಿ ಆಗಿದೆ. ನಿಮಗಾಗಿ ಎಲ್ಲರೂ ಕಾಯುತ್ತಿದ್ದಾರೆ, ನೀವು ಬನ್ನಿ ಮೇಡಂ ಎಂದು ಕರೆಯಲು ಬರುತ್ತಾನೆ. ಆದರೆ ಶ್ರಾವಣಿ ಮಾತ್ರ ಸುಬ್ಬು ನಾನು ನಿನ್ನ ಜೊತೆ ಮಾತನಾಡಬೇಕು ಅಂತ ಹೇಳ್ತಾಳೆ. ಅಯ್ಯೋ ಮೇಡಂ, ನನ್ನ ಜೊತೆ ಈಗೇನು ಜೀವನಪೂರ್ತಿ ಮಾತನಾಡಬಹುದು. ಆದರೆ ಅಲ್ಲಿ ಮದುವೆ ಕೆಲಸಗಳಿಗೆ ತಡ ಆಗುತ್ತಿದೆ. ನೀವು ಬಂದರೆ ಮದುವೆ ಕಾರ್ಯಗಳು ಶುರು ಮಾಡಬಹುದು ಬನ್ನಿ ಹೋಗೋಣ ಅಂತಾನೆ. ಇದರಿಂದ ಕೋಪಗೊಳ್ಳುವ ಶ್ರಾವಣಿ ‘ಸುಬ್ಬು ನಾನು ಬಂದು ಪ್ರಶ್ನೆ ಕೇಳ್ತೀನಿ ಆ ಪ್ರಶ್ನೆಗೆ ಈಗಲೇ ಉತ್ತರ ಬೇಕು, ನೀನು ಯಾರನ್ನಾದರೂ ಪ್ರೀತಿ ಮಾಡ್ತಾ ಇದ್ದೀಯಾ, ನಿನ್ನ ಮನಸ್ಸಲ್ಲಿ ಇರೋದು ಯಾರ‘ ಎಂದು ಪ್ರಶ್ನೆ ಮಾಡ್ತಾಳೆ. ಅದಕ್ಕೆ ಸುಬ್ಬು ಮೇಡಂ, ಈ ಕ್ಷಣಕ್ಕೂ ನನ್ನ ಮನಸ್ಸಲ್ಲಿ ಇರೋದು ನೀವು, ನೀವು ಮಾತ್ರ‘ ಅಂತ ಹೇಳ್ತಾನೆ. ಸುಬ್ಬು ಉತ್ತರ ಶ್ರಾವಣಿಗೆ ಅಚ್ಚರಿ ಮೂಡಿಸುತ್ತದೆ.

ಸುಬ್ಬು ಕೂಡ ಶ್ರಾವಣಿಯನ್ನು ಪ್ರೀತಿಸುತ್ತಿದ್ದಾನಾ, ನನ್ನ ಮನಸ್ಸಲ್ಲಿ ಇರೋದು ನೀವೇ ಅಂತ ಸುಬ್ಬು ಹೇಳಿದ್ದಾದರೂ ಏಕೆ, ಅಷ್ಟು ವರ್ಷಗಳಿಂದ ಪ್ರಥ್ವಿರಾಜ್ ತನ್ನ ಕೈಯಲ್ಲಿ ಇರಿಸಿಕೊಂಡಿರುವ ವಸ್ತು ಯಾವುದು, ವಿಜಯಾಂಬಿಕಾ ಬಂಡವಾಳ ಬಯಲು ಮಾಡಲು ಸೆರೆ ತಪ್ಪಿಸಿಕೊಂಡು ಬರ್ತಾನಾ ಪ್ರಥ್ವಿರಾಜ್ ಸುಬ್ಬು–ಮದನ್‌, ಶ್ರಾವಣಿ–ಶ್ರೀವಲ್ಲಿ ಮದುವೆ ಯಾವುದೇ ವಿಘ್ನವಿಲ್ಲದೇ ನೆರವೇರುವುದೇ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ವಂದನಾ – ಜ್ಯೋತಿ

Whats_app_banner