ಹಲವು ವರ್ಷಗಳ ನಂತರ ಸೆರೆಯಿಂದ ತಪ್ಪಿಸಿಕೊಂಡ ಪೃಥ್ವಿರಾಜ್, ವಿಜಯಾಂಬಿಕಾಗೆ ಕಾದಿದ್ಯಾ ಗಂಡಾಂತರ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಹಲವು ವರ್ಷಗಳ ನಂತರ ಸೆರೆಯಿಂದ ತಪ್ಪಿಸಿಕೊಂಡ ಪೃಥ್ವಿರಾಜ್, ವಿಜಯಾಂಬಿಕಾಗೆ ಕಾದಿದ್ಯಾ ಗಂಡಾಂತರ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಹಲವು ವರ್ಷಗಳ ನಂತರ ಸೆರೆಯಿಂದ ತಪ್ಪಿಸಿಕೊಂಡ ಪೃಥ್ವಿರಾಜ್, ವಿಜಯಾಂಬಿಕಾಗೆ ಕಾದಿದ್ಯಾ ಗಂಡಾಂತರ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಸುಬ್ಬು ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಇಲ್ಲ ಎಂದು ತಿಳಿದು ಕಣ್ಣೀರು ಹಾಕುವ ಶ್ರಾವಣಿ. ಎಷ್ಟೋ ವರ್ಷಗಳ ನಂತರ ಸೆರೆಯಿಂದ ತಪ್ಪಿಸಿಕೊಂಡ ಪೃಥ್ವಿರಾಜ್. ಶ್ರಾವಣಿ, ಸುಬ್ಬು ಮನೆಯಲ್ಲಿ ಮದುವೆ ಸಂಭ್ರಮ. ರೌಡಿಗಳ ಜೊತೆ ವಿಜಯಾಂಬಿಕಾ ಮಾತನಾಡುವಾಗಲೇ ಹಿಂದಿನಿಂದ ಬಂದ ವೀರೇಂದ್ರ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 17ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 17ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 17ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 17ರ ಸಂಚಿಕೆಯಲ್ಲಿ ‘ಈ ಕ್ಷಣದಲ್ಲೂ ನೀವೇ ಮೇಡಂ ನನ್ನ ಮನಸ್ಸಿನಲ್ಲಿ ಇರೋದು‘ ಅಂತ ಸುಬ್ಬು ಹೇಳಿದ್ದು ಕೇಳಿ ಶ್ರಾವಣಿ ಕ್ಷಣ ಖುಷಿಯಲ್ಲಿ ತೇಲಾಡುತ್ತಾಳೆ. ಆದರೆ ಮುಂದೆ ಅವನು ‘ನೀವು ನನ್ನ ಕರ್ತವ್ಯ, ನನ್ನ ಜವಾ‌ಬ್ದಾರಿ. ಇಂದು ನಿಮ್ಮ ಮದುವೆ. ನಿಮ್ಮ ಮದುವೆ ಚೆನ್ನಾಗಿ ಆಗಬೇಕು, ನೀವು ಜೀವನಪೂರ್ತಿ ಖುಷಿ ಖುಷಿಯಾಗಿ ಇರಬೇಕು ಅನ್ನೋದೇ ನನ್ನ, ಕನಸು. ಹಾಗಾಗಿ ನೀವೇ ನನ್ನ ಮನಸ್ಸಲ್ಲಿ ಇರೋದು, ಬನ್ನಿ ಮೇಡಂ ಹೋಗೋಣ ಎಲ್ಲರೂ ನಿಮಗಾಗಿ ಅಲ್ಲಿ ಕಾಯ್ತಾ ಇದಾರೆ‘ ಅಂತ ಹೇಳಿ ಕರೆದುಕೊಂಡು ಹೊರಡುತ್ತಾನೆ. ಸುಬ್ಬುಗೆ ತನ್ನ ಮೇಲೆ ಯಾವುದೇ ಯಾವುದೇ ಇಲ್ಲ ಎಂದು ತಿಳಿದು ಶ್ರಾವಣಿಗೆ ದಿಕ್ಕೇ ತೋಚದಂತಾಗುತ್ತದೆ. ಅಳುತ್ತಾ ಸುಬ್ಬು ಹಿಂದೆ ಬರುತ್ತಾಳೆ.

ಕೊನೆಗೂ ಪೃಥ್ವಿರಾಜ್‌ಗೆ ಒಲಿಯಿತು ಸೆರೆಯಿಂದ ತಪ್ಪಿಸಿಕೊಳ್ಳುವ ಭಾಗ್ಯ

ವಿಜಯಾಂಬಿಕಾ ಕಪಿಮುಷ್ಟಿಯಲ್ಲಿ ಸಿಲುಕಿ ಸಾಕಷ್ಟು ವರ್ಷಗಳ ಕಾಲ ಸೆರೆಯಲ್ಲೇ ಬಂಧಿತನಾಗಿದ್ದ ಪೃಥ್ವಿರಾಜ್‌ಗೆ ತಾನು ಇಲ್ಲಿಂದ ತಪ್ಪಿಸಿಕೊಂಡು ಹೊರ ಹೋಗಲೇಬೇಕು, ಶ್ರಾವಣಿ ಮದುವೆಯನ್ನು ನಿಲ್ಲಿಸಬೇಕು ಎಂದು ಪಣ ತೊಡುತ್ತಾನೆ. ಟಾಯ್ಲೆಟ್ ಬರುವಂತೆ ನಾಟಕ ಮಾಡಿ, ಟಾಯ್ಲೆಟ್‌ ಒಳಗೆ ಹೋಗಿ ಅಲ್ಲಿಂದ ಮೇಲೆ ಹತ್ತಿ ಕಿಂಡಿಯಿಂದ ಪರಾರಿಯಾಗುತ್ತಾನೆ. ರೌಡಿಗಳು ಬಾಗಿಲು ಒಡೆದು ಒಳಗೆ ಬಂದು ನೋಡಿದಾಗ ಅಲ್ಲಿ ಪೃಥ್ವಿರಾಜ್‌ ಇರುವುದಿಲ್ಲ. ಎಷ್ಟೇ ಹುಡುಕಾಡಿದರೂ ಅವನು ಸಿಗುವುದಿಲ್ಲ.

ಲಲಿತಾದೇವಿಗೆ ತಿಳಿಯುತ್ತೆ ಸುಬ್ಬು ಮದುವೆ ವಿಚಾರ

ದೊಡ್ಡ ಮನೆಯವರಿಗೆ ಮದುವೆ ಕಾಗದ ಕೊಟ್ಟು ಲಲಿತಾದೇವಿ ಅಮ್ಮನವರನ್ನು ಮಾತನಾಡಿಸಿ ಬರಲು ಬರುವ ಪದ್ಮನಾಭ ವೀರೇಂದ್ರ ಬಳಿ ಮಗಳ ಮದುವೆ ಗೊತ್ತಾಗಿದೆ ಎಂದಷ್ಟೇ ಹೇಳುತ್ತಾಳೆ. ಸುಬ್ಬು ಮದುವೆ ವಿಚಾರವನ್ನು ಮುಚ್ಚಿಡುತ್ತಾರೆ. ಆದರೆ ಲಲಿತಾದೇವಿ ಅವರ ಬಳಿ ಬಂದು ಮದುವೆ ವಿಚಾರ ಹೇಳಿ ಮದುವೆ ಕಾಗದ ಕೊಡುತ್ತಾರೆ. ಮದುವೆ ಕಾಗದ ನೋಡಿದ ಲಲಿತಾದೇವಿ ಅವರಿಗೆ ವರಲಕ್ಷ್ಮೀ ಮದುವೆ ಜೊತೆ ಸುಬ್ಬು ಮದುವೆ ಕೂಡ ನಡೆಯುತ್ತಿರುವುದು ತಿಳಿಯುತ್ತದೆ. ಅವರಿಗೆ ಈಗ ದಿಕ್ಕೇ ತೋಚದಂತಾಗುತ್ತದೆ. ಕಣ್ಣೆದುರೇ ಮೊಮ್ಮಗಳ ಜೀವನ ಹಾಳಾಗುತ್ತಿದ್ದರೂ ತಾನು ಏನೂ ಮಾಡಲಾಗದ ಸ್ಥಿತಿಯಲ್ಲಿ ಇರುವುದು ಅವರಿಗೆ ನೋವು ನೀಡುತ್ತದೆ. ದೇವರು ಏನು ಮಾಡಲು ಹೊರಟಿದ್ದಾನೆ ಎಂದು ಅರಿವಾಗದೇ ಬೇಸರ ಮಾಡಿಕೊಳ್ಳುತ್ತಾರೆ.

ಅರಿಸಿನ ಶಾಸ್ತ್ರದ ಮಧ್ಯೆ ಎದ್ದು ಹೋದ ವಿಜಯಾಂಬಿಕಾ ಹಿಂಬಾಲಿಸಿ ಹೊರಟ ವೀರು

ಇತ್ತು ಸುಬ್ಬು ಮನೆಯಲ್ಲಿ ಅರಿಸಿನ ಶಾಸ್ತ್ರದ ಸಂಭ್ರಮ ಜೋರಾಗಿರುತ್ತದೆ. ಆದರೆ ಎಂದಿನಂತೆ ಸುಬ್ಬು ಬಂದಿಲ್ಲ ಎಂದು ತಕರಾರು ತೆಗೆಯುತ್ತಾರೆ ಇಂದ್ರಮ್ಮ, ಆದರೆ ಅವರನ್ನು ಹೇಗೋ ಸಮಾಧಾನ ಮಾಡಿ ವರಲಕ್ಷ್ಮೀ–ವರದನ ಅರಿಶಿನ ಶಾಸ್ತ್ರ ಮೊದಲು ಆಗುವಂತೆ ಮಾಡಿ, ನಂತರ ಶ್ರೀವಲ್ಲಿ ಅರಿಸಿನ ಶಾಸ್ತ್ರ ಮಾಡೋಣ ಅ‌ನ್ನುತ್ತಾರೆ. ಅಲ್ಲಿ ಅರಿಸಿನ ಶಾಸ್ತ್ರದ ಸಂಭ್ರಮ ಶುರುವಾಗುತ್ತದೆ. ಇಲ್ಲಿ ಶ್ರಾವಣಿ ಮನೆಯಲ್ಲೂ ರೆಸಾರ್ಟ್‌ನಲ್ಲಿ ಅರಿಸಿನ ಶಾಸ್ತ್ರ ಶುರುವಾಗುತ್ತದೆ. ವಿಜಯಾಂಬಿಕಾ ಬಳಿ ಮೊದಲು ಅರಿಸಿನ ಹಚ್ಚು ಎಂದು ವೀರೇಂದ್ರ ಹೇಳುತ್ತಾರೆ. ಇನ್ನೇನು ಆಕೆ ಶ್ರಾವಣಿಗೆ ಅರಿಸಿನ ಹಚ್ಚಬೇಕು ಆಗ ವಿಜಯಾಂಬಿಕಾಗೆ ರೌಡಿಗಳಿಂದ ಕಾಲ್ ಬರುತ್ತೆ. ಅವಳು ಅರಿಸಿನ ಹಚ್ಚೋದು ಬಿಟ್ಟು ಗಡಿಬಿಡಿಯಲ್ಲಿ ಅಲ್ಲಿಂದ ಹೊರಟು ಬಿಡುತ್ತಾಳೆ. ಕಾಲ್ ರಿಸೀವ್ ಮಾಡಿ ಪದೇ ಪದೇ ಕಾಲ್ ಮಾಡಬೇಡ ಅಂತ ಹೇಳಿಲ್ವಾ ಅಂತ ಬಯ್ಯುವಾಗಲೇ ಅವನುಪೃಥ್ವಿರಾಜ್‌ ತಪ್ಪಿಸಿಕೊಂಡ ವಿಚಾರವನ್ನು ಹೇಳುತ್ತಾನೆ. ವಿಜಯಾಂಬಿಕಾ ಗಾಬರಿಯಲ್ಲಿ ತಪ್ಪಿಸಿಕೊಂಡು ಬಿಟ್ನಾ, ಯಾವುದೇ ಕಾರಣಕ್ಕೂ ಅವನು ಇಲ್ಲಿಗೆ ಬರಬಾರದು ಎಂದು ಹೇಳುತ್ತಿರುತ್ತಾರೆ. ಅಷ್ಟೊತ್ತಿಗೆ ಅಲ್ಲಿಗೆ ಬರುವ ವೀರೇಂದ್ರ ಯಾರಿಗೆ ಅಕ್ಕಾ ಹೇಳ್ತಾ ಇರೋದು, ಯಾರು ತಪ್ಪಿಸಿಕೊಂಡ್ರು ಅಂತ ಕೇಳ್ತಾನೆ. ಇದರಿಂದ ವಿಜಯಾಂಬಿಕಾಗೆ ಶಾಕ್ ಹೊಡೆದಂತಾಗುತ್ತದೆ.

ವಿಜಯಾಂಬಿಕಾ ಎಂದಿನಂತೆ ವೀರುಗೆ ಏನಾದ್ರೂ ಹೇಳಿ ತಪ್ಪಿಸಿಕೊಳ್ಳುತ್ತಾಳಾ ಅಥವಾ ವಿಜಯಾಂಬಿಕಾ ಬಂಡವಾಳ ವೀರು ಎದುರು ಬಯಲಾಗುತ್ತಾ, ಶ್ರಾವಣಿ ಮದುವೆ ಮದನ್‌ ಜೊತೆಗೆ ನಡಿಯುತ್ತಾ, ತಪ್ಪಿಸಿಕೊಂಡ ಪೃಥ್ವಿರಾಜ್‌ ಏನು ಮಾಡಲು ಹೊರಟಿದ್ದಾನೆ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ವಂದನಾ – ಜ್ಯೋತಿ

Whats_app_banner