ಶ್ರಾವಣಿ ಮದುವೆ ಸಂಭ್ರಮ ಹೆಚ್ಚಿಸಲು ಬಂದ ಗಗನ, ಎಂಥ ಸಮಯದಲ್ಲೂ ಜೊತೆ ಇರ್ತೀನಿ ಅಂತ ಮಾತು ಕೊಟ್ಟ ಸುಬ್ಬು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಶ್ರಾವಣಿ ಮದುವೆ ಸಂಭ್ರಮ ಹೆಚ್ಚಿಸಲು ಬಂದ ಗಗನ, ಎಂಥ ಸಮಯದಲ್ಲೂ ಜೊತೆ ಇರ್ತೀನಿ ಅಂತ ಮಾತು ಕೊಟ್ಟ ಸುಬ್ಬು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಶ್ರಾವಣಿ ಮದುವೆ ಸಂಭ್ರಮ ಹೆಚ್ಚಿಸಲು ಬಂದ ಗಗನ, ಎಂಥ ಸಮಯದಲ್ಲೂ ಜೊತೆ ಇರ್ತೀನಿ ಅಂತ ಮಾತು ಕೊಟ್ಟ ಸುಬ್ಬು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಶ್ರೀವಲ್ಲಿಗೂ ಶ್ರಾವಣಿಗೂ ಅರಿಸಿನ ಶಾಸ್ತ್ರ. ಮಂಕಾಗಿದ್ದ ಶ್ರಾವಣಿ ಮೊಗದಲ್ಲಿ ನಗು ತರಿಸಿದ ಬಾಲ್ಯದ ಗೆಳತಿ ಗಗನ. ಸುಬ್ಬು ಮುಂದೆ ಪ್ರೀತಿ ಹೇಳಿಕೊಳ್ಳುವಂತೆ ಅಜ್ಜಿಯ ಸಲಹೆ. ಎಂಥ ಸಮಯದಲ್ಲೂ ಜೊತೆ ಇರ್ತೀನಿ ಅಂತ ಶ್ರಾವಣಿಗೆ ಮಾತು ಕೊಟ್ಟ ಸುಬ್ಬು. ಅರಿಸಿನ ಹಚ್ಚುವಂತೆ ಸುಬ್ಬುವಿಗೆ ಹೇಳಿದ ಶ್ರಾವಣಿ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 20ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 20ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 20ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 20ರ ಸಂಚಿಕೆಯಲ್ಲಿ ರೌಡಿಗಳ ಜೊತೆ ಮಾತನಾಡುತ್ತಿದ್ದ ವಿಜಯಾಂಬಿಕಾ ಹಿಂದೆ ವೀರೇಂದ್ರನ ಮಾತು ಕೇಳಿ ಕ್ಷಣ ಕಾಲ ದಂಗಾದರೂ ಸಾವರಿಸಿಕೊಂಡು ಹಳೆ ಗೆಳತಿಗೆ ಮದುವೆಗೆ ಬರಬೇಕು, ತಪ್ಪಿಸಿಕೊಂಡರೆ ನಾನು ಸುಮ್ಮನೆ ಇರೊಲ್ಲ ಅಂತ ಹೇಳ್ತಿದ್ದೆ ಅಂತ ಸುಳ್ಳು ಹೇಳಿ ಪರಿಸ್ಥಿತಿಯನ್ನು ತಿಳಿಗೊಳಿಸುತ್ತಾಳೆ.

ಇತ್ತ ಶ್ರೀವಲ್ಲಿಗೆ ಅರಿಸಿನ ಶಾಸ್ತ್ರದ ಖುಷಿಯಾದ್ರೆ ಶ್ರಾವಣಿಯ ಬೇಸರ ನಡುವೆಯೂ ನಡೆಯುತ್ತಿದೆ ಅರಿಸಿನ ಶಾಸ್ತ್ರ. ಶ್ರಾವಣಿಗೆ ಖುಷಿಯಾಗಲಿ ಎನ್ನುವ ಕಾರಣಕ್ಕೆ ಸುಬ್ಬು ಆಕೆಗಾಗಿ ಸರ್ಪ್ರೈಸ್‌ವೊಂದನ್ನು ಪ್ಲಾನ್ ಮಾಡಿರುತ್ತಾನೆ. ಆ ಸರ್ಪ್ರೈಸ್ ನೋಡಿ ಶ್ರಾವಣಿ ಮೊಗದಲ್ಲಿ ಕ್ಷಣಕಾಲ ನಗು ಮೂಡುತ್ತೆ.

ಅರಿಸಿನ ಶಾಸ್ತ್ರಕ್ಕೆ ಬಂದ ಶ್ರಾವಣಿ ಬಾಲ್ಯದ ಗೆಳತಿ ಗಗನ

ಶ್ರಾವಣಿಗೆ ಸರ್ಪ್ರೈಸ್ ಆಗಲಿ ಎನ್ನುವ ಕಾರಣಕ್ಕೆ ಆಕೆ ಬಾಲ್ಯದ ಗೆಳತಿ ಗಗನಳನ್ನು ಅರಿಸಿನ ಶಾಸ್ತ್ರಕ್ಕೆ ಆಹ್ವಾನಿಸಿ ಇರುತ್ತಾನೆ ಸುಬ್ಬು. ಬೇಸರದಲ್ಲಿದ್ದ ಶ್ರಾವಣಿ ತನ್ನ ಅರಿಸಿನ ಶಾಸ್ತ್ರದಲ್ಲಿ ಎಷ್ಟೋ ವರ್ಷಗಳ ನಂತರ ಕಂಡ ಗಗನಳನ್ನು ಕಂಡು ಖುಷಿಯಾಗುತ್ತಾಳೆ. ಶ್ರಾವಣಿ ಅರಿಸಿನ ಶಾಸ್ತ್ರಕ್ಕೆ ಬಂದು ಹಾಡಿ ಕುಣಿದು ಕುಪ್ಪಳಿಸಿ ಹೋಗುತ್ತಾಳೆ ರಿಯಾಲಿಟಿ ಸ್ಟಾರ್ ಗಗನ.

ಸುಬ್ಬ ಬಳಿ ಪ್ರೀತಿ ಹೇಳಿಕೊಳ್ಳಲು ಕೊನೆ ಅವಕಾಶ ನೀಡಿದ ಅಜ್ಜಿ

ಮನೆಯಲ್ಲಿ ಅರಿಸಿನ ಶಾಸ್ತ್ರದ ಸಂಭ್ರಮ ನಡೆಯುತ್ತಿದ್ದರೂ ಮೊಮ್ಮಗಳ ದುಃಖ ನೋಡಲಾಗದ ಅಜ್ಜಿ ಶ್ರಾವಣಿ ಬಳಿ ‘ನಿಂಗೆ ಈಗ ಇರೋದು ಕೊನೆಯ ಅವಕಾಶ, ಈಗಲೂ ನಿನ್ನ ಪ್ರೀತಿ ನೀನು ಹೇಳಿಕೊಂಡಿಲ್ಲ ಎಂದರೆ ಕಾಲ ತುಂಬಾ ಮಿಂಚಿ ಹೋಗುತ್ತದೆ. ಆದರೆ ಹೇಳಿಕೊಳ್ಳಬೇಕು ಎಂದುಕೊಂಡರೂ ಹೇಳಲು ಆಗುವುದಿಲ್ಲ. ಈಗ ಸುಬ್ಬು ಮುಂದೆ ನಿನ್ನ ಮನದ ಮಾತು ಹೇಳಿಬಿಡು ಎಂದು ಕಳುಹಿಸುತ್ತಾರೆ. ಶ್ರಾವಣಿ ಕೂಡ ಸುಬ್ಬು ಬಳಿ ಎಲ್ಲವನ್ನೂ ಹೇಳಿಕೊಂಡು ಬಿಡಬೇಕು ಎಂದು ಕರೆದುಕೊಂಡು ಹೋಗುತ್ತಾಳೆ.

ಎಂಥ ಸಂದರ್ಭದಲ್ಲಿ ಜೊತೆ ಇರ್ತೀನಿ ಎಂದು ಮಾತು ಕೊಟ್ಟ ಸುಬ್ಬು, ಬಾಯಲ್ಲೇ ಉಳಿಯಿತು ಶ್ರಾವಣಿ ಮಾತು

ಸುಬ್ಬುವನ್ನು ದೂರ ಕರೆದುಕೊಂಡು ಬರುವ ಶ್ರಾವಣಿ ನಾನು ನಿನ್ನ ಜೊತೆ ಮುಖ್ಯವಾದ ಮಾತು ಹೇಳಬೇಕು, ಆದರೆ ಆ ಮಾತು ಕೇಳಿಸಿಕೊಂಡ ಮೇಲೆ ನೀನು ಕೋಪ, ದುಃಖ, ಬೇಜಾರು ಮಾಡಿಕೊಳ್ಳುವಂತಿಲ್ಲ, ನಾನು ಮಾತನಾಡುವವರೆಗೂ ನೀನು ಮಧ್ಯೆ ಮಾತನಾಡುವಂತಿಲ್ಲ ಎಂದು ಸುಬ್ಬು ಬಳಿ ಹೇಳುತ್ತಾಳೆ. ಆರಂಭದಲ್ಲೇ ಒಗಟೊಗಟಾಗಿ ಮಾತನಾಡುವ ಶ್ರಾವಣಿ ಸುಬ್ಬು ಬಳಿ ಎಂಥ ಸಂದರ್ಭದಲ್ಲೂ ನನ್ನ ಜೊತೆಗೆ ಇರ್ತೀನಿ, ನನ್ನ ಬಿಟ್ಟು ಹೋಗೋಲ್ಲ ಅಂತ ಮಾತು ಕೊಡು ಅಂತ ಕೇಳ್ತಾಳೆ, ಶ್ರಾವಣಿ ಕೈಮೇಲೆ ಸುಬ್ಬು ಕೈ ಇರಿಸಿದ ಹೊತ್ತಿಗೆ ಅಲ್ಲಿಗೆ ಬರುವ ಸುರೇಂದ್ರ ಶ್ರಾವಣಿ ಎಂದು ಕೂಗುತ್ತಾರೆ. ಅವಳನ್ನು ಅಲ್ಲಿಂದ ಕರೆದುಕೊಂಡು ಅರಿಸಿನ ಶಾಸ್ತ್ರ ನಡೆಯುವ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಾರೆ. ಎಲ್ಲರೂ ಶ್ರಾವಣಿಗೆ ಅರಿಸಿನ ಹಚ್ಚಿದ ಮೇಲೆ ಶ್ರಾವಣಿ ಸುಬ್ಬು ಬಳಿ ಸುಬ್ಬು ನೀನು ನನಗೆ ಅರಿಸಿನ ಹಚ್ಚಲ್ವಾ ಅಂತ ಪ್ರಶ್ನೆ ಮಾಡ್ತಾಳೆ. ಎಲ್ಲರೂ ಶಾಕ್ ಆಗಿ ಅವಳನ್ನೇ ನೋಡುತ್ತಾರೆ.

ಶ್ರಾವಣಿಗೆ ಸುಬ್ಬು ಅರಿಸಿನ ಹಚ್ತಾನಾ, ಸುಬ್ಬು ಬಳಿ ಶ್ರಾವಣಿ ಎಂಥ ಸಮಯದಲ್ಲೂ ಬಿಟ್ಟು ಹೋಗೋಲ್ಲ ಅಂತ ಮಾತು ತೆಗೆದುಕೊಂಡಿದ್ದು ಏಕೆ, ಶ್ರಾವಣಿ ಏನು ಪ್ಲಾನ್ ಮಾಡಿರಬಹುದು ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ವಂದನಾ – ಜ್ಯೋತಿ

Whats_app_banner