ಅತ್ತೆ ತೊಡಿಸಬೇಕಿದ್ದ ಬಳೆ ತೊಡಿಸುವ ವಿಶಾಲಾಕ್ಷಿ, ಶ್ರಾವಣಿ ಪ್ರೀತಿಗೆ ಜಯ ಸಿಗುವ ಸೂಚನೆಯೇ? ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಅತ್ತೆ ತೊಡಿಸಬೇಕಿದ್ದ ಬಳೆ ತೊಡಿಸುವ ವಿಶಾಲಾಕ್ಷಿ, ಶ್ರಾವಣಿ ಪ್ರೀತಿಗೆ ಜಯ ಸಿಗುವ ಸೂಚನೆಯೇ? ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಅತ್ತೆ ತೊಡಿಸಬೇಕಿದ್ದ ಬಳೆ ತೊಡಿಸುವ ವಿಶಾಲಾಕ್ಷಿ, ಶ್ರಾವಣಿ ಪ್ರೀತಿಗೆ ಜಯ ಸಿಗುವ ಸೂಚನೆಯೇ? ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಸುಬ್ಬು ಮನೆಯಲ್ಲಿ ಅರಿಸಿನ ಶಾಸ್ತ್ರ ಮುಗಿದು ಮನೆಯವರ ಖುಷಿಯ ಕ್ಷಣಗಳು, ಶ್ರಾವಣಿ ಬಳೆ ಶಾಸ್ತ್ರದಲ್ಲೂ ವಿಜಯಾಂಬಿಕಾ ನಿಂತಿಲ್ಲ ವಿಜಯಾಂಬಿಕಾ ಫೋನ್‌ ವ್ಯವಹಾರ. ದೊಡ್ಮನೆಯ ಪರಂಪರೆಯ ಬಂದ ಅತ್ತೆ ತೊಡಿಸಿಬೇಕಿದ್ದ ಬಳೆಯನ್ನು ಶ್ರಾವಣಿಗೆ ತೊಡಿಸುವ ವಿಶಾಲಾಕ್ಷಿ. ರೌಡಿಗಳಿಂದ ಬಚಾವ್ ಆದ ಪೃಥ್ವಿರಾಜ್‌. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 21ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 21ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 21ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 21ರ ಸಂಚಿಕೆಯಲ್ಲಿ ಸುಬ್ಬು ಮನೆಯಲ್ಲಿ ಅರಿಸಿನ ಶಾಸ್ತ್ರವೆಲ್ಲಾ ಸಾಂಗವಾಗಿ ನಡೆದು ಎಲ್ಲರೂ ಖುಷಿಯಿಂದ ಕಾಲ ಕಳೆಯುತ್ತಿರುತ್ತಾರೆ. ತಾನು ಹಿಂದೆ ಬಾಡಿಗೆ ವಿಚಾರಕ್ಕೆ ತಕರಾರು ತೆಗೆದಿದ್ದಕ್ಕೆ ವಿಶಾಲಾಕ್ಷಿ ಬಳಿ ಕ್ಷಮೆ ಕೇಳುತ್ತಾರೆ ಇಂದ್ರಮ್ಮ, ಇನ್ನು ಮುಂದೆ ಎಲ್ಲವೂ ಸಂತೋಷದಿಂದಲೇ ನಡೆಯುತ್ತದೆ, ಯಾವುದಕ್ಕೂ ಕೊರತೆ ಬರುವುದಿಲ್ಲ ಎಂದು ಭರವಸೆ ನೀಡುತ್ತಾರೆ. ಶ್ರೀವಲ್ಲಿ ಮಾತ್ರ ಸುಬ್ಬು ಬರುವ ದಾರಿಯನ್ನೇ ಕಾಯುತ್ತಿರುತ್ತಾಳೆ. ಅವಳಿಗೆ ತಾನು ಸುಬ್ಬುವನ್ನು ಮದುವೆಯಾಗುತ್ತಿರುವುದು ಸ್ವರ್ಗದಲ್ಲೇ ತೇಲಿದಷ್ಟು ಖುಷಿ ಕೊಡುತ್ತದೆ.

ಶ್ರಾವಣಿಗೆ ಅರಿಸಿನ ಹಚ್ಚಿದ ಸುಬ್ಬು

ಸುಬ್ಬು ಬಳಿ ಶ್ರಾವಣಿ ಅರಿಸಿನ ಹಚ್ಚಲು ಹೇಳಿದಾಗ ಹಿಂಜರಿಯುವ ಸುಬ್ಬು, ಯಜಮಾನರು ಹೇಳಿದಾಗ ವಿಧಿ ಇಲ್ಲದೇ ಶ್ರಾವಣಿಗೆ ಅರಿಸಿನ ಹಚ್ಚುತ್ತಾನೆ, ಅದನ್ನು ನೋಡಿ ಲಲಿತಾದೇವಿ ಕಣ್ತುಂಬಿಕೊಳ್ಳುತ್ತಾರೆ. ಶ್ರಾವಣಿ ಕಣ್ಣಲ್ಲಿ ನೀರು ಉಕ್ಕಿ ಹರಿದರೆ, ಮದನ್‌ ಕೋಪದಿಂದ ಬುಸುಗುಡುತ್ತಾನೆ.

ರೌಡಿಗಳಿಂದ ತ‌ಪ್ಪಿಸಿಕೊಂಡ ಪೃಥ್ವಿರಾಜ್‌

ವಿಜಯಾಂಬಿಕಾ ಆಣತಿಯಂತೆ ರೌಡಿಗಳು ಪೃಥ್ವಿರಾಜ್ ಹುಡುಕಾಟದಲ್ಲಿ ತೊಡಗುತ್ತಾರೆ. ಆದರೆ ಪೃಥ್ವಿರಾಜ್‌ ಮಾತ್ರ ಹೇಗಾದರೂ ಮಾಡಿ ತನ್ನ ಕೈಯಲ್ಲಿರುವ ವಸ್ತುವನ್ನು ಶ್ರಾವಣಿ ತಲುಪಿಸಿ ಎಲ್ಲಾ ಸತ್ಯವನ್ನು ಹೇಳಿ ಬಿಡಬೇಕು ಎನ್ನುವ ಪಣ ತೊಟ್ಟಿರುತ್ತಾನೆ. ಓಡಿ ಓಡಿ ನಿತ್ರಾಣನಾಗಿ ಒಂದು ಕಡೆ ಕೂತಿದ್ದಾಗ ರೌಡಿಗಳು ಅಲ್ಲಿಗೆ ಬರುತ್ತಾರೆ, ಆದರೆ ಕ್ಷಣ ಮಾತ್ರವಲ್ಲಿ ಪೃಥ್ವಿರಾಜ್ ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ. ಮದುವೆ ಮಂಟಪ ಎಲ್ಲಿದೆ ಅದನ್ನು ಹುಡುಕಿ ಹೋಗಬೇಕು, ಶ್ರಾವಣಿಯನ್ನು ಭೇಟಿ ಮಾಡಬೇಕು ಎಂದು ಪಣ ತೊಡುತ್ತಾನೆ.

ಶ್ರಾವಣಿಗೆ ವಂಶ ಪಾರಂಪರ್ಯ ಬಳೆ ತೊಡಿಸುವ ವಿಶಾಲಾಕ್ಷಿ

ಸುಬ್ಬು, ಪದ್ಮನಾಭ ಮನೆಗೆ ಬಂದಾಗ ನಾಳೆ ಶ್ರಾವಣಿ ಮನೆಯಲ್ಲಿ ನಡೆಯುವ ಬಳೆ ಶಾಸ್ತ್ರಕ್ಕೆ ತಾನು ಹೋಗುವುದಾಗಿ ವಿಶಾಲಾಕ್ಷಿ ಹೇಳುತ್ತಾಳೆ. ಅವಳ ಜೊತೆ ಕಾಂತಮ್ಮ ಕೂಡ ಹೋಗುವುದಾಗಿ ಹೇಳುತ್ತಾರೆ. ಇತ್ತ ಶ್ರಾವಣಿ ಬೇಸರದಲ್ಲೇ ಬಳೆ ಶಾಸ್ತ್ರಕ್ಕೆ ಸಿದ್ಧಳಾಗುತ್ತಾಳೆ. ಅಜ್ಜಿ ಬಂದು ತಮ್ಮ ಮನೆಯ ಪರಂಪರೆಯ ಬಳೆಯೊಂದನ್ನು ವಿಜಯಾಂಬಿಕಾಗೆ ನೀಡಿ ‘ಇದು ದೊಡ್ಮನೆಯ ಪರಂಪರೆಯಿಂದ ಬಂದ ಬಳೆ, ನನ್ನ ಅತ್ತೆ ನನಗೆ ಕೊಟ್ಟಿದ್ರು, ಇದನ್ನು ನನ್ನ ಮಗಳಿಗೆ ಕೊಡಲು ನನ್ನಿಂದ ಸಾಧ್ಯವಾಗಿರಲಿಲ್ಲ. ಈಗ ನನ್ನ ಮೊಮ್ಮಗಳಿಗೆ ಇದು ಸಲ್ಲಬೇಕು, ಇದನ್ನು ಅತ್ತೆಯಾಗುವವರು ಅವಳಿಗೆ ತೊಡಿಸಬೇಕು‘ ಎಂದು ಹೇಳುತ್ತಾರೆ. ವಿಜಯಾಂಬಿಕಾಗೆ ಖುಷಿಯಾಗಿ ಅಂದ್ರೆ ನಾನು ತೊಡಿಸಬೇಕಾ, ಖಂಡಿತ ತೊಡಿಸುತ್ತೇನೆ ಎಂದು ಹೇಳಿ ಶ್ರಾವಣಿಗೆ ಬಳೆ ತೊಡಿಸಲು ಹೋಗುತ್ತಾಳೆ. ಆಗಲೇ ಕಾಲ್ ಬರುತ್ತದೆ. ಅರಿಸಿನ ಶಾಸ್ತ್ರದಿಂದ ಎದ್ದು ಹೋದಂತೆ ಬಳೆಶಾಸ್ತ್ರದಿಂದಲೂ ಗಾಬರಿಯಿಂದ ಎದ್ದು ಹೋಗುತ್ತಾಳೆ ವಿಜಯಾಂಬಿಕಾ, ಇತ್ತು ಸಿಎಂ ಕಾಲ್ ಬಂತು ಎಂದು ವೀರೇಂದ್ರ ಕೂಡ ಹೋಗುತ್ತಾರೆ. ಆ ಹೊತ್ತಿಗೆ ಸುಬ್ಬು, ವಿಶಾಲಾಕ್ಷಿ, ಕಾಂತಮ್ಮ, ಪದ್ಮನಾಭ ಅಲ್ಲಿಗೆ ಬರುತ್ತಾರೆ. ಶ್ರಾವಣಿ ಬಳಿ ಇರುವ ಬಳೆ ನೋಡುವ ವಿಶಾಲಾಕ್ಷಿ ಹಿಂದು ಮುಂದು ಯೋಚಿಸದೇ ಈ ಬಳೆಯನ್ನು ಶ್ರಾವಣಿಗೆ ತೊಡಿಸುತ್ತಾಳೆ. ಎಲ್ಲರಿಗೂ ಶಾಕ್ ಆಗುತ್ತದೆ. ಆದರೆ ಇದು ಶ್ರಾವಣಿ ಸುಬ್ಬುವನ್ನೇ ಮದುವೆಯಾಗುತ್ತಾಳೆ ಎನ್ನುವುದಕ್ಕೆ ಮುನ್ಸೂಚನೆ ಇರಬಹುದು ಎಂದು ವೀಕ್ಷಕರು ಭಾವಿಸುತ್ತಿದ್ದಾರೆ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ವಂದನಾ – ಜ್ಯೋತಿ

Whats_app_banner