ಗೌರಿ ಪೂಜೆಯಲ್ಲಿ ಶ್ರಾವಣಿ ಮಾಡಿದ್ಲು ಸುಬ್ಬು ಜೊತೆ ಮದುವೆಯಾಗುವ ಶಪಥ, ಪೃಥ್ವಿರಾಜ್ ಕಣ್ಣಿಗೆ ಬಿದ್ದ ಪದ್ಮನಾಭ; ಶ್ರಾವಣಿ ಸುಬ್ರಹ್ಮಣ್ಯ
ಶ್ರಾವಣಿಗೆ ಬಳೆ ತೊಡಿಸಿದ ವಿಶಾಲಾಕ್ಷಿ ಮೇಲೆ ರೇಗಿದ ವಿಜಯಾಂಬಿಕಾಗೆ ತಕ್ಕ ಶಾಸ್ತಿ ಮಾಡಿದ್ರು ಲಲಿತಾದೇವಿ. ಶ್ರಾವಣಿ ಹಾಗೂ ಸುಬ್ಬು ಮದುವೆ ಬಗ್ಗೆ ಕಾಂತಮ್ಮನಿಗೆ ಮೂಡಿತು ಭರವಸೆ. ಪೃಥ್ವಿರಾಜ್ ಕಣ್ಣಿಗೆ ಬಿದ್ದ ಪದ್ಮನಾಭ. ಗೌರಿಪೂಜೆಯಲ್ಲಿ ತಾನು ಮದುವೆ ಅಂತಾದ್ರೆ ಸುಬ್ಬುನೇ ಅಂತ ಶಪಥ ಮಾಡಿದ ಶ್ರಾವಣಿ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 22ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 22ರ ಸಂಚಿಕೆಯಲ್ಲಿ ಅತ್ತೆ ತೊಡಿಸಬೇಕಿದ್ದ ಬಳೆಯನ್ನು ಗೊತ್ತಾಗದೇ ತಾನು ಶ್ರಾವಣಿಗೆ ತೊಡಿಸುತ್ತಾಳೆ ವಿಶಾಲಾಕ್ಷಿ. ಇದನ್ನು ನೋಡಿ ಕೆಂಡಾಮಂಡಲವಾದ ವಿಜಯಾಂಬಿಕಾ ವಿಶಾಲಾಕ್ಷಿ ಮೇಲೆ ಹರಿಹಾಯುತ್ತಾಳೆ. ‘ನಿಮ್ಮಂಥವರನ್ನ ನಮ್ಮ ಮನೆಗೆ ಬಿಟ್ಟುಕೊಂಡಿದ್ದೇ ಹೆಚ್ಚು‘ ಎಂದು ಅಧಿಕಪ್ರಸಂಗ ಮಾತನಾಡುತ್ತಾಳೆ. ವಿಜಯಾಂಬಿಕಾ ದರ್ಪದ ಮಾತುಗಳನ್ನು ಕೇಳಿ ರೋಷಗೊಳ್ಳುವ ಲಲಿತಾದೇವಿ ಕೋಪದಲ್ಲಿ ಹರಿಹಾಯುತ್ತಾರೆ. ವಿಜಯಾ ‘ನೀನು ಯಾರ ಜೊತೆ ಮಾತನಾಡುತ್ತಿದ್ದೀಯಾ ನೆನಪಿರಲಿ. ವಿಶಾಲು ನಮ್ಮ ಪದ್ದು ಹೆಂಡತಿ. ಪದ್ದು ನನಗೆ ಮಗ ಇದ್ದ ಹಾಗೆ, ಅವರು ದೊಡ್ಡ ಮನೆಗೆ ಸೇರಿದವರು. ಅವರ ಜೊತೆ ಹೀಗೆ ಮಾತನಾಡುತ್ತಿದ್ದೀಯಾ‘ ಎಂದು ರೇಗುತ್ತಾರೆ. ಅತ್ತೆ ಕೋಪ ಮಾಡಿಕೊಂಡಿದ್ದು ನೋಡಿ ವೀರೇಂದ್ರ ಅಕ್ಕ ಪರವಾಗಿ ಅವರ ಬಳಿ ಕ್ಷಮೆ ಕೇಳಿ ಸಮಾಧಾನ ಮಾಡುತ್ತಾರೆ.
ಮಗನನಿಗೆ ಶ್ರಾವಣಿ ಮನೆಯಲ್ಲಿ ನಡೆದ ಘಟನೆ ವರದಿ ಒಪ್ಪಿಸಿದ ಕಾಂತಮ್ಮ
ವಿಶಾಲಾಕ್ಷಿ ಶ್ರಾವಣಿಗೆ ಬಳೆ ತೊಡಿಸಿದ್ದು ಕಾಕತಾಳೀಯವಾಗಿದ್ದರೂ ಇದರಿಂದ ಶ್ರಾವಣಿ, ಲಲಿತಾದೇವಿ ಹಾಗೂ ಕಾಂತಮ್ಮ ಹರ್ಷಗೊಳ್ಳುತ್ತಾರೆ. ಶ್ರಾವಣಿ–ಸುಬ್ಬು ಮದುವೆ ಆಸೆ ಕೈ ಬಿಟ್ಟಿದ್ದ ಕಾಂತಮ್ಮ ಈ ಘಟನೆಯಿಂದ ಮತ್ತೆ ಆಸೆ ಚಿಗುರಿಸಿಕೊಳ್ಳಲು ಶುರು ಮಾಡುತ್ತಾರೆ. ಅಲ್ಲದೇ ಮಗನಿಗೆ ಕಾಲ್ ಮಾಡಿ ಶ್ರಾವಣಿ ಮನೆಯಲ್ಲಿ ನಡೆದ ಎಲ್ಲಾ ಘಟನೆಗಳ ಬಗ್ಗೆ ವರದಿ ಒಪ್ಪಿಸುತ್ತಾರೆ. ಜೊತೆಗೆ ಯಾವುದೇ ಕಾರಣಕ್ಕೂ ಶ್ರೀವಲ್ಲಿ ಜೊತೆ ಸುಬ್ಬು ಮದುವೆ ಅನ್ನೋದು ಶ್ರಾವಣಿಗೆ ಗೊತ್ತಾಗದಂತೆ ನೋಡಿಕೊಳ್ಳಬೇಕು ಎಂದು ಕೂಡ ಹೇಳುತ್ತಾಳೆ. ಕಾಂತಮ್ಮನಿಗೆ ಇದು ಎಲ್ಲೋ ಸುಬ್ಬು ಹಾಗೂ ಶ್ರಾವಣಿ ಮದುವೆಯಾಗುತ್ತೆ ಎನ್ನುವ ಸೂಚನೆಯನ್ನು ದೇವರೇ ನೀಡರಬಹುದು ಎಂಬ ಭಾವನೆ ಬರುತ್ತೆ, ಲಲಿತಾದೇವಿ ಕೂಡ ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತಾರೆ.
ಪೃಥ್ವಿರಾಜ್ ಕಣ್ಣಿಗೆ ಬಿದ್ದ ಪದ್ಮನಾಭ
ಮದುವೆ ಮನೆ ತಯಾರಿ, ಹೂವಿನ ಅಲಂಕಾರವನ್ನು ನೋಡಿ ಮಗನನ್ನು ಹೊಗಳುವ ಪದ್ಮನಾಭ, ವೆಂಕಿ ಮದುವೆ ಮನೆ ಅಲಂಕಾರ ಮಾಡಿದ್ದು ಎಂದು ತಿಳಿದು ಅವನ ಕೆಲಸ ನೋಡಿ ಮೆಚ್ಚಿಕೊಳ್ಳುತ್ತಾರೆ. ಸುಬ್ಬು ಯಜಮಾನರ ಮನೆಯಲ್ಲಿ ಕೆಲಸ ಇದೆ ಎಂದು ಅಲ್ಲಿಂದ ಹೊರಟಾಗ ಪದ್ಮನಾಭ ಕೂಡ ಅವನ ಜೊತೆ ಹೊರಡುತ್ತಾರೆ. ಶ್ರಾವಣಿ ಮದುವೆ ಕಾಗದ ಹಿಡಿದು ಮದುವೆ ಮಂಟಪವನ್ನೇ ಹುಡುಕಿ ಬರುತ್ತಿದ್ದ ಪೃಥ್ವಿರಾಜ್ ದಾರಿ ಮಧ್ಯೆ ಬರುವಾಗ ಪದ್ಮನಾಭ ಹಾಗೂ ಸುಬ್ಬು ಅವನ ಕಣ್ಣಿಗೆ ಕಾಣಿಸುತ್ತಾರೆ. ಪದ್ದು, ಪದ್ದು ಎಂದು ಕರೆಯುತ್ತಾ ಹಿಂದೆ ಓಡಿ ಬಂದರೂ ಪದ್ಮನಾಭವನ್ನು ಮಾತನಾಡಿಸಲು ಆಗುವುದಿಲ್ಲ. ಮಂಟಪದ ಹತ್ತಿರ ಹತ್ತಿರ ಹೋಗುತ್ತಿರುವ ಪೃಥ್ವಿರಾಜ್‌ನನ್ನು ರೌಡಿಗಳು ಹಿಂಬಾಲಿಸುತ್ತಿರುತ್ತಾರೆ.
ಗೌರಿ ಪೂಜೆಯಲ್ಲಿ ಸುಬ್ಬು ಜೊತೆಗೆ ತನ್ನ ಮದುವೆ ಎಂದು ಶ್ರಾವಣಿ ಶಪಥ
ಶ್ರಾವಣಿ ಮನೆಯಲ್ಲಿ ಗೌರಿ ಪೂಜೆ ಕಾರ್ಯಕ್ರಮ ನಡೆಯುತ್ತಿರುತ್ತದೆ. ಬೇಸರದಲ್ಲೇ ಪೂಜೆಯಲ್ಲಿ ಪಾಲ್ಗೊಳ್ಳುವ ಶ್ರಾವಣಿ ತನ್ನ ದೇವರ ಮುಂದೆ ಕೂತು ಪೂಜೆ ಮಾಡುವಾಗಲೂ ತಾನು ಮದುವೆ ಅಂತಾದ್ರೆ ಇದು ಸುಬ್ಬುವನ್ನು ಮಾತ್ರ, ತನ್ನ ಕುತ್ತಿಗೆಗೆ ತಾಳಿ ಕಟ್ಟಿದ್ರೆ ಅದು ಸುಬ್ಬವೇ ಆಗಿರಬೇಕು, ಇಲ್ಲದಿದ್ದರೆ ತಾನು ಸಾಯುತ್ತೇನೆ ಎಂದು ಶಪಥ ಮಾಡುತ್ತಾಳೆ. ಇತ್ತು ಪುರೋಹಿತರು ಮದುವೆಯಾಗುವ ಹುಡುಗನ ಹೆಸರು ಹೇಳು ಎಂದಾಗ ಏನು ಹೇಳಬೇಕು ಎಂದು ತಿಳಿಯದೇ ಶ್ರಾವಣಿ ಕಣ್ಣೀರು ಸುರಿಸುತ್ತಾಳೆ.
ಪುರೋಹಿತರ ಎದುರು ಶ್ರಾವಣಿ ತನ್ನ ಮದುವೆಯಾಗುವ ಹುಡುಗ ಹೆಸರು ಸುಬ್ಬು ಎಂದು ಹೇಳ್ತಾಳಾ, ಕಾಂತಮ್ಮ ಅಂದುಕೊಂಡಂತೆ ಸುಬ್ಬು–ಶ್ರಾವಣಿ ಮದುವೆಗೆ ದೇವರು ಗ್ರೀನ್ ಸಿಗ್ನಲ್ ನೀಡಿದ್ದಾರಾ, ಸುಬ್ಬು ಶ್ರಾವಣಿಯನ್ನು ಮದುವೆಯಾದ್ರೆ ಶ್ರೀವಲ್ಲಿ ಗತಿಯೇನು ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ
‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.
ಪಾತ್ರ ಪರಿಚಯ
ವೀರೇಂದ್ರ– ಮೋಹನ್
ವಿಜಯಾಂಬಿಕಾ – ಸ್ನೇಹ ಈಶ್ವರ್
ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್
ಸುಬ್ಬು – ಅಮೋಘ್
ಪದ್ಮನಾಭ – ಬಾಲರಾಜ್
ಪಿಂಕಿ – ಪ್ರತಿ ಶೆಟ್ಟಿ
ಮದನ್ – ಅರ್ಥವ
ಕಾಂತಮ್ಮ – ಭವಾನಿ ಪ್ರಕಾಶ್
ವಂದನಾ – ಜ್ಯೋತಿ
