ಮದುವೆ ಮಂಟಪ ತಲುಪಿದ ಪೃಥ್ವಿರಾಜ್‌ ಕೈಯಲ್ಲಿದೆ ತಾಳಿ ಸರ, ಮದನ್, ವಿಜಯಾಂಬಿಕಾಗೆ ಎದುರಾಗಿದೆ ಹಲವು ಕಂಟಕ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಮದುವೆ ಮಂಟಪ ತಲುಪಿದ ಪೃಥ್ವಿರಾಜ್‌ ಕೈಯಲ್ಲಿದೆ ತಾಳಿ ಸರ, ಮದನ್, ವಿಜಯಾಂಬಿಕಾಗೆ ಎದುರಾಗಿದೆ ಹಲವು ಕಂಟಕ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಮದುವೆ ಮಂಟಪ ತಲುಪಿದ ಪೃಥ್ವಿರಾಜ್‌ ಕೈಯಲ್ಲಿದೆ ತಾಳಿ ಸರ, ಮದನ್, ವಿಜಯಾಂಬಿಕಾಗೆ ಎದುರಾಗಿದೆ ಹಲವು ಕಂಟಕ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಮದುವೆ ಮಂಟಪಕ್ಕೆ ಹೋಗುವ ಮನೆಯವರೆಲ್ಲರ ಆಶೀರ್ವಾದ ಪಡೆಯುವ ಶ್ರಾವಣಿಗೆ ವಿಜಯಾಂಬಿಕಾ ಆಶೀರ್ವಾದ ಮಾಡಲು ಆಗುವುದಿಲ್ಲ. ಸುಬ್ಬು ಜೊತೆಗೆ ಕಾರಿನಲ್ಲಿ ಹೋಗುವ ಅವಕಾಶ ದಕ್ಕಿಸಿಕೊಂಡ ಶ್ರಾವಣಿ, ಮದನ್‌ ಪೇಚಾಟಕ್ಕೆ ಕೊನೆಯಿಲ್ಲ. ಮದುವೆ ಮಂಟಪ ತಲುಪಿದ ಪೃಥ್ವಿರಾಜ್ ಕೈಯಲ್ಲಿದೆ ತಾಳಿ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 23ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 23ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 23ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 23ರ ಸಂಚಿಕೆಯಲ್ಲಿ ಮದುವೆ ಮಂಟಪಕ್ಕೆ ಹೊರಡಲು ರೆಡಿಯಾಗುವ ಶ್ರಾವಣಿ ಅಜ್ಜನ ಫೋಟೊ ಮುಂದೆ ನಿಂತು ಆಶೀರ್ವಾದ ಪಡೆಯುತ್ತಾಳೆ, ಅಲ್ಲದೇ ಅಜ್ಜ ಹಾಗೂ ತಾಯಿಯನ್ನು ನೆನೆದು ಕಣ್ಣಿರಾಗುತ್ತಾಳೆ. ಅಜ್ಜಿ, ಅಪ್ಪ, ಚಿಕ್ಕಪ್ಪ ಎಲ್ಲರ ಆಶೀರ್ವಾದ ಪಡೆದು ವಿಜಯಾಂಬಿಕಾ ಕಾಲಿಗೆ ಬೀಳಬೇಕು ಎಂದುಕೊಳ್ಳುತ್ತಿರುವಾಗಲೇ ಹೊರಗಿನಿಂದ ‘ಸರ್ ಕಾರ್ ರೆಡಿ ಇದೆ, ಹೊರಡೋಣ‘ ಅಂತ ಧ್ವನಿ ಕೇಳುತ್ತೆ. ಅದನ್ನು ಕೇಳಿ ಸುರೇಂದ್ರ ‘ಅಣ್ಣಾ ಈಗ ಮುಹೂರ್ತ ಚೆನ್ನಾಗಿದೆ, ಈಗಲೇ ಹೊರಡೋಣ‘ ಎಂದು ಅವಸರ ಮಾಡುತ್ತಾನೆ. ವಿಜಯಾಂಬಿಕಾಗೆ ಶ್ರಾವಣಿಗೆ ಆಶೀರ್ವಾದ ಮಾಡಲು ಸಾಧ್ಯವಾಗುವುದಿಲ್ಲ. ಇದನ್ನು ನೋಡಿ ಮದನ್‌ ಪೇಚಾಡುತ್ತಾನೆ. ಆದರೆ ವಿಜಯಾಂಬಿಕಾಗೆ ಮಾತ್ರ ಎಲ್ಲಿ ಪೃಥ್ವಿರಾಜ್‌ ಮದುವೆ ಮನೆಗೆ ಬಂದರೆ ತನ್ನ ಬಂಡವಾಳ ಬಯಲಾಗುವುದೋ ಎನ್ನುವ ಭಯ ಕಾಡುತ್ತಿರುತ್ತದೆ.

ಮದನ್‌ ಬಿಟ್ಟು ಸುಬ್ಬು, ಅಜ್ಜಿ ಜೊತೆ ಕಾರ್‌ನಲ್ಲಿ ಹೊರಟ ಶ್ರಾವಣಿ

ಮದುವೆ ಮಂಟಪಕ್ಕೆ ಮದುಮಗ, ಮದುಮಗಳು ಹೋಗಲೆಂದು ಒಂದು ಕಾರ್ ರೆಡಿ ಮಾಡಿ ಇರುತ್ತಾರೆ. ಆದರೆ ಶ್ರಾವಣಿ ಹೇಗಾದರೂ ಮದನ್ ಜೊತೆ ಹೋಗುವುದನ್ನು ತಪ್ಪಿಸಿಕೊಳ್ಳಬೇಕು ಎಂದುಕೊಂಡು ಅಪ್ಪನ ಬಳಿ ‘ಅಪ್ಪ ನಾನು ಅಜ್ಜಿ ಜೊತೆ ಈ ಕಾರ್‌ನಲ್ಲಿ ಹೋಗುತ್ತೇನೆ ಎನ್ನುತ್ತಾಳೆ, ಮಾತ್ರವಲ್ಲ ಸುಬ್ಬು ನಾವು ಹೋಗುವ ಕಾರ್ ಡ್ರೈವ್ ಮಾಡಲಿ ಎಂದು ಹೇಳುತ್ತಾಳೆ. ಮಗಳ ಮದುವೆ ಖುಷಿಯಲ್ಲಿದ್ದ ವೀರೇಂದ್ರ ಅವಳ ಎಲ್ಲಾ ಆಸೆಗೂ ಒಕೆ ಎನ್ನುತ್ತಾರೆ. ಸುಬ್ಬು ಕಾರಿನಲ್ಲಿ ಕೂತು ವೈಪರ್ ಆನ್ ಮಾಡಿದ್ದೆ ತಡ ಮದನ್ ಹಾಗೂ ಶ್ರಾವಣಿ ಹೆಸರಿದ್ದ ಕಾರಿನ ಮೇಲೆ ಅಂಟಿಸಿದ್ದ ನೇಮ್ ಪ್ಲೇಟ್ ಕಿತ್ತು ಹೋಗುತ್ತದೆ. ಸುಬ್ಬು ಗಾಬರಿಯಿಂದ ಇಳಿದು ಸಾರಿ ಸರ್ ಗೊತ್ತಾಗಿಲ್ಲ ಎಂದು ಹೇಳುತ್ತಾನೆ. ಆಗ ಸುರೇಂದ್ರ ಅಯ್ಯೋ ಅದನ್ನ ನಾನು ಕಿತ್ತು ಬಿಸಾಕ್ತೇನೆ, ಬೇರೆ ಕಾರ್‌ನಲ್ಲಿ ನೇಮ್ ಪ್ಲೇಟ್‌ ಇದೆ. ಈಗ ಅದನ್ನೆಲ್ಲಾ ನೋಡಿಕೊಂಡು ಕುಳಿತುಕೊಳ್ಳಲು ಸಮಯ ಇಲ್ಲ, ಮುಹೂರ್ತ ಮೀರಿದ್ರೆ ಕಷ್ಟ, ಹೊರಡೋಣ ಅಂತ‘ ಗಡಿಬಿಡಿ ಮಾಡ್ತಾರೆ. ಮದನ್‌ಗೆ ಇದನ್ನೆಲ್ಲಾ ನೋಡಿ ಏನಾಗ್ತಿದೆ ಅನ್ನೋದು ಅರ್ಥ ಆಗೊಲ್ಲ. ಶ್ರಾವಣಿಗೆ ಮಾತ್ರ ನೇಮ್ ಪ್ಲೇಟ್ ಹರಿದಿರುವುದು ತುಂಬಾನೇ ಖುಷಿ ನೀಡುತ್ತದೆ.

ಮದುವೆ ಮಂಟಪಕ್ಕೆ ಬಂದ ಪೃಥ್ವಿರಾಜ್ ಕೈಯಲ್ಲಿದೆ ತಾಳಿ

ಹೇಗಾದರೂ ಮದುವೆ ಮಂಟಪಕ್ಕೆ ಬರಬೇಕು ಎಂದುಕೊಂಡು ರೌಡಿಗಳ ಕೈಯಿಂದ ತಪ್ಪಿಸಿಕೊಂಡು ಓಡಿ ಬಂದಿದ್ದ ಪೃಥ್ವಿರಾಜ್ ಮತ್ತೆ ರೌಡಿಗಳ ಕೈಗೆ ಬೀಳುತ್ತಾನೆ. ಆದರೆ ಪುನಃ ಅವರಿಂದ ತಪ್ಪಿಸಿಕೊಂಡು ಮದುವೆ ಮನೆ ಹೂವಿನ ಅಲಂಕಾರಕ್ಕೆ ಬಂದಿದ್ದ ವೆಂಕಿಗೆ ಕೈಗೆ ಸಿಗುತ್ತಾನೆ. ವೆಂಕಿ ಅವನನ್ನು ಮದುವೆ ಮನೆಗೆ ಕರೆದುಕೊಂಡು ಬರುತ್ತಾನೆ. ಮದುವೆ ಮನೆಗೆ ದ್ವಾರ ತಲುಪಿದ ಪೃಥ್ವಿರಾಜ್‌ಗೆ ಒಳಗಡೆ ಎಂಟ್ರಿ ಕೊಡುವುದಿಲ್ಲ ಸೆಕ್ಯೂರಿಟಿಗಳು. ಆದರೂ ಗೋಡೆ ಹಾರಿ ಕಳ್ಳನಂತೆ ಮದುವೆ ಮನೆ ಒಳಗೆ ಬರುವ ಪೃಥ್ವಿರಾಜ್ ಕೈಯಲ್ಲಿ ಒಂದು ತಾಳಿ ಇರುತ್ತದೆ.

ಇತ್ತ ಮಿನಿಸ್ಟರ್ ವೀರೇಂದ್ರ ಕುಟುಂಬ ಮದುವೆ ಮನೆ ಅಂಗಳ ತಲುಪುತ್ತದೆ. ಎಲ್ಲರೂ ಮಿನಿಸ್ಟರ್‌ಗೆ ಜೈಕಾರ ಹಾಕುತ್ತಿರುತ್ತಾರೆ. ಇತ್ತ ಅವರನ್ನು ನೋಡಲು ತವಕದಲ್ಲಿ ಕಾಯುತ್ತಿರುತ್ತಾನೆ ಪೃಥ್ವಿರಾಜ್‌.

ಪ್ರಥ್ವಿರಾಜ್ ಕೈಯಲ್ಲಿ ತಾಳಿ ಯಾರದ್ದು, ಮದುವೆ ಮನೆ ಒಳಗೆ ಪೃಥ್ವಿರಾಜ್‌ಗೆ ಎಂಟ್ರಿ ಸಿಗುತ್ತಾ, ಶ್ರಾವಣಿ ಹಾಗೂ ಪ್ರಥ್ವಿರಾಜ್ ಭೇಟಿ ಆಗ್ತಾರಾ, ವಿಜಯಾಂಬಿಕಾ ಸತ್ಯ ಹೊರ ಬರುತ್ತಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ವಂದನಾ – ಜ್ಯೋತಿ

Whats_app_banner