ಶ್ರಾವಣಿ ಸುಬ್ರಹ್ಮಣ್ಯದಲ್ಲಿ ಬಿಗ್‌ ಟ್ವಿಸ್ಟ್‌: ಮದನ್ ಕಟ್ಟುವ ಮೊದಲೇ ಕತ್ತಲ್ಲಿತ್ತು ತಾಳಿ, ಸುಬ್ಬುವನ್ನೇ ತನ್ನ ಗಂಡ ಎಂದ ಶ್ರಾವಣಿ
ಕನ್ನಡ ಸುದ್ದಿ  /  ಮನರಂಜನೆ  /  ಶ್ರಾವಣಿ ಸುಬ್ರಹ್ಮಣ್ಯದಲ್ಲಿ ಬಿಗ್‌ ಟ್ವಿಸ್ಟ್‌: ಮದನ್ ಕಟ್ಟುವ ಮೊದಲೇ ಕತ್ತಲ್ಲಿತ್ತು ತಾಳಿ, ಸುಬ್ಬುವನ್ನೇ ತನ್ನ ಗಂಡ ಎಂದ ಶ್ರಾವಣಿ

ಶ್ರಾವಣಿ ಸುಬ್ರಹ್ಮಣ್ಯದಲ್ಲಿ ಬಿಗ್‌ ಟ್ವಿಸ್ಟ್‌: ಮದನ್ ಕಟ್ಟುವ ಮೊದಲೇ ಕತ್ತಲ್ಲಿತ್ತು ತಾಳಿ, ಸುಬ್ಬುವನ್ನೇ ತನ್ನ ಗಂಡ ಎಂದ ಶ್ರಾವಣಿ

ಶ್ರಾವಣಿಗೆ ಹೇಗಾದ್ರೂ ನಂದಿನಿ ಅಮ್ಮನ ತಾಳಿ ಕೊಡಬೇಕು ಅಂತಿದ್ದ ಪೃಥ್ವಿರಾಜ್‌ಗೆ ದೇವರ ರೂಪದಲ್ಲಿ ಸಿಗುತ್ತಾನೆ ವೆಂಕಿ, ಅವನ ಮೂಲಕ ಶ್ರಾವಣಿಗೆ ತಾಳಿ ತಲುಪಿಸುತ್ತಾನೆ. ಅಮ್ಮನ ತಾಳಿಯನ್ನೇ ಕಟ್ಟಿಕೊಂಡು ಮದುವೆ ಮಂಟಪಕ್ಕೆ ಬಂದ ಶ್ರಾವಣಿ ಎಲ್ಲರಿಗೂ ಕೊಡ್ತಾಳೆ ಬಿಗ್ ಶಾಕ್‌. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 27ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 27ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 27ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 27ರ ಸಂಚಿಕೆಯಲ್ಲಿ ಶ್ರಾವಣಿಗೆ ಮದುವೆ ಮಂಟಪಕ್ಕೆ ಹೋಗಲು ಖುಷಿಯೇ ಇಲ್ಲ. ಇನ್ನೇನು ಮದುವೆಗೆ 5 ನಿಮಿಷ ಇದೆ ಎನ್ನುವಾಗಲೂ ಶ್ರಾವಣಿ ತನ್ನ ಹೆತ್ತಮ್ಮನ ಬಳಿ ಏನಾದ್ರೂ ದಾರಿ ತೋರಿಸು ಅಮ್ಮ, ಈ ಮದುವೆ ನಿಲ್ಲಿಸು ಎಂದು ಬೇಡಿಕೊಳ್ಳುತ್ತಾಳೆ. ಈಗಲೂ ಶ್ರಾವಣಿಗೆ ಕಾಣದ ಅಮ್ಮ ಬಂದು ಸಹಾಯ ಮಾಡುತ್ತಾಳೆ ಎನ್ನುವ ನಂಬಿಕೆ ಇರುತ್ತದೆ. ಪಿಂಕಿ ಬಂದು ಮದುವೆ ಮಂಟಪಕ್ಕೆ ಕರೆದರೂ ಹೋಗದ ಶ್ರಾವಣಿ ಬಾಗಿಲು ಹಾಕಿಕೊಂಡು ತನ್ನ ಮುಂದಿನ ಜೀವನ ಏನಾಗಬಹುದು ಎಂದು ಯೋಚಿಸುತ್ತಿರುತ್ತಾಳೆ.

ವೆಂಕಿ ಬಳಿ ತಾಳಿ ಕೊಟ್ಟು ಶ್ರಾವಣಿಗೆ ಕೊಡಲು ಹೇಳುವ ಪೃಥ್ವಿರಾಜ್‌

ಮದುವೆ ಮಂಟಪದಲ್ಲಿ ಎಲ್ಲರ ಕಣ್ತಪ್ಪಿಸಿ ರೌಡಿಗಳ ಕಣ್ತಪ್ಪಿಸಿ ಓಡಾಡುತ್ತಿರುವ ಪ್ರಥ್ವಿರಾಜ್‌ಗೆ ಹೇಗಾದರೂ ಮಾಡಿ ತನ್ನ ಕೈಯಲ್ಲಿರುವ ನಂದಿನಿಯಮ್ಮನ ತಾಳಿಯನ್ನು ಶ್ರಾವಣಿಗೆ ಕೊಡಬೇಕು ಅಂತಿರುತ್ತದೆ. ಆದರೆ ಯಾವ ಕೋಣೆಗೆ ಹೋದ್ರು ಅವನಿಗೆ ಶ್ರಾವಣಿ ಕೋಣೆ ಕಾಣಿಸುವುದಿಲ್ಲ. ಈ ನಡುವೆ ರೌಡಿಗಳು ಅವನನ್ನು ಹುಡುಕಿ ಮಂಟಪದ ಒಳಗೆ ಬಂದಿರುತ್ತಾರೆ. ದಾರಿ ಕಾಣದೆ ನಿಂತಿದ್ದ ಪೃಥ್ವಿರಾಜ್ ಎದುರು ದೇವರಂತೆ ಬಂದು ನಿಲ್ಲುತ್ತಾನೆ ವೆಂಕಿ. ಅವನ ಕೈಯಲ್ಲಿ ತಾಳಿ ಇರುವ ಕಟ್ಟು ನೀಡುವ ಪೃಥ್ವಿರಾಜ್‌ ಇದನ್ನು ಶ್ರಾವಣಿಗೆ ಕೊಡುವಂತೆ ಅಂಗಲಾಚಿ ಬೇಡಿಕೊಳ್ಳುತ್ತಾನೆ. ವೆಂಕಿಗೆ ಇದು ಏನು, ಎತ್ತ ಎಂಬುದರ ಅರಿವು ಇರುವುದಿಲ್ಲ. ಆದರೆ ಪೃಥ್ವಿರಾಜ್‌ ಬೇಡಿಕೊಳ್ಳುವುದು ನೋಡಿ ಅವನು ತಾಳಿಯನ್ನು ಶ್ರಾವಣಿಗೆ ತಂದು ಕೊಡುತ್ತಾನೆ.

ಮದನ್‌ ಕಟ್ಟುವ ಮೊದಲೇ ಶ್ರಾವಣಿ ಕತ್ತಲಿತ್ತು ತಾಳಿ

ಮದುವೆ ಮಂಟಪಕ್ಕೆ ಬರುವ ಶ್ರಾವಣಿ ಮದುವೆ ಶಾಸ್ತ್ರಗಳನ್ನೆಲ್ಲಾ ಪೂರೈಸುತ್ತಾಳೆ. ಹಸೆಮಣೆಯಲ್ಲಿ ಕೂತ ಮೊಮ್ಮಗಳನ್ನು ನೋಡಿ ಅಜ್ಜಿ ಕಣ್ಣೀರು ಹಾಕಿದರೆ ಕಾಂತಮ್ಮ ಏನೂ ಮಾಡಲು ತೋಚದೆ ತಲೆ ಮೇಲೆ ಕೈ ಹೊತ್ತು ನಿಲ್ಲುತ್ತಾಳೆ. ಇತ್ತ ವಿಜಯಾಂಬಿಕಾ ಮಾತ್ರ ತಾನು ಗೆದ್ದೆಬಿಟ್ಟೇ ಅಂತ ದರ್ಪದಲ್ಲಿ ಬೀಗುತ್ತಿರುತ್ತಾಳೆ. ಆದರೆ ಇನ್ನೇನು ಮಾಂಗಲ್ಯಧಾರಣೆ ಆಗಬೇಕು ಅಷ್ಟೊತ್ತಿಗೆ ಶ್ರಾವಣಿ ತನ್ನ ಕತ್ತಿಂದ ತಾಳಿ ತೆಗೆದು ಎಲ್ಲ ಮುಂದೆ ಹಿಡಿಯುತ್ತಾಳೆ. ಶ್ರಾವಣಿ ಕತ್ತಲ್ಲಿ ತಾಳಿ ನೋಡಿ ಎಲ್ಲರೂ ಶಾಕ್ ಆಗ್ತಾರೆ.

ಸುಬ್ಬುವೇ ತಾಳಿ ಕಟ್ಟಿದ್ದು ಎನ್ನುವ ಶ್ರಾವಣಿ

ಮಗಳ ಕತ್ತಲ್ಲಿ ತಾಳಿ ನೋಡಿದ ವೀರೇಂದ್ರ ಕೋಪದಲ್ಲಿ ಇದನ್ನು ಕಟ್ಟಿದ್ದು ಯಾರು ಎಂದು ಕೂಗುತ್ತಾರೆ. ಆಗ ಶ್ರಾವಣಿ ಹಸೆಮಣೆಯಿಂದ ಎದ್ದು ಸ್ವಲ್ಪ ಹಿಂದೆ ಹೋಗಿ ಸುಬ್ಬು ಕೈ ಹಿಡಿಯುತ್ತಾಳೆ. ಸುಬ್ಬುಗೆ ಶ್ರಾವಣಿ ಮಾಡಿದ ಕೆಲಸ ತಲೆ ಮೇಲೆ ಆಕಾಶ ಬಿದ್ದ ಅನುಭವ ಕೊಡುತ್ತದೆ. ಆದರೆ ಅಷ್ಟೊತ್ತಿಗೆ ಅವಳಿಗೆ ಪ್ರಮಾಣ ಮಾಡಿದ್ದು ನೆನಪಾಗಿ ಮೌನವಾಗುತ್ತಾನೆ. ಮದುವೆ ಮನೆಯಲ್ಲಿ ಇರುವವರಿಗೆ ಎಲ್ಲರಿಗೂ ಈ ವಿಚಾರ ಶಾಕ್ ನೀಡಿದ್ರೆ ಪೃಥ್ವಿರಾಜ್ ಮನಸಾರೆ ಶ್ರಾವಣಿ–ಸುಬ್ಬುವನ್ನು ಹರಸುತ್ತಾನೆ. ಲಲಿತಾದೇವಿ ಕೂಡ ಮನದಲ್ಲಿ ಹರ್ಷ ವ್ಯಕ್ತಪಡಿಸುತ್ತಾರೆ. ಆದರೆ ವೀರೇಂದ್ರ ಕೋಪ ಮಾಡಿಕೊಂಡು ಅಲ್ಲಿಂದ ಹೊರಟು ಬಿಡುತ್ತಾರೆ. ಸುರೇಂದ್ರ ಸುಬ್ಬುಗೆ ನಂಬಿಕೆ ದ್ರೋಹಿ ಎನ್ನುವ ಪಟ್ಟ ಕಟ್ಟುತ್ತಾರೆ. ಸುಬ್ಬು ಮೇಲೆ ರೇಗಲು ಹೋದ ಮದನ್‌ನನ್ನು ತಡೆಯುವ ಸುರೇಂದ್ರ ಲಲಿತಾದೇವಿಯವರ ಕ್ಷಮೆ ಕೇಳಿ ಅವರನ್ನು ಕರೆದುಕೊಂಡು ಅಲ್ಲಿಂದ ಹೊರಡುತ್ತಾರೆ. ಕಾಂತಮ್ಮ ಸುಂದರನಿಗೆ ಕರೆ ಮಾಡಿ ನಡೆದಿರುವುದನ್ನೆಲ್ಲಾ ಹೇಳಿದ್ರೆ, ಪದ್ಮನಾಭ ಏನೂ ತೋಚದೆ ಮಗಳ ಮದುವೆ ಬಗ್ಗೆ ಯೋಚಿಸಿ, ಆದಷ್ಟು ಬೇಗ ಅಲ್ಲಿಗೆ ಹೊರಟು ಬಿಡಬೇಕು ಎಂದು ಮಗನಿಗೆ ಹೇಳುತ್ತಾರೆ. ಏನು ಮಾಡಲು ತೋಚದೆ ಮಂಟಪ ಬಿಟ್ಟು ಹೋಗುವ ಸುಬ್ಬು ಹಿಂದೆ ಓಡುತ್ತಾಳೆ ಶ್ರಾವಣಿ.

ಇತ್ತ ಸುಬ್ಬು ಮನೆಯಲ್ಲಿ ಮದುವೆ ರಿಸೆಪ್ಷನ್ ಸಂಭ್ರಮ ಬಲು ಜೋರಿನಿಂದ ಸಾಗುತ್ತಿರುತ್ತದೆ. ಎಲ್ಲರೂ ಸಂಭ್ರಮದಲ್ಲಿ ಓಡಾಡುತ್ತಿರುತ್ತಾರೆ. ಆದರೆ ಸುಂದರ ಮಾತ್ರ ನಡೆಯದ ಮದುವೆಗೆ ಸಂಭ್ರಮ ಯಾಕೆ ಎನ್ನುವಂತೆ ಓಡಾಡಿಕೊಂಡಿರುತ್ತಾನೆ.

ಶ್ರಾವಣಿ–ಸುಬ್ಬು ಮದುವೆ ವಿಚಾರ ಇಂದ್ರಮ್ಮನಿಗೆ ತಿಳಿದ್ರೆ ಏನಾಗಬಹುದು, ಸುಬ್ಬು ಮೇಲೆ ಪ್ರಾಣವನ್ನೇ ಇಟ್ಟುಕೊಂಡಿರುವ ಶ್ರೀವಲ್ಲಿ ಕಥೆ ಏನು, ಶ್ರಾವಣಿ–ಸುಬ್ಬು ಮದುವೆಯನ್ನು ಒಪ್ಪಿಕೊಳ್ತಾರಾ ವೀರೇಂದ್ರ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ವಂದನಾ – ಜ್ಯೋತಿ

Whats_app_banner