ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ: ಅಪ್ಪನನ್ನ ಎದುರು ಹಾಕಿಕೊಂಡು, ಇನ್ಸ್‌ಪೆಕ್ಟರ್‌ಗೆ ಸವಾಲು ಹಾಕಿ ಸುಬ್ಬುವನ್ನು ಬಿಡಿಸಿದ ಶ್ರಾವಣಿ
ಸುಬ್ಬುಗಾಗಿ ಸ್ಟೇಷನ್ ಮೆಟ್ಟಿಲೇರುವ ಶ್ರಾವಣಿ ಅಪ್ಪನನ್ನೇ ಎದುರು ಹಾಕಿಕೊಂಡು ಇನ್ಸ್‌ಪೆಕ್ಟರ್‌ಗೆ ಸವಾಲು ಹಾಕಿ ಸುಬ್ಬುವನ್ನು ಬಿಡಿಸಿಕೊಂಡು ಬರುತ್ತಾಳೆ. ಇತ್ತ ವಿಜಯಾಂಬಿಕಾ ಕೈಗೆ ಮತ್ತೆ ಸಿಕ್ಕಿ ಬೀಳುತ್ತಾನೆ ಪೃಥ್ವಿರಾಜ್. ಶ್ರಾವಣಿಯಲ್ಲಿ ನಂದಿನಿಯಮ್ಮನನ್ನು ಕಾಣುತ್ತಾರೆ ಪದ್ಮನಾಭ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 30ರ ಸಂಚಿಕೆಯಲ್ಲಿ ಏನೇನಾಯ್ತು.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 30ರ ಸಂಚಿಕೆಯಲ್ಲಿ ಸುಬ್ಬುವನ್ನು ಸ್ಟೇಷನ್‌ಗೆ ಕರೆದುಕೊಂಡು ಬಂದ ಇನ್ಸ್‌ಪೆಕ್ಟರ್ ಸುಬ್ಬು ಮುಂದೆ ದರ್ಪ ತೋರುತ್ತಾನೆ. ಮಿನಿಸ್ಟರ್ ಮಗಳನ್ನು ಸುಬ್ಬು ಕಿಡ್ನಾಪ್ ಮಾಡಿದ್ದಾನೆ ಎಂದು ಹೇಳಿ, ಅವನನ್ನು ನಿಂದಿಸುವ ಜೊತೆಗೆ ಲಾಠಿ ಹಿಡಿದು ಹೊಡೆಯಲು ಮುಂದಾಗುತ್ತಾನೆ. ಅಷ್ಟೊತ್ತಿಗೆ ಸ್ಟೇಷನ್ ಮೆಟ್ಟಿಲು ತುಳಿದು ಒಳ ಬರುವ ಶ್ರಾವಣಿ ಇನ್ಸ್‌ಪೆಕ್ಟರ್‌ಗೆ ಕಾನೂನು ಪಾಠ ಮಾಡುತ್ತಾಳೆ.
ಗಂಡನ ಪರ ಶ್ರಾವಣಿ ವಕಾಲತ್ತು
ಇನ್ಸ್‌ಪೆಕ್ಟರ್ ಮುಂದೆ ಸುಬ್ಬು ಪರ ಮಾತನಾಡುವ ಶ್ರಾವಣಿ ಯಾವ ಕಾರಣಕ್ಕೆ ಅವನನ್ನು ಅರೆಸ್ಟ್ ಮಾಡಿದ್ದೀರಾ, ಅರೆಸ್ಟ್ ವಾರಂಟ್ ಎಲ್ಲಿದೆ, ಸುಬ್ಬುವನ್ನು ಅರೆಸ್ಟ್ ಮಾಡಲು ಕಂಪ್ಲೇಂಟ್ ಕೊಟ್ಟಿದ್ದು ಯಾರು ಎಂದೆಲ್ಲಾ ಪ್ರಶ್ನಿಸುತ್ತಾಳೆ. ಅಲ್ಲದೇ ಕಾನೂನಿನ ನೀತಿ ನಿಯಮಗಳ ಬಗ್ಗೆ ಇನ್ಸ್‌ಪೆಕ್ಟರ್‌ಗೆ ಪಾಠ ಮಾಡುತ್ತಾಳೆ. ಆರಂಭದಲ್ಲಿ ಅವಳು ಯಾರು ಎಂಬುದು ತಿಳಿದಿಲ್ಲದ ಇನ್ಸ್‌ಪೆಕ್ಟರ್ ಅವಳ ಬಳಿ ಜೋರಿನಿಂದ ಮಾತನಾಡುತ್ತಾನೆ. ಸುಬ್ಬು ನನ್ನ ಗಂಡ ಅನ್ನುವ ಹಕ್ಕಿನಲ್ಲಿ ನಾನು ಮಾತನಾಡುತ್ತಿದ್ದೇನೆ ಎಂದು ಶ್ರಾವಣಿ ಜೋರಿನಿಂದ ಮಾತನಾಡುತ್ತಾಳೆ.
ವಿಜಯಾಂಬಿಕಾ ಕೈಗೆ ಮತ್ತೆ ಸಿಕ್ಕಿ ಬಿದ್ದ ಪೃಥ್ವಿರಾಜ್
ಪೃಥ್ವಿರಾಜ್ ಕಾಣಿಸದೇ ವಿಜಯಾಂಬಿಕಾ ಸಿಟ್ಟಿಗೆದ್ದಿರುತ್ತಾಳೆ. ರೌಡಿಗಳ ಬಳಿ ಅವನು ಎಲ್ಲಿದ್ದಾನೆ, ಅವನನ್ನೇ ಹುಡುಕಲು ನಿಮ್ಮಿಂದ ಸಾಧ್ಯವಾಗಿಲ್ಲ ಅಂದ್ರೆ ನೀವು ಬೇರೆನು ಮಾಡಲು ಸಾಧ್ಯ ನಾಲಾಯಕ್‌ಗಳು ಎಂದು ಬಯ್ಯತ್ತಾಳೆ, ಇವತ್ತು ಹುಡುಕುತ್ತೇವೆ ಮೇಡಂ ಎಂದ ರೌಡಿ ಕಾಲಿಗೆ ಕೋಪದಿಂದ ಗುಂಡು ಹಾರಿಸುತ್ತಾಳೆ. ರೌಡಿಗಳಿಗೆ ಹಿಗ್ಗಾಮುಗ್ಗಾ ಬಯ್ಯುತ್ತಿರುವಾಗ ಇನ್ನೊಂದಿಷ್ಟು ರೌಡಿಗಳು ಪೃಥ್ವಿರಾಜ್‌ನನ್ನು ಹಿಡಿದು ಬರುತ್ತಾರೆ. ಅವನು ವಿಜಯಾಂಬಿಕಾಗೆ ನೀನು ಸೋತೆ. ಶ್ರಾವಣಿಯಮ್ಮನ ಜೊತೆ ನಿನ್ನ ಮಗನ ಮದುವೆ ಆಗಿಲ್ಲ ಎಂದು ಹೀಯಾಳಿಸುತ್ತಾನೆ. ಅವನ ಕಾಲಿಗೂ ಕೋಪದಿಂದ ಗುಂಡು ಹಾರಿಸುತ್ತಾಳೆ ವಿಜಯಾಂಬಿಕಾ.
ಅಪ್ಪನಿಗೆ ಎದುರು ಮಾತನಾಡಿದ ಶ್ರಾವಣಿ
ಸುಬ್ಬುವನ್ನು ಅರೆಸ್ಟ್ ಮಾಡಿದ ಸಂಬಂಧ ಇನ್ಸ್‌ಪೆಕ್ಟರ್‌ಗೆ ಕರೆ ಮಾಡಿ ಯಾವುದೇ ಕಾರಣಕ್ಕೂ ಅವನನ್ನು ಬಿಡಬೇಡಿ, ಅವನು ಮಾಡಿದ್ದು ನಂಬಿಕೆ ದ್ರೋಹ ಎಂದು ಹೇಳುತ್ತಾರೆ ವೀರೇಂದ್ರ. ಪೊಲೀಸ್ ಬಳಿ ಮಾತಾಡುತ್ತಿರುವುದು ಅಪ್ಪ ಎಂದು ತಿಳಿದ ಶ್ರಾವಣಿ ಫೋನ್ ಕಿತ್ತುಕೊಂಡು ‘ಅಪ್ಪ ನೀವಿಷ್ಟು ಕೀಳು ಮಟ್ಟಕ್ಕೆ ಇಳಿತೀರಿ ಅಂತ ನಾನು ಅಂದ್ಕೊಂಡು ಇರ್ಲಿಲ್ಲ. ನಿಮ್ಮಿಂದ ನಾನು ಇದನ್ನು ನಿರೀಕ್ಷಿಸಿಯೂ ಇರಲಿಲ್ಲ. ಈಗ ಹೇಳುತ್ತಿದ್ದೇನೆ ಕೇಳಿ, ನಾನು ನನ್ನ ಗಂಡನನ್ನು ಸ್ಟೇಷನ್‌ನಿಂದ ಬಿಡಿಸಿಕೊಂಡು ಹೋಗುತ್ತೇನೆ. ಅದು ಯಾರು ಬಂದು ತಡೆಯುತ್ತಾರೋ ನಾನು ನೋಡ್ತೀನಿ‘ ಎಂದು ಸವಾಲು ಹಾಕಿ ಫೋನ್ ಕಟ್ ಮಾಡುತ್ತಾಳೆ. ಆಗ ಇನ್ಸ್‌ಪೆಕ್ಟರ್‌ಗೆ ಅವಳು ಮಿನಿಸ್ಟರ್ ಮಗಳು ಎಂಬುದು ಅರಿವಾಗುತ್ತದೆ. ಸ್ಟೇಷನ್‌ನಿಂದ ಸುಬ್ಬು ಜೊತೆ ಹೊರ ಹೋಗುವ ಶ್ರಾವಣಿ ತಿರುಗಿ ನೋಡಿ ‘ನಾನು ನನ್ನ ಗಂಡನ ವಿಚಾರಕ್ಕೆ ಯಾರಾದ್ರೂ ಬಂದ್ರೆ ಕಾಳಿಯಾಗೋಕು ಸಿದ್ಧ, ಯಾವುದೇ ಕಾರಣಕ್ಕೂ ನನ್ನ ಗಂಡನನ್ನು ಬಿಟ್ಟು ಕೊಡುವ ಮಾತೇ ಇಲ್ಲ‘ ಎಂದು ರೋಷದಲ್ಲಿ ಹೇಳಿ ಹೊರಡುತ್ತಾಳೆ. ಇತ್ತ ವೀರೇಂದ್ರ ಮಗಳ ಮಾತು ಕೇಳಿ ಶಾಕ್ ಆಗಿ ನಿಂತಿರುತ್ತಾರೆ.
ಸುಬ್ಬುವನ್ನು ಬಿಡಿಸಿಕೊಂಡು ಮನೆಗೆ ಬರುವ ಶ್ರಾವಣಿಗೆ ಸುಬ್ಬು ಮನೆಯಲ್ಲಿ ಸಿಗುತ್ತಾ ಎಂಟ್ರಿ, ಯಜಮಾನರಿಂದ ನಂಬಿಕೆ ದ್ರೋಹಿ ಎನ್ನಿಸಿಕೊಂಡು ಸುಬ್ಬು ಗತಿ ಏನು, ಶ್ರೀವಲ್ಲಿ ಮುಂದಿನ ನಡೆ ಏನು ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ
‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.
ಪಾತ್ರ ಪರಿಚಯ
ವೀರೇಂದ್ರ– ಮೋಹನ್
ವಿಜಯಾಂಬಿಕಾ – ಸ್ನೇಹ ಈಶ್ವರ್
ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್
ಸುಬ್ಬು – ಅಮೋಘ್
ಪದ್ಮನಾಭ – ಬಾಲರಾಜ್
ಪಿಂಕಿ – ಪ್ರತಿ ಶೆಟ್ಟಿ
ಮದನ್ – ಅರ್ಥವ
ಕಾಂತಮ್ಮ – ಭವಾನಿ ಪ್ರಕಾಶ್
ವಂದನಾ – ಜ್ಯೋತಿ
