ಮನೆಯವರ ಮಾತು ಧಿಕ್ಕರಿಸಿ ಶ್ರಾವಣಿಯನ್ನು ಮನೆಗೆ ಸೇರಿಸಿಕೊಂಡ ಪದ್ಮನಾಭ, ಸುಬ್ಬು ಮೇಲೆ ದ್ವೇಷ ಕಾರುತ್ತಿರುವ ಇಂದ್ರಮ್ಮ; ಶ್ರಾವಣಿ ಸುಬ್ರಹ್ಮಣ್ಯ
ಕನ್ನಡ ಸುದ್ದಿ  /  ಮನರಂಜನೆ  /  ಮನೆಯವರ ಮಾತು ಧಿಕ್ಕರಿಸಿ ಶ್ರಾವಣಿಯನ್ನು ಮನೆಗೆ ಸೇರಿಸಿಕೊಂಡ ಪದ್ಮನಾಭ, ಸುಬ್ಬು ಮೇಲೆ ದ್ವೇಷ ಕಾರುತ್ತಿರುವ ಇಂದ್ರಮ್ಮ; ಶ್ರಾವಣಿ ಸುಬ್ರಹ್ಮಣ್ಯ

ಮನೆಯವರ ಮಾತು ಧಿಕ್ಕರಿಸಿ ಶ್ರಾವಣಿಯನ್ನು ಮನೆಗೆ ಸೇರಿಸಿಕೊಂಡ ಪದ್ಮನಾಭ, ಸುಬ್ಬು ಮೇಲೆ ದ್ವೇಷ ಕಾರುತ್ತಿರುವ ಇಂದ್ರಮ್ಮ; ಶ್ರಾವಣಿ ಸುಬ್ರಹ್ಮಣ್ಯ

ಲಲಿತಾದೇವಿಯವರ ಬಳಿ ತನಗೆ ಶ್ರಾವಣಿ ಸುಬ್ಬುವನ್ನು ಪ್ರೀತಿಸುತ್ತಿರುವ ವಿಚಾರ ಗೊತ್ತಿತ್ತು ಎಂದು ಹೇಳುವ ವಂದನಾ. ಮನೆ ಬಾಗಿಲಿಗೆ ಬಂದ ಶ್ರಾವಣಿ–ಸುಬ್ಬು ಮೇಲೆ ಕೋಪದಿಂದ ಅಳುತ್ತಾ ಶಾಪ ಹಾಕುವ ವಿಶಾಲಾಕ್ಷಿ. ಮನೆಯವರ ಮಾತನ್ನು ಧಿಕ್ಕರಿಸಿ ಶ್ರಾವಣಿಯನ್ನು ಮನೆಗೆ ಸೇರಿಸಿದ ಪದ್ಮನಾಭ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 31ರ ಸಂಚಿಕೆಯಲ್ಲಿ ಏನೇನಾಯ್ತು.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 31ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 31ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 31ರ ಸಂಚಿಕೆಯಲ್ಲಿ ಲಲಿತಾದೇವಿ ಜೊತೆ ಮಾತನಾಡುತ್ತಿರುವ ವಂದನಾ ಅವರ ಮಾತನ್ನು ಕೇಳಿಸಿಕೊಂಡು ತನಗೆ ಶ್ರಾವಣಿ ಹಾಗೂ ಸುಬ್ಬು ಪ್ರೀತಿಸುತ್ತಿರುವುದು ಮೊದಲೇ ಗೊತ್ತಿತ್ತು, ಆದರೆ ನಾವೆಷ್ಟೇ ಕೇಳಿದ್ರು ಅವಳು ಈ ಮದುವೆಗೆ ಒಪ್ಪಿಗೆ ಇದೆ ಅಂತಾನೇ ಹೇಳಿದ್ಲು, ಅವಳು ಮದನ್‌ನನ್ನು ಮದುವೆಯಾಗುವ ವಿಚಾರದಲ್ಲಿ ತಪ್ಪು ತಿಳಿದುಕೊಂಡಿದ್ದಳು. ಈಗ ಅವಳು ತಾನು ಪ್ರೀತಿಸುತ್ತಿರುವ ಹುಡುಗನನ್ನೇ ಮದುವೆ ಆಗಿದ್ದಾಳೆ ಅಲ್ವಾ ಅಂತ ಕೇಳಿ ಶಾಕ್ ನೀಡುತ್ತಾಳೆ. ಲಲಿತಾದೇವಿ ಮಾತ್ರ ಮೊಮ್ಮಗಳು ಎಲ್ಲೇ ಇದ್ರೂ ಆರಾಮಾಗಿರಲಿ ಎಂದು ಬೇಡಿಕೊಳ್ಳುತ್ತಾರೆ.

ಶ್ರಾವಣಿ ಬಗ್ಗೆ ಕೋಪ ಹೊರ ಹಾಕುವ ವಿಶಾಲಾ‌ಕ್ಷಿ

ಶ್ರಾವಣಿಯಿಂದಾಗಿ ತನ್ನ ಮಗಳ ಹಾಳು ಹಾಳಾಯ್ತು ಎಂದು ಕೋಪಗೊಂಡಿರುವ ವಿಶಾಲಾಕ್ಷಿ ಶ್ರಾವಣಿ ಬಗ್ಗೆ ಬಾಯಿಗೆ ಬಂದಿದ್ದು ಮಾತನಾಡುತ್ತಾಳೆ. ಶ್ರಾವಣಿಗೆ ಬಯ್ಯುತ್ತಾ ಕೋಪ ಹೊರ ಹಾಕುವ ವಿಶಾಲಾಕ್ಷಿ, ಧನಲಕ್ಷ್ಮೀ ಸುಬ್ಬು ಮೇಲೂ ಕೋಪ ತೋರುತ್ತಾರೆ. ಯಾವುದೇ ಕಾರಣಕ್ಕೂ ಶ್ರಾವಣಿಯನ್ನು ಈ ಮನೆಗೆ ಸೇರಿಸುವುದಿಲ್ಲ ಎಂದು ವಿಶಾಲಾಕ್ಷಿ ಹೇಳುವಾಗ ಮಧ್ಯೆ ಮಾತನಾಡುವ ಕಾಂತಮ್ಮ ‘ಅಲ್ವೇ ವಿಶಾಲು, ನಿನ್ನ ಮಗಳಿಗೆ ಪ್ರೀತಿಸಿದ ಹುಡುಗನ ಜೊತೆಗೆ ಮದುವೆ ಆಗಬೇಕು, ಆದರೆ ಶ್ರಾವಣಿ ಮೇಡಂ ಮಾತ್ರ ಆಗಬಾರದಾ‘ ಎಂದು ಅವಳ ಪರ ವಹಿಸಿ ಮಾತನಾಡುತ್ತಾಳೆ. ಆದರೆ ಕಾಂತಮ್ಮ ಮಾತು ಯಾರಿಗೂ ಸಮಜಾಯಿಸಿ ನೀಡುವುದಿಲ್ಲ. ಅಷ್ಟೊತ್ತಿಗೆ ಮನೆ ಮುಂದೆ ಬಂದು ನಿಲ್ಲುತ್ತಾರೆ ಪದ್ಮನಾಭ, ಶ್ರಾವಣಿ, ಸುಬ್ಬು.

ಸುಬ್ಬು ತನ್ನ ಮಗನೇ ಅಲ್ಲ ಎಂದ ವಿಶಾಲು

ಶ್ರಾವಣಿ ಮೇಲಷ್ಟೇ ರೇಗುತ್ತಿದ್ದ ವಿಶಾಲಾಕ್ಷಿ ಮಗ ಸೊಸೆಯೊಂದಿಗೆ ಮನೆ ಬಾಗಿಲಲ್ಲಿ ಬಂದು ನಿಂತಾಗ ಮಗಳ ಜೀವನ ಹಾಳು ಮಾಡಲು ಕಾರಣ ಅವನೇ ಎಂದು ಕೋಪದಿಂದ ಕೂಗಾಡುತ್ತಾಳೆ. ತನ್ನ ಮಗಳ ಜೀವನ ಹಾಳು ಮಾಡಿದ್ದು ಮಗನೇ ಎಂದುಕೊಂಡು ‘ಸುಬ್ಬು ನೀವು ನನ್ನ ಹೊಟ್ಟೆ ಉರಿಸಬೇಕು ಅಂತಾನೇ ಹುಟ್ಟಿದ್ದೀಯಾ, ನಿನ್ನನ್ನು ಮಗ ಅಂತ ಹೇಳಿಕೊಳ್ಳಲು ನನಗೆ ಬೇಸರ ಆಗ್ತಿದೆ. ನೀನು ನನ್ನ ಮಗ ಆಗಿದ್ರೆ ಈ ರೀತಿ ನನ್ನ ಹೊಟ್ಟೆ ಉರಿಸುವ ಕೆಲಸ ಮಾಡ್ತಾಇರ್ಲಿಲ್ಲ ಎಂದು ರೋಷಾವೇಶದಲ್ಲಿ ಮಾತನಾಡುತ್ತಾಳೆ.

ಶ್ರಾವಣಿ ಮುಂದೆ ಸುಬ್ಬು–ಶ್ರೀವಲ್ಲಿ ಮದುವೆ ವಿಚಾರ ಬಯಲು

ಹೆಂಡತಿ ಮಗ–ಸೊಸೆಗೆ ಬಾಯಿಗೆ ಬಂದಂತೆ ಮಾತನಾಡುತ್ತಿರುವುದನ್ನು ಕೇಳಿಸಿಕೊಳ್ಳುವ ಪದ್ಮನಾಭ ಕೋಪದಿಂದ ಕೂಗಾಡುತ್ತಾರೆ. ಮಗ ಪರ ವಕಾಲತ್ತು ವಹಿಸಿ ‘ವಿಶಾಲು ನಿನಗೆ ಮಗಳ ಪ್ರೀತಿ ಕಾಣುಸುತ್ತಿದೆ, ಮಗಳ ಜೀವನ ಕಾಣಿಸುತ್ತಿದೆ. ಆದರೆ ಮಗಳ ಪ್ರೀತಿಗಾಗಿ ಮಗಳ ಜೀವನ ಹಾಳಾಗುತ್ತಿರುವುದು ಕಾಣಿಸಲಿಲ್ಲ ಅಲ್ವಾ. ತಂಗಿ ಮದುವೆಯಾಗಬೇಕು ಎನ್ನುವ ಒಂದೇ ಒಂದು ಕಾರಣಕ್ಕೆ ಸುಬ್ಬು ತನಗೆ ಇಷ್ಟ ಇಲ್ಲ ಅಂದ್ರು ಶ್ರೀವಲ್ಲಿಯನ್ನು ಮದುವೆಯಾಗಲು ಒಪ್ಪಿಕೊಂಡ. ಆ ಇಂದ್ರಮ್ಮ ಮೊದಲಿನಿಂದಲೂ ಮದುವೆ ನೆಪದಲ್ಲಿ ನಮಗೆ ಹೆದರಿಸುತ್ತಲೇ ಬಂದಿದ್ದಾರೆ. ಅವರಿಗೆ ಅವರ ಮಗಳ ಜೀವನ ಚೆನ್ನಾಗಿರಬೇಕಿತ್ತೇ ಹೊರತು ನನ್ನ ಮಗಳ ಜೀವನ ಚೆನ್ನಾಗಿರೋದು ಬೇಕಿರಲಿಲ್ಲ. ನೀವು ಯಾರು ಏನು ಹೇಳಿದ್ರೂ ನಾನು ಶ್ರಾವಣಿಯಮ್ಮನ್ನು ಎಲ್ಲಿಗೂ ಕಳಿಸೊಲ್ಲ. ಅವರು ಈ ಮನೆಯಲ್ಲೇ ಇರ್ತಾರೆ ಎಂದು ಶ್ರಾವಣಿಯನ್ನು ಮನೆಯೊಳಗೆ ಸೇರಿಸಿಕೊಳ್ಳುತ್ತಾರೆ. ಸುಬ್ಬು ಮಾತ್ರ ಒಂದೇ ಒಂದು ಮಾತನಾಡದೇ ನಿರ್ಲಿಪ್ತರಾಗುತ್ತಾನೆ.

ಶ್ರಾವಣಿ–ಸುಬ್ಬು ಮದುವೆಯನ್ನು ಸುಬ್ಬು ಮನೆಯವರು ಒಪ್ಪಿಕೊಳ್ತಾರಾ, ಶ್ರೀವಲ್ಲಿ–ಇಂದ್ರಮ್ಮ ಸುಬ್ಬು ಮನೆಯವರ ಪಾಲಿಗೆ ವಿಲನ್‌ಗಳಾಗುತ್ತಾರಾ, ಶ್ರಾವಣಿ ಮುಂದಿನ ಜೀವನ ಹೇಗಿರಬಹುದು ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ವಂದನಾ – ಜ್ಯೋತಿ

Whats_app_banner