ನೀವೆಂದಿಗೂ ನನ್ನ ಹೆಂಡತಿ ಆಗಲು ಸಾಧ್ಯವಿಲ್ಲ ಮೇಡಂ ಎಂದ ಸುಬ್ಬು, ಶ್ರಾವಣಿ ನೆಮ್ಮದಿ ಕೆಡಿಸುವ ಪಣ ತೊಟ್ಟ ಶ್ರೀವಲ್ಲಿ; ಶ್ರಾವಣಿ ಸುಬ್ರಹ್ಮಣ್ಯ
ಕನ್ನಡ ಸುದ್ದಿ  /  ಮನರಂಜನೆ  /  ನೀವೆಂದಿಗೂ ನನ್ನ ಹೆಂಡತಿ ಆಗಲು ಸಾಧ್ಯವಿಲ್ಲ ಮೇಡಂ ಎಂದ ಸುಬ್ಬು, ಶ್ರಾವಣಿ ನೆಮ್ಮದಿ ಕೆಡಿಸುವ ಪಣ ತೊಟ್ಟ ಶ್ರೀವಲ್ಲಿ; ಶ್ರಾವಣಿ ಸುಬ್ರಹ್ಮಣ್ಯ

ನೀವೆಂದಿಗೂ ನನ್ನ ಹೆಂಡತಿ ಆಗಲು ಸಾಧ್ಯವಿಲ್ಲ ಮೇಡಂ ಎಂದ ಸುಬ್ಬು, ಶ್ರಾವಣಿ ನೆಮ್ಮದಿ ಕೆಡಿಸುವ ಪಣ ತೊಟ್ಟ ಶ್ರೀವಲ್ಲಿ; ಶ್ರಾವಣಿ ಸುಬ್ರಹ್ಮಣ್ಯ

ಶ್ರಾವಣಿಗೆ ಸೀರೆ ಕೊಟ್ಟು ಮನ ಗೆದ್ದ ಕಾಂತಮ್ಮ, ಮೊದಲ ರಾತ್ರಿಯೇ ಶ್ರಾವಣಿ ಮೇಡಂ ಮೇಲೆ ಸುಬ್ಬು ಫುಲ್ ಗರಂ. ಶ್ರಾವಣಿ ನೆಮ್ಮದಿ ಕೆಡಿಸುತ್ತೇನೆ ಎಂದು ಶಪಥ ಮಾಡಿ ಕಣ್ಣೀರು ಹಾಕಿದ ಶ್ರೀವಲ್ಲಿ. ಸುಬ್ಬು ನಿರಾಕರಣೆಗೆ ಕುಸಿದ ಹೋದ ಶ್ರಾವಣಿ ಮನದಲ್ಲಿ ಕಾಡುತ್ತಿದೆ ಪಾಪ ಪ್ರಜ್ಞೆ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಫೆಬ್ರುವರಿ 4ರ ಸಂಚಿಕೆಯಲ್ಲಿ ಏನೇನಾಯ್ತು.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 4ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 4ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 4ರ ಸಂಚಿಕೆಯಲ್ಲಿ ಕಾಂತಮ್ಮ ಶ್ರಾವಣಿಗೆ ಸೀರೆಯೊಂದನ್ನು ಕೊಟ್ಟು ರೆಡಿ ಆಗುವಂತೆ ಹೇಳುತ್ತಾಳೆ. ಯಾರೂ ಮಾತನಾಡಿಸದ ಹೊತ್ತಿನಲ್ಲಿ ಅಕ್ಕರೆ ತೋರುತ್ತಿರುವ ಕಾಂತಮ್ಮನನ್ನು ಕಂಡು ಶ್ರಾವಣಿ ಮನಸ್ಸು ತುಂಬಿ ಹೋಗುತ್ತದೆ. ಮೊದಲ ರಾತ್ರಿಯ ಬಗ್ಗೆ ಶ್ರಾವಣಿಗೆ ತಿಳಿಸಿ ಹೇಳುವ ಕಾಂತಮ್ಮ ಹಾಲಿನ ಲೋಟ ಕೊಟ್ಟು ಸುಬ್ಬು ಕೋಣೆಗೆ ಕಳುಹಿಸುತ್ತಾರೆ.

ಪಾಪ ಪ್ರಜ್ಞೆಯಲ್ಲಿ ಶ್ರಾವಣಿ

ಕೋಣೆಯೊಳಗೆ ಬಂದ ಶ್ರಾವಣಿಗೆ ಸುಬ್ಬು ಬೇಸರದಲ್ಲಿ ಕೂತಿದ್ದು ನೋಡಿ ಪಾಪ ಪ್ರಜ್ಞೆ ಕಾಡುತ್ತದೆ. ಒಮ್ಮೆಗೆ ಅವಳ ಮನಸ್ಸಿನಲ್ಲಿ ಹಿಂದೆ ನಡೆದಿದ್ದೆಲ್ಲವೂ ಕಣ್ಮುಂದೆ ಬರುತ್ತದೆ. ತಾನು ಮದುವೆ ಮನೆಯಲ್ಲಿ ತಾಳಿ ಕಟ್ಟುವ ಸಂದರ್ಭ ತಾಳಿ ತೋರಿಸಿದ್ದು, ತಾಳಿ ಕಟ್ಟಿದ್ದು ಯಾರು ಎಂದು ತಂದೆ ಕೇಳಿದಾಗ ತಾನು ಸುಬ್ಬುವನ್ನು ತೋರಿಸಿದ್ದು, ಇತ್ತ ತಾಳಿ ಕಟ್ಟಿಸಿಕೊಂಡು ಸುಬ್ಬು ಮನೆಗೆ ಬಂದಾಗ ಇಂದ್ರಮ್ಮ ವರದನ ಮದುವೆ ವರಲಕ್ಷ್ಮೀ ಜೊತೆ ಮಾಡಲು ಸಾಧ್ಯವೇ ಇಲ್ಲ ಎಂದಿದ್ದು, ವಿಶಾಲಾಕ್ಷಿ ಸುಬ್ಬುವನ್ನು ತನ್ನ ಮಗ ಅಲ್ಲವೇ ಅಲ್ಲ ಎಂದಿದ್ದು ಈ ಎಲ್ಲವೂ ಕಣ್ಣ ಮುಂದೆ ಬರುತ್ತದೆ. ತನ್ನಿಂದಲೇ ಇಷ್ಟೆಲ್ಲಾ ಆಯ್ತು, ತಾನು ಪ್ರೀತಿ ಪಡೆಯಲು ಹೋಗಿ ಇಷ್ಟೆಲ್ಲಾ ಜನರ ಬದುಕು ಹಾಳಾಯ್ತು ಎಂದು ಮನದಲ್ಲೇ ಕೊರಗುತ್ತಾಳೆ ಶ್ರಾವಣಿ. ಆಗಿದ್ದಕ್ಕೆಲ್ಲಾ ಸುಬ್ಬು ಬಳಿ ಕ್ಷಮೆ ಕೇಳಬೇಕು ಎಂದು ನಿರ್ಧಾರ ಮಾಡುತ್ತಾಳೆ.

ಶ್ರಾವಣಿಯ ಮೇಲೆ ಸುಬ್ಬು ಫುಲ್ ಗರಂ

ನಿಧಾನಕ್ಕೆ ಸುಬ್ಬು ಬಳಿ ಹೋಗಿ ‘ಸುಬ್ಬು‘ ಎಂದು ಕರೆದಾಗ ಎದ್ದು ನಿಂತುಕೊಳ್ಳುತ್ತಾನೆ ಸುಬ್ಬು. ‘ನಾನು ನಿನ್ನ ಬಳಿ ತುಂಬಾ ಮಾತನಾಡಬೇಕು ಸುಬ್ಬು, ತಗೋ ಹಾಲು ಕುಡಿ‘ ಎಂದು ಹಾಲು ಕೊಡಲು ಮುಂದಾದಾಗ ಕೋಪದಲ್ಲಿ ಹಾಲನ್ನು ಚೆಲ್ಲುತ್ತಾನೆ ಸುಬ್ಬು. ಅಲ್ಲದೇ ‘ನೀವು ನನ್ನ ಬದುಕನ್ನೇ ನಾಶ ಮಾಡಿದ್ರಿ, ನಾನು ಬದುಕಿದ್ದೆ ನಮ್ಮ ಮನೆಯವರು ಹಾಗೂ ಯಜಮಾನರಿಗಾಗಿ. ನಮ್ಮ ಮನೆಯವರು ಯಾವಾಗಲೂ ಚೆನ್ನಾಗಿರಬೇಕು, ನಾನು ಸಾಯುವವರೆಗೂ ಯಜಮಾನರ ನಂಬಿಕೆ ಕಳೆದುಕೊಳ್ಳಬಾರದು ಎಂದು ಬದುಕುತ್ತಿದ್ದೆ. ಆದರೆ ನೀವು ಎರಡೂ ಹಾಳಾಗುವಂತೆ ಮಾಡಿ ನನ್ನ ಜೀವನವನ್ನೇ ಸರ್ವನಾಶ ಮಾಡಿದ್ರಿ. ಯಾಕ್ ಮೇಡಂ ಹೀಗ್ ಮಾಡಿದ್ರಿ, ನಾನೇನು ಮಾಡಿದ್ದೇ ನಿಮಗೆ. ನಾನಲ್ಲ ತಾಳಿ ಕಟ್ಟಿದ್ದು ಅಂತ ಹೇಳೋಕೆ ನಂಗೆಷ್ಟು ಹೊತ್ತು ಬೇಕಿತ್ತು. ಆದರೆ ನಿಮಗೆ ಮಾತು ಕೊಟ್ಟಿದ್ದೇನೆ ಎನ್ನುವ ಒಂದೇ ಕಾರಣಕ್ಕಾಗಿ ಸುಮ್ಮನಿದ್ದೆ. ನನ್ನ ಅಪ್ಪ ನಿಮ್ಮನ್ನು ಸೊಸೆ ಅಂತ ಒಪ್ಪಿಕೊಂಡಿರಬಹುದು. ಆದರೆ ಈ ಸುಬ್ರಹ್ಮಣ್ಯ ಎಂದಿಗೂ ನಿಮ್ಮನ್ನು ಹೆಂಡತಿ ಅಂತ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇನ್ನು ಮೇಲೆ ನೀವು ಇಷ್ಟ ಬಂದ ಹಾಗೆ ಈ ಮನೆಯಲ್ಲಿ ಇರಿ. ನಿಮ್ಮ ವಿಚಾರಕ್ಕೆ ಯಾರೂ ತಲೆ ಹಾಕುವುದಿಲ್ಲ‘ ಎಂದು ಕೋಪದಲ್ಲಿ ಬುಸುಗುಡುತ್ತಾನೆ. ಸುಬ್ಬು ತನ್ನನ್ನು ನಿರ್ಲಕ್ಷ್ಯ ಮಾಡಿದ್ದು, ಶ್ರಾವಣಿಗೆ ಬಹಳ ಬೇಸರ ತರಿಸುತ್ತದೆ. ಆಕೆ ದುಃಖದಲ್ಲಿ ಕುಸಿದು ಹೋಗುತ್ತಾಳೆ. ‌

ಶ್ರಾವಣಿ ನೆಮ್ಮದಿ ಹಾಳು ಮಾಡುವ ಶಪಥ ಮಾಡಿದ ಶ್ರೀವಲ್ಲಿ

ಶ್ರಾವಣಿಯಿಂದಾಗಿ ತನ್ನ ಬದುಕು ಹಾಳಾಯ್ತು, ತಾನು ಇಷ್ಟ ಪಟ್ಟ ಹುಡುಗ ಸಿಗಲಿಲ್ಲ ಎನ್ನುವ ಶ್ರೀವಲ್ಲಿ ತಾಯಿ ಹಾಗೂ ಚಿಕ್ಕಮ್ಮನ ಎದುರು ಯಾವುದೇ ಕಾರಣಕ್ಕೂ ಶ್ರಾವಣಿ ನೆಮ್ಮದಿಯಾಗಿರಲು ಬಿಡುವುದಿಲ್ಲ, ಅವಳ ಬದುಕನ್ನು ನಾಶ ಮಾಡ್ತೇನೆ ಎಂದು ಶಪಥ ಮಾಡುತ್ತಾಳೆ. ಇತ್ತ ಇಂದ್ರಮ್ಮ ಕೂಡ ಬ್ರೋಕರ್‌ಗೆ ಕಾಲ್ ಮಾಡಿ ಇನ್ನೊಂದೆ ವಾರದಲ್ಲಿ ತನ್ನ ಮಗನ ಮದುವೆ ಬೇರೆ ಹುಡುಗಿ ಜೊತೆ ಆಗಬೇಕು, ಬೇಗ ಒಂದು ಹುಡುಗಿ ನೋಡಿ ಎಂದು ಹೇಳುತ್ತಾಳೆ.

ಇಂದ್ರಮ್ಮ ಅಂದುಕೊಂಡಂತೆ ಮಗನಿಗೆ ಬೇರೆ ಮದುವೆ ಮಾಡ್ತಾಳಾ, ಸುಬ್ಬುಗೆ ಶ್ರಾವಣಿ ಮೇಲೆ ಕೋಪ ಕಡಿಮೆ ಆಗೋದೇ ಇಲ್ವಾ, ಶ್ರಾವಣಿ ಬದುಕಿನ ಮುಂದಿನ ದಾರಿ ಏನು, ಸುಬ್ಬುಗೆ ಯಜಮಾನರ ಮನೆಯಲ್ಲಿ ಜಾಗ ಸಿಗುತ್ತಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ವಂದನಾ – ಜ್ಯೋತಿ

Whats_app_banner