ಸುಬ್ಬು ಮದುವೆ ರಹಸ್ಯ ತಿಳಿಯುವ ಹಟದಲ್ಲಿ ಶ್ರೀವಲ್ಲಿ, ಇಂದ್ರಮ್ಮನ ಸವಾಲು ವರಲಕ್ಷ್ಮೀ ಬದುಕಿಗೆ ಉರುಳಾಗುತ್ತಾ; ಶ್ರಾವಣಿ ಸುಬ್ರಹ್ಮಣ್ಯ
ಕನ್ನಡ ಸುದ್ದಿ  /  ಮನರಂಜನೆ  /  ಸುಬ್ಬು ಮದುವೆ ರಹಸ್ಯ ತಿಳಿಯುವ ಹಟದಲ್ಲಿ ಶ್ರೀವಲ್ಲಿ, ಇಂದ್ರಮ್ಮನ ಸವಾಲು ವರಲಕ್ಷ್ಮೀ ಬದುಕಿಗೆ ಉರುಳಾಗುತ್ತಾ; ಶ್ರಾವಣಿ ಸುಬ್ರಹ್ಮಣ್ಯ

ಸುಬ್ಬು ಮದುವೆ ರಹಸ್ಯ ತಿಳಿಯುವ ಹಟದಲ್ಲಿ ಶ್ರೀವಲ್ಲಿ, ಇಂದ್ರಮ್ಮನ ಸವಾಲು ವರಲಕ್ಷ್ಮೀ ಬದುಕಿಗೆ ಉರುಳಾಗುತ್ತಾ; ಶ್ರಾವಣಿ ಸುಬ್ರಹ್ಮಣ್ಯ

ಕೆಲಸಕ್ಕೆ ಹೊರಟ ಸುಬ್ಬುವಿಗೆ ಮನೆಯಲ್ಲಿ ತಿಂಡಿ ಕೊಡುವವರೂ ಇಲ್ಲ. ಮನೆ ಎದುರು ಬಂದು ರಂಪ ಮಾಡಿ, ಮಗನಿಗೆ ಬೇರೆ ಮದುವೆ ಮಾಡಿಸುತ್ತೇನೆ ಎಂದು ದರ್ಪ ತೋರಿದ ಇಂದ್ರಮ್ಮ. ಅಳಿಯನ ಮುಂದೆ ಸುಬ್ಬವೇ ಶ್ರಾವಣಿ ಗಂಡ ಎಂದ ಲಲಿತಾದೇವಿ. ಸುಬ್ಬು–ಶ್ರಾವಣಿ ಮದುವೆ ರಹಸ್ಯ ತಿಳಿಯುವ ಹಟದಲ್ಲಿ ಶ್ರೀವಲ್ಲಿ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಫೆಬ್ರುವರಿ 5ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 5ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 5ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 5ರ ಸಂಚಿಕೆಯಲ್ಲಿ ಬೆಳಿಗ್ಗೆ ಕೆಲಸಕ್ಕೆಂದು ರೆಡಿಯಾಗಿ ಹೊರಟ ಸುಬ್ಬುಗೆ ಮನೆಯಲ್ಲಿ ತಿಂಡಿ ಕೊಡುವವರೂ ಇರುವುದಿಲ್ಲ. ತಾಯಿ ವಿಶಾಲಾಕ್ಷಿಯೇ ಮಗನನ್ನು ವೈರಿಯನ್ನೇ ಕಾಣುತ್ತಿರುತ್ತಾರೆ. ಅಕ್ಕ ಧನಲಕ್ಷ್ಮೀ ಕೂಡ ಮಗಳಿಗೆ ಹಾಲು ಕೊಡಬೇಕು ಎಂದು ಹೇಳಿ ಜಾಗ ಖಾಲಿ ಮಾಡುತ್ತಾಳೆ. ಹೆಂಡತಿ, ಮಗಳ ವರ್ತನೆ ಪದ್ಮನಾಭ ಅವರಿಗೂ ಬೇಸರ ತರಿಸುತ್ತದೆ. ಅಮ್ಮ–ಅಕ್ಕ ನಡೆದುಕೊಂಡ ರೀತಿಯಿಂದ ಬೇಸರ ವ್ಯಕ್ತಪಡಿಸುವ ಸುಬ್ಬು ಅಪ್ಪನ ಬಳಿ ‘ನಾನು ಹೊರಗಡೆ ತಿಂಡಿ ತಿಂದುಕೊಳ್ಳುತ್ತೇನೆ‘ ಎಂದು ಹೇಳಿ ಹೊರಡುತ್ತಾನೆ.

ಸುಬ್ಬು ಮನೆಯ ಮುಂದೆ ಇಂದ್ರಮ್ಮನ ರಂಪಾಟ

ಬೈಕ್‌ ಹತ್ತಿ ಹೊರಟ ಸುಬ್ಬುವಿಗೆ ಇಂದ್ರಮ್ಮ ಎದುರಾಗುತ್ತಾರೆ. ಸುಬ್ಬು ಮುಖ ನೋಡಿದ್ದೇ ತಡ ಕೋಪದಲ್ಲಿ ಕೂಗಾಡುವ ಇಂದ್ರಮ್ಮ, ಈಗ ಯಾರ ಮನೆ ಹಾಳು ಮಾಡಲು ಹೊರಟಿದ್ದೀಯಪ್ಪ. ನನ್ನ ಮಗಳನ್ನ ಮದುವೆಯಾಗುತ್ತೇನೆ ಎಂದು ನಂಬಿಸಿ ಮೋಸ ಮಾಡಿದೆ. ಈಗ ಯಾರ ಮನೆ ಹೆಣ್ಣುಮಗಳ ಭವಿಷ್ಯ ಹಾಳು ಮಾಡಲು ಹೊರಟಿದ್ದೀಯಾ. ಈಗಾಗಲೇ ಅದೆಷ್ಟು ಮನೆ ಹಾಳು ಮಾಡಿದ್ದೀಯಾ‘ ಅಂತೆಲ್ಲಾ ಕೂಗಾಡುತ್ತಾಳೆ. ಅವರ ಕಿರುಚಾಟ ನೋಡಿ ಮನೆಯವರೆಲ್ಲಾ ಹೊರಗಡೆ ಓಡಿ ಬರುತ್ತಾರೆ. ನೀವೆಲ್ಲಾ ನಮಗೆ ಮಾಡಿದ ಮೋಸಕ್ಕೆ ನಾನು ಈಗಲೇ ನಿಮ್ಮನ್ನೆಲ್ಲಾ ಮನೆಯಿಂದ ಹೊರ ಹಾಕಬಹುದು. ಆದರೆ ನಾನು ಹಾಗೆ ಮಾಡೊಲ್ಲ. ಇನ್ನೊಂದೇ ವಾರದಲ್ಲಿ ನನ್ನ ಮಗನ ಮದುವೆ ಮಾಡುತ್ತೇನೆ. ಆಮೇಲೆ ಈ ವರಲಕ್ಷ್ಮೀ ಕಣ್ಣೀರಲ್ಲಿ ಕೈ ಕೊಳೆಯಬೇಕು. ನಿಮ್ಮ ಮನೆಯವರು ಎಲ್ಲರೂ ನೆಮ್ಮದಿ ನಾಶ ಮಾಡ್ತೀನಿ ಎಂದ ರಂಪಾಟ ಮಾಡುತ್ತಾಳೆ. ಸುಬ್ಬು ಬಗ್ಗೆ ಇಲ್ಲ ಸಲ್ಲದ ಮಾತನಾಡಲು ಬಂದ ಇಂದ್ರಮ್ಮನಿಗೆ ಉತ್ತರ ಕೊಡಲು ಬಂದ ಶ್ರಾವಣಿಯ ಬಾಯನ್ನೂ ಮುಚ್ಚಿಸುತ್ತಾಳೆ ಇಂದ್ರಮ್ಮ.

ಅಳಿಯನ ಬಳಿ ಸುಬ್ಬುವೇ ಶ್ರಾವಣಿಯ ಗಂಡ ಎಂದ ಲಲಿತಾದೇವಿ

ಮೊಮ್ಮಗಳನ್ನು ಕಂಡು ಅವಳಿಗೆ ಬಟ್ಟೆ ಕೊಟ್ಟು ಬರಬೇಕು ಎಂದು ಬ್ಯಾಗ್ ಹಿಡಿದು ಹೊರಟ ಲಲಿತಾದೇವಿಗೆ ಎದುರಾಗುತ್ತಾನೆ ವೀರೇಂದ್ರ. ಅವನಿಗೆ ತನ್ನ ಅತ್ತೆ ಶ್ರಾವಣಿಯನ್ನೇ ನೋಡಲು ಹೋಗುತ್ತಿರುವುದು ಎಂಬುದು ಅರಿವಾಗುತ್ತದೆ. ಅವರ ಬಳಿ ತಾನು ಹಿಂದೆ ಮಾಡಿದ ತಪ್ಪು ಈಗ ಸುಬ್ಬು ಮಾಡಿದ್ದಾನೆ. ಆಗ ನಿಮಗಾದ ನೋವನ್ನು ನಾನು ಈಗ ಅನುಭವಿಸುತ್ತಿದ್ದೇನೆ ಎನ್ನುವ ವೀರೇಂದ್ರ ‘ಅತ್ತೆಯವರೇ, ನೀವು ನನ್ನ ಮಗ ಎಂದು ಕರೆದಿದ್ದೀರಿ, ಈ ಮಗನ ಮಾತಿಗೆ ನೀವು ಬೆಲೆ ಕೊಡುವುದದಾರೆ ದಯವಿಟ್ಟು ಅವಳನ್ನು ನೋಡಲು ಹೋಗಬೇಡಿ‘ ಎಂದು ವಿನಂತಿಸಿಕೊಳ್ಳುತ್ತಾನೆ. ವೀರು ಮಗ ಎಂದಿದ್ದು ಲಲಿತಾದೇವಿಯವರನ್ನು ತಡೆದು ನಿಲ್ಲಿಸುತ್ತದೆ. ಆಗ ವೀರೇಂದ್ರನ ಬಳಿ ‘ಈಗ ನೀನು ಮಗ ಎಂದು ಹೇಳಿ ನನ್ನನ್ನು ಕಟ್ಟು ಹಾಕಿದೆ. ಆದರೆ ಒಂದು ವಿಚಾರ ನೆನಪಿಟ್ಟುಕೊ, ಯಾರು ಏನೇ ಹೇಳಿದ್ರು ಸುಬ್ಬುವೇ ನನ್ನ ಮೊಮ್ಮಗಳು ಶ್ರಾವಣಿಯ ಗಂಡ, ಅದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಮದುವೆಗೆ ನಮ್ಮ ಸಂಪೂರ್ಣ ಸಹಮತವಿದೆ‘ ಎಂದು ಹೇಳಿ ಶ್ರಾವಣಿ ನೋಡಲು ಹೊರಟ ನಿರ್ಧಾರವನ್ನು ಕೈ ಬಿಟ್ಟು ತಮ್ಮ ಕೋಣೆಗೆ ನಡೆಯುತ್ತಾರೆ.

ಸುಬ್ಬು–ಶ್ರಾವಣಿ ಮದುವೆ ರಹಸ್ಯ ಭೇದಿಸುವ ಪಣ ತೊಟ್ಟ ಶ್ರೀವಲ್ಲಿ

ಸುಬ್ಬು–ಶ್ರಾವಣಿ ಮದುವೆ ಆದ್ರೂ ಶ್ರೀವಲ್ಲಿಗೆ ಸುಬ್ಬು ಮೇಲಿನ ಪ್ರೀತಿ ಕಡಿಮೆ ಆಗಿರುವುದಿಲ್ಲ. ಸುಬ್ಬು ಹಿಂದೆ ಆಡಿದ ಮಾತನ್ನೆಲ್ಲಾ ನೆನಪಿಸಿಕೊಳ್ಳುವ ಅವಳಿಗೆ ಸುಬ್ಬು–ಶ್ರಾವಣಿಗೆ ಮದುವೆಯಲ್ಲಿ ಏನೋ ಯಡವಟ್ಟಾಗಿದೆ ಎಂಬುದು ಅರಿವಾಗುತ್ತದೆ. ಅಲ್ಲದೇ ಸುಬ್ಬು ಶ್ರಾವಣಿಯನ್ನು ಖಂಡಿತ ಇಷ್ಟಪಟ್ಟು ಮದುವೆಯಾಗಿಲ್ಲ ಎಂದು ಅವಳಿಗೆ ಬಲವಾಗಿ ಎನ್ನಿಸುತ್ತದೆ. ಅದನ್ನು ಕಂಡು ಹಿಡಿದು ಸುಬ್ಬು ಶ್ರಾವಣಿಯನ್ನು ಇಷ್ಟಪಟ್ಟಿಲ್ಲ ಎಂದು ತಿಳಿದರೆ ಸುಬ್ಬುವನ್ನು ಪಡೆದುಕೊಂಡೇ ತೀರುತ್ತೇನೆ ಎಂದು ಅಣ್ಣನ ಬಳಿ ಚಾಲೆಂಜ್ ಮಾಡುತ್ತಾಳೆ.

ತಂಗಿ ಮಾಡುತ್ತಿರುವುದು ಸ್ವಾರ್ಥದ ಕೆಲಸ ಎಂದು ತಿಳಿ ಹೇಳುವ ವರದ ತನಗೆ ತನ್ನ ಪ್ರೀತಿಯ ಮೇಲೆ ನಂಬಿಕೆ ಇದೆ. ಆ ಕಾರಣಕ್ಕೆ ಇಂತಹ ನೂರು ಜಗಳ ಆದ್ರೂ ನನಗೆ ನಾನು ವರಲಕ್ಷ್ಮೀಯನ್ನೇ ಮದುವೆಯಾಗುವುದು ಎನ್ನುವುದು ತಿಳಿದಿದೆ ಎಂದು ಭರವಸೆಯ ಮಾತನ್ನೂ ಹೇಳುತ್ತಾನೆ.

ವರದ ಅಂದುಕೊಂಡಂತೆ ಅವನ ಮದುವೆ ವರಲಕ್ಷ್ಮೀ ಜೊತೆ ನಡೆಯುತ್ತಾ, ಶ್ರೀವಲ್ಲಿಗೆ ಸುಬ್ಬು ಹಾಗೂ ಶ್ರಾವಣಿ ಮದುವೆ ರಹಸ್ಯ ತಿಳಿಯಲು ಸಾಧ್ಯವಾಗುತ್ತಾ, ಇಂದ್ರಮ್ಮ ಅಂದುಕೊಂಡಿದ್ದು ನಡೆಯುತ್ತಾ, ವೀರೇಂದ್ರ ಶ್ರಾವಣಿ–ಸುಬ್ಬು ಮದುವೆಯನ್ನು ಒಪ್ಪಿಕೊಳ್ತಾನಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ವಂದನಾ – ಜ್ಯೋತಿ

Whats_app_banner