TPL 2: ಕೆಸಿಸಿ -3 ಬೆನ್ನಲ್ಲೇ ಟಿಪಿಎಲ್‌-2ಕ್ಕೆ ತಯಾರಿ ನಡೆಸುತ್ತಿರುವ ಕಿರುತೆರೆ ಕಲಾವಿದರು..ಮಾಹಿತಿ ಇಲ್ಲಿದೆ
ಕನ್ನಡ ಸುದ್ದಿ  /  ಮನರಂಜನೆ  /  Tpl 2: ಕೆಸಿಸಿ -3 ಬೆನ್ನಲ್ಲೇ ಟಿಪಿಎಲ್‌-2ಕ್ಕೆ ತಯಾರಿ ನಡೆಸುತ್ತಿರುವ ಕಿರುತೆರೆ ಕಲಾವಿದರು..ಮಾಹಿತಿ ಇಲ್ಲಿದೆ

TPL 2: ಕೆಸಿಸಿ -3 ಬೆನ್ನಲ್ಲೇ ಟಿಪಿಎಲ್‌-2ಕ್ಕೆ ತಯಾರಿ ನಡೆಸುತ್ತಿರುವ ಕಿರುತೆರೆ ಕಲಾವಿದರು..ಮಾಹಿತಿ ಇಲ್ಲಿದೆ

ಫೈನಲ್ ಪಂದ್ಯ ಹೊನಲು ಬೆಳಕಿನಲ್ಲಿ ನಡೆಯಲಿದೆ. ಗೆದ್ದ ತಂಡಕ್ಕೆ 4 ಲಕ್ಷ ನಗದು ಬಹುಮಾನ ಹಾಗೂ ‌ಮ್ಯಾನ್ ಆಫ್ ದಿ ಸಿರೀಸ್‌ಗೆ ಬೈಕ್ ನೀಡಲಾಗುತ್ತದೆ. ಪ್ರತಿ ಪಂದ್ಯಕ್ಕೂ‌ ಕಿತ್ತಳೆ ಹಾಗೂ ನೇರಳೆ ಟೋಪಿ ಇರುತ್ತದೆ. ಶೀಘ್ರದಲ್ಲೇ ಮ್ಯಾಚ್‌ ನಡೆಯುವ ದಿನಾಂಕವನ್ನು ಘೋಷಿಸುತ್ತೇವೆ ಎಂದು ಸುನಿಲ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

ಟಿಪಿಎಲ್‌-2ಕ್ಕೆ ತಯಾರಿ ನಡೆಸುತ್ತಿರುವ ಕಿರುತೆರೆ ಕಲಾವಿದರು
ಟಿಪಿಎಲ್‌-2ಕ್ಕೆ ತಯಾರಿ ನಡೆಸುತ್ತಿರುವ ಕಿರುತೆರೆ ಕಲಾವಿದರು

ಒಂದೆಡೆ ಚಿತ್ರರಂಗದಲ್ಲಿ ಕೆಸಿಸಿ ಮೂರನೇ ಸೀಸನ್‌ಗೆ ತಯಾರಿ ನಡೆಯುತ್ತಿದ್ದರೆ ಮತ್ತೊಂದೆಡೆ ಟೆಲಿವಿಷನ್ ಪ್ರಿಮಿಯರ್ ಲೀಗ್ -2 ಕ್ಕೆ ಕೂಡಾ ಸಿದ್ಧತೆ ನಡೆಯುತ್ತಿದೆ. ಗುರುವಾರ (ಫೆ.2) ರಂದು ಎನ್ 1 ಕ್ರಿಕೆಟ್ ಅಕಾಡೆಮಿಯ ಸುನಿಲ್ ಕುಮಾರ್ ನೇತೃತ್ವದಲ್ಲಿ ಟೆಲಿವಿಷನ್ ಪ್ರಿಮಿಯರ್ ಲೀಗ್ -2 ಲೋಗೋ ಬಿಡುಗಡೆ ಕಾರ್ಯಕ್ರಮ ನೆರವೇರಿದೆ.

ಕಾರ್ಯಕ್ರಮ ಆರಂಭಿಸುವ ಮುನ್ನ ಪುನೀತ್ ರಾಜ್‍ಕುಮಾರ್ ಅವರನ್ನು ಸ್ಮರಿಸಿ ಆ ಬಳಿಕ ತಂಡಗಳ ಮಾಲೀಕರು ಹಾಗೂ ಅಂಬಾಸಿಡರ್‌ಗಳ ಸಮ್ಮುಖದಲ್ಲಿ ಲೋಗೋ ಬಿಡುಗಡೆ ಮಾಡಲಾಯಿತು. ಆರು ತಂಡಗಳ ಮಾಲೀಕರು ಮಾತನಾಡಿ, ಈ ರೀತಿ ಒಂದೊಳ್ಳೆ ಉದ್ದೇಶ ಇರಿಸಿಕೊಂಡು ಕ್ರಿಕೆಟ್ ಆಯೋಜನೆ ಮಾಡುವ ಸುನಿಲ್ ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಎನ್ 1 ಕ್ರಿಕೆಟ್ ಅಕಾಡೆಮಿಯ, ಟೆಲಿವಿಷನ್ ಪ್ರಿಮಿಯರ್ ಲೀಗ್ ನ ಆಯೋಜಕರಾದ ಸುನಿಲ್ ಕುಮಾರ್ ಮಾತನಾಡಿ, "ಕಳೆದ ಸೀಸನ್‌ನಂತೆ ಈ ಸೀಸನ್‌ನಲ್ಲೂ ಎಲ್ಲಾ ಮಾಲೀಕರು ನಮ್ಮೊಂದಿಗೆ ಸಹಕರಿಸಿದ್ದಾರೆ. 4ನೇ ತಾರೀಖು ಆಟಗಾರರ ಹರಾಜು ಪ್ರಕ್ರಿಯೆ ಇರುತ್ತದೆ. ಆ ಬಳಿಕ ಜೆರ್ಸಿ ಲಾಂಚ್ ಇರುತ್ತದೆ. 4 ದಿನ ಪಂದ್ಯಾವಳಿ ನಡೆಯುತ್ತದೆ. ಫೈನಲ್ ಪಂದ್ಯ ಹೊನಲು ಬೆಳಕಿನಲ್ಲಿ ನಡೆಯಲಿದೆ. ಗೆದ್ದ ತಂಡಕ್ಕೆ 4 ಲಕ್ಷ ನಗದು ಬಹುಮಾನ ಹಾಗೂ ‌ಮ್ಯಾನ್ ಆಫ್ ದಿ ಸಿರೀಸ್‌ಗೆ ಬೈಕ್ ನೀಡಲಾಗುತ್ತದೆ. ಪ್ರತಿ ಪಂದ್ಯಕ್ಕೂ‌ ಕಿತ್ತಳೆ ಹಾಗೂ ನೇರಳೆ ಟೋಪಿ ಇರುತ್ತದೆ. ಶೀಘ್ರದಲ್ಲೇ ಮ್ಯಾಚ್‌ ನಡೆಯುವ ದಿನಾಂಕವನ್ನು ಘೋಷಿಸುತ್ತೇವೆ" ಎಂದು ಮಾಹಿತಿ ನೀಡಿದ್ದಾರೆ.

ಟಿಪಿಎಲ್‌-2 ಲೋಗೋ ಬಿಡುಗಡೆ ಕಾರ್ಯಕ್ರಮ
ಟಿಪಿಎಲ್‌-2 ಲೋಗೋ ಬಿಡುಗಡೆ ಕಾರ್ಯಕ್ರಮ

"ಪ್ರತಿ ತಂಡದಲ್ಲೂ ಇಬ್ಬರು ಅಂಬಾಸಿಡರ್‌ಗಳಿರುತ್ತಾರೆ. ರಿವ್ಯೂ ಸಿಸ್ಟಂ, ಎಲ್‌ಬಿಡಬ್ಲ್ಯೂ ಇರುತ್ತದೆ. 12 ಓವರ್‌ನ ಮ್ಯಾಚ್ ಇರುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇರುವಂತೆ ಈ ಲೀಗ್‌ನಲ್ಲಿ ಕೂಡಾ ಬಹುತೇಕ ಎಲ್ಲಾ ವ್ಯವಸ್ಥೆಗಳು ಇರುತ್ತವೆ. ಎಂ.ಎಸ್‌. ಪಾಳ್ಯದ ಬಳಿ ಇರುವ ಅಶೋಕ ಇಂಟರ್ ನ್ಯಾಶನಲ್ ಮೈದಾನದಲ್ಲಿ ಪಂದ್ಯಗಳು ನಡೆಯುತ್ತದೆ. ಒಂದು ತಂಡದಲ್ಲಿ 13 ಸದಸ್ಯರಿರುತ್ತಾರೆ. ಮ್ಯಾಚ್‌ ಅರಂಭಕ್ಕೂ ಮುನ್ನ ಪ್ರಾಕ್ಟೀಸ್‌ ಮ್ಯಾಚ್‌ ಇರಲಿದೆ. ಫೈನಲ್ ದಿನ ಅಪ್ಪು ಅವರ ಹಾಡುಗಳ ಕಾರ್ಯಕ್ರಮವಿರುತ್ತದೆ. ಅದೇ ದಿನ ನಾವು ಈ ಬಾರಿ ಯಾವ ಕಲಾವಿದರಿಗೆ ಆರ್ಥಿಕವಾಗಿ ನೆರವು ನೀಡುತ್ತಿದ್ದೇವೆ ಎನ್ನುವುದನ್ನೂ ಹೇಳುತ್ತೇವೆ" ಎಂದು ಆಯೋಜಕ ಸುನಿಲ್ ಕುಮಾರ್ ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್ 2 ರ ಬಗ್ಗೆ ಸಂಪೂರ್ಣ ವಿವರಣೆ ನೀಡಿದ್ದಾರೆ. ಧಾರಾವಾಹಿ ಮೂಲಕ ಕಿರುತೆರೆಪ್ರಿಯರನ್ನು ರಂಜಿಸಿದ್ದ ಕಲಾವಿದರು ಯಾವ ರೀತಿ ಕ್ರಿಕೆಟ್‌ ಆಡಲಿದ್ದಾರೆ ಎಂಬುದನ್ನು ನೋಡಲು ಕಿರುತೆರೆ ಪ್ರಿಯರು ಕಾಯುತ್ತಿದ್ದಾರೆ.

ಮತ್ತಷ್ಟು ಮನರಂಜನೆ ಸುದ್ದಿಗಳು ಇಲ್ಲಿವೆ

'ಕ್ರಾಂತಿ' ಪ್ರಚಾರ ಮಾಡಲು ಹೋಗಿ ಕೆಲಸ ಕಳೆದುಕೊಂಡ ಅಭಿಮಾನಿ...ದರ್ಶನ್‌ ಪ್ರತಿಕ್ರಿಯೆ ಹೇಗಿತ್ತು..?

ವಾಹನ ಚಲಾಯಿಸುವಾಗ ತಮಗಾಗಿ ಹಿಂದೆ ಬಂದು ವಿಡಿಯೋ ಮಾಡುವ, ಹಚ್ಚೆ ಹಾಕಿಸಿಕೊಳ್ಳುವ ಅಭಿಮಾನಿಗಳಿಗೆ ದರ್ಶನ್‌ ಅನೇಕ ಬಾರಿ ಬುದ್ಧಿ ಹೇಳಿದ್ದಾರೆ. ಇಂತಹ ಹುಚ್ಚಾಟಕ್ಕೆ ಕೈ ಹಾಕದಂತೆ ಎಚ್ಚರಿಸಿದ್ದಾರೆ. ಅವಿನಾಶ್‌ಗೆ ಕೂಡಾ ದರ್ಶನ್‌ ಈ ರೀತಿ ಕೆಲಸ ಬಿಟ್ಟು ಪ್ರಚಾರ ಮಾಡದಂತೆ ಹೇಳಿದ್ದಾರೆ. ಆದರೆ ಇದನ್ನು ಕೇಳದ ಆತ, ತನ್ನ ಖುಷಿಗಾಗಿ ಚಿತ್ರದ ಪ್ರಚಾರ ಮಾಡಲು ಹೋಗಿ ಈಗ ಕಷ್ಟ ಅನುಭವಿಸುತ್ತಿದ್ದಾರೆ. ಪೂರ್ತಿ ಮಾಹಿತಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ.

'ಡಾಲರ್ಸ್‌ ಪೇಟೆ' ಯಲ್ಲಿ ಸದ್ದು ಮಾಡಲು ಸಿದ್ಧರಾದ 'ಕೆಜಿಎಫ್‌' ಗರುಡ ರಾಮ್‌ ಸಹೋದರ....ಫಸ್ಟ್‌ ಲುಕ್‌ ರಿವೀಲ್‌

'ಕೆಜಿಎಫ್‌' ಚಿತ್ರದಲ್ಲಿ ವಿಲನ್‌ ಆಗಿ ಖದರ್‌ ತೋರಿಸಿದ್ದ ಗರುಡ ರಾಮ್‌ ಸಿನಿಪ್ರಿಯರಿಗೆ ಬಹಳ ಇಷ್ಟ. ಇದೀಗ ಇವರ ಸಹೋದರ ಕೂಡಾ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. 'ಡಾಲರ್ಸ್‌ ಪೇಟೆ' ಚಿತ್ರದಲ್ಲಿ ಗರುಡ ರಾಮ್‌ ಸಹೋದರ ವೆಂಕಟ್‌ ರಾಜ್‌ ನಟಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿ.

Whats_app_banner