Ramachari Serial: ಅಣ್ಣಾಜಿ ಮನೆಯಲ್ಲಿ ಸಿಕ್ಕಿ ಬಿದ್ದ ಚಾರು; ಸತ್ಯ ಹೇಳಿ ಪಾರಾಗ್ತಾಳಾ, ಅಥವಾ ಸುಳ್ಳು ಹೇಳಿ ತಪ್ಪಿಸಿಕೊಳ್ತಾಳಾ?
ಕನ್ನಡ ಸುದ್ದಿ  /  ಮನರಂಜನೆ  /  Ramachari Serial: ಅಣ್ಣಾಜಿ ಮನೆಯಲ್ಲಿ ಸಿಕ್ಕಿ ಬಿದ್ದ ಚಾರು; ಸತ್ಯ ಹೇಳಿ ಪಾರಾಗ್ತಾಳಾ, ಅಥವಾ ಸುಳ್ಳು ಹೇಳಿ ತಪ್ಪಿಸಿಕೊಳ್ತಾಳಾ?

Ramachari Serial: ಅಣ್ಣಾಜಿ ಮನೆಯಲ್ಲಿ ಸಿಕ್ಕಿ ಬಿದ್ದ ಚಾರು; ಸತ್ಯ ಹೇಳಿ ಪಾರಾಗ್ತಾಳಾ, ಅಥವಾ ಸುಳ್ಳು ಹೇಳಿ ತಪ್ಪಿಸಿಕೊಳ್ತಾಳಾ?

ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಈಗ ಸಂಕಷ್ಟದಲ್ಲಿದ್ದಾಳೆ. ಅವಳನ್ನು ಬಚಾವ್ ಮಾಡಲು ಬಂದ ರಾಮಾಚಾರಿ ಹಾಗೂ ಮನೆಯವರೂ ಎಲ್ಲೂ ಕಾಣಿಸುತ್ತಿಲ್ಲ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.

ಅಣ್ಣಾಜಿ ಮನೆಯಲ್ಲಿ ಸಿಕ್ಕಿ ಬಿದ್ದ ಚಾರು; ಸತ್ಯ ಹೇಳಿ ಪಾರಾಗ್ತಾಳಾ
ಅಣ್ಣಾಜಿ ಮನೆಯಲ್ಲಿ ಸಿಕ್ಕಿ ಬಿದ್ದ ಚಾರು; ಸತ್ಯ ಹೇಳಿ ಪಾರಾಗ್ತಾಳಾ

ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಮತ್ತು ಅವಳ ಇಡೀ ಕುಟುಂಬ ಕೃಷ್ಣ ಹಾಗೂ ರುಕ್ಮಿಣಿಗಾಗಿ ಕಷ್ಟಪಡುತ್ತಿದ್ದಾರೆ. ಹೀಗಿರುವಾಗ ಹೆಚ್ಚಿನ ರಿಸ್ಕ್‌ ತೆಗೆದುಕೊಂಡು ತಾನು ಹೇಗಾದರೂ ಮಾಡಿ ಕೃಷ್ಣ ಹಾಗೂ ರುಕ್ಕುನಾ ಒಂದು ಮಾಡಬೇಕು ಎಂದು ಹೊರಟವಳು ಚಾರು. ಈಗ ಅವಳೇ ಅಣ್ಣಾಜಿ ಮನೆಯಲ್ಲಿ ಸಿಕ್ಕಿ ಹಾಕಿಕೊಳ್ಳುವಂತಾಗಿದೆ. ಇನ್ನು ರುಕ್ಕು ಫೋಟೋ ಹಿಡಿದುಕೊಂಡು ಯಾವುದೋ ಒಂದು ಅಜ್ಜಿ ಬಂದಿದ್ದಾಳೆ. ಆ ಅಜ್ಜಿ ಬಂದಾಗಿನಿಂದ ಚಾರು ಮೇಲೆ ಅನುಮಾನ ಪಡುತ್ತಿದ್ದಾಳೆ.

ಆ ಅಜ್ಜಿ ಬಂದು ಚಾರು ಫೊಟೋ ತೋರಿಸಿದಾಗ ಎಲ್ಲರೂ ಅವಳನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿರುತ್ತಾಳೆ. ಇನ್ನು ರುಕ್ಕು ಎಲ್ಲಿ ಚಾರು ವಿಚಾರ ಎಲ್ಲರಿಗೂ ಗೊತ್ತಾಗುತ್ತದೆಯೋ ಏನೋ ಎಂದು ತುಂಬಾ ಭಯದಿಂದ ವರ್ತನೆ ಮಾಡುತ್ತಾ ಇರುತ್ತಾಳೆ. ಆದರೆ ರುಕ್ಕು ಸಹಾಯಕ್ಕೆ ಎಂದು ಇರುವವಳು ಅವಳನ್ನು ಕೈಕಾಲು ಕಟ್ಟಿ ಒಂದು ಕೋಣೆಯಲ್ಲಿ ಕೂಡಿ ಹಾಕಿರುತ್ತಾಳೆ. ಆದರೆ ಈಗ ಆ ಅಜ್ಜಿ ಅಲ್ಲಿಂದ ಬಿಡಿಸಿಕೊಂಡು ಬಂದಿದ್ದಾಳೆ. ಸೀದಾ ಅಣ್ಣಾಜಿ ಮುಂದೆ ಬಂದು ಚಾರು ಬಗ್ಗೆ ಚಾಡಿ ಹೇಳುತ್ತಿದ್ದಾಳೆ.

ಚಾರು ಮಾತ್ರ ಇಲ್ಲ ನನಗೆ ಇವಳು ಯಾರು ಎಂದು ಗೊತ್ತೇ ಇಲ್ಲ. ನಾನು ಇದೇ ಮೊದಲ ಬಾರಿಗೆ ಇವಳನ್ನು ನೋಡುತ್ತಾ ಇರುವುದು ಎಂದು ಹೇಳುತ್ತಾಳೆ. ಆದರೆ ಅಣ್ಣಾಜಿ ನಂಬುವುದಿಲ್ಲ. ಚಾರು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಲೇ ಇದ್ದಾಳೆ. ಆದರೂ ಅಣ್ಣಾಜಿ ಅನುಮಾನದ ಸುಳಿಯಿಂದ ತಪ್ಪಿಸಿಕೊಂಡು ಬರುವುದು ಅಷ್ಟು ಸುಲಭದ ಮಾತಲ್ಲ.

ರಾಮಾಚಾರಿ ಧಾರಾವಾಹಿ

ರಾಮಾಚಾರಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.

ರಾಮಾಚಾರಿ ಧಾರಾವಾಹಿ ಪಾತ್ರವರ್ಗ

ಮೌನ ಗುಡ್ಡೆ ಮನೆ - ಚಾರು

ರಿತ್ವಿಕ್ ಕ್ರಪಾಕರ್ - ರಾಮಾಚಾರಿ

ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)

ಚಿ ಗುರುದತ್ - ಜಯಶಂಕರ್

ಶಂಕರ್ ಅಶ್ವಥ್‌ - ನಾರಾಯಣಾಚಾರಿ

ಐಶ್ವರ್ಯ ವಿನಯ್‌ - ವೈಶಾಖ

ಅಂಜಲಿ ಸುಧಾಕರ್ - ಜಾನಕಿ

Whats_app_banner