ರಾಮಾಚಾರಿ ಧಾರಾವಾಹಿಯಲ್ಲಿ ರೋಚಕ ತಿರುವು; ಒಂದು ಗಂಟೆಯ ಸುದೀರ್ಘ ಎಪಿಸೋಡ್‌ನಲ್ಲಿ ರಿವೀಲ್ ಆಗುತ್ತಾ ರುಕ್ಕು ಸೀಕ್ರೇಟ್‌
ಕನ್ನಡ ಸುದ್ದಿ  /  ಮನರಂಜನೆ  /  ರಾಮಾಚಾರಿ ಧಾರಾವಾಹಿಯಲ್ಲಿ ರೋಚಕ ತಿರುವು; ಒಂದು ಗಂಟೆಯ ಸುದೀರ್ಘ ಎಪಿಸೋಡ್‌ನಲ್ಲಿ ರಿವೀಲ್ ಆಗುತ್ತಾ ರುಕ್ಕು ಸೀಕ್ರೇಟ್‌

ರಾಮಾಚಾರಿ ಧಾರಾವಾಹಿಯಲ್ಲಿ ರೋಚಕ ತಿರುವು; ಒಂದು ಗಂಟೆಯ ಸುದೀರ್ಘ ಎಪಿಸೋಡ್‌ನಲ್ಲಿ ರಿವೀಲ್ ಆಗುತ್ತಾ ರುಕ್ಕು ಸೀಕ್ರೇಟ್‌

ರಾಮಾಚಾರಿ ಧಾರಾವಾಹಿಯ ಮಹಾಸಂಚಿಕೆ ಇಂದು ರಾತ್ರಿ ಎಂಟು ಗಂಟೆಗೆ ಪ್ರಸಾರವಾಗಲಿದೆ. ರಾಮಾಚಾರಿ ಹಾಗೂ ಕಿಟ್ಟಿ ಪಾತ್ರದ ಜೊತೆಗೆ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಂಡ ಹೊಸ ಪಾತ್ರ ರುಕ್ಕು ಹಾಗೂ ಚಾರು ನಡುವಿನ ನಂಟು ಏನು ಎನ್ನುವುದರ ಕುರಿತು ಇಂದಿನ ಎಪಿಸೋಡ್‌ ಇರಲಿದೆ.

ರಾಮಾಚಾರಿ ಧಾರಾವಾಹಿ; ಒಂದು ಗಂಟೆಯ ಮಹಾಸಂಚಿಕೆ
ರಾಮಾಚಾರಿ ಧಾರಾವಾಹಿ; ಒಂದು ಗಂಟೆಯ ಮಹಾಸಂಚಿಕೆ (ಕಲರ್ಸ್ ಕನ್ನಡ)

ರಾಮಾಚಾರಿ ಧಾರಾವಾಹಿಯಲ್ಲಿ ದಿನದಿಂದ ದಿನಕ್ಕೆ ಕಥೆಯ ಕುತೂಹಲ ಹೆಚ್ಚುತ್ತಿದೆ. ನಾರಾಯಣಾಚಾರ್ಯರು ಸಾಯುತ್ತಾರೆ ಎಂದು ವೀಕ್ಷಕರು ಅಂದುಕೊಳ್ಳುವ ಸಂದರ್ಭದಲ್ಲಿ ಅವರು ಸಾವಿನಿಂದ ಪಾರಾಗಿದ್ದಾರೆ. ಇಷ್ಟು ದಿನ ವೈಶಾಖಳ ಅವನತಿಗಾಗಿ ಎಲ್ಲರೂ ಕಾಯುತ್ತಾ ಇದ್ದರು. ವೈಶಾಖ ಮಾಡಿದ ತಪ್ಪು ಯಾವಾಗ ಮನೆಯವರ ಎದುರು ಹೊರಬರುತ್ತದೆ ಎಂದು ಕಾದಿದ್ದಕ್ಕೆ ಇದೀಗ ಉತ್ತರವೂ ಸಿಕ್ಕಿದೆ. ವೈಶಾಖ ಮೊಸದ ಆಟ ಆಡುತ್ತಿದ್ಧಾಳೆ. ಮನೆಯವರಿಗೆಲ್ಲ ಇವಳೇ ಕಾಟ ಕೊಡುತ್ತಿದ್ದಾಳೆ ಎನ್ನುವ ವಿಚಾರ ಕೂಡ ರಿವೀಲ್ ಆಗಿದೆ.

ಹೀಗಿರುವಾಗ ಮಹಾಸಂಚಿಕೆಯಲ್ಲಿ ಯಾವ ವಿಚಾರ ಇರಬಹುದು. ಕಥೆ ಇನ್ನೂ ಹೇಗೆ ತಿರುವು ಪಡೆದುಕೊಳ್ಳಬಹುದು ಎಂದು ವೀಕ್ಷಕರು ಆಲೋಚಿಸುತ್ತಿದ್ಧಾರೆ. ಇದೇ ಸಂದರ್ಭದಲ್ಲಿ ಹೊಸ ಪಾತ್ರ ರುಕ್ಕು ಬಗ್ಗೆ ಈ ಸಂಚಿಕೆ ಇರಲಿದೆ ಎಂಬ ಸುಳಿವು ಪ್ರೋಮೋದಲ್ಲಿ ದೊರೆತಿದೆ. ಈಗ ಚಾರು ಹಿಂದಿನ ಜೀವನದ ಬಗ್ಗೆ ಕೂಡ ಕಥೆ ಇರಬಹುದು ಎಂದು ಅನಿಸುತ್ತದೆ. ಯಾಕೆಂದರೆ ಚಾರು ಈಗ ಬಿಡುಗಡೆಯಾದ ಪ್ರೋಮೋದಲ್ಲಿ ತುಂಬಾ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾಳೆ.

ಚಾರು ಲೈಫ್‌ ಮೊದಲು ಹೇಗಿತ್ತು?

ಹಿಂದೆ ಅಪ್ಪ ಹಾಗೂ ಅಮ್ಮನ ಮುದ್ದಿನ ಮಗಳಾಗಿ ತನ್ನ ಇಡೀ ಆಫೀಸ್‌ ಕೆಲಸವನ್ನು ಒಬ್ಬಳೇ ನಿಭಾಯಿಸಿಕೊಂಡು ಒಂದು ಬಾಸ್‌ ಲೇಡಿಯಾಗಿ ಇದ್ದ ಪಾತ್ರ ಚಾರುದಾಗಿತ್ತು. ಆದರೆ ರಾಮಾಚಾರಿಯನ್ನು ಪ್ರೀತಿಸಿ ಮದುವೆ ಆದ ನಂತರದಲ್ಲಿ ಅವಳ ಪಾತ್ರದಲ್ಲಿ ಬದಲಾವಣೆಯಾಗಿದೆ. ಸಂಸ್ಕಾರಯುತ ಕುಟುಂಬದಲ್ಲಿ ಯಾವ ರೀತಿ ಬದುಕಿ ಬಾಳಬೇಕು ಎನ್ನುವುದಕ್ಕೆ ಮಾದರಿ ಆಗುವಂತೆ ಅವಳ ಪಾತ್ರವನ್ನು ಮರುಸೃಷ್ಟಿ ಮಾಡಲಾಗಿತ್ತು.

ಈಗ ರಾಮಾಚಾರಿ ಹೆಂಡತಿ ಚಾರು ಹಾಗೂ ಹೊಸದಾಗಿ ಅವರಿಗೆ ಎದುರಾದ ರುಕ್ಕು ಇವರಿಬ್ಬರಿಗೂ ಯಾವ ರೀತಿ ನಂಟಿತ್ತು ಎಂಬುದನ್ನು ಈ ಸಂಚಿಕೆಯಲ್ಲಿ ನೀವು ನೋಡಬಹುದು.

ರಾಮಾಚಾರಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.

ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್‌ - ನಾರಾಯಣಾಚಾರಿ
ಐಶ್ವರ್ಯ ವಿನಯ್‌ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ

Whats_app_banner