Ramachari Serial: ಚಾರು ಮುಂದೆ ಸತ್ಯ ಬಿಚ್ಚಿಟ್ಟ ಕಿಟ್ಟಿ; ರುಕ್ಕು ಪ್ರೀತಿಯಲ್ಲಿ ಬಿದ್ದಿರೋದು ನಿಜ ಎಂದು ಒಪ್ಪಿಕೊಂಡ ಕೃಷ್ಣ
ಕನ್ನಡ ಸುದ್ದಿ  /  ಮನರಂಜನೆ  /  Ramachari Serial: ಚಾರು ಮುಂದೆ ಸತ್ಯ ಬಿಚ್ಚಿಟ್ಟ ಕಿಟ್ಟಿ; ರುಕ್ಕು ಪ್ರೀತಿಯಲ್ಲಿ ಬಿದ್ದಿರೋದು ನಿಜ ಎಂದು ಒಪ್ಪಿಕೊಂಡ ಕೃಷ್ಣ

Ramachari Serial: ಚಾರು ಮುಂದೆ ಸತ್ಯ ಬಿಚ್ಚಿಟ್ಟ ಕಿಟ್ಟಿ; ರುಕ್ಕು ಪ್ರೀತಿಯಲ್ಲಿ ಬಿದ್ದಿರೋದು ನಿಜ ಎಂದು ಒಪ್ಪಿಕೊಂಡ ಕೃಷ್ಣ

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ರಾಮಾಚಾರಿ ಧಾರಾವಾಹಿಯಲ್ಲಿ ಕಿಟ್ಟಿ ಎಲ್ಲ ಸತ್ಯವನ್ನೂ ಚಾರು ಹತ್ತಿರ ಹೇಳಿಕೊಂಡಿದ್ದಾನೆ. ಈಗ ಚಾರು ಮುಂದಿನ ನಿರ್ಧಾರ ತೆಗೆದುಕೊಂಡು ಕಿಟ್ಟಿ ಹಾಗೂ ರುಕ್ಕು ಇಬ್ಬರನ್ನೂ ಹೇಗೆ ಒಂದು ಮಾಡುತ್ತಾಳೆ ಎಂದು ಕಾದು ನೋಡಬೇಕಿದೆ.

ಕಿಟ್ಟಿಯನ್ನು ತಬ್ಬಿಕೊಂಡು ಮನದಾಸೆ ಹೇಳಿಕೊಂಡ ರುಕ್ಕು
ಕಿಟ್ಟಿಯನ್ನು ತಬ್ಬಿಕೊಂಡು ಮನದಾಸೆ ಹೇಳಿಕೊಂಡ ರುಕ್ಕು (ಕಲರ್ಸ್‌ ಕನ್ನಡ)

ರಾಮಾಚಾರಿ ಹಾಗೂ ಚಾರು ಇಬ್ಬರೂ ಕಿಟ್ಟಿ ಹತ್ತಿರ ಪ್ರಶ್ನೆ ಕೇಳುತ್ತಿದ್ದಾರೆ. ಕಿಟ್ಟಿ ಒಂದು ಹುಡುಗಿಯನ್ನು ಪ್ರೀತಿ ಮಾಡ್ತಾ ಇದ್ಧಾನೆ ಎನ್ನುವ ವಿಚಾರ ಅವರಿಬ್ಬರಿಗೂ ತಿಳಿದಿತ್ತು. ಆದರೆ ಯಾರನ್ನು ಲವ್ ಮಾಡ್ತಾ ಇದ್ದಾನೆ? ಅವನಿಗೆ ಹೇಗೆ ಲವ್ ಆಯ್ತು? ಈಗ ಅವಳು ಇವನಿಂದ ಯಾಕೆ ದೂರ ಇದ್ದಾಳೆ? ಈ ಯಾವ ವಿಚಾರದ ಬಗ್ಗೆಯೂ ಅವರ ಬಳಿ ಮಾಹಿತಿ ಇರುವುದಿಲ್ಲ. ಹೇಗಂದರೂ ಈಗ ಕಿಟ್ಟಿ ಮದುವೆ ವಯಸ್ಸಿಗೆ ಬಂದಿದ್ದಾನೆ. ಅವನಿಗೆ ಮದುವೆ ಮಾಡಲೇಬೇಕು ಎಂದು ಅವರೆಲ್ಲ ಅಂದುಕೊಂಡಿದ್ದಾರೆ. ಇನ್ನು ಮದುವೆ ಮಾಡದೇ ಇದ್ದರೂ ಅವನು ತಾನು ಪ್ರೀತಿ ಮಾಡಿದ ಹುಡುಗಿಯಿಂದ ದೂರ ಇರುವುದು ಎಲ್ಲರಿಗೂ ಅಷ್ಟು ಇಷ್ಟ ಆಗುವುದಿಲ್ಲ.

ಚಾರು ಪ್ರಶ್ನೆಗೆ ಕಿಟ್ಟಿ ಉತ್ತರ

ಹಾಗಾಗಿ ರಾಮಾಚಾರಿ ಹಾಗೂ ಚಾರು ಇಬ್ಬರೂ ತುಂಬಾ ಪ್ರಶ್ನೆ ಮಾಡಿದ್ದಾರೆ. ನಿನ್ನ ಹಳೆಯ ಎಲ್ಲ ಕಥೆಯನ್ನೂ ನಮ್ಮೊಂದಿಗೆ ನೀನು ಹಂಚಿಕೊಳ್ಳಲೇಬೇಕು ಎಂದು ಒತ್ತಾಯ ಮಾಡಿದ್ದಾರೆ. ಅವರ ಒತ್ತಾಯಕ್ಕೆ ಇವನು ಮಾತಾಡುತ್ತಾ ಇದ್ದಾನೆ. ಅವನು ರುಕ್ಕುವನ್ನು ಮದುವೆ ಮನೆಯಿಂದ ಕರೆದುಕೊಂಡು ಬಂದ ವಿಚಾರವನ್ನು ತಿಳಿಸುತ್ತಾನೆ. ಇದನ್ನು ಕೇಳಿ ಚಾರು ತುಂಬಾ ಕೋಪ ಮಾಡಿಕೊಳ್ಳುತ್ತಾಳೆ. ನೀನು ಯಾಕೆ ಆ ರೀತಿ ಮಾಡ್ದೆ? ಒಂದು ಹೆಣ್ಣಿನ ಜೀವನಾನೇ ಹಾಳು ಮಾಡಿದ್ದೀಯಾ ನೀನು ಎಂದು ಹೇಳುತ್ತಾಳೆ.

ಆಗ ಕಿಟ್ಟಿ ಹೇಳ್ತಾನೆ “ಹೌದು ಅತ್ತಿಗೆ ನಾನೂ ಹಾಗೇ ಅಂದುಕೊಂಡು ಕೊರಗುತ್ತಾ ಇದ್ದೀನಿ. ಆದರೆ ನೀವು ಅಂದುಕೊಂಡ ಮಟ್ಟಿಗೆ ಏನೂ ಆಗಿಲ್ಲ" ಎಂದು ಹೇಳುತ್ತಾನೆ. ಹಾಗಾದ್ರೆ ಮತ್ತೇನಾಯ್ತು ಎಂದು ಪ್ರಶ್ನೆ ಮಾಡಿದಾಗ ಎಲ್ಲ ಸತ್ಯ ಹೇಳುತ್ತಾನೆ. ಅವಳಿಗೂ ಆ ಮದುವೆ ಇಷ್ಟ ಇರೋದಿಲ್ಲ. ಅವಳ ಚಿಕ್ಕಪ್ಪಂದಿರು ಒತ್ತಾಯವಾಗಿ ಅವಳ ಹೆಸರಿನ ಆಸ್ತಿಗಾಗಿ ಅವಳನ್ನು ಮದುವೆ ಮಾಡುತ್ತಾ ಇರುತ್ತಾರೆ. ಆದರೆ ಅವಳು ಸತ್ಯ ಹೇಳಿ ಕಿಟ್ಟಿಯನ್ನೇ ಇಷ್ಟಪಡಲು ಆರಂಭಿಸಿರುತ್ತಾಳೆ.

ರಾಮಾಚಾರಿ ಧಾರಾವಾಹಿ

ರಾಮಾಚಾರಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.

ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್ ಶಂಕರ್
ಅಶ್ವಥ್‌ - ನಾರಾಯಣಾಚಾರಿ
ಐಶ್ವರ್ಯ ವಿನಯ್‌ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ

Whats_app_banner