Ramachari Serial: ಕೆಟ್ಟ ಕನಸಿಗೆ ಬೆಚ್ಚಿ ಬಿದ್ದ ಕಿಟ್ಟಿ; ಕೃಷ್ಣನ ಪ್ರೀತಿಯ ರುಕ್ಮಿಣಿಯನ್ನು ಹುಡುಕಲು ರೆಡಿಯಾದ ಚಾರು ಜೋಡಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿ ಈಗ ಕಿಟ್ಟಿ ಹಾಗೂ ರುಕ್ಕುವನ್ನು ಒಂದು ಮಾಡುವ ಪ್ರಯತ್ನ ನಡೆಯುತ್ತಿದೆ. ಹೀಗಿರುವಾಗ ಚಾರು ಮತ್ತು ರಾಮಾಚಾರಿ ಇಬ್ಬರೂ ಈಗ ರುಕ್ಕು ಊರಿಗೆ ಹೊರಡಲು ರೆಡಿಯಾಗಿದ್ದಾರೆ.

ರಾಮಾಚಾರಿ ಹಾಗೂ ಚಾರು ಇಬ್ಬರೂ ಈಗ ಕೃಷ್ಣನ ಕಾಳಜಿ ಮಾಡುತ್ತಿದ್ದಾರೆ. ಕೃಷ್ಣ ರಾತ್ರಿ ಮಲಗಿದ್ದವನು ಒಂದೇ ಬಾರಿ ಗಾಬರಿಯಾಗಿ ರುಕ್ಕು ಎಂದು ಕೂಗಿಕೊಳ್ಳುತ್ತಾನೆ. ಅವನಿಗೆ ತುಂಬಾ ಗಾಬರಿ ಆಗುತ್ತದೆ. ಯಾಕೆ ಕಿಟ್ಟಿ ಈ ರೀತಿ ಚೀರಿಕೊಂಡ ಎಂದು ನೋಡಲು ಅವರಿಬ್ಬರೂ ಬರುತ್ತಾರೆ. ಬಂದು ನೋಡುವಷ್ಟರಲ್ಲಿ ಕಿಟ್ಟಿ ಗಾಬರಿಯಾಗಿ ಹಾಸಿಗೆಯಲ್ಲಿ ಎದ್ದು ಕುಳಿತುಕೊಂಡಿರುತ್ತಾನೆ. ಆಗ ಚಾರು ಬಂದು ಮಾತಾಡಿಸುತ್ತಾಳೆ. ಏನಾಯ್ತು ಎಂದು ಪ್ರಶ್ನೆ ಮಾಡುತ್ತಾಳೆ. ಪ್ರಶ್ನೆ ಮಾಡಿದಾಗ ಅವನು ಏನೂ ಉತ್ತರ ನೀಡುವುದಿಲ್ಲ. ಆಗ ಮತ್ತೆ ರಾಮಾಚಾರಿ ಕೇಳುತ್ತಾನೆ.
ಆದರೆ ರಾಮಾಚಾರಿಗೂ ಅವನು ಉತ್ತರ ನೀಡೋದಿಲ್ಲ. ಆಗ ಚಾರು ತಾನೇಗೇ ಊಹೆ ಮಾಡಿಕೊಂಡು ಹೇಳುತ್ತಾಳೆ. ನನಗೆ ಗೊತ್ತಾಯ್ತು, ನಿನ್ನ ಕನಸಿನಲ್ಲಿ ನೀನು ಪ್ರೀತಿಸಿದ ಹುಡುಗಿ ರುಕ್ಕು ಬಂದಿದ್ದಳು ಅಲ್ವಾ? ಅವಳಿಗೆ ಏನೋ ಅಪಾಯ ಆದ ರೀತಿ ನಿನಗೆ ಅನಿಸ್ತಾ ಇದೆ ಅಲ್ವಾ? ಹಾಗಾಗಿ ನೀನು ಇಷ್ಟು ಗಾಬರಿಯಿಂದ ಎದ್ದು ಕೂತೆ ಎನ್ನುತ್ತಾಳೆ. ಆದರೆ ಅವನು ತುಂಬಾ ಡಿಸ್ಟರ್ಬ್ ಆದ ಹಾಗಿತ್ತು. ಅಲ್ಲಿಂದ ಏನೂ ಮಾತಾಡದೇ ಸುಮ್ಮನೆ ಹೋಗುತ್ತಾನೆ. ಆಗ ಅವನನ್ನು ನೋಡಿ ಚಾರು ಪಾಪ ಎನಿಸಿ ರಾಮಾಚಾರಿ ಹತ್ತಿರ ಹೇಳುತ್ತಾಳೆ.
ಚಾರು ಹೇಳಿದಂತೆ ಆಗುತ್ತಾ?
ನಾಳೆ ನಾವು ಆ ಹುಡುಗಿಯನ್ನು ಹುಡುಕಿಕೊಂಡು ಹೋಗೋಣ ಎಂದು. ಆದರೆ ಮೊದಲಿಗೆ ರಾಮಾಚಾರಿ ಒಪ್ಪೋದಿಲ್ಲ. ಇಲ್ಲ ಅವನು ಈ ಬಗ್ಗೆ ಏನೂ ಮಾತಾಡಿಲ್ಲ. ತಾನು ಅವಳನ್ನು ಪ್ರೀತಿಸುತ್ತಿದ್ದೇನೆ ಎಂದೂ ಸಹ ಹೇಳಿಲ್ಲ. ಹಾಗೇನಾದ್ರೂ ಹೇಳಿದ್ರೆ ನಾವು ಮುಂದುವರೆಯಬಹುದಿತ್ತು, ಆದ್ರೆ ಈಗ ಹಾಗಾಗೋದಿಲ್ಲ ಎನ್ನುತ್ತಾನೆ. ಆಗ ಚಾರು ಅವನು ತನ್ನ ಇಷ್ಟವನ್ನು ಮುಚ್ಚಿ ಇಡ್ತಿದ್ದಾನೆ. ಅವನಿಗೆ ಅವಳಂದ್ರೆ ಇಷ್ಟ ಎನ್ನುತ್ತಾಳೆ. ನಿನಗೆ ಇದು ಹೇಗೆ ಗೊತ್ತು ಎಂದು ಪ್ರಶ್ನೆ ಮಾಡಿದಾಗ ನನಗೆ ಗೊತ್ತು, ನೀನೂ ಮೊದಲು ಹೀಗೆ ಇದ್ದೆ ನೆನಪಿಲ್ವಾ? ಎಂದು ಕೇಳುತ್ತಾಳೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ
