Ramachari Serial: ಸುಳ್ಳು ಹೇಳಿ ಸಾಹಸಕ್ಕೆ ಕೈ ಹಾಕುತ್ತಿದ್ದಾಳೆ ಚಾರು; ಕಷ್ಟ ಬಂದರೆ ನಾನಿದ್ದೇನೆ ಎಂದು ಭರವಸೆ ನೀಡಿದ ರಾಮಾಚಾರಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿ ರಾಮಾಚಾರಿಯಲ್ಲಿ ರುಕ್ಕುವನ್ನು ಹುಡುಕಿಕೊಂಡು ಚಾರು ಹೊರಟಿದ್ದಾಳೆ. ಅವಳಿಗೆ ಕೃಷ್ಣ ಹಾಗೂ ರುಕ್ಕುವನ್ನು ಒಂದು ಮಾಡಬೇಕು ಎಂಬ ಮನಸಾಗಿದೆ. ಇದಕ್ಕೆ ರಾಮಾಚಾರಿ ಸಹಾಯ ಮಾಡುತ್ತಾ ಇದ್ದಾನೆ.

ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಒಂದು ಸಾಹಸಕ್ಕೆ ಕೈ ಹಾಕಿದ್ದಾಳೆ. ಮನೆಯಲ್ಲಿ ವಿಷಯ ತಿಳಿಸದೆ ತನ್ನ ಗಂಡ ರಾಮಾಚಾರಿಗೆ ಮಾತ್ರ ಸತ್ಯ ಹೇಳಿ ಹೊರಗಡೆ ಹೋಗಲು ನಿರ್ಧಾರ ಮಾಡಿದ್ದಾಳೆ. ಅವಳು ಈ ಹಿಂದೆ ಯಾವತ್ತೂ ತನ್ನ ಕೆಲಸದ ಬಗ್ಗೆ ಬೇರೆಯವರೊಡನೆ ಚರ್ಚೆ ಮಾಡೇ ಇರಲಿಲ್ಲ, ಆದರೆ ಇಂದು ಒಂದೇ ಬಾರಿಗೆ ಬಂದು ನನಗೆ ಕೆಲಸಕ್ಕೆ ಹೋಗಬೇಕು. ಈ ಹಿಂದೆ ನಾನು ಕೆಲಸಕ್ಕೆ ಅಪ್ಲೈ ಮಾಡಿದ್ದೆ, ಆದ್ರೆ ಯಾವುದೇ ಉತ್ತರ ಬಂದಿರಲಿಲ್ಲ. ಈಗ ಅದಕ್ಕೆ ಉತ್ತರ ಬಂದಿದೆ. “ನಿನ್ನೆ ತಾನೆ ಮೇಲ್ ಬಂತು ಮಾವ” ಎಂದು ಹೇಳುತ್ತಾಳೆ. ಅವಳ ಮಾತನ್ನು ಕೇಳುತ್ತಾ ಇದ್ದ ಹಾಗೆ ಮಾವ ಸ್ವಲ್ಪ ಆಶ್ಚರ್ಯ ಪಡುತ್ತಾರೆ. ಈ ಹಿಂದೆ ನೀನು ಯಾವಾಗಲೂ ಈ ವಿಷಯವಾಗಿ ಮಾತೇ ಆಡಿರಲಿಲ್ಲ. ಈಗ ಒಂದೇ ಸಾರಿ ತಿಳಸ್ತಾ ಇದೀಯಲ್ಲ ಎಂದು ಹೇಳುತ್ತಾರೆ.
ಅದಕ್ಕೆ ರಾಮಾಚಾರಿ “ಅಪ್ಪ ಅದು ಮನೆಯ ಪರಿಸ್ಥಿತಿ ಇಷ್ಟು ದಿನ ಚನಾಗಿರ್ಲಿಲ್ವಲ್ಲ ಹಾಗಾಗಿ ಏನೂ ಹೇಳೋಕೆ ಆಗಿಲ್ಲ. ಕೆಲಸದ ವಿಚಾರ ಮಾತಾಡುವ ರೀತಿಯ ಸಂದರ್ಭವೂ ಇರಲಿಲ್ಲ. ಇದರ ಬಗ್ಗೆ ನಿಮಗೂ ಗೊತ್ತು” ಎಂದು ಹೇಳುತ್ತಾನೆ. ಆಗ ಅದೂ ಹೌದು ಎಂದು ನಾರಾಯಣಾಚಾರ್ಯ ಹೇಳುತ್ತಾರೆ. ಅದಾದ ನಂತರದಲ್ಲಿ ಎಲ್ಲರೂ ಅಲ್ಲಿಗೆ ಬರುತ್ತಾರೆ. ಅತ್ತೆ ಬಂದು ಏನಮ್ಮ ಚಾರು ಈ ವಿಷಯಾನಾ ಮೊದಲೆ ಹೇಳೇ ಇಲ್ಲ ನೀನು ಎಂದು ಹೇಳುತ್ತಾರೆ.
ಆಗ ಚಾರು ಮತ್ತೆ ಅದೇ ಉತ್ತರ ನೀಡುತ್ತಾಳೆ. ರಾಮಾಚಾರಿ ಚಾರು ಹೋಗಲು ಏನೇನು ವ್ಯವಸ್ಥೆ ಬೇಕೋ ಆ ಎಲ್ಲ ವ್ಯವಸ್ಥೆ ಮಾಡಿರುತ್ತಾನೆ. ತಾನು ಅವಳ ಜೊತೆಗೆ ಹೋಗಲು ಸಾಧ್ಯ ಇಲ್ಲ ಎನ್ನುವ ಕಾರಣಕ್ಕೆ ಮುರಾರಿಯನ್ನು ಜೊತೆ ಮಾಡಿ ಕಳಿಸುತ್ತಾನೆ. ಆಗ ಮುರಾರಿ ಕೂಡ ಖುಷಿಯಾಗುತ್ತಾನೆ. ನಾನು ಕೂಡ ಇದೇ ಮೊದಲಬಾರಿಗೆ ಪೂಜೆಗಲ್ಲದೆ ಬೇರೆ ಕಡೆ ಹೊಗ್ತಾ ಇರೋದು ನನಗೂ ಆಶಿರ್ವಾದ ಮಾಡಿ ಎಂದು ಹೇಳುತ್ತಾನೆ. ಇನ್ನು ಚಾರು ಕೂಡ ಮಾವನ ಕಾಲಿಗೆ ಬಿದ್ದು ಆಶಿರ್ವಾದ ಪಡೆದುಕೊಂಡಿರುತ್ತಾಳೆ.
ಆಗ ನಾರಾಯಣಾಚಾರ್ಯರು ಹೇಳುತ್ತಾರೆ. ನನಗೆ ಮನೆ ಹೇಣ್ಣು ಮಕ್ಕಳು ಹೊರಗಡೆ ಹೋಗಿ ದುಡಿಯೋದ್ರಲ್ಲಿ ಯಾವ ಬೇಸರವೂ ಇಲ್ಲ. ಎಲ್ಲರೂ ತಮ್ಮ ಸ್ವಂತ ಕಾಲಮೇಲೆ ನಿಲ್ಲ ಬೇಕು ಎಂದು ಅವಳಿಗೆ ಸಹಾಯ ಮಾಡುತ್ತಾರೆ. ಪ್ರೋತ್ಸಾಹಿಸುತ್ತಾರೆ. ನಂತರದಲ್ಲಿ ರಾಮಾಚಾರಿ ಹಾಗೂ ಮುರಾರಿ ಬ್ಯಾಗ್ ತೆಗೆದುಕೊಂಡು ಹೋಗುತ್ತಾರೆ. ರಾಮಾಚಾರಿ “ಏನಾದರೂ ಸಮಸ್ಯೆ ಆದರೆ ಮನೆಗೆ ವಾಪಸ್ ಬಾ. ಆನಂತರ ನಾವಿಬ್ಬರೇ ಹೋಗಿ ಬರೋಣ” ಎಂದು ಹೇಳಿ ಭರವಸೆ ತುಂಬಿ ಅವಳನ್ನು ರುಕ್ಕು ಊರಿಗೆ ಕಳಿಸಿದ್ದಾನೆ. ಕೃಷ್ಣ ಹಾಗೂ ರುಕ್ಕುವನ್ನು ಒಂದು ಮಾಡಲು ಎಲ್ಲಾ ಪ್ರಯತ್ನಗಳು ನಡೆಯುತ್ತಿದೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ
ವಿಭಾಗ