Ramachari Serial: ರುಕ್ಕು ನೆನಪಲ್ಲಿ ಒದ್ದಾಡ್ತಿದ್ದಾನೆ ಕಿಟ್ಟಿ; ತನಗೆ ತಾನೇ ಅಪಾಯ ತಂದುಕೊಳ್ತಾಳಾ ಚಾರು?
ಕನ್ನಡ ಸುದ್ದಿ  /  ಮನರಂಜನೆ  /  Ramachari Serial: ರುಕ್ಕು ನೆನಪಲ್ಲಿ ಒದ್ದಾಡ್ತಿದ್ದಾನೆ ಕಿಟ್ಟಿ; ತನಗೆ ತಾನೇ ಅಪಾಯ ತಂದುಕೊಳ್ತಾಳಾ ಚಾರು?

Ramachari Serial: ರುಕ್ಕು ನೆನಪಲ್ಲಿ ಒದ್ದಾಡ್ತಿದ್ದಾನೆ ಕಿಟ್ಟಿ; ತನಗೆ ತಾನೇ ಅಪಾಯ ತಂದುಕೊಳ್ತಾಳಾ ಚಾರು?

ರಾಮಾಚಾರಿ ಧಾರಾವಾಹಿಯಲ್ಲಿ ರುಕ್ಕುವನ್ನು ಹುಡುಕಲು ಚಾರು ರಾಮದುರ್ಗಕ್ಕೆ ಹೋಗಿದ್ದಾಳೆ. ಅವಳ ಜೊತೆ ಮುರಾರಿ ಕೂಡ ಹೋಗಿದ್ದಾನೆ. ಆದರೆ ಅಲ್ಲಿ ಯಾವ ರೀತಿ ಅಪಾಯ ಎದುರಾಗಬಹುದು ಎಂಬ ಅಂದಾಜು ಕೂಡ ಅವಳಿಗೆ ಇಲ್ಲ. ಮುರಾಗಿಗೆ ಈ ವಿಷಯ ಗೊತ್ತೇ ಇಲ್ಲ.

 ತನಗೆ ತಾನೇ ಅಪಾಯ ತಂದುಕೊಳ್ತಾಳಾ ಚಾರು
ತನಗೆ ತಾನೇ ಅಪಾಯ ತಂದುಕೊಳ್ತಾಳಾ ಚಾರು (ಕಲರ್ಸ್‌ ಕನ್ನಡ)

ಕಿಟ್ಟಿ ಮನೆಯ ಹೊರಭಾಗದಲ್ಲಿ ನಿಂತುಕೊಂಡು ರುಕ್ಕು ಬಗ್ಗೆ ಯೋಚನೆ ಮಾಡುತ್ತಾ ಇದ್ದಾನೆ. ಅವನಿಗೆ ಈಗ ತುಂಬಾ ರುಕ್ಕು ನೆನಪಾಗುತ್ತಾ ಇದ್ದಾಳೆ. ಯಾಕೆ ಅವಳನ್ನು ನಾನು ಕಳೆದುಕೊಂಡು ಬಿಟ್ಟೆ ಎಂದು ಅವನಿಗೆ ಈಗ ಅನಿಸುತ್ತಿದೆ. ನನ್ನಿಂದ ಅವಳು ಸುಖವಾಗಿರಲು ಸಾಧ್ಯವಿಲ್ಲ, ಅವಳೊಬ್ಬಳೇ ಇದ್ದರೆ ಸುಖವಾಗಿರುತ್ತಾಳೆ ಎಂದು ನಾನು ಅಂದುಕೊಂಡೆ. ಆದರೆ ಹಾಗೆ ಅಂದುಕೊಂಡದ್ದೇ ತಪ್ಪು ಎಂದು ಈಗ ಅನಿಸುತ್ತಾ ಇದೆ. ನಾನೂ ಅವಳ ಜೊತೆಗೇ ಇರಬೇಕಿತ್ತು ಎಂದು ಅಂದುಕೊಳ್ಳುತ್ತಾನೆ. ಅವಳ ಬಗ್ಗೆ ತುಂಬಾ ಯೋಚನೆ ಮಾಡುತ್ತಾನೆ.

ಅಣ್ಣ ಅತ್ತಿಗೆ ಇಬ್ಬರೂ ಅವಳನ್ನು ಹುಡುಕುತ್ತೇನೆ ಎಂದು ಹೇಳುತ್ತಿದ್ದಾರೆ. ಆದರೆ ನನಗೇ ಅವಳ ಬಗ್ಗೆ ಅಷ್ಟೊಂದು ಮಾಹಿತಿ ಇಲ್ಲ. ಅವಳಾಗೇ ನನ್ನ ಹತ್ತಿರ ಎಷ್ಟು ವಿಷಯ ಹೇಳಿದ್ದಾಳೋ ಅಷ್ಟು ಮಾತ್ರ ಗೊತ್ತಿದೆ. ಅದನ್ನು ಹೊರತುಪಡಿಸಿ ಇನ್ಯಾವ ವಿಷಯವೂ ನನಗೆ ತಿಳಿದಿಲ್ಲ. ಹುಡುಕಿಕೊಂಡು ಹೋಗೋಣ ಎಂದರೂ ಸರಿ ಆಗುವುದಿಲ್ಲ. ಹೀಗೆಲ್ಲ ಅವನು ತನ್ನ ಮನಸಿನಲ್ಲಿ ಆಲೋಚನೆ ಮಾಡುತ್ತಾ ಇರುತ್ತಾನೆ. ಆಗ ಅವನಿಗೆ ಅನಿಸುತ್ತದೆ. ನನಗೆ ಯಾಕೆ ಈ ರೀತಿ ಆಗ್ತಾ? ಇದೆ. ಅವಳೂ ಈಗ ನನ್ನ ಇದೇ ರೀತಿ ನೆನಸಿಕೊಂಡು ಬೇಸರದಲ್ಲಿರಬಹುದು ಎಂದೆಲ್ಲಾ ಅಂದುಕೊಳ್ಳುತ್ತಾನೆ.

ಆದರೆ ಅಷ್ಟರಲ್ಲಾಗಲೇ ಅತ್ತಿಗೆ ಅವಳನ್ನು ಹುಡುಕಿಕೊಂಡು ಹೋಗಿದ್ದಾಳೆ ಎನ್ನುವ ವಿಚಾರ ಅವನಿಗೆ ಗೊತ್ತೇ ಇರುವುದಿಲ್ಲ. ಅವನು ರುಕ್ಕು ನಂಬರ್‌ಗೆ ಕಾಲ್ ಮಾಡುತ್ತಾನೆ. ಅವನಿಗೆ ಅವಳ ಹತ್ತಿರ ಈಗ ಮಾತನಾಡಬೇಕು ಎಂದೆನಿಸಿರುತ್ತದೆ. ಆದರೆ ಅವಳ ನಂಬರ್‌ಗೆ ಕಾಲ್ ಹೋಗೋದಿಲ್ಲ. ಇತ್ತ ಮುರಾರಿ ಮತ್ತು ಚಾರು ಇಬ್ಬರೂ ರಾಮದುರ್ಗಕ್ಕೆ ಹೋಗಿ ನಿಂತಿದ್ದಾರೆ. ಅಲ್ಲಿಗೆ ಬಂದ ನಂತರ ಮುರಾರಿ ಹತ್ತಿರ ಅವಳು ಸತ್ಯ ಏನು ಎಂದು ಹೇಳಿದ್ದಾಳೆ. ಆಗ ಮುರಾರಿಗೆ ಭಯ ಆರಂಭವಾಗಿದೆ.

ರಾಮಾಚಾರಿ ಅಥವಾ ಕಿಟ್ಟಿ ಯಾರಾದರೂ ನಮ್ಮ ಜೊತೆ ಬಂದರೆ ಚೆನ್ನಾಗಿ ಇರ್ತಾ ಇತ್ತು. ಈಗ ನಾವಿಬ್ಬರೇ ಬಂದಿದೀವಿ ಏನಾದರೂ ತೊಂದರೆ ಆದರೆ ಎಂದೆಲ್ಲ ಅವನಿಗೆ ಅನಿಸೋಕೆ ಆರಂಭವಾಗಿದೆ. ಆದರೆ ಚಾರು ಮಾತ್ರ ತನ್ನ ನಿರ್ಧಾರವನ್ನು ಬದಲಿಸಿಲ್ಲ.

ರಾಮಾಚಾರಿ ಧಾರಾವಾಹಿ

ರಾಮಾಚಾರಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.

ರಾಮಾಚಾರಿ ಧಾರಾವಾಹಿ ಪಾತ್ರವರ್ಗ

ಮೌನ ಗುಡ್ಡೆ ಮನೆ - ಚಾರು

ರಿತ್ವಿಕ್ ಕ್ರಪಾಕರ್ - ರಾಮಾಚಾರಿ

ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)

ಚಿ ಗುರುದತ್ - ಜಯಶಂಕರ್

ಶಂಕರ್ ಅಶ್ವಥ್‌ - ನಾರಾಯಣಾಚಾರಿ

ಐಶ್ವರ್ಯ ವಿನಯ್‌ - ವೈಶಾಖ

ಅಂಜಲಿ ಸುಧಾಕರ್ - ಜಾನಕಿ

Whats_app_banner