Ramachari Serial: ರುಕ್ಕುವನ್ನು ಹುಡುಕಿಕೊಂಡು ಬಂದ ಚಾರು, ಮುರಾರಿ; ತನ್ನದೇ ಮನೆಯಲ್ಲಿ ನರಕಯಾತನೆ ಅನುಭವಿಸುತ್ತಿದ್ದಾಳೆ ಕಿಟ್ಟಿ ಪ್ರಿಯತಮೆ
ರಾಮಾಚಾರಿ: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಮತ್ತು ಮುರಾರಿ ಇಬ್ಬರೂ ಸೇರಿ ರುಕ್ಕುವನ್ನು ಹುಡುಕಲು ಮುಂದಾಗಿದ್ದಾರೆ. ರುಕ್ಕು ಮನೆಯಲ್ಲಿ ನರಕಯಾತನೆ ಅನುಭವಿಸುತ್ತಾ ಜೀವನ ಕಳೆಯುತ್ತಿದ್ದಾಳೆ. ಮುಂದೇನಾಗಿದೆ ನೋಡಿ.

ರಾಮಾಚಾರಿ ಮನೆಯಿಂದ ಚಾರು ಹಾಗೂ ಮುರಾರಿ ಇಬ್ಬರೂ ರುಕ್ಕುವನ್ನು ಹುಡುಕಿಕೊಂಡು ಹೋಗಿದ್ದಾರೆ. ಇನ್ನು ರುಕ್ಕು ಮನೆಯಲ್ಲಿ ನರಕ ಅನುಭವಿಸುತ್ತಾ ಇದ್ದಾಳೆ. ಅವಳಿಗೆ ಹೇಳೋರು, ಕೇಳೋರು ಯಾರೂ ಇಲ್ಲ ಅನ್ನುವ ರೀತಿಯಲ್ಲಿ ಕೆಲವರು ಅವಳನ್ನು ನಡೆಸಿಕೊಳ್ಳುತ್ತಾ ಇರುತ್ತಾರೆ. ಆದರೆ ರುಕ್ಕು ಮಾತ್ರ ಏನೂ ಮಾಡಲಾಗದ ಸ್ಥಿತಿಯಲ್ಲಿ ಇರುತ್ತಾಳೆ. ಮದುವೆ ಮಾಡಬೇಕು ಅಂದುಕೊಂಡರೆ ಅವತ್ತಿನ ರೀತಿ ಮತ್ತೆ ಎಲ್ಲಾದ್ರೂ ಓಡಿ ಹೋದ್ರೆ ಸರಿ ಇರೋದಿಲ್ಲ ಎಂದು ಹೇಳುತ್ತಿದ್ದಾರೆ. ರುಕ್ಕು, ಕಿಟ್ಟಿಯನ್ನಯ ಮನಸಿನಲ್ಲಿ ಇಟ್ಟುಕೊಂಡು ಕೊರಗುತ್ತಿದ್ದಾಳೆ. ಆದರೆ ಈ ವಿಚಾರ ಅಲ್ಲಿ ಯಾರಿಗೂ ಗೊತ್ತಿಲ್ಲ. ಯಾಕೆಂದರೆ ಅವಳಿಗೆ ಹೇಳಿಕೊಳ್ಳಲೂ ಇಷ್ಟವಿಲ್ಲ. ಹೀಗಿರುವಾಗ ಮುಂದೇನಾಗುತ್ತದೆ ಎಂಬುದನ್ನು ನಾವಿಲ್ಲಿ ತಿಳಿಸಿದ್ದೇವೆ ನೋಡಿ.
ರುಕ್ಕು ಸಪ್ಪೆ ಮೋರೆ ಹಾಕಿಕೊಂಡು ಮನೆಯಲ್ಲಿ ಓಡಾಡುತ್ತಾ ಇರುತ್ತಾಳೆ. ಹೀಗಿರುವಾಗ ಅಲ್ಲಿದ್ದ ಇಬ್ಬರು ಹೆಂಗಸರು ಜೋರು ಜೋರಾಗಿ ಮಾತಾಡುತ್ತಾ ಇರುತ್ತಾರೆ. ನೀನು ಈ ರೀತಿ ಸತ್ತ ಹೆಣದ ಹಾಗೆ ಇರ್ಬೇಡ. ನನ್ನ ತಮ್ಮನ ಮಗನಿಗೆ ಹೆಂಡತಿ ಆಗುವವಳು ನೀನು. ಜೀವನೇ ಇಲ್ದೆ ಇರೋರೀತಿ ಆಡ್ತಾ ಇದ್ರೆ ಛಲೋ ಕಾಣಂಗಿಲ್ಲ ಎಂದು ಅವಳನ್ನು ಗದರಿಸುತ್ತಾ ಇರುತ್ತಾರೆ. ನಿಂಗೆ ತಲೆಏನಾದ್ರೂ ಕೆಟ್ಟಿದ್ಯಾ? ಯಾಕೆ ಈ ರೀತಿ ಮಾಡ್ತಾ ಇದೀಯಾ ನೀನು? ಎಂದು ಮೇಲಿಂದ ಮೇಲೆ ಪ್ರಶ್ನೆ ಮಾಡುತ್ತಾರೆ.
ನನ್ನ ತಮ್ಮನ ಮಗ ಒಂದು ಹೆಣ್ಣಿಗೆ ತಾಳಿ ಕಟ್ಟಬೇಕು. ಅದನ್ನು ಬಿಟ್ಟು ನೀನು ಈಗ ಇದೀಯಲ್ಲ ಈ ರೀತಿ ಸತ್ತ ಹೆಣಕ್ಕಲ್ಲ ಎಂದು ಹೇಳುತ್ತಾಳೆ. ಅವರೆಲ್ಲ ಅಷ್ಟೊಂದು ಹೇಳಿದರೂ ರುಕ್ಕು ವಾದ ಮಾಡುತ್ತಾಳೆ. “ಅಲ್ಲ ಚಿಕ್ಕಮ್ಮ ನಾನೀಗ ಅಂತದ್ದೇನು ತಪ್ ಮಾಡ್ದೆ?” ಎಂದು ಕೇಳುತ್ತಾಳೆ. “ಅರೇ! ಮತ್ತೆ ನನಗೇ ಎದುರುತ್ತರ ಕೊಡುತ್ತೀಯಾ? ಮಾಡ್ತೀನಿ ನಿನಗೆ” ಎನ್ನುತ್ತಾ ಹೊಡೆಯಲು ಹೋಗುತ್ತಾಳೆ. ಅಲ್ಲಿದ್ದ ಅವಳ ಚಿಕ್ಕಪ್ಪ ಬಂದು ತಡೆಯುತ್ತಾನೆ. ಆಗ ರುಕ್ಕುಗೆ ಬೀಳುವ ಏಟು ಚಿಕ್ಕಪ್ಪನ ಕೈಯ್ಯಿಂದ ಆ ಹೆಂಗಸಿಗೆ ಬೀಳುತ್ತದೆ. ಇನ್ನು ಚಾರು ಹಾಗು ಮುರಾರಿ ಹೋಗಿ ಒಂದು ಮನೆಯಲ್ಲಿ ರುಕ್ಕು ಬಗ್ಗೆ ವಿಚಾರಿಸಲು ಆರಂಭಿಸಿದ್ದಾರೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ
