Ramachari Serial: ರುಕ್ಕು ಕಾಪಾಡಲು ಬಂದು ಅಣ್ಣಾಜಿ ಮನೆಯಲ್ಲಿ ತಾನೇ ಸೆರೆಯಾದ ಚಾರು; ತಪ್ಪಿಸಿಕೊಳ್ಳಲು ಬೇರೆ ದಾರಿನೇ ಇಲ್ಲ
ಕನ್ನಡ ಸುದ್ದಿ  /  ಮನರಂಜನೆ  /  Ramachari Serial: ರುಕ್ಕು ಕಾಪಾಡಲು ಬಂದು ಅಣ್ಣಾಜಿ ಮನೆಯಲ್ಲಿ ತಾನೇ ಸೆರೆಯಾದ ಚಾರು; ತಪ್ಪಿಸಿಕೊಳ್ಳಲು ಬೇರೆ ದಾರಿನೇ ಇಲ್ಲ

Ramachari Serial: ರುಕ್ಕು ಕಾಪಾಡಲು ಬಂದು ಅಣ್ಣಾಜಿ ಮನೆಯಲ್ಲಿ ತಾನೇ ಸೆರೆಯಾದ ಚಾರು; ತಪ್ಪಿಸಿಕೊಳ್ಳಲು ಬೇರೆ ದಾರಿನೇ ಇಲ್ಲ

ರಾಮಾಚಾರಿ ಧಾರಾವಾಹಿ: ರಾಮಾಚಾರಿ ಹಾಗೂ ಚಾರು ಇಬ್ಬರೂ ಸೇರಿ ಮಾಡಿದ ಉಪಾಯದಂತೆ ಚಾರು ಈಗ ರುಕ್ಕು ಹುಡುಕಿಕೊಂಡು ಅಣ್ಣಾಜಿ ಮನೆಗೆ ಬಂದಿದ್ದಾಳೆ. ಬಂದು ಹೊರ ಹೋಗಲಾಗದೆ ಕಷ್ಟಪಡುತ್ತಿದ್ದಾಳೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.

ರುಕ್ಕು ಕಾಪಾಡಲು ಬಂದು ತಾನೇ ಸೆರೆಯಾದ ಚಾರು
ರುಕ್ಕು ಕಾಪಾಡಲು ಬಂದು ತಾನೇ ಸೆರೆಯಾದ ಚಾರು (ಕಲರ್ಸ್‌ ಕನ್ನಡ)

ಕಿಟ್ಟಿ ಪ್ರೀತಿಸಿದ ಹುಡುಗಿಯನ್ನು ಹುಡುಕಿ ಅವಳನ್ನು ಕಿಟ್ಟಿ ಹತ್ತಿರ ಸೇರಿಸಬೇಕು ಅನ್ನೋದು ಚಾರು ಆಸೆ ಮತ್ತು ಉದ್ದೇಶ. ಆದರೆ ಅವಳು ಈಗ ರುಕ್ಕುವನ್ನು ಕರೆದುಕೊಂಡು ಹೋಗುವ ಬದಲು ತಾನೇ ಇಲ್ಲಿ ಉಳಿದುಕೊಳ್ಳುವಂತಾಗಿದೆ. ಯಾಕೆಂದರೆ ಅಣ್ಣಾಜಿ ಅವಳನ್ನು ಮನೆಯಲ್ಲಿ ಕೂಡಿ ಹಾಕಿದ್ದಾನೆ. ರುಕ್ಕು ಮದುವೆ ಫಿಕ್ಸ್‌ ಆಗಿದೆ ಎನ್ನುವ ವಿಚಾರ ಈಗ ಚಾರೂಗೂ ಅರ್ಥವಾಗಿದೆ. ಅವಳನ್ನು ಹೇಗಾದರೂ ಮಾಡಿ ಹೊರಗಡೆ ಕರೆದುಕೊಂಡು ಹೋಗಬೇಕು ಅನ್ನೋದು ಈಗ ಚಾರು ಐಡಿಯಾ. ಆದರೆ ಅದ್ಯಾವುದೂ ಆಗುವಂತಿಲ್ಲ. ರುಕ್ಕುಗೆ ಜ್ವರ ಬಂದಿದೆ ವೈರಸ್ ಅಟ್ಯಾಕ್ ಆಗಿದೆ ಎಂದು ಸುಳ್ಳು ಹೇಳುತ್ತಾರೆ.

ಚಾರುಗೆ ಸಂಕಟ

ಆ ನಾಟಕದಲ್ಲಿ ಚಾರು ಕೂಡ ಭಾಗಿ ಆಗ್ತಾಳೆ. ನಾನು ನಿನಗೆ ಸಹಾಯ ಮಾಡ್ತೀನಿ ರುಕ್ಕು ಎನ್ನುವ ರೀತಿಯಲ್ಲಿ ಕಣ್ಣು ಸನ್ನೆ ಮಾಡುತ್ತಾಳೆ. ತಾನೇ ಅವಳಿಗೆ ಜ್ವರ ತಪಾಸಣೆ ಮಾಡುತ್ತಾಳೆ. ಆದರೆ ಅಣ್ಣಾಜಿ ಇದನ್ನು ಮೊದಲು ನಂಬೋದಿಲ್ಲ. ಆ ಕಾರಣಕ್ಕಾಗಿ ನಂತರ ಚಾರು ತಾನೇ ಡಾಕ್ಟರ್ ಎಂದು ಸುಳ್ಳು ಹೇಳಿದ್ದಾಳೆ. ಅವಳು ಹೇಳಿದ ಸುಳ್ಳನ್ನೇ ಈಗ ಎಲ್ಲರೂ ನಂಬಿದ್ದಾರೆ. ಹಾಗಾದ್ರೆ ಈ ಅಣ್ಣಾಜಿ ಮನೆಯಲ್ಲೇ ಉಳಿದುಕೊಂಡು ಅವಳಿಗೆ ತಪಾಸಣೆ ಮಾಡು, ಕಾಳಜಿ ಮಾಡು. ಅಷ್ಟು ಮಾಡಿದರೆ ಸಾಕು ಮತ್ತೇನೂ ಮಾಡೋದು ಬೇಡ.

ನೀನೂ ಈ ಮನೆಯಿಂದ ಹೊರಗಡೆ ಹೋಗೋ ಹಾಗಿಲ್ಲ. ನಿನಗೆ ಏನು ಬೇಕು ಎಂದು ಹೇಳು ಎಲ್ಲವನ್ನು ನಾನು ಇಲ್ಲೇ ತಂದುಕೊಡುತ್ತೇನೆ ಎಂದು ಅಣ್ಣಾಜಿ ಹೇಳುತ್ತಾರೆ. ಅದನ್ನು ಕೇಳಿ ಈಗ ಚಾರು ಗಾಬರಿಯಾಗಿದ್ದಾಳೆ.

ರುಕ್ಕು ಏನ್ಮಾಡ್ತಾಳೆ
ಇಷ್ಟೆಲ್ಲ ನಡಿತಾ ಇದ್ರೂ ರುಕ್ಕು ಮಾತ್ರ ಏನೂ ಮಾಡಲಾಗದ ಅಸಹಾಯಕ ಸ್ಥಿತಿ ತಲುಪಿದ್ದಾಳೆ. ಮುರಾರಿ ಹಾಗೂ ಚಾರು ಇನ್ನು ಮುಂದೆ ಏನು ಮಾಡುತ್ತಾರೆ. ರುಕ್ಕು ಮರಳಿ ಬರ್ತಾಳಾ? ಈ ಎಲ್ಲ ಪ್ರಶ್ನೆಗಳಿಗೆ ಮುಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ. ಆದರೆ ಈ ಸಂದರ್ಭದಲ್ಲಿ ಮುರಾರಿ ಎಲ್ಲಿ ಹೋಗಿದ್ದಾನೆ ಎಂದು ಕಾಣುತ್ತಿಲ್ಲ. ಚಾರು ಮಾತ್ರ ಮನೆಯೊಳಗಡೆ ಬಂದು ಅದರಲ್ಲೂ ರುಕ್ಕು ಕೋಣೆಗೆ ಬಂದು ಅವಳನ್ನು ವಿಚಾರಿಸಿಕೊಳ್ಳುತ್ತಾ ಇದ್ದಾಳೆ.

ರಾಮಾಚಾರಿ ಧಾರಾವಾಹಿ

ರಾಮಾಚಾರಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.

ರಾಮಾಚಾರಿ ಧಾರಾವಾಹಿ ಪಾತ್ರವರ್ಗ

ಮೌನ ಗುಡ್ಡೆ ಮನೆ - ಚಾರು

ರಿತ್ವಿಕ್ ಕ್ರಪಾಕರ್ - ರಾಮಾಚಾರಿ

ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)

ಚಿ ಗುರುದತ್ - ಜಯಶಂಕರ್

ಶಂಕರ್ ಅಶ್ವಥ್‌ - ನಾರಾಯಣಾಚಾರಿ

ಐಶ್ವರ್ಯ ವಿನಯ್‌ - ವೈಶಾಖ

ಅಂಜಲಿ ಸುಧಾಕರ್ - ಜಾನಕಿ

Whats_app_banner