Ramachari Serial: ರುಕ್ಕು ಹುಡುಕಾಟಕ್ಕೆ ಚಾರು ಮಾಡದ ಉಪಾಯವಿಲ್ಲ; ಹೊಸ ಅವತಾರದಲ್ಲಿ ಹೇಗೆ ಕಾಣ್ತಿದ್ದಾಳೆ ನೋಡಿ
ಕನ್ನಡ ಸುದ್ದಿ  /  ಮನರಂಜನೆ  /  Ramachari Serial: ರುಕ್ಕು ಹುಡುಕಾಟಕ್ಕೆ ಚಾರು ಮಾಡದ ಉಪಾಯವಿಲ್ಲ; ಹೊಸ ಅವತಾರದಲ್ಲಿ ಹೇಗೆ ಕಾಣ್ತಿದ್ದಾಳೆ ನೋಡಿ

Ramachari Serial: ರುಕ್ಕು ಹುಡುಕಾಟಕ್ಕೆ ಚಾರು ಮಾಡದ ಉಪಾಯವಿಲ್ಲ; ಹೊಸ ಅವತಾರದಲ್ಲಿ ಹೇಗೆ ಕಾಣ್ತಿದ್ದಾಳೆ ನೋಡಿ

ರಾಮಾಚಾರಿ ಧಾರಾವಾಹಿ: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಹರಸಾಹಸ ಮಾಡಿ ರುಕ್ಕುವನ್ನು ತರಲು ಪ್ರಯತ್ನ ಮಾಡುತ್ತಿದ್ದಾಳೆ. ಅವಳಿಗೆ ಮುರಾರಿ ಸಹಾಯ ಮಾಡುತ್ತಿದ್ದಾನೆ. ಇಂದಿನ ಸಂಚಿಕೆಯಲ್ಲಿ ಅವರಿಬ್ಬರೂ ರುಕ್ಕು ಮನೆಗೆ ಹೋಗಿದ್ದಾರೆ.

ಹೊಸ ಅವತಾರದಲ್ಲಿ ಚಾರು, ಮುರಾರಿ
ಹೊಸ ಅವತಾರದಲ್ಲಿ ಚಾರು, ಮುರಾರಿ (ಕಲರ್ಸ್‌ ಕನ್ನಡ)

ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಹರಸಾಹಸ ಮಾಡಿ ರುಕ್ಕುವನ್ನು ತರಲು ಪ್ರಯತ್ನ ಮಾಡುತ್ತಿದ್ದಾಳೆ. ಅವಳಿಗೆ ಮುರಾರಿ ಸಾತ್ ನೀಡುತ್ತಿದ್ದಾನೆ. ಆದರೆ ಮುರಾರಿ ಇಂತಹ ವಿಷಯದಲ್ಲಿ ಬಹಳ ಭಯಪಡುತ್ತಾನೆ. ಅವನಿಗೆ ತಾವು ಇಲ್ಲಿ ಏನು ಮಾಡಲು ಹೊರಟಿದ್ದೇವೆ ಎಂಬ ವಿಷಯವನ್ನೇ ತಿಳಿಸದೆ ಚಾರು ಅವನನ್ನು ಕರೆದುಕೊಂಡು ಬಂದಿದ್ದಳು ಇದರಿಂದ ಮುರಾರಿಗೆ ಇನ್ನಷ್ಟು ಭಯ ಕಾಡುತ್ತಿತ್ತು. ಆದರೆ ಈಗ ಅವನಿಗೆ ಎಲ್ಲ ಅರ್ಥ ಆಗಿದೆ. ರುಕ್ಕುವನ್ನು ಕರೆದುಕೊಂಡು ಹೋಗುವುದು ಸುಲಭವಲ್ಲ ಎಂಬ ಮಾತೂ ಅವನಿಗೆ ನೆನಪಿದೆ. ಆದರೂ ಧೈರ್ಯ ಮಾಡಿ ರೆಡಿಯಾಗಿದ್ದಾನೆ.

ರುಕ್ಕು ಯಾರೋ ಮನೆಗೆ ಸರ್ವೆ ಮಾಡಲು ಬರುವ ರೀತಿಯಲ್ಲಿ ರೆಡಿಯಾಗಿದ್ದಾಳೆ. ಅವಳ ಜೊತೆ ಇವನೂ ಪ್ಯಾಂಟ್‌ ಶರ್ಟ್‌ ಹಾಕಿ ರೆಡಿಯಾಗಿದ್ದಾನೆ. ಇದೆಲ್ಲವೂ ಚಾರುದೇ ಪ್ಲ್ಯಾನ್ ಆಗಿದೆ. ಮುರಾರಿ ಹೇಳುತ್ತಾನೆ “ಅತ್ಗೆ ನನಗೆ ಯಾವಾಗಲೂ ಪಂಚೆ, ಶಲ್ಯ ಹಾಕಿಕೊಂಡು ಪೂಜೆ ಹೋಗೋದು ಮಾತ್ರ ಗೊತ್ತಿತ್ತು. ಆದರೆ ಇದು ಅದಕ್ಕಿಂತ ಸುಲಭ ಅನಿಸ್ತಿದೆ” ಎಂದು. ಆಗ ಚಾರು ನಗುತ್ತಾಳೆ. ಇಲ್ಲ ಮುರಾರಿ ಎಲ್ಲವೂ ಕಷ್ಟವೇ ಆದರೆ ನಾವು ಮನಸಿಟ್ಟು ಮಾಡಿದರೆ ಯಾವುದೂ ಕಷ್ಟವಲ್ಲ ಎಂದು ಹೇಳುತ್ತಾಳೆ.

ಆಗ ಮುರಾರಿಗೆ ಮತ್ತೊಂದು ಪ್ರಶ್ನೆ ಮೂಡುತ್ತದೆ. “ಅತ್ಗೆ ನಾವೀಗ ಎಲ್ಲಿಗೆ ಹೋಗ್ತಾ ಇದೀವಿ? ಹೋಗಿ ನಾನು ಅಲ್ಲಿ ಏನ್ ಮಾತಾಡ್ಬೇಕು?” ಎಂದು ಪ್ರಶ್ನೆ ಮಾಡುತ್ತಾನೆ. ಆಗ ಚಾರು ಹೇಳ್ತಾನೆ “ನೀನು ಸುಮ್ಮನೆ ನನ್ನ ಜೊತೆ ಬಂದ್ರೆ ಸಾಕು. ನಾನು ಎಲ್ಲದಕ್ಕೂ ಉತ್ತರ ನೀಡ್ತೀನಿ” ಎಂದು. ಆಗ ಅವನು ಸುಮ್ಮನೆ ತಲೆ ಆಡಿಸುತ್ತಾನೆ. ಇನ್ನು ಹಾಗೇ ಮುಂದೆ ಹೋಗುತ್ತಾ ಇರುವಾಗ ಅಲ್ಲಿ ಒಂದು ಮನೆ ಸಿಗುತ್ತದೆ. ಅವರ ಪ್ರಕಾರ ಅದೇ ರುಕ್ಕು ಇರುವ ಮನೆಯಾಗಿರುತ್ತದೆ. ರುಕ್ಕು ಮನೆಯ ಹತ್ತಿರ ಹೋಗುತ್ತಿದ್ದಂತೆ ಮತ್ತೆ ಮುರಾರಿಗೆ ಭಯ ಆರಂಭವಾಗುತ್ತದೆ.

ಅಲ್ಲಿ ಹೋಗಿ ನಾವು ಪೇಟಿಯಿಂದ ಬಂದವರು ಎಂದು ಹೇಳುತ್ತಾರೆ. ಆಗ ನಮಗೂ ಯಾರಾದರೂ ಪೇಟೆಯಿಂದ ಬರುತ್ತಾರೆ ಅಂತ ಗೊತ್ತು. ಆದ್ರೆ ನಾವು ಅವರನ್ನು ಭೇಟಿ ಮಾಡೋಕೆ ನಿಂತಿಲ್ಲ ಭೇಟೆ ಆಡೋಕೆ ನಿಂತಿದಿವಿ ಎಂದು ಒಬ್ಬಾತ ಹೇಳುತ್ತಾನೆ.

ರಾಮಾಚಾರಿ ಧಾರಾವಾಹಿ

ರಾಮಾಚಾರಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.

ರಾಮಾಚಾರಿ ಧಾರಾವಾಹಿ ಪಾತ್ರವರ್ಗ

ಮೌನ ಗುಡ್ಡೆ ಮನೆ - ಚಾರು

ರಿತ್ವಿಕ್ ಕ್ರಪಾಕರ್ - ರಾಮಾಚಾರಿ

ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)

ಚಿ ಗುರುದತ್ - ಜಯಶಂಕರ್

ಶಂಕರ್ ಅಶ್ವಥ್‌ - ನಾರಾಯಣಾಚಾರಿ

ಐಶ್ವರ್ಯ ವಿನಯ್‌ - ವೈಶಾಖ

ಅಂಜಲಿ ಸುಧಾಕರ್ - ಜಾನಕಿ

Whats_app_banner