ಸೀತಾರಾಮ ಧಾರಾವಾಹಿ ಮುಕ್ತಾಯ, ಕೊನೆಯ ದಿನದ ಶೂಟಿಂಗ್‌ ಫೋಟೋನೊಂದಿಗೆ ಭಾವುಕರಾದ ಕಲಾವಿದರು
ಕನ್ನಡ ಸುದ್ದಿ  /  ಮನರಂಜನೆ  /  ಸೀತಾರಾಮ ಧಾರಾವಾಹಿ ಮುಕ್ತಾಯ, ಕೊನೆಯ ದಿನದ ಶೂಟಿಂಗ್‌ ಫೋಟೋನೊಂದಿಗೆ ಭಾವುಕರಾದ ಕಲಾವಿದರು

ಸೀತಾರಾಮ ಧಾರಾವಾಹಿ ಮುಕ್ತಾಯ, ಕೊನೆಯ ದಿನದ ಶೂಟಿಂಗ್‌ ಫೋಟೋನೊಂದಿಗೆ ಭಾವುಕರಾದ ಕಲಾವಿದರು

ಸೀತಾರಾಮ ಧಾರಾವಾಹಿ ಮುಕ್ತಾಯದ ಹಂತದಲ್ಲಿದೆ. ಸೀರಿಯಲ್‌ನ ಕಲಾವಿದರು ಕೊನೆಯ ದಿನದ ಶೂಟಿಂಗ್‌ ಮುಗಿಸಿ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಜತೆಗೆ, ಸುದೀರ್ಘ ಟಿಪ್ಪಣಿಯನ್ನೂ ಹಂಚಿಕೊಂಡಿದ್ದಾರೆ. ನಿನ್ನೆ (ಮೇ 20) ಸೀರಿಯಲ್‌ನ ಕೊನೆಯ ಶೂಟಿಂಗ್‌ ಮುಗಿದಿದೆ. ಇನ್ನು ಕೆಲವೇ ದಿನದಲ್ಲಿ ಈ ಸೀರಿಯಲ್‌ ಚಾನೆಲ್‌ನಲ್ಲಿ ಶುಭಂ ಆಗಲಿದೆ.

ಸೀತಾರಾಮ ಧಾರಾವಾಹಿ ಮುಕ್ತಾಯ, ಕೊನೆಯ ದಿನದ ಶೂಟಿಂಗ್‌ ಫೋಟೋನೊಂದಿಗೆ ಭಾವುಕರಾದ ಕಲಾವಿದರು
ಸೀತಾರಾಮ ಧಾರಾವಾಹಿ ಮುಕ್ತಾಯ, ಕೊನೆಯ ದಿನದ ಶೂಟಿಂಗ್‌ ಫೋಟೋನೊಂದಿಗೆ ಭಾವುಕರಾದ ಕಲಾವಿದರು

ಸೀತಾರಾಮ ಧಾರಾವಾಹಿ ಮುಕ್ತಾಯದ ಹಂತದಲ್ಲಿದೆ. ಸೀರಿಯಲ್‌ನ ಕಲಾವಿದರು ಕೊನೆಯ ದಿನದ ಶೂಟಿಂಗ್‌ ಮುಗಿಸಿ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಜತೆಗೆ, ಸುದೀರ್ಘ ಟಿಪ್ಪಣಿಯನ್ನೂ ಹಂಚಿಕೊಂಡಿದ್ದಾರೆ. ನಿನ್ನೆ (ಮೇ 20) ಸೀರಿಯಲ್‌ನ ಕೊನೆಯ ಶೂಟಿಂಗ್‌ ಮುಗಿದಿದೆ. ಇನ್ನು ಕೆಲವೇ ದಿನದಲ್ಲಿ ಈ ಸೀರಿಯಲ್‌ ಚಾನೆಲ್‌ನಲ್ಲಿ ಶುಭಂ ಆಗಲಿದೆ. ಕೊನೆಯ ದಿನದ ಶೂಟಿಂಗ್‌ ಫೋಟೋದಲ್ಲಿ ಗಗನ್‌ ಚಿನ್ನಪ್ಪ, ವೈಷ್ಣವಿ ಗೌಡ, ಪದ್ಮಕಲಾ ಡಿ.ಎಸ್‌. ಕಲಾ ಗಂಗೋತ್ರಿ ಮಂಜು, ಮುಖ್ಯಮಂತ್ರಿ ಚಂದ್ರು ಮುಂತಾದವರು ಇದ್ದಾರೆ. ಜತೆಗೆ, ಪೂಜಾ ಲೋಕೇಶ್‌, ಜಯದೇವ್‌ ಮೋಹನ್‌, ಅಶೋಕ್‌ ಶರ್ಮಾ, ರೀತು ಸಿಂಗ್‌ ನೇಪಾಳ, ಪೂರ್ಣಚಂದ್ರ ಮುಂತಾದವರೂ ಕೊನೆಯ ದಿನದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದು, ಫೋಟೋಗೆ ಪೋಸ್‌ ನೀಡಿದ್ದಾರೆ.

ಸೀತಾ ರಾಮ " ಧಾರಾವಾಹಿಯ ಕಡೆಯ ದಿನದ ಶೂಟಿಂಗ್ನಲ್ಲಿ ಪ್ರತಿಯೊಬ್ಬ ಕಲಾವಿದರಿಗೂ ಜೀ ವಾಹಿನಿಯಿಂದ ಪ್ರೀತಿಯ ಗೌರವ. ಧನ್ಯವಾದಗಳು ಜೀ ವಾಹಿನಿಗೆ ನನಗೂ ಅರಿವಿರದ ಕಲಾವಿದೆಗೆ ಅದ್ಭುತ ಅವಕಾಶವಿಟ್ಟು ಅದ್ಭುತ ಪಾತ್ರ ನೀಡಿದಕ್ಕೆ. ಧನ್ಯವಾದಗಳು ಡೈರೆಕ್ಟರ್ ಮಧುಸೂದನ್ ಸರ್, ಮಂಜು ಸರ್, ವಸಂತ್ ಸರ್, ಮೋಹನ್ ಸರ್, ಸುಧೀಂದ್ರ ಸರ್. ಧನ್ಯವಾದಗಳು ಧಾರಾವಾಹಿಯ ಎಲ್ಲಾ ಪ್ರೀತಿಯ ಕಲಾವಿದರಿಗೆ. ಧನ್ಯವಾದಗಳು ಪಾತ್ರಕ್ಕೆ ಸಾಗರದಷ್ಟು ಪ್ರೀತಿ ಸುರಿದ ಕರುನಾಡ ಕನ್ನಡಿಗರಿಗೆ" ಎಂದು ಶಶಿಕಲಾ ಸುನಿಲ್‌ ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ. ಅಂದಹಾಗೆ, ಸೀತಾರಾಮ ಸೀರಿಯಲ್‌ನ ಕೊನೆಯ ಎಪಿಸೋಡ್‌ಗಳಲ್ಲಿ ಕೊಲೆಗಾರರು ಯಾರು ಎಂದು ತಿಳಿದುಬರಲಿದೆ.

ಈ ಧಾರಾವಾಹಿ ಮುಗಿಯುವ ಸುದ್ದಿ ಕೇಳಿ ಸೀತಾರಾಮ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದಾರೆ. ಸೀರಿಯಲ್‌ ಕುರಿತು ಭಾವುಕವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಬರೆಯುತ್ತಿದ್ದಾರೆ. "ಈ ಧಾರಾವಾಹಿ ನಗರ ಮತ್ತು ಗ್ರಾಮೀಣ ಭಾಗದವರಿಗೆ ಆಪ್ತವಾಗಿತ್ತು. ಇದು ವಿಶೇಷವಾದ ಕಥೆ ಹೊಂದಿತ್ತು. ಈ ಸೀರಿಯಲ್‌ನ ಸಮಯ ಬದಲಾಯಿಸಿದಾಗ ನನಗೆ ಬೇಸರವಾಗಿತ್ತು" " ಇದು ನನ್ನ ಅಚ್ಚುಮೆಚ್ಚಿನ ಸೀರಿಯಲ್‌. ಎಲ್ಲಾ ಕಲಾವಿದರಿಗೂ ಒಳ್ಳೆಯದಾಗಲಿ" "ಇದು ತುಂಬಾ ಒಳ್ಳೆಯ ಸೀರಿಯಲ್‌. ಪ್ರೈಮ್‌ ಟೈಮ್‌ನಲ್ಲಿ ಪ್ರಸಾರವಾಗುವ ಸೀರಿಯಲ್‌ ಅನ್ನು ಬದಲಾಯಿಸಿ ಜನರನ್ನು ಮೋಸ ಮಾಡಿದ್ದಾರೆ. ಈಗ ಈ ಸೀರಿಯಲ್‌ ಮುಗಿಯಲು ಇಂತಹ ನಿರ್ಧಾರವೇ ಕಾರಣ" ಎಂದೆಲ್ಲ ಜನರು ಕಾಮೆಂಟ್‌ ಮಾಡುತ್ತಿದ್ದಾರೆ.

ಹೊಸ ಧಾರಾವಾಹಿ ಬರುವ ಸಮಯದಲ್ಲಿ ಯಾವ ಧಾರಾವಾಹಿ ಕೊನೆಗೊಳ್ಳುತ್ತದೆ ಎಂಬ ಪ್ರಶ್ನೆ ಎದುರಾಗುತ್ತದೆ. ಯಾಕೆಂದರೆ, ಸೀರಿಯಲ್‌ ಟೈಮ್‌ ಸ್ಲಾಟ್‌ಗೆ ತಕ್ಕಂತೆ ಒಂದು ಧಾರಾವಾಹಿ ದಾರಿ ಬಿಟ್ಟುಕೊಡಲೇಬೇಕು. ಜೀ ಕನ್ನಡ ವಾಹಿನಿಯಲ್ಲಿ ಹೊಸ ಸೀರಿಯಲ್‌ ಆಗಮಿಸುವ ಸುದ್ದಿ ಬಂದಿದೆ. ಕಿರಣ್‌ ರಾಜ್‌ ನಟನೆಯ ಈ ಸೀರಿಯಲ್‌ ಬರುವ ಸಮಯದಲ್ಲಿ ಯಾವ ಸೀರಿಯಲ್‌ ಮುಗಿಯಲಿದೆ ಎಂಬ ಪ್ರಶ್ನೆ ಎದುರಾಗಿದೆ. ಪುಟ್ಟಕ್ಕನ ಮಕ್ಕಳು, ಸೀತಾರಾಮ ಸೇರಿದಂತೆ ಯಾವ ಸೀರಿಯಲ್‌ ಕೊನೆಯಾಗಲಿದೆ ಎಂದು ಪ್ರೇಕ್ಷಕರು ಚರ್ಚಿಸುತ್ತಿದ್ದಾರೆ. ಯಾವ ಟೈಮ್‌ ಸ್ಲಾಟ್‌ನಲ್ಲಿ ಕಿರಣ್‌ ರಾಜ್‌ ನಟನೆಯ ಕರ್ಣ ಸೀರಿಯಲ್‌ ಬರಲಿದೆ ಎನ್ನುವುದೂ ಇನ್ನಷ್ಟೇ ತಿಳಿದುಬರಬೇಕಿದೆ.

ಜೀ ಕನ್ನಡ ವಾಹಿನಿಯ ಹೊಸ ಕರ್ಣ ಸೀರಿಯಲ್‌ಗೆ ಯಾವ ಸೀರಿಯಲ್‌ ದಾರಿ ಮಾಡಿಕೊಡಬಹುದು ಎನ್ನುವ ಕುತೂಹಲ ಎಲ್ಲರಲ್ಲಿಯೂ ಇತ್ತು. ಪುಟ್ಟಕ್ಕನ ಮಕ್ಕಳು, ಅಮೃತಧಾರೆ ಮುಗಿಯವುದೇ ಎಂಬ ಕುತೂಹಲ ಇತ್ತು. ಈಗ ಕರ್ಣ ಸೀರಿಯಲ್‌ಗೆ ಸೀತಾರಾಮ ಸೀರಿಯಲ್‌ ದಾರಿ ಮಾಡಿಕೊಟ್ಟಿದೆ. ಈ ಸೀರಿಯಲ್‌ ಮುಗಿಯಬಹುದು ಎಂದು ಸಾಕಷ್ಟು ಜನರು ಅಂದುಕೊಂಡಿದ್ದರು. "ಸೀತಾರಾಮ ಧಾರಾವಾಹಿಯ ಕಥೆಯಲ್ಲಿನ ಚುರುಕುತನ ಕೊನೆಗೊಂಡಿದೆ. ಕಥೆಯನ್ನು ಆಳವಾಗಿ ತಿಳಿಸುವ ಮತ್ತು ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಈ ಧಾರಾವಾಹಿ ಸೋಲುತ್ತಿದೆ. ಸಿಹಿಯ ಪಾತ್ರವನ್ನು ಕೊನೆಗೊಳಿಸಿದಾಗಿನಿಂದ ವೀಕ್ಷಕರಿಗೆ ಧಾರಾವಾಹಿಯ ಬಗ್ಗೆ ಕುತೂಹಲ ಇಲ್ಲದಂತಾಗಿದೆ. ಸೀತಾ ಯಾವಾಗಲೂ ಸುಬ್ಬಿ ಬಳಿ ಇರೋದೊಂದು ಬಿಟ್ಟರೆ, ರಾಮನ ಜತೆ ಇರುವ ಮೊದಲಿನ ಬಂಧ ಈಗ ಕಾಣಿಸುತ್ತಿಲ್ಲ. ಮನರಂಜನೆ ಸಿಗುತ್ತಿದೆ ಎಂದರೆ ಮಾತ್ರ ವೀಕ್ಷಕರು ಇಷ್ಟಪಟ್ಟು ನೋಡುತ್ತಾರೆ, ಆದರೆ ಈಗ ಧಾರಾವಾಹಿ ನೀರಸವಾಗಿದೆ" ಎಂದೆಲ್ಲ ಜನರು ಅಭಿಪ್ರಾಯಪಟ್ಟಿದ್ದರು. ಈಗ ಜನರು ಅಂದುಕೊಂಡಂತೆ ಸೀತಾರಾಮ ಸೀರಿಯಲ್‌ ಮುಕ್ತಾಯಗೊಳ್ಳುತ್ತಿದೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in