Seetha Rama Serial: ಅಲ್ಲಿ ಭಾರ್ಗವಿ ವಿರುದ್ಧ ಸತ್ಯ- ಅಶೋಕ ತೊಡೆತಟ್ಟಿದರೆ, ಇಲ್ಲಿ ಸಿಹಿ ಮಾತು ಸುಬ್ಬಿಗೆ ಕೇಳಿಸ್ತು, ಕಣ್ಣಿಗೂ ಕಂಡಳು!
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಅಲ್ಲಿ ಭಾರ್ಗವಿ ವಿರುದ್ಧ ಸತ್ಯ- ಅಶೋಕ ತೊಡೆತಟ್ಟಿದರೆ, ಇಲ್ಲಿ ಸಿಹಿ ಮಾತು ಸುಬ್ಬಿಗೆ ಕೇಳಿಸ್ತು, ಕಣ್ಣಿಗೂ ಕಂಡಳು!

Seetha Rama Serial: ಅಲ್ಲಿ ಭಾರ್ಗವಿ ವಿರುದ್ಧ ಸತ್ಯ- ಅಶೋಕ ತೊಡೆತಟ್ಟಿದರೆ, ಇಲ್ಲಿ ಸಿಹಿ ಮಾತು ಸುಬ್ಬಿಗೆ ಕೇಳಿಸ್ತು, ಕಣ್ಣಿಗೂ ಕಂಡಳು!

Seetha Rama Serial Today Episode: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಧಾರಾವಾಹಿಯಲ್ಲಿ, ಸಿಹಿ ಸಾವಿನ ಹಿಂದಿನ ಸತ್ಯ ತಿಳಿಯಲು ಸತ್ಯ ಚಿಕ್ಕಪ್ಪ ಮತ್ತು ಅಶೋಕ ಒಂದಾಗಿದ್ದಾರೆ. ಮತ್ತೊಂದು ಕಡೆ, ಸಿಹಿಯ ಮಾತು ಸುಬ್ಬಿಗೂ ಕೇಳಿದೆ. ಹಾಗಾದ್ರೆ, ಇವರಿಬ್ಬರೂ ಒಂದಾಗ್ತಾರಾ? ಮುಂಬರುವ ಸಂಚಿಕೆಯಲ್ಲಿ ಇದು ರಿವೀಲ್‌ ಆಗಲಿದೆ.

ಭಾರ್ಗವಿ ವಿರುದ್ಧ ಸತ್ಯ- ಅಶೋಕ ತೊಡೆತಟ್ಟಿದರೆ, ಸಿಹಿ ಮಾತು ಸುಬ್ಬಿಗೂ ಕೇಳಿಸಿದೆ
ಭಾರ್ಗವಿ ವಿರುದ್ಧ ಸತ್ಯ- ಅಶೋಕ ತೊಡೆತಟ್ಟಿದರೆ, ಸಿಹಿ ಮಾತು ಸುಬ್ಬಿಗೂ ಕೇಳಿಸಿದೆ

Seetha Rama Serial 07 Jan 2025 Episode: ಸೀತಾ ರಾಮ ಧಾರಾವಾಹಿಯಲ್ಲಿ ಇದೀಗ ಸಿಹಿ ಸಾವಿನ ಅನುಮಾನದ ಹುತ್ತ ಅಶೋಕ ಮತ್ತು ಸತ್ಯ ಚಿಕ್ಕಪ್ಪನ ಮನಸ್ಸಲ್ಲಿ ಕಗ್ಗಂಟಾಗಿ ಉಳಿದಿದೆ. ಇದು ಸಹಜ ಸಾವಲ್ಲ, ಅಪಘಾತದ ಹಿಂದೆ ಯಾರದ್ದೋ ಕೈವಾಡ ಇದೆ ಎಂದು ಈ ಹಿಂದೆಯೇ ಅಶೋಕ ಅನುಮಾನ ವ್ಯಕ್ತಪಡಿಸಿದ್ದ. ಅಷ್ಟೇ ಅಲ್ಲ ರಾಮ್‌ ಮತ್ತು ಸೂರಿ ಬಳಿಯೂ ಹೇಳಿಕೊಂಡಿದ್ದ. ಆದರೆ, ಅವರ್ಯಾರೂ ಅಶೋಕನ ಮಾತನ್ನು ನಂಬಿರಲಿಲ್ಲ. ಇದೀಗ ಇದೇ ಅನುಮಾನ ಸತ್ಯ ಚಿಕ್ಕಪ್ಪನಿಗೂ ಬಂದಿದೆ. ಅದರಂತೆ, ಸಿಹಿಯ ಸಾವಿನ ತನಿಖೆಗೆ ಇಳಿದಿದ್ದಾನೆ.

ಇನ್ನೊಂದು ಕಡೆ, ಅಸ್ಥಿ ವಿಸರ್ಜನೆ ಸಲುವಾಗಿ ದೇವಸ್ಥಾನಕ್ಕೆ ರಾಮನ ಜತೆಗೆ ಸೀತಾ ಸಹ ಆಗಮಿಸಿದ್ದಾಳೆ. ಆದರೆ, ಅಚ್ಚರಿ ರೀತಿಯಲ್ಲಿ ಅಸ್ಥಿ ಕಾಣಿಸುತ್ತಿಲ್ಲ. ಇನ್ನೊಂದು ಬದಿಯಲ್ಲಿ ದೇವಸ್ಥಾನದ ಅಂಗಳದಲ್ಲಿಯೇ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದೆ. ಆ ಕಾರ್ಯಕ್ರಮದಲ್ಲಿ ಸುಬ್ಬಿ, ಶ್ರೀಕೃಷ್ಣನ ವೇಷ ಹಾಕಿ ಕುಣಿದಿದ್ದಾಳೆ. ಸೀತಾ ಸಹ ಅಲ್ಲಿಗೆ ಬಂದು ಮಗಳು ಸಿಹಿಯೇ ಕುಣಿಯುತ್ತಿದ್ದಾಳೆ ಎಂದು ಕಣ್ತುಂಬಿಕೊಂಡು, ತಾನೂ ಸಹ ವೇದಿಕೆ ಮೇಲೆ ಏರಿ ಸುಬ್ಬಿ ಜತೆಗೆ ನಂದ ನಂದನಾ ಶ್ರೀಕೃಷ್ಣ ಹಾಡಿಗೆ ಹೆಜ್ಜೆ ಹಾಕಿದ್ದಾಳೆ.

ಭಾರ್ಗವಿ ಎದೆಯಲ್ಲಿ ನಡುಕ

ಇತ್ತ ದೇಸಾಯಿ ಮನೆಯಲ್ಲಿ ಸತ್ಯನ ವರ್ತನೆ ಕಂಡ ಭಾರ್ಗವಿ, ನೇರವಾಗಿ ರುದ್ರಪ್ರತಾಪ್‌ಗೆ ಫೋನ್‌ ಮಾಡಿ, ಸಿಹಿ ಅಪಘಾತವಾದ ಸ್ಥಳದಲ್ಲಿನ ಸಿಸಿಟಿವಿ ಫೂಟೇಜ್‌ಗಳನ್ನು ಡಿಲಿಟ್‌ ಮಾಡಿಸಬೇಕು ಎಂದಿದ್ದಾಳೆ. ಆ ಕೆಲಸ ಆವತ್ತೇ ಆಗಿದೆ ಎಂದು ರುದ್ರಪ್ರತಾಪ್‌ ಹೇಳಿದ್ದಾನೆ. ಇದರಿಂದ ನಿಟ್ಟುಸಿರು ಬಿಟ್ಟಿದ್ದಾಳೆ ಭಾರ್ಗವಿ. ಈ ನಡುವೆಯೇ ಅಶೋಕ್‌ಗೆ ಫೋನ್‌ ಮಾಡಿದ ಸತ್ಯ, ಸಿಹಿ ಅಪಘಾತ ಆದ ದಿನದ ಆ ರಸ್ತೆಯಲ್ಲಿನ ಎಲ್ಲ ಸಿಸಿಟಿವಿ ಫೂಟೇಜ್‌ ಡಿಲಿಟ್‌ ಆಗಿದೆ.. ಅದನ್ನ ರಿಟ್ರಿವ್‌ ಮಾಡಿಸೋದು ಹೇಗೆ ಎಂದು ಅಶೋಕನನ್ನು ಹೇಳಿದ್ದಾನೆ.

ಸಾವಿನ ಸತ್ಯ ತಿಳಿಯಲು ಒಂದಾದ ಅಶೋಕ- ಸತ್ಯ

ಆ ಕಡೆಯಿಂದ, ಅಂದರೆ ಸಿಹಿಯದ್ದು ಸಹಜ ಸಾವಲ್ಲ, ಪ್ಲಾನ್‌ಡ್‌ ಮರ್ಡರ್‌ ಎಂದು ನಿಮಗೂ ಅನಿಸಿದ್ಯಾ ಚಿಕ್ಕಪ್ಪ ಎಂದು ಅಶೋಕ ಕೇಳಿದ್ದಾನೆ. ಹೌದು, ಇದರಲ್ಲಿ ಏನೋ ಇದೆ ಎಂದಿದ್ದಾನೆ ಸತ್ಯ. ಈ ಬಗ್ಗೆ ರಾಮ್‌ಗೆ ಮತ್ತು ತಾತನಿಗೆ ಹೇಳಿದ್ರೂ ಅವರು ನನ್ನ ಮಾತು ನಂಬಲಿಲ್ಲ, ಈಗ ನೀವಾದ್ರೂ ನಂಬ್ತಿದ್ದೀರಲ್ಲ ಅಷ್ಟೇ ಸಾಕು ಎಂದಿದ್ದಾನೆ. ಸಿಹಿ ಸಾವಿಗೆ ನ್ಯಾಯ ಕೊಡಿಸಬೇಕು. ನಾವಿಬ್ಬರೂ ಸೇರಿ ಒಟ್ಟಿಗೆ ಹೋರಾಟೋಣ ಎಂದು ಅಶೋಕ್‌ಗೆ ಹೇಳಿದ್ದಾನೆ ಸತ್ಯ. ಅಲ್ಲಿಗೆ ಈ ಜೋಡಿ ಒಂದಾಗಿದೆ. ಇನ್ಮುಂದೆ ಭಾರ್ಗವಿಯ ಒಂದೊಂದೆ ಮುಖವಾಡ ಕಳಚುವ ಸಾಧ್ಯತೆ ಇದೆ.

ಸುಬ್ಬಿ ಕಣ್ಣಿಗೆ ಬಿದ್ದ ಸಿಹಿ

ನಾನು ಯಾರಿಗೂ ಕಾಣಿಸ್ತಿಲ್ಲ. ನಾನು ಮಾತನಾಡಿದ್ದೂ ಯಾರಿಗೂ ಕೇಳಿಸ್ತಿಲ್ಲ. ನಾನು ಎಲ್ಲರಿಗೂ ಕಾಣೋ ಥರ ಮಾಡು ದೇವರೇ ಎಂದು ಕೇಳಿಕೊಂಡಿದ್ದಾಳೆ ಸಿಹಿ. ದೇವಸ್ಥಾನದ ಆವರಣದಲ್ಲಿ ಸರ್ಕಸ್‌ ಮಾಡ್ತಿದ್ದಾಳೆ ಸುಬ್ಬಿ. ಅದೇ ಸುಬ್ಬಿಯನ್ನು ನೋಡಿದ ಸಿಹಿ, ಹೇ ನೀನು ಕಳ್ಳಿ ಅಲ್ವಾ? ಎಂದಿದ್ದಾಳೆ. ಸಿಹಿ ಮಾತು ಸುಬ್ಬಿಗೂ ಕೇಳಿಸಿದೆ. ಸಿಹಿಯೂ ಕಂಡಿದ್ದಾಳೆ. ಅಲ್ಲಿಗೆ ನಾನು ಇವಳಿಗೆ ಕಾಣಿಸ್ತಿದ್ದೀನಿ ಎಂದುಕೊಂಡಿದ್ದಾಳೆ ಸಿಹಿ. ಮುಂದೇನಾಗಲಿದೆ ಎಂಬುದು ನಾಳಿನ ಏಪಿಸೋಡ್‌ನಲ್ಲಿ ತಿಳಿಯಲಿದೆ.

ಧಾರಾವಾಹಿ ಪಾತ್ರವರ್ಗ

ಧಾರಾವಾಹಿ: ಸೀತಾ ರಾಮ

ನಿರ್ದೇಶಕ: ಮಧುಸೂಧನ್‌

ಗಗನ್‌ ಚಿನ್ನಪ್ಪ: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಮೇಘನಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)

Whats_app_banner