Seetha Rama Serial: ಸಿಹಿಯ ಹೊಸ ಲೋಕಕ್ಕೆ ಸುಬ್ಬಿಯ ಪದಾರ್ಪಣೆ; ಕಿಲಾಡಿ ಜೋಡಿಯೀಗ ಬೆಸ್ಟ್‌ ಫ್ರೆಂಡ್ಸ್‌
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಸಿಹಿಯ ಹೊಸ ಲೋಕಕ್ಕೆ ಸುಬ್ಬಿಯ ಪದಾರ್ಪಣೆ; ಕಿಲಾಡಿ ಜೋಡಿಯೀಗ ಬೆಸ್ಟ್‌ ಫ್ರೆಂಡ್ಸ್‌

Seetha Rama Serial: ಸಿಹಿಯ ಹೊಸ ಲೋಕಕ್ಕೆ ಸುಬ್ಬಿಯ ಪದಾರ್ಪಣೆ; ಕಿಲಾಡಿ ಜೋಡಿಯೀಗ ಬೆಸ್ಟ್‌ ಫ್ರೆಂಡ್ಸ್‌

Seetha Rama Serial Today Episode: ಜೀ ಕನ್ನಡದ ಸೀತಾ ರಾಮ ಧಾರಾವಾಹಿಯಲ್ಲಿ ಇದೀಗ ಸಿಹಿ ಮತ್ತು ಸುಬ್ಬಿ ಒಂದಾಗಿದ್ದಾರೆ. ಯಾರಿಗೂ ಕಾಣದ ಸಿಹಿ, ಸುಬ್ಬಿಗೆ ಮಾತ್ರ ಕಾಣಿಸುತ್ತಿರುವುದು, ಆಕೆಗೂ ಅಚ್ಚರಿ ತಂದಿದೆ. ಇದರ ಜತೆಗೆ ನಾವಿಬ್ಬರೂ ಫ್ರೆಂಡ್ಸ್‌ ಆಗೋಣ್ವಾ ಎಂದ ಸಿಹಿ, ಸುಬ್ಬಿಯತ್ತ ಕೈ ಚಾಚಿದ್ದಾಳೆ. ಸುಬ್ಬಿಯೂ ಅಳುಕಿನಲ್ಲಿಯೇ ಸಿಹಿಯತ್ತ ಕೈವೊಡ್ಡಿದ್ದಾಳೆ.

ಸೀತಾ ರಾಮ ಧಾರಾವಾಹಿ: ಸುಬ್ಬಿ ಹೊಸಲೋಕಕ್ಕೆ- ಸಿಹಿಯ ಪದಾರ್ಪಣೆ
ಸೀತಾ ರಾಮ ಧಾರಾವಾಹಿ: ಸುಬ್ಬಿ ಹೊಸಲೋಕಕ್ಕೆ- ಸಿಹಿಯ ಪದಾರ್ಪಣೆ

Seetha Rama Serial 8th Jan 2025 Episode: ನಾನು ಯಾರಿಗೂ ಕಾಣಿಸ್ತಿಲ್ಲ. ನಾನು ಮಾತನಾಡಿದ್ದೂ ಯಾರಿಗೂ ಕೇಳಿಸ್ತಿಲ್ಲ. ನಾನು ಎಲ್ಲರಿಗೂ ಕಾಣೋ ಥರ ಮಾಡು ದೇವರೇ ಎಂದು ಕೇಳಿಕೊಂಡಿದ್ದಾಳೆ ಸಿಹಿ. ಇತ್ತ ದೇವಸ್ಥಾನದ ಆವರಣದಲ್ಲಿ ಸರ್ಕಸ್‌ ಮಾಡಿದ್ದಾಳೆ ಸುಬ್ಬಿ. ಅದೇ ಸುಬ್ಬಿಯನ್ನು ನೋಡಿದ ಸಿಹಿ, ಹೇ ನೀನು ಕಳ್ಳಿ ಅಲ್ವಾ? ಎಂದಿದ್ದಾಳೆ. ಸಿಹಿ ಮಾತು ಸುಬ್ಬಿಗೂ ಕೇಳಿಸಿದೆ. ಸಿಹಿಯೂ ಕಂಡಿದ್ದಾಳೆ. ಅಲ್ಲಿಗೆ ನಾನು ಇವಳಿಗೆ ಕಾಣಿಸ್ತಿದ್ದೀನಿ ಎಂದುಕೊಂಡಿದ್ದಾಳೆ ಸಿಹಿ. ಹೊಂಡದ ಬಳಿ ಸಿಹಿ, ಸುಬ್ಬಿಯ ಮಾತುಕತೆಯೂ ನಡೆದಿದೆ.

ಸಿಹಿ ಸುಬ್ಬಿ ಮುಖಾಮುಖಿ

ನಾನು ಯಾರಿಗೂ ಕಾಣಿಸಲ್ಲ, ನಿನಗಷ್ಟೇ ಕಾಣಿಸ್ತಿದಿನಿ ಅನ್ನೋದನ್ನೂ ಸುಬ್ಬಿಗೆ ಹೇಳಿದ್ದಾಳೆ ಸಿಹಿ. ನೀರಲ್ಲಿ ಕಾಣದ ತನ್ನ ಬಿಂಬ ತೋರಿಸಿ ಸುಬ್ಬಿಗೂ ಅಚ್ಚರಿ ಮೂಡಿಸಿದ್ದಾಳೆ. ಇನ್ನೊಂದು ಕಡೆ, ಸಿಹಿ ಎಷ್ಟು ಮುದ್ದಾಗಿ ಡಾನ್ಸ್‌ ಮಾಡಿದಳು ಗೊತ್ತಾ? ಎಂದು ರಾಮ್‌ ಬಳಿ ಹೇಳಿಕೊಳ್ಳುತ್ತಿದ್ದಾಳೆ ಸೀತಾ. ಆದರೆ, ಸೀತಾಳ ಮಾತನ್ನು ರಾಮ್‌ ನಂಬುತ್ತಿಲ್ಲ. ಮಾನಸಿಕವಾಗಿ ಆಘಾತಕ್ಕೊಳಗಾಗಿರುವ ಸೀತಾಳಿಗೆ ಎಲ್ಲವೂ ಮರೆತು ಹೋಗಿದೆ ಎಂದೇ ಆತ ತಿಳಿದುಕೊಂಡಿದ್ದಾನೆ. ಆದರೆ, ಸೀತಾ ಮಾತ್ರ ಸುಬ್ಬಿಯನ್ನೇ ಸಿಹಿ ಎಂದುಕೊಂಡಿದ್ದಾಳೆ.

ಈ ನಡುವೆ ರಾಮ್‌ನ ಕಾರ್‌ನಲ್ಲಿದ್ದ ಸಿಹಿಯ ಅಸ್ಥಿಯನ್ನು ಸುಬ್ಬಿಯ ಸ್ನೇಹಿತರು ಎಗರಿಸಿ, ಮನೆಗೆ ತಂದಿದ್ದಾರೆ. ಇನ್ನೊಂದು ಕಡೆ ಸುಬ್ಬಿಯ ಲಗೇಜ್‌ ಗಾಡಿ ಏರಿ ಆಕೆಯ ಮನೆಗೆ ಬಂದಿದ್ದಾಳೆ ಸಿಹಿ. ಬಳಿಕ ಎಲ್ಲರೂ ಕೂತು ಮಡಿಕೆ ಬಿಚ್ಚಿ ನೋಡಿದ್ದಾರೆ. ಮಡಿಕೆಯಲ್ಲಿ ಬೂದಿ ಇರುವುದು ಕಂಡುಬಂದಿದೆ. ಇದು ಆ ಶ್ರೀರಾಮ್‌ ದೇಸಾಯಿ ಮನೆಯಲ್ಲಿನ ಬೂದಿ ಎಂಬುದು ಸುಬ್ಬಿಗೆ ಗೊತ್ತಾಗಿದೆ. ಅದನ್ನು ಅಷ್ಟೇ ಜೋಪಾನವಾಗಿ ಇರಿಸಿದ್ದಾಳೆ. ಅಷ್ಟರಲ್ಲಿ ಸಿಹಿ ಸುಬ್ಬಿ ಎದುರು ಮತ್ತೆ ಪ್ರತ್ಯಕ್ಷಳಾಗಿದ್ದಾಳೆ.

ಮನೆ ಒಳಗೆ ಹೇಗೆ ಬಂದೆ? ಯಾರೂ ನೋಡಲಿಲ್ಲವಾ? ಎಂದು ಸಿಹಿಯನ್ನ ಕೇಳ್ತಾಳೆ ಸುಬ್ಬಿ. ನೀವಿದ್ದ ಗೂಡ್ಸ್‌ ಗಾಡಿ ಹತ್ತಿ ಬಂದೆ ಎಂದಿದ್ದಾಳೆ. ಅಷ್ಟಕ್ಕೂ ನಾನು ಯಾರಿಗೂ ಕಾಣಿಸಲ್ಲ. ನಿನಗಷ್ಟೇ ಕಾಣಿಸೋದು. ಇಷ್ಟು ದೊಡ್ಡ ಪ್ರಪಂಚದಲ್ಲಿ ನಾನು ನಿನಗಷ್ಟೇ ಕಾಣಿಸ್ತಿದಿನಿ ಅಂದ್ರೆ ಇಲ್ಲಿ ಏನೋ ಇದೆ ಎಂದಿದ್ದಾಳೆ ಸಿಹಿ. ಅದಾದ ಬಳಿ, ನೀನ್ಯಾಕೆ ಆವತ್ತು ನಮ್ಮ ಮನೆಗೆ ಬಂದಿದ್ದೆ ಎಂದೂ ಸುಬ್ಬಿಯನ್ನು ಕೇಳಿದ್ದಾಳೆ ಸಿಹಿ. ಅದಕ್ಕೆ ಮೌನದಲ್ಲಿಯೇ ಸೀತಮ್ಮನ ಫೋಟೋ ಹಿಡಿದು ತೋರಿಸಿದ್ದಾಳೆ. ಸೀತಮ್ಮನ ಸಲುವಾಗಿ ಬಂದಿದ್ದೇ ಎಂದು ಸೂಚ್ಯವಾಗಿ ಹೇಳಿದ್ದಾಳೆ.

ಸಿಹಿ - ಸುಬ್ಬಿ ಇದೀಗ ಫ್ರೆಂಡ್ಸ್‌

ಅಲ್ಲಿಗೆ ಸಿಹಿ ಇನ್ನಷ್ಟು ಅಚ್ಚರಿಗೊಳಗಾಗಿದ್ದಾಳೆ. ನಾನು ನೀನು ನೋಡೋಕೂ ಸೇಮ್‌ ಇದ್ದೀವಿ. ಇನ್ಮೇಲೆ ಫ್ರೆಂಡ್ಸ್‌ ಆಗಿರೋಣ್ವಾ ಎನ್ನುತ್ತ ತನ್ನ ಕೈ ಮುಂದೆ ಚಾಚಿದ್ದಾಳೆ ಸಿಹಿ. ಸುಬ್ಬಿ ಸಹ ಸಿಹಿಯ ಕೈಗೆ ಕೈ ಜೋಡಿಸಿದ್ದಾಳೆ. ಅಲ್ಲಿಗೆ ಈ ಕಿಲಾಡಿ ಜೋಡಿ ಒಂದಾಗಿದೆ. ಹಾಗಾದರೆ, ಮುಂದೇನು? ಸೀತಾ ಮಾತ್ರವಲ್ಲದೆ ರಾಮ್‌ ಮುಂದೆಯೂ ಸುಬ್ಬಿ ಎದುರಾಗ್ತಾಳಾ? ಸಿಹಿ ಕೊಲೆ ಸಾವಿನ ಜಾಲವನ್ನು ಸುಬ್ಬಿ ನೆರವಿನಿಂದ ಸಿಹಿ ಬೇದಿಸ್ತಾಳಾ? ಭಾರ್ಗವಿಯ ಇನ್ನೊಂದು ಮುಖವೂ ಈ ಜೋಡಿಯಿಂದ ಅನಾವರಣ ಆಗುತ್ತಾ? ಸೀತಾ ರಾಮ ಧಾರಾವಾಹಿಯ ಮುಂದಿನ ಸಂಚಿಕೆಗಳಲ್ಲಿಯೇ ಇದಕ್ಕೆಲ್ಲ ಉತ್ತರ ಸಿಗಬೇಕಿದೆ.

ಸೀತಾ ರಾಮ ಧಾರಾವಾಹಿ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಚಿನ್ನಪ್ಪ: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ, ಸುಬ್ಬಿ (ಸೀತಾ ಮಗಳು)

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಮೇಘನಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)

Whats_app_banner