100 ಸಂಚಿಕೆಯನ್ನೂ ಪೂರೈಸದ ಈ ಧಾರಾವಾಹಿಯ ಅಂತ್ಯ ಸನ್ನಿಹಿತ? ಕಲರ್ಸ್ ಕನ್ನಡದ ಟಾಪ್ 10 ಧಾರಾವಾಹಿಗಳ ಟಿಆರ್‌ಪಿ ಹೀಗಿದೆ
ಕಲರ್ಸ್ ಕನ್ನಡದ ವಧು ಧಾರಾವಾಹಿ ಅಂತ್ಯವಾಗುತ್ತಾ? ಕಲರ್ಸ್‌ನ 10 ಧಾರಾವಾಹಿಗಳಿಗೆ 15ನೇ ವಾರ ಸಿಕ್ಕ ಟಿಆರ್‌ಪಿ ಎಷ್ಟು? ಯಾವ ಸೀರಿಯಲ್ ಟಾಪ್‌ನಲ್ಲಿದೆ, ಯಾವುದು ಲಾಸ್ಟ್ ಇದೆ, ಎಂಬಿತ್ಯಾದಿ ವಿವರ ಇಲ್ಲಿದೆ.

ಬಿಗ್ ಬಾಸ್ ಕನ್ನಡ 11 ಮುಗಿಯುತ್ತಿದ್ದಂತೆ, ಕಲರ್ಸ್ ಕನ್ನಡದಲ್ಲಿ ಅವಳಿ ಸೀರಿಯಲ್‌ಗಳು ಶುರುವಾದವು. ಆ ಪೈಕಿ ಒಂದು ʻಯಜಮಾನʼ, ಇನ್ನೊಂದು ʻವಧುʼ. ದೊಡ್ಡ ಪ್ರಚಾರದೊಂದಿಗೆ ಪ್ರಸಾರ ಆರಂಭಿಸಿದ ಈ ಸೀರಿಯಲ್‌ಗಳು ವೀಕ್ಷಕರಿಂದ ನಿರೀಕ್ಷಿತ ಪ್ರಮಾಣದ ಮೆಚ್ಚುಗೆ ಪಡೆಯಲಿಲ್ಲ. ಅದರಲ್ಲೂ ವಧು ಸೀರಿಯಲ್ ಟಿಆರ್‌ಪಿಯಲ್ಲಿ ಮೇಲೆಳದೆ ಮಹಾಕುಸಿತದತ್ತ ಸಾಗಿದ್ದೇ ಹೆಚ್ಚು. 15ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ನಲ್ಲಿ ʻವಧುʼಗೆ ಸಿಕ್ಕಿದ್ದು ಈ ವರೆಗಿನ ಕನಿಷ್ಠ ಟಿವಿಆರ್ ನಂಬರ್. ಅದಕ್ಕೆ ಕಾರಣ ಹುಡುಕುತ್ತ ಹೊರಟರೆ; ಐಪಿಎಲ್ ಸಹ ಅಲ್ಲಿ ಕಾಣಿಸುತ್ತೆ!
15ನೇ ವಾರದ ಟಿಆರ್‌ಪಿಯಲ್ಲಿ ಒಟ್ಟಾರೆ ಎಲ್ಲ ವಾಹಿನಿಗಳ ಸೀರಿಯಲ್‌ಗಳ ನಂಬರ್ ಕುಸಿತ ಕಂಡಿದೆ. ಕೇವಲ ಕಲರ್ಸ್ ಕನ್ನಡ ಮಾತ್ರವಲ್ಲದೆ, ಜೀ ಕನ್ನಡ, ಸ್ಟಾರ್ ಸುವರ್ಣ, ಉದಯ ಟಿವಿಯ ಧಾರಾವಾಹಿಗಳೂ ಅಂದುಕೊಂಡಷ್ಟು ನಂಬರ್ ತಂದಿಲ್ಲ. ಐಪಿಎಲ್ ಹಿನ್ನೆಲೆಯಲ್ಲಿ ಸೀರಿಯಲ್‌ಗಳ ವೀಕ್ಷಕರ ಸಂಖ್ಯೆ ಕುಸಿತ ಕಂಡಿದೆ. ಹಾಗಾದರೆ, ಕಲರ್ಸ್ ಕನ್ನಡದ 10 ಧಾರಾವಾಹಿಗಳಿಗೆ 15ನೇ ವಾರ ಸಿಕ್ಕ ಟಿಆರ್‌ಪಿ ಎಷ್ಟು? ಯಾವ ಸೀರಿಯಲ್ ಟಾಪ್‌ನಲ್ಲಿದೆ, ಯಾವುದು ಲಾಸ್ಟ್ ಇದೆ, ಎಂಬಿತ್ಯಾದಿ ವಿವರಕ್ಕೆ ಮುಂದೆ ಓದಿ.
ಕಮಾಲ್ ಮಾಡಿದ ಮುದ್ದು ಸೊಸೆ
ಸದ್ಯ ಕಲರ್ಸ್ ಕನ್ನಡದಲ್ಲಿ ಎರಡು ವಾರಗಳ ಹಿಂದಷ್ಟೇ ಪ್ರಸಾರ ಆರಂಭಿಸಿದ ಮುದ್ದು ಸೊಸೆ ಸಿರೀಯಲ್, ಇದೀಗ 15ನೇ ವಾರದ ಟಿಆರ್‌ಪಿ ಲಿಸ್ಟ್‌ನಲ್ಲಿ ಕಲರ್ಸ್ ಕನ್ನಡದ ನಂಬರ್ 1 ಸೀರಿಯಲ್ ಆಗಿ ಹೊರಹೊಮ್ಮಿದೆ. 5.0 ಟಿಆರ್‌ಪಿ ಪಡೆದು ಮೊದಲ ಸ್ಥಾನದಲ್ಲಿದೆ. ಬಹುಪ್ರಚಾರದೊಂದಿಗೆ, ಶುರುವಾದ ಈ ಸೀರಿಯಲ್ ಶುರುವಾದ ಮೊದಲ ವಾರವೇ ಕರುನಾಡ ವೀಕ್ಷಕರ ಮನಗೆದ್ದಿದೆ. ಈ ಗೆಲುವಿನ ಓಟ ಹೀಗೆಯೇ ಮುಂದುವರಿಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಮೋಡಿ ಮಾಡದ ರಾಮಾಚಾರಿ
ಕಲರ್ಸ್ ಕನ್ನಡದಲ್ಲಿ ಟಾಪ್ ಲಿಸ್ಟ್‌ನಲ್ಲಿ ಕಾಣಿಸುವ ಧಾರಾವಾಹಿಗಳೆಂದರೆ ಭಾಗ್ಯಲಕ್ಷ್ಮೀ, ಲಕ್ಷ್ಮೀ ಬಾರಮ್ಮ ನಿನಗಾಗಿ ಮತ್ತು ರಾಮಾಚಾರಿ. ಇವುಗಳಲ್ಲಿ ಲಕ್ಷ್ಮೀ ಬಾರಮ್ಮ ಮುಕ್ತಾಯವಾಗಿದೆ. ಇನ್ನುಳಿದ ಮೂರು ಧಾರಾವಾಹಿಗಳ ಪೈಕಿ, ರಾಮಾಚಾರಿ ಮೊದಲಿನಂತೆ ಮೋಡಿ ಮಾಡುತ್ತಿಲ್ಲ. 15ನೇ ವಾರದ ಟಿಆರ್‌ಪಿ ಪಟ್ಟಿಯಲ್ಲಿ ಈ ಸೀರಿಯಲ್ ಕೇವಲ 2.0 ಟಿವಿಆರ್ ಪಡೆದಿದೆ. ಭಾಗ್ಯಲಕ್ಷ್ಮೀ 4.4 ಟಿಆರ್‌ಪಿ ಪಡೆದಿದೆ.
ಶೀಘ್ರದಲ್ಲಿ ವಧು ಮುಕ್ತಾಯ?
ವಧು ಸೀರಿಯಲ್ ಇನ್ನೇನು ಶೀಘ್ರದಲ್ಲಿ ಮುಕ್ತಾಯ ಕಾಣಲಿದೆ ಎನ್ನಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಸದ್ಯ ಚರ್ಚೆ ಹುಟ್ಟುಹಾಕಿದೆ. ಈ ಧಾರಾವಾಹಿ ನಿರ್ದೇಶಕರಾಗಿದ್ದ ಪರಮೇಶ್ವರ್ ಗುಂಡ್ಕಲ್, ಬೇರೆ ವಾಹಿನಿಯ ಮುಖಸ್ಥರಾಗಿದ್ದಾರೆ ಎನ್ನಲಾಗುತ್ತಿದೆ. ಜತೆಗೆ ಈ ಧಾರಾವಾಹಿ ಟಿಆರ್‌ಪಿಯಲ್ಲಿಯೂ ಮೇಲೆಳದ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ. ಇದು ನಿಜವಾ? ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯೇ ಅಧಿಕೃತವಾಗಿ ಘೋಷಣೆ ಮಾಡಬೇಕಿದೆ.
ಯಾವ ಧಾರಾವಾಹಿಗೆ ಎಷ್ಟೆಷ್ಟು ಟಿಆರ್‌ಪಿ
- ಮುದ್ದು ಸೊಸೆ 5.0
- ಭಾಗ್ಯಲಕ್ಷ್ಮೀ 4.4
- ನಿನಗಾಗಿ 3.7
- ಭಾರ್ಗವಿ 3.0
- ಯಜಮಾನ 2.8
- ದೃಷ್ಟಿಬೊಟ್ಟು 2.6
- ರಾಮಾಚಾರಿ 2.0
- ನೂರು ಜನ್ಮಕೂ 1.9
- ಕರಿಮಣಿ 1.5
- ವಧು 0.9
ವಿಭಾಗ