ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಗೆಲ್ಲೋರು ಯಾರು? ಚಾಟ್‌ಜಿಪಿಟಿ, ಜೆಮಿನಿಎಐ ಪ್ರಕಾರ ಗೆಲ್ಲೋ ಸ್ಪರ್ಧಿ ಇವರೇ!
Bigg boss kannada season 11 winner prediction: ಬಿಗ್‌ಬಾಸ್ ಕನ್ನಡ ಸೀಸನ್ 11 ಕೆಲವೇ ದಿನಗಳಲ್ಲಿ ಮುಗಿಯಲಿದ್ದು, ಈ ಬಾರಿ ಯಾರಿಗೆ ವಿನ್ನರ್ ಕಿರೀಟ ದೊರಕಲಿದೆ ಎಂಬ ಕುತೂಹಲ ಕಿರುತೆರೆ ಪ್ರೇಕ್ಷಕರಲ್ಲಿದೆ. ಚಾಟ್‌ಜಿಪಿಟಿ, ಜೆಮಿನಿ ಎಐ ಪ್ರಕಾರ ಈ ಬಾರಿ ಬಿಗ್‌ಬಾಸ್ ಕನ್ನಡದಲ್ಲಿ ಯಾರು ವಿನ್ನರ್ ಆಗಬಹುದು ಎಂದು ತಿಳಿದುಕೊಳ್ಳೋಣ.

Bigg boss kannada season 11 winner prediction: ಬಿಗ್‌ಬಾಸ್ ಕನ್ನಡ ಸೀಸನ್ 11 ಕೆಲವೇ ದಿನಗಳಲ್ಲಿ ಮುಗಿಯಲಿದ್ದು, ಈ ಬಾರಿ ಯಾರಿಗೆ ವಿನ್ನರ್ ಕಿರೀಟ ದೊರಕಲಿದೆ ಎಂಬ ಕುತೂಹಲ ಕಿರುತೆರೆ ಪ್ರೇಕ್ಷಕರಲ್ಲಿದೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕಾಲದಲ್ಲಿ ಚಾಟ್‌ಜಿಪಿಟಿ, ಜೆಮಿನಿಎಐಗಳು ಜನಪ್ರಿಯತೆ ಪಡೆದಿವೆ. ಈ ಎರಡು ಜನರೇಟಿವ್ ಎಐಗಳು ನಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರಿಸುತ್ತವೆ. ನಮಗೆ ಬೇಕಾದ ಮಾಹಿತಿಯನ್ನು ನೀಡುತ್ತವೆ. ಲೇಖನ, ಪ್ರಬಂಧ ಬರೆದುಕೊಡುತ್ತವೆ. ಕವಿತೆ ಬರೆದುಕೊಡುತ್ತವೆ. ಇವುಗಳು ಮನುಷ್ಯರಂತೆ ಯೋಚಿಸಿ ಉತ್ತರ ನೀಡಲು ಪ್ರಯತ್ತಿಸುತ್ತವೆ. ಇದೇ ಕಾರಣಕ್ಕೆ ಇವುಗಳ ಬಳಿ ಈ ಬಾರಿ ಬಿಗ್‌ಬಾಸ್ ಕನ್ನಡ ಸೀಸನ್ 11ನಲ್ಲಿ ಯಾರು ಗೆಲ್ಲಬಹುದು ಎಂಬ ಪ್ರಶ್ನೆಯನ್ನು ಕೇಳಿದಾಗ ಏನೆಂದು ಉತ್ತರಿಸಿದೆ ಎಂದು ನೋಡೋಣ.
ಹನುಮಂತ ಗೆಲ್ಲಬಹುದು: ಜೆಮಿನಿ ಎಐ
ಜೆಮಿನಿ ಎಐನಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್ 11 ಯಾರು ಗೆಲ್ಲಬಹುದು ಎಂದು ಪ್ರಶ್ನಿಸಿದಾಗ "ಹನುಮಂತ" ಎಂಬ ಉತ್ತರ ದೊರಕಿದೆ. "ಇತ್ತೀಚಿನ ವರದಿಗಳ ಪ್ರಕಾರ ಬಿಗ್‌ಬಾಸ್ ಕನ್ನಡ 11ರಲ್ಲಿ ಹನುಮಂತ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಟಿಕೆಟ್ ಟು ಫಿನಾಲೆಯಲ್ಲಿ ಹನುಮಂತ ಗೆಲುವು ಪಡೆದಿದ್ದಾರೆ. ಈ ಮೂಲಕ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. ಪರೋಕ್ಷವಾಗಿ ಕಿಚ್ಚ ಸುದೀಪ್ ಕೂಡ ಹನುಮಂತ ಗೆಲ್ಲಬಹುದು ಎಂಬ ಹಿಂಟ್ ನೀಡಿದ್ದಾರೆ. ಆದರೆ, ಈ ಕುರಿತು ಅವರು ನೇರವಾಗಿ ಎಲ್ಲೂ ಹೇಳಿಲ್ಲ. ಹೀಗಿದ್ದರೂ, ಸ್ಪರ್ಧೆ ಇನ್ನೂ ನಡೆಯುತ್ತಿದೆ. ತ್ರಿವಿಕ್ರಮ್, ಧನರಾಜ್, ಭವ್ಯ, ಮೋಕ್ಷಿತಾ, ಉಗ್ರಂ ಮಂಜು, ಗೌತಮಿ ಕೂಡ ಸಂಭಾವ್ಯ ವಿನ್ನರ್‌ಗಳಾಗಿ ಹೊರಹೊಮ್ಮಬಹುದು. ಬಿಗ್‌ಬಾಸ್ ಗೆಲುವು ಹಲವು ಅಂಶಗಳನ್ನು ಅವಲಂಬಿಸಿದೆ. ವೀಕ್ಷಕರ ಮತಗಳು, ಮುಂಬರುವ ದಿನಗಳಲ್ಲಿ ಸ್ಪರ್ಧಿಗಳ ಪರ್ಪಾಮೆನ್ಸ್ ಇತ್ಯಾದಿಗಳು ಪರಿಗಣನೆಗೆ ಬರಲಿವೆ" ಎಂದು ಜೆಮಿನಿ ಎಐ ತಿಳಿಸಿದೆ.
ತ್ರಿವಿಕ್ರಮ್ ಗೆಲ್ಲಬಹುದು: ಚಾಟ್ ಜಿಪಿಟಿ
ಬಿಗ್‌ಬಾಸ್ ಕನ್ನಡ ಸೀಸನ್ 11 ಯಾರು ಗೆಲ್ಲಬಹುದು ಎಂಬ ಪ್ರಶ್ನೆಯನ್ನು ಚಾಟ್‌ಜಿಪಿಟಿಯಲ್ಲಿಯೂ ಕೇಳಲಾಯಿತು. ಈ ಪ್ರಶ್ನೆಗೆ ಮೊದಲಿಗೆ ಚಾಟ್‌ಜಿಪಿಟಿಯು ಬುದ್ಧಿವಂತಿಕೆಯಿಂದ ಉತ್ತರಿಸಿತು. "ಬಿಗ್ ಬಾಸ್ ಕನ್ನಡ ಸೀಸನ್ 11 ರಂತಹ ರಿಯಾಲಿಟಿ ಶೋ ಫಲಿತಾಂಶಗಳನ್ನು ಅಂದಾಜಿಸುವುದು ಊಹಾತ್ಮವಾಗಿರಬಹುದು. ವೀಕ್ಷಕರ ಮತಗಳು ಮತ್ತು ಇತರೆ ಹಲವು ಅಂಶಗಳನ್ನು ಇದು ಅವಲಂಬಿಸಿದೆ. ಪ್ರೇಕ್ಷಕರ ಬೆಂಬಲ ಮತ್ತು ಮನೆಯೊಳಗಿನ ಪ್ರದರ್ಶನದ ಆಧಾರದ ಮೇಲೆ ವಿಜೇತರನ್ನು ಅಂತಿಮವಾಗಿ ನಿರ್ಧರಿಸಲಾಗುತ್ತದೆ" ಎಂದು ಚಾಟ್‌ಜಿಪಿಟಿ ತಿಳಿಸಿದೆ. "ಅದು ಸರಿ, ನಿನ್ನ ಅಂದಾಜಿನ ಪ್ರಕಾರ ಯಾರು ಗೆಲ್ಲಬಹುದು, ಊಹಿಸು" ಎಂದು ಪ್ರಾಂಪ್ಟ್ ನೀಡಿದಾಗ ಅದರ ಉತ್ತರ "ತ್ರಿವಿಕ್ರಮ್" ಎಂದಾಗಿತ್ತು.
ವಿವಿಧ ಸುದ್ದಿಗಳನ್ನು ಆಧರಿಸಿ ಚಾಟ್‌ಜಿಪಿಟಿಯು ತ್ರಿವಿಕ್ರಮ್ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದೆ. "ಈಗಾಗಲೇ ಹಲವು ಜನರು ಸ್ಟ್ರಾಂಗ್ ಸ್ಪರ್ಧಿಗಳಾಗಿ ಹೊರಹೊಮ್ಮಿದ್ದಾರೆ. ತ್ರಿವಿಕ್ರಮವ್ ಅವರು ಟಿಕೆಟ್ ಟು ಫಿನಾಲೆ ಗೆದ್ದಿದ್ದಾರೆ. ಇತ್ತೀಚಿನ ಓಟಿಂಗ್ ಟ್ರೆಂಡ್‌ಗಳನ್ನು ಗಮನಿಸಿದರೆ ತ್ರಿವಿಕ್ರಮ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಇವರಿಗೆ ವೀಕ್ಷಕರ ಬೆಂಬಲ ಹೆಚ್ಚು ದೊರಕಬಹುದು. ಈ ಸೂಚನೆಗಳ ಪ್ರಕಾರ ತ್ರಿವಿಕ್ರಮ್ ಗೆಲ್ಲುವಂತೆ ಕಾಣಿಸಿದರೂ ಮುಂಬರುವ ದಿನಗಳಲ್ಲಿ ವೀಕ್ಷಕರ ಮತ ಮತ್ತು ಆಟಗಾರರ ಆಟಗಳು ಈ ಸಾಧ್ಯತೆಯನ್ನು ಬದಲಾಯಿಸಲೂಬಹುದು" ಎಂದು ಚಾಟ್‌ಜಿಪಿಟಿ ತಿಳಿಸಿದೆ.
ಬಿಗ್‌ಬಾಸ್ ಕನ್ನಡದಲ್ಲಿ ರನ್ನರ್‌ಅಪ್ ಯಾರಾಗಬಹುದು?
ಕಿಚ್ಚ ಸುದೀಪ್ ಕೊನೆಗೆ ಇಬ್ಬರ ಕೈಗಳನ್ನು ಹಿಡಿದುಕೊಳ್ಳಲಿದ್ದಾರೆ. ಒಬ್ಬರ ಕೈಯನ್ನು ಮೇಲಕ್ಕೆತ್ತಿ ವಿನ್ನರ್ ಎಂದು ಘೋಷಿಸುತ್ತಾರೆ. ಈ ರೀತಿ ಸಮಯದಲ್ಲಿ ಯಾರು ರನ್ನರ್ ಅಪ್ ಆಗಬಹುದು ಎಂಬ ಪ್ರಾಂಪ್ಟ್ ಮಾಡಿದಾಗ ಜೆಮಿನಿ ಎಐ ಉತ್ತರ ಹೀಗಿತ್ತು. "ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ತ್ರಿವಿಕ್ರಮ್ ರನ್ನರ್‌ಅಪ್ ಆಗಬಹುದು. ಸೀಸನ್ ಆರಂಭದಿಂದಲೂ ಇವರು ಜನಪ್ರಿಯ ಆಟಗಾರರು. ಇವರ ವ್ಯಕ್ತಿತ್ವ ಮತ್ತು ಆಟದ ವೈಖರಿ ಪ್ರೇಕ್ಷಕರಿಂದ ಪ್ರಶಂಸೆಗೆ ಪಾತ್ರವಾಗಿದೆ" ಎಂದು ಜೆಮಿನಿ ಎಐ ಊಹಿಸಿದೆ.
ಇದೇ ಪ್ರಾಂಪ್ಟ್‌ಗೆ ಚಾಟ್‌ಜಿಪಿಟಿ ಉತ್ತರ ಹೀಗಿದೆ. "ಈ ಬಾರಿ ಹನುಮಂತ ಅವರು ರನ್ನರ್ ಅಪ್ ಆಗಬಹುದು. ತ್ರಿವಿಕ್ರಮ್ ಗೆಲುವು ಪಡೆಯದೆ ಇದ್ದರೆ ರನ್ನರ್ ಅಪ್ ಆಗಬಹುದು. ಇದೇ ಸಮಯದಲ್ಲಿ ಭವ್ಯ ಗೌಡ, ಧನರಾಜ್ ಆಚಾರ್, ಮೋಕ್ಷಿತಾ ಪೈರಲ್ಲಿ ಯಾರಾದರೂ ರನ್ನರ್ ಅಪ್ ಸ್ಥಾನಕ್ಕೆ ಬಂದರೆ ಅಚ್ಚರಿಯಿಲ್ಲ" ಎಂದು ಚಾಟ್‌ಜಿಪಿಟಿ ಅಂದಾಜಿಸಿದೆ.

ವಿಭಾಗ