ನಟಿ ಸುಕೃತಾ ನಾಗ್ ಜತೆ ಡಾಲಿ ಧನಂಜಯ ಸಖತ್ ಡ್ಯಾನ್ಸ್; ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 2 ವೇದಿಕೆಯಲ್ಲಿ ಜಾಲಿಜಾಲಿ
ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 2: ವಿದ್ಯಾಪತಿ ಸಿನಿಮಾ ಪ್ರಮೋಷನ್‌ಗಾಗಿ ಡಾಲಿ ಧನಂಜಯ, ನಾಗಭೂಷನ್ ಜೀ ಕನ್ನಡ ವಾಹಿನಿಯ ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 2ಗೆ ಆಗಮಿಸಿದ್ದಾರೆ. ವೇದಿಕೆಯಲ್ಲಿ ಡಾಲಿ ಧನಂಜಯ್ ಮತ್ತು ನಟಿ ಸುಕೃತಾ ನಾಗ್ ಸಖತ್ ಸ್ಟೆಪ್ಸ್ ಹಾಕಿದ್ದಾರೆ.

ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 2: ಪ್ರತಿವೀಕೆಂಡ್‌ನಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಕಾರ್ಯಕ್ರಮ ನಡೆಯುತ್ತದೆ. ಈ ರಿಯಾಲಿಟಿ ಶೋನಲ್ಲಿ ಹತ್ತು ಬ್ಯಾಚುಲರ್ಸ್‌ಗಳು ತಮ್ಮ ಪ್ರತಿಭೆ ಪ್ರದರ್ಶನ ಮಾಡುತ್ತಾರೆ. ಈ ಸಮಯದಲ್ಲಿ ಇವರಿಗೆ ಬೆಂಬಲ ನೀಡಲು ಹತ್ತು ಮೆಂಟರ್ಸ್ ಕೂಡ ಇರುತ್ತಾರೆ. ಈ ವಾರ ಈ ರಿಯಾಲಿಟಿ ಶೋನಲ್ಲಿ ಲವ್ ಕೆಮಿಸ್ಟ್ರಿ ರೌಂಡ್ ಚಾಲೆಂಜ್ ನೀಡಲಾಗಿದೆ. ಬ್ಯಾಚುಲರ್ಸ್ ಮತ್ತು ಏಂಜಲ್ಸ್ ನಡುವೆ ನಡೆಯುವ ಈ ಟಾಸ್ಕ್ ಸಖತ್ ಕುತೂಹಲ ಕೆರಳಿಸಿದೆ. ಇದೇ ಸಮಯದಲ್ಲಿ ಈ ವೇದಿಕೆಗೆ ವಿದ್ಯಾಪತಿ ಸಿನಿಮಾ ತಂಡದ ನಾಗಭೂಷಣ, ಡಾಲಿ ಧನಂಜಯ್ ಮುಂತಾದವರು ಬಂದಿದ್ದಾರೆ. ಹೀಗಾಗಿ, ಈ ವಾರ ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ವೀಕ್ಷಕರಿಗೆ ಡಬಲ್ ಧಮಾಕ ಇರಲಿದೆ.
ಈ ವಾರ ಚಿತ್ರಮಂದಿರಗಳಲ್ಲಿ ವಿದ್ಯಾಪತಿ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರದ ಕುರಿತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಇದೇ ಸಮಯದಲ್ಲಿ ಚಿತ್ರದ ಪ್ರಮೋಷನ್‌ಗಾಗಿ ಜೀ ಕನ್ನಡ ವಾಹಿನಿಯ ಭರ್ಜರಿ ಬ್ಯಾಚುಲರ್ಸ್ ವೇದಿಕೆಗೆ ಚಿತ್ರತಂಡ ಆಗಮಿಸಿದೆ. ಡಾಲಿ ಧನಂಜಯ್ ಆಗಮಿಸಿರುವುದು ಸ್ಪರ್ಧಿಗಳಿಗೆ ಖುಷಿ ತಂದಿದೆ. ಈ ಸಮಯದಲ್ಲಿ ಡಾಲಿ ಧನಂಜಯ್ ಡ್ಯಾನ್ಸ್‌ಗೆ, ನಾಗಭೂಷಣ್ ಕಾಮಿಡಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಈ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಜೀ ಕನ್ನಡ ವಾಹಿನಿಯು ಸೋಷಿಯಲ್ ಮೀಡಿಯಾದಲ್ಲಿ ಪ್ರೊಮೊ ಬಿಡುಗಡೆ ಮಾಡಿದೆ.
ಸುಕೃತಾ ನಾಗ್ ಜತೆ ಡಾಲಿ ಡ್ಯಾನ್ಸ್
ಅಗ್ನಿಸಾಕ್ಷಿ ಸೀರಿಯಲ್ ನಟಿ ಸುಕೃತಾ ನಾಗ್ ಈಗ ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ಸುಕೃತಾ ನಾಗ್ ಜತೆ ಡಾಲಿ ಧನಂಜಯ್ ಡ್ಯಾನ್ಸ್ ಮಾಡಿದ್ದಾರೆ. ಇವರಿಬ್ಬರ ಡ್ಯಾನ್ಸ್ ನೋಡಿದ ಗೆಳೆಯ ನಾಗಭೂಷಣ್ "ಡಾಲಿ ಈ ರೀತಿ ಡ್ಯಾನ್ಸ್ ಮಾಡ್ತಾನೆ ಎಂದು ಗೊತ್ತಿರಲಿಲ್ಲ" ಎಂದು ಹೇಳಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಎಲ್ಲರೂ ಈ ಎಪಿಸೋಡ್ ಅನ್ನು ಸಖತ್ ಆನಂದಿಸಿರುವುದು ಪ್ರೊಮೊದಲ್ಲಿ ಕಾಣಿಸಿದೆ.
ವಿದ್ಯಾಪತಿ ಸಿನಿಮಾದ ಕುರಿತು
ವಿದ್ಯಾಪತಿ ಕನ್ನಡ ಸಿನಿಮಾ ನೋಡಿದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. " ನಾಗಭೂಷಣ್ ಆ್ಯಕ್ಟಿಂಗ್ ಸೂಪರ್, ಇಶಾಂ ಹಾಗೂ ಹಸೀಂ ಅವರ ನಿರ್ದೇಶನ ಅದ್ಭುತವಾಗಿದೆ. ಕನ್ನಡ ಚಿತ್ರರಂಗಕ್ಕೆ ಇದೊಂದು ಉತ್ತಮ ಚಿತ್ರವಾಗಲಿದೆ. ನಾಗಭೂಷಣ್ ಅವರನ್ನು ಫ್ಯಾಮಿಲಿ ಸ್ಟಾರ್ ಎಂದು ಕರೆಯಬಹುದು. ಇವರು ಕಟೆಂಟ್ ಆಯ್ಕೆಯ ವಿಚಾರದಲ್ಲಿ ಅನಂತ್‌ನಾಗ್, ರಮೇಶ್ ಅರವಿಂದ್ ಸ್ಥಾನಕ್ಕೆ ಬರುತ್ತಾರೆ" ಎಂದೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಜನರು ಕಾಮೆಂಟ್ ಮಾಡುತ್ತಿದ್ದಾರೆ.
ಈ ಸಿನಿಮಾದಲ್ಲಿ ನಾಯಕ ನಟನಾಗಿ ನಾಗಭೂಷಣ್ ನಟಿಸಿದ್ದಾರೆ. ಈ ಹಿಂದೆ ಟಗರು ಪಲ್ಯ ಸಿನಿಮಾದ ಮೂಲಕ ಇವರು ಗಮನ ಸೆಳೆದಿದ್ದರು. ವಿದ್ಯಾಪತಿಗೆ ನಾಯಕಿಯಾಗಿ ಮಲೈಕಾ ಟಿ ವಸುಪಾಲ್ ನಟಿಸಿದ್ದಾರೆ. ಈ ಚಿತ್ರಕ್ಕೆ ಚಿತ್ರಕ್ಕೆ ಇಶಾಂ ಹಾಗೂ ಹಸೀಂ ಖಾನ್ ನಿರ್ದೇಶನ ಮಾಡಿದ್ದಾರೆ. ಕಥೆ ಬರೆದು, ಸಂಕಲನವನ್ನೂ ಅವರೇ ಮಾಡುತ್ತಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ, ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಸುಜಿತ್ ವೆಂಕಟರಾಮಯ್ಯ ಸಾಹಿತ್ಯ ಬರೆದಿದ್ದಾರೆ. ಡಾಲಿ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಧನಂಜಯ ನಿರ್ಮಾಣ ಮಾಡಿದ್ದಾರೆ.

ವಿಭಾಗ