ಜೀ ಕನ್ನಡದಲ್ಲಿ ಬರ್ತಿದೆ ಹೊಸ ಧಾರಾವಾಹಿ ‘ನಾ ನಿನ್ನ ಬಿಡಲಾರೆ’; ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ ವಿಕ್ರಾಂತ್ ರೋಣ ಚಿತ್ರದ ನಟಿ ನೀತಾ ಅಶೋಕ್
ಜೀ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿಯೊಂದು ಆರಂಭವಾಗುತ್ತಿದೆ. ನಾ ನಿನ್ನ ಬಿಡಲಾರೆ ಎಂಬ ಧಾರಾವಾಹಿ ಆರಂಭವಾಗಲಿದೆ. ಅಮ್ಮ ಮಗುವಿನ ಸಂಬಂಧ ಹಾಗೂ ಹಾರರ್ ಕಥೆ ಇದು ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ. ಈಗಾಗಲೇ ಪ್ರೋಮೋ ಬಿಡುಗಡೆಯಾಗಿದೆ.
ಜೀ ಕನ್ನಡ ಹೊಸ ಧಾರಾವಾಹಿ 'ನಾ ನಿನ್ನ ಬಿಡಲಾರೆ' ಪ್ರಸಾರವಾಗಲಿದೆ. ಮಡಿದ ಮೇಲೂ ಮಿಡಿಯುವುದು ಅಮ್ಮನ ಪ್ರೀತಿ ಎಂಬ ಸಾಲುಗಳನ್ನು ಹಂಚಿಕೊಂಡಿದ್ದಾರೆ. ಈಗಾಗಲೇ ಪ್ರೋಮೋ ರಿಲೀಸ್ ಆಗಿದೆ. ಸುಂದರವಾದ ಹಾಡಿನ ಜೊತೆ ಪ್ರೋಮೋ ಮೂಡಿ ಬಂದಿದೆ. ಲಾಲಿ… ಲಾಲಿ..ಜೋ .. ಲಾಲಿ ಕನಸೊಂದು ಮಡಿಲ ಸೇರಿದೆ ಜೋ ಲಾಲಿ ಎಂಬ ಸುಂದರ ಸಾಲುಗಳ ಹಾಡಿನೊಂದಿದೆ. ಸತ್ತರೂ ಸಾಯದು ಅಮ್ಮನ ಪ್ರೀತಿ ಎಂಬ ರೀತಿಯಲ್ಲಿ ಈ ಕಥೆಯಿದೆ. ಅಮ್ಮ ಹಾಗೂ ಮಗುವಿನ ಪವಿತ್ರ ಸಂಬಂಧವನ್ನು ತೋರ್ಪಡಿಸುವ ಈ ಪ್ರೋಮೋ ಕೊನೆಯಲ್ಲಿ ಇದೊಂದು ಹಾರರ್ ಕಥೆ ಎಂಬುದು ಅರ್ಥವಾಗುತ್ತದೆ.
ಮಗುವಿನ ಪಾತ್ರದಲ್ಲಿ ಮಹಿತಾ ಅಭಿನಯಿಸಿದ್ದಾರೆ. ಈ ಹಿಂದೆ ಚುಕ್ಕಿ ತಾರೆ ಧಾರಾವಾಹಿಯಲ್ಲಿ ಚುಕ್ಕಿಯಾಗಿ ಮಹಿತಾ ಅಭಿನಯಿಸಿದ್ದರು. ಈ ಧಾರಾವಾಹಿಯಲ್ಲಿ ಅವರ ಪಾತ್ರದ ಹೆಸರು ಇನ್ನೂ ರಿವೀಲ್ ಆಗಿಲ್ಲ. ವಿಕ್ರಾಂತ್ ರೋಣ ಚಿತ್ರದ ನಟಿ ನೀತಾ ಅಶೋಕ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪುಟ್ಟ ಮಗುವೊಂದನ್ನು ಎತ್ತಿ ಆಡಿಸುತ್ತಾ ಅಮ್ಮನ ಪ್ರೀತಿಯನ್ನು ಹಂಚುತ್ತಾ ಆನಂದ ಹಾಗೂ ದುಃಖ ಎರಡೂ ಭಾವನೆಗಳನ್ನು ತೋರಿಸುವ ಪಾತ್ರ ಇವರದ್ದಾಗಿದೆ.
ಇನ್ನು ಇದೇ ಸಂದರ್ಭದಲ್ಲಿ ಕಲರ್ಸ್ ಕನ್ನಡದಲ್ಲೂ ಹೊಸದೊಂದು ಧಾರಾವಾಹಿ ಆರಂಭವಾಗುತ್ತಿದೆ. ನೂರು ಜನ್ಮಕೂ ಎಂಬ ಹೆಸರಿನ ಆ ಧಾರಾವಾಹಿ ಕೂಡ ಒಂದು ಹಾರರ್ ಕಥೆಯಾಗಿದೆ. ಟಿಆರ್‌ಪಿ ಓಟದಲ್ಲಿ ಹಿಂದೆ ಬೀಳದ ರೀತಿಯಲ್ಲಿ ಈಗ ಜೀ ವಾಹಿನಿಯೂ ಒಂದು ಹಾರರ್ ಕಥೆಯನ್ನು ಪ್ರಯೋಗ ಮಾಡುತ್ತಿದೆ ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ. ಏನೇ ಆಗ್ಲಿ ಆದ್ರೆ ಧಾರಾವಾಹಿ ಮಾತ್ರ ಚೆನ್ನಾಗಿರಲಿ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಧಾರಾವಾಹಿಗಳು ಬರಿ ಪ್ರೇಮಕಥೆ ಅಥವಾ ಚಿಕ್ಕಮಕ್ಕಳನ್ನು ಇಟ್ಟುಕೊಂಡು ಅವರ ಸುತ್ತ ಹೆಣೆದ ತಂದೆ, ತಾಯಿ ಪ್ರೇಮದ ಕಥೆ ಇವುಗಳೇ ಆಗಿದ್ದವು ಹೆಚ್ಚಾಗಿ ಯಾವ ಹಾರರ್ ಕಥನವೂ ಇರಲಿಲ್ಲ. ಇನ್ನು ನಾಗಿಣಿ, ರಾಮಾಯಣ ಈ ರೀತಿಯ ಕಥೆಗಳೂ ಕಡಿಮೆಯಾಗಿತ್ತು. ಇಂತಹ ಸಂದರ್ಭದಲ್ಲಿ ಜನರಿಗೆ ಒಂದಷ್ಟು ಬದಲಾವಣೆ ನೀಡುವ ರೀತಿಯಲ್ಲಿ ಧಾರಾವಾಹಿಗಳು ಈ ಬರುತ್ತಿದೆ.