ಜೀ ಕುಟುಂಬ ಅವಾರ್ಡ್ಸ್ 2024: ಎಲ್ಲರನ್ನೂ ನಗಿಸುವ ಗಿಲ್ಲಿ ನಿಜ ಬದುಕು ಹೇಗಿದೆ? ಅವಾರ್ಡ್ ಸಿಕ್ಕಿದ ನಂತರ ಗಿಲ್ಲಿ ಹೇಳಿದ್ದೇನು ನೋಡಿ
ಜೀ ಕುಟುಂಬ ಅವಾರ್ಡ್ಸ್ 2024: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಎಲ್ಲರನ್ನೂ ನಕ್ಕು ನಲಿಸುವ ಗಿಲ್ಲಿ ಅವರಿಗೆ ಪ್ರಶಸ್ತಿ ಲಭಿಸಿದೆ. ಅವರ ಬದುಕಿನ ಬಗ್ಗೆ ಒಂದು ಚಿಕ್ಕ ವಿಡಿಯೋ ತುಣುಕನ್ನು ವೇದಿಕೆಯಲ್ಲಿ ಬಿಡುಗಡೆ ಮಾಡಿದ್ದಾರೆ.
ಜೀ ಕುಟುಂಬ ಅವಾರ್ಡ್ಸ್‌ನಲ್ಲಿ ಬೆಸ್ಟ್ ಎಂಟರ್ಟೈನರ್ ಅವಾರ್ಡ್ ಪಡೆದುಕೊಂಡ ಗಿಲ್ಲಿ ಮಾತನಾಡಿದ್ದಾರೆ. ಎಲ್ಲರೂ ಅವರು ತಮಾಷೆಯಾಗಿ ನಗಿಸುತ್ತಾ ಇರುವುದನ್ನು ಮಾತ್ರ ನೋಡುತ್ತಾರೆ. ಆದರೆ ಅವರ ಜೀವನಲ್ಲಿ ಹಿಂದೆ ಏನಾಗಿತ್ತು ಅಥವಾ ಅವರಿಗೆ ಇರುವ ನೋವು ಏನು ಎಂಬುದನ್ನು ಯಾರೂ ಎಲ್ಲಿಯೂ ಗಮನಿಸಿರಲಿಲ್ಲ. ಗಿಲ್ಲಿ ಕೂಡ ಅದನ್ನು ಯಾರೊಂದಿಗೂ ಹೇಳಿಕೊಂಡಿರಲಿಲ್ಲ. ಆದರೆ ಜೀ ಕನ್ನಡ ಅವಾರ್ಡ್ ಕಾರ್ಯಕ್ರಮದಲ್ಲಿ ಅವರ ಬಗ್ಗೆ ಒಂದು ಸಣ್ಣ ವಿಡಿಯೋ ಮಾಡುತ್ತಾರೆ, ಅದರಲ್ಲಿ ಅವರ ಊರು ಮತ್ತು ತಂದೆ ತಾಯಿ ಪರಿಚಯ ಮಾಡಿಸುತ್ತಾರೆ.
ಗಿಲ್ಲಿ ಮಂಡ್ಯದವರು ಅಲ್ಲಿನ ಒಂದು ಸಣ್ಣ ಗ್ರಾಮದಲ್ಲಿ ಹುಟ್ಟಿ ಬೆಳೆದವರು. ಏನಾದರೂ ಸಾಧನೆ ಮಾಡಬೇಕು ಎಂದು ಹುಟ್ಟೂರನ್ನು ಬಿಟ್ಟು ಬೆಂಗಳೂರು ಸೇರಿದವರು. ಆ ನಂತರದ ದಿನಗಳಲ್ಲಿ ಎಷ್ಟೋ ಕಷ್ಟವನ್ನು ಅನುಭವಿಸಿದ್ದಾರೆ. ಎರಡು ವರ್ಷಗಳ ಕಾಲ ಮನೆಗೆ ಹೋಗಿರಲಿಲ್ಲ ಎಂದು ಅವರು ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ. ಆದರೆ ಅವರ ತಂದೆಗೆ ಅನಾರೋಗ್ಯವಾಗಿ ಆ ಸಂದರ್ಭದಲ್ಲಿ ಮನೆಗೆ ಹೋಗಿದ್ದರಂತೆ. ಆಗ ಅವರಿಗೆ ಅನಿಸಿದ್ದು, ನಾವು ತಂದೆ, ತಾಯಿ ಹೆಮ್ಮೆ ಪಡಲಿ ಎಂದು ಭಾವಿಸಿ ಒಳ್ಳೆಯ ಉದ್ಯೋಗ ಅರಸುತ್ತೇವೆ. ಆದರೆ ಮನೆಬಿಟ್ಟು ಹೋಗಿ ಅವರ ಅನಾರೋಗ್ಯದ ಸಂದರ್ಭದಲ್ಲೂ ನಾವಿಲ್ಲ ಎಂದರೆ ಅದು ಸಾಧನೆಯಲ್ಲ ಎಂದೆನಿಸಿ ಮತ್ತೆ ಮನೆಗೆ ಹೋದರಂತೆ
ಎಲ್ಲರಲ್ಲಿಯೂ ಅವರು ತಂದೆ, ತಾಯಿಯನ್ನು ನಾವು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಅವಾರ್ಡ್ ತೆಗೆದುಕೊಳ್ಳಲು ಬರುವ ಸಂದರ್ಭದಲ್ಲೂ ಅವರು ಕಾಮಿಡಿ ಮಾಡಿದ್ದಾರೆ.
ಯಾವಾಗಲೂ ಗಗನಾ ಅವರೊಟ್ಟಿಗೆ ವೇದಿಕೆಯ ಮೇಲೆ ಎಲ್ಲರನ್ನೂ ನಗಿಸುತ್ತಿದ್ದ ಅವರು. ಪ್ರಶಸ್ತಿ ಬಂದಾಗಲೂ ಗಗನಾ ಅವರನ್ನು ವೇದಿಕೆಗೆ ಕರೆದಂತೆ ನಟಿಸುತ್ತಾರೆ. ಅವರು ಬರುವಾಗ ಅವರ ಹೆಸರಿನ ಹಾಡು ಪ್ಲೇ ಆಗುತ್ತದೆ. ಪ್ರಶಸ್ತಿ ಬಂದಿರುವ ಬಗ್ಗೆ ತುಂಬಾ ಸಂತಸ ಇದೆ. ಈ ಹಿಂದೆ ನಾನು ಇದೇ ಚಾನೆಲ್‌ನಲ್ಲಿ ಕಮಲಿ ಧಾರಾವಾಹಿಗಾಗಿ ಕೆಲಸ ಮಾಡಿದ್ದೆ. ಆದರೆ ಇಂದು ಅವರೆಲ್ಲರೊಟ್ಟಿಗೆ ಈ ವೇದಿಕೆ ಮೇಲೆ ಬಂದು ಪ್ರಶಸ್ತಿ ಪಡೆದುಕೊಂಡಿದ್ದೇನೆ ಎಂದರೆ ಅದಕ್ಕಿಂತ ಸಂತಸ ಇನ್ನೊಂದಿಲ್ಲ ಎಂದಿದ್ದಾರೆ.
ವರ್ಷದ ಬೆಸ್ಟ್ ಎಂಟರ್ಟೈನರ್ ಪ್ರಶಸ್ತಿ ಪಡೆದ ಗಿಲ್ಲಿನಟನ ಬದುಕಿನ ಒಂದು ಕಿರುನೋಟ, ಭರವಸೆಯ ಮಾತುಗಳ ರಸದೂಟ ಎಂಬ ಸಂದೇಶ ನೀಡುತ್ತಾ ಇನ್ನೂ ಹಲವಾರು ಪ್ರತಿಭೆಗಳಿಗೆ ಇವರ ಬದುಕು ಸ್ಪೂರ್ತಿಯಾಗುವಂತೆ ಮಾಡಿದ್ದಾರೆ. ಸಂತೆಯಲ್ಲಿ ಒಂದು ಕುರಿಮರಿ ತಂದು ನಂತರ ಅದರಿಂದಲೇ ಇಂದು ಅವರ ಮನೆಯಲ್ಲಿ ಹತ್ತಾರು ಕುರಿಗಳಿವೆ ಎಂದು ಅವರ ತಂದೆ ಹೇಳಿದ್ದಾರೆ. ಇನ್ನು ಅವರ ತಾಯಿ ತನ್ನ ಮಗನ ಬಗ್ಗೆ ತುಂಬಾ ಹೆಮ್ಮೆಪಟ್ಟಿದ್ದಾರೆ.
ನಿಮ್ಮ ಸಾಧನೆಗೆ ಇನ್ನು ಹೆಚ್ಚು ಪ್ರೋತ್ಸಾಹ ಸಿಗಲಿ ಎಂದು ತುಂಬಾ ಜನ ಹಾರೈಸಿದ್ದಾರೆ.
ವಿಭಾಗ