Zee Kutumba Awards: ಸಿಂಗಾರ ಸಿರಿಯೇ ಎಂದು ಪಾರುವನ್ನು ಮುದ್ದಾಡಿದ ಶಿವು; ಜೀ ಕುಟುಂಬ ವೇದಿಕೆಯಲ್ಲಿ ಅಣ್ಣಯ್ಯನ ರೊಮ್ಯಾಂಟಿಕ್ ಡ್ಯಾನ್ಸ್‌
ಕನ್ನಡ ಸುದ್ದಿ  /  ಮನರಂಜನೆ  /  Zee Kutumba Awards: ಸಿಂಗಾರ ಸಿರಿಯೇ ಎಂದು ಪಾರುವನ್ನು ಮುದ್ದಾಡಿದ ಶಿವು; ಜೀ ಕುಟುಂಬ ವೇದಿಕೆಯಲ್ಲಿ ಅಣ್ಣಯ್ಯನ ರೊಮ್ಯಾಂಟಿಕ್ ಡ್ಯಾನ್ಸ್‌

Zee Kutumba Awards: ಸಿಂಗಾರ ಸಿರಿಯೇ ಎಂದು ಪಾರುವನ್ನು ಮುದ್ದಾಡಿದ ಶಿವು; ಜೀ ಕುಟುಂಬ ವೇದಿಕೆಯಲ್ಲಿ ಅಣ್ಣಯ್ಯನ ರೊಮ್ಯಾಂಟಿಕ್ ಡ್ಯಾನ್ಸ್‌

ಜೀ ಕುಟುಂಬ ಅವಾರ್ಡ್ಸ್‌ 2024: ಅಣ್ಣಯ್ಯ ಧಾರಾವಾಹಿಯ ಶಿವು ಹಾಗೂ ಪಾರು ಕಾಂತಾರ ಸಿನಿಮಾದ ಸಿಂಗಾರ ಸಿರಿಯೇ ಹಾಡಿಗೆ ನೃತ್ಯ ಮಾಡಿದ್ದಾರೆ. ಜಾನಪದ ಶೈಲಿಯ ಸೆಟ್‌ನಲ್ಲಿ ಹೇಗಿತ್ತು ನೋಡಿ ಅಣ್ಣಯ್ಯ ಹಾಗೂ ಪಾರು ಜೋಡಿ ಮಾಡಿದ ಮೋಡಿ.

ಜೀ ಕನ್ನಡ ವೇದಿಕೆಯಲ್ಲಿ ಶಿವು, ಪಾರು ಡ್ಯಾನ್ಸ್‌
ಜೀ ಕನ್ನಡ ವೇದಿಕೆಯಲ್ಲಿ ಶಿವು, ಪಾರು ಡ್ಯಾನ್ಸ್‌ (ಜೀ ಕನ್ನಡ)

ಅಣ್ಣಯ್ಯ ಧಾರಾವಾಹಿಯ ಶಿವು ಹಾಗೂ ಪಾರು ಕಾಂತಾರ ಸಿನಿಮಾದ ಹಾಡಿಗೆ ನೃತ್ಯ ಮಾಡಿದ್ದಾರೆ. ಜಾನಪದ ಶೈಲಿಯ ಸೆಟ್‌ ಹಾಕಲಾಗಿದ್ದು ಅದಕ್ಕೊಪ್ಪುವಂತೆ ನೃತ್ಯ ಮಾಡಿದ್ದಾರೆ. ಶಿವು ಹಾಗೂ ಪಾರು ಧಾರಾವಾಹಿಯಲ್ಲಿ ಇನ್ನು ಸಂಪೂರ್ಣವಾಗಿ ಪ್ರೀತಿಯಲ್ಲಿ ಬೀಳದಿದ್ದರೂ ವೇದಿಕೆ ಮೇಲೆ ಅವರಿಬ್ಬರು ಮಾಡಿದ ಡಾನ್ಸ್‌ ನೋಡಿ ವೀಕ್ಷಕರು ಫುಲ್ ಖುಷಿಯಾಗಿದ್ದಾರೆ. ಯಕ್ಷಗಾನದ ವೇಷ ಹಾಗೂ ಹಳ್ಳಿ ಸೊಗಡಿನ ವಾತಾವರಣವನ್ನು ವೇದಿಕೆ ಮೇಲೆ ನಿರ್ಮಾಣ ಮಾಡಲಾಗಿದೆ. ಅಣ್ಣಯ್ಯ ಧಾರಾವಾಹಿಯಲ್ಲಿ ದಿನವೂ ಅಣ್ಣಯ್ಯ ಬಳಸುತ್ತಿರುವ ಒಂದು ಸ್ಕೂಟರ್ ಇದೆ. ಆ ಸ್ಕೂಟರ್‌ಅನ್ನು ವೇದಿಕೆ ಮೇಲೆ ತರಾಗಿದೆ. ವಿಭಿನ್ನ ರೀತಿಯಲ್ಲಿ ವೇದಿಕೆ ಎಂಟ್ರಿ ನೀಡಲು ಇದನ್ನು ಬಳಸಿಕೊಳ್ಳಲಾಗಿದೆ.

ಮೊದಲಿಗೆ ಶಿವು ಹಾಗೂ ವೇದಿಕೆಯನ್ನು ಪ್ರವೇಶ ಮಾಡುವಾಗ ಸ್ಕೂಟರ್‌ ಮೇಲೆ ಬರುತ್ತಾರೆ. ಇನ್ನು ಹಳ್ಳಿಯ ವಾತಾವರಣ ನಿರ್ಮಾಣ ಮಾಡುವ ಸಲುವಾಗಿ ಅಲ್ಲಿ ಒಣ ಹುಲ್ಲು, ಬೆತ್ತದ ಬುಟ್ಟಿಗಳು ಮತ್ತು ಮಣ್ಣಿನ ಮನೆಯಂತೆ ಕಾಣುವ ಒಂದು ಮನೆಯನ್ನೂ ರೆಡಿ ಮಾಡಲಾಗಿದೆ.

ತುಂಬಾ ರೊಮ್ಯಾಂಟಿಕ್ ಸ್ಟೆಪ್‌ಗಳೊಂದಿಗೆ ತಾಳಕ್ಕೆ ತಕ್ಕಂತೆ ಈ ಜೋಡಿ ಹೆಜ್ಜೆಹಾಕಿದೆ. ಇವರ ನೃತ್ಯ ನೋಡುತ್ತಾ ಉಳಿದವರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ. ಪ್ರಶಸ್ತಿಗಳ ಮಧ್ಯೆ ಒಂದಷ್ಟು ಈ ರೀತಿ ಮನರಂಜನೆಗಳನ್ನೂ ಜೀ ಕುಟುಂಬ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಇಡಲಾಗಿತ್ತು. ಕಾಂತಾರದ ಹಾಡನ್ನೇ ವೇದಿಕೆ ಮೇಲೆ ಮರು ಸೃಷ್ಟಿ ಮಾಡಲಾಗಿತ್ತು. ಇವರಿಬ್ಬರು ಒಳ್ಳೆಯ ಕಲಾವಿದರು ಎನ್ನುವುದರೊಟ್ಟಿಗೆ ಒಳ್ಳೆಯ ನೃತ್ಯಗಾರರೂ ಹೌದು ಎನ್ನುವುದು ವೇದಿಕೆಯಲ್ಲಿ ತಿಳಿಯುತ್ತಿತ್ತು.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Whats_app_banner