ಜೀ ಕುಟುಂಬ ಅವಾರ್ಡ್ಸ್ 2024: ನಾಲ್ವರು ತಂಗಿಯರಲ್ಲಿ ನಿಮಗ್ಯಾರು ಇಷ್ಟ? ಅಣ್ಣಯ್ಯ ನೀಡಿದ ಉತ್ತರಕ್ಕೆ ಅವಾಕ್ಕಾದ ಅಕುಲ್
Zee Kutumba Awards 2024: ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಅಣ್ಣಯ್ಯ ಶಿವುಗೆ ಒಂದು ಪ್ರಶ್ನೆ ಕೇಳುತ್ತಾರೆ. ನಾಲ್ಕು ಜನ ತಂಗಿಯರಲ್ಲಿ ನಿಮಗೆ ಯಾರಿಷ್ಟ ಎಂದು. ಅದಕ್ಕೆ ಶಿವು ನೀಡಿದ ಉತ್ತರಕ್ಕೆ ಎಲ್ಲರ ಪ್ರತಿಕ್ರಿಯೆ ಹೇಗಿತ್ತು? ಅಣ್ಣಯ್ಯ ಏನಂದ್ರು? ನೋಡಿ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಯ ಪಾತ್ರವರ್ಗವನ್ನು ಮಾತನಾಡಿಸುತ್ತಾ, ಜೀ ಕುಟುಂಬ ಅವಾರ್ಡ್‌ನಲ್ಲಿ ಅಣ್ಣಯ್ಯ ಶಿವುಗೆ ಒಂದು ಪ್ರಶ್ನೆ ಕೇಳುತ್ತಾರೆ. ಅಣ್ಣಯ್ಯ ಧಾರಾವಾಹಿಯಲ್ಲಿ ಅಣ್ಣಯ್ಯನಿಗೆ ನಾಲ್ಕು ತಂಗಿಯರಿದ್ದಾರೆ. ಅವರಲ್ಲಿ ಯಾವ ತಂಗಿ ಅಂದ್ರೆ ನಿನಗೆ ಇಷ್ಟ? ಎಂದು ಶಿವು ಹತ್ತಿರ ನಿರೂಪಕ ಅಕುಲ್ ಬಾಲಾಜಿ ಕೇಳುತ್ತಾರೆ. ಆಗ ಅಣ್ಣಯ್ಯ ನನ್ನಿಂದ ಇದಕ್ಕೆ ಖಂಡಿತ ಉತ್ತರ ಸಿಗೋದಿಲ್ಲ ಎಂದು ಹೇಳುತ್ತಾರೆ. ಯಾಕೆ ಎಂದು ಕೇಳಿದಾಗ ಎಲ್ಲರೂ ನನಗೆ ಇಷ್ಟ, ಯಾರಾದರೂ ಒಬ್ಬರನ್ನು ಹೇಳು ಎಂದರೆ ನಾನು ಹೇಳಲು ಆಗೋದಿಲ್ಲ. ಎಲ್ಲರೂ ನನಗೆ ಸಮಾನವಾಗಿ ಇಷ್ಟ ಎಂದು ಅಣ್ಣಯ್ಯ ಹೇಳುತ್ತಾರೆ. ತೆರೆಯ ಮೇಲೆ ಹಾಗೂ ತೆರೆಯ ಹಿಂದೆ ಎಲ್ಲಾ ಕಡೆ ನನಗೆ ಇವರು ತಂಗಿಯರೇ, ಒಬ್ಬೊಬ್ಬರು ನನಗೆ ಒಂದೊಂದು ರೀತಿಯಲ್ಲಿ ಇಷ್ಟ ಎಂದು ಹೇಳುತ್ತಾರೆ.
ಹೀಗಿತ್ತು ಅಣ್ಣಯ್ಯನ ಉತ್ತರ
ಈ ಮಾತನ್ನು ಕೇಳಿ ಎಲ್ಲರಿಗೂ ಸಂತೋಷವಾಗುತ್ತದೆ. ನಂತರ ಯಾಕೆ ನಿಮಗೆ ಎಲ್ಲರೂ ಇಷ್ಟ ಎಂದು ವಿವರಿಸಿ ಎಂದು ಅಕುಲ್ ಕೇಳುತ್ತಾರೆ. ಆಗ ಒಬ್ಬೊಬ್ಬರ ಬಗ್ಗೆ ಅಣ್ಣಯ್ಯ ಹೇಳುತ್ತಾ ಹೋಗುತ್ತಾರೆ. ಆಗ ಮೊದಲನೆಯವಳು ರತ್ನ ಅವಳು ತುಂಬಾ ಕೇರಿಂಗ್ ನೇಚರ್ ಇರುವವಳು ಎಂದು ಹೇಳುತ್ತಾ, ಅವಳು ಯಾವುದನ್ನೂ ತೋರಿಸಿಕೊಳ್ಳುವುದಿಲ್ಲ ಆದರೆ ಎಲ್ಲನ್ನೂ ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ ಎನ್ನುತ್ತಾರೆ.
ಇನ್ನು ಎರಡನೇಯವಳು ರತ್ನ ಅವಳು ಯಾವಾಗಲೂ ಬೈತಾನೆ ಪ್ರೀತಿ ತೋರಿಸುತ್ತಾಳೆ. ಏ ನೀರ್ ಕುಡಿಯೋ? ತಿಂಡಿ ತಿಂದ್ಯಾ? ಈ ರೀತಿ ಗದರಿಸಿ ಅವಳು ಕೇಳುತ್ತಾಳೆ ಎನ್ನುತ್ತಾರೆ. ಅದಾದ ನಂತರದಲ್ಲಿ ಮೂರನೆ ತಂಗಿಗೆ ಆಗಾಗ ಮಾತ್ರ ತುಂಬಾ ಬೇಸರ ಮಾಡಿಕೊಂಡು ಮನೆ ನೆನಪಾದಾಗ ಬಂದು ನನತ್ರ ಮಾತಾಡ್ತಾಳೆ. ಎಲ್ಲವನ್ನೂ ತೋರಿಸಿಕೊಳ್ಳೋದಿಲ್ಲ ಬಟ್ ನನಗೆ ಅವಳ ಎಲ್ಲ ಕಷ್ಟ ಅವಳ ಮೂಡ್‌ಗಳು ಹೇಗಿರುತ್ತದೆ ಅನ್ನೋದು ಅರ್ಥ ಆಗುತ್ತದೆ ಎಂದಿದ್ದಾರೆ. ಇನ್ನು ನಾಲ್ಕನೆಯವಳು ತುಂಬಾ ಚಿಕ್ಕವಳು ಅವಳೂ ಅಷ್ಟೇ ತುಂಬಾ ರಿಸರ್ವ್ಡ್ ಆಗಿ ಇರ್ತಾಳೆ. ಎಲ್ಲರೂ ತುಂಬಾ ಪ್ರೀತಿ ತೋರಿಸುತ್ತಾರೆ ಎಂದು ಹೇಳಿದ್ದಾರೆ
ತೆರೆಯ ಮೇಲೆ ಹಾಗೂ ತೆರೆಯ ಹಿಂದೆ ಎರಡೂ ಕಡೆ ಒಂದೇ ರೀತಿ ಸಂಬಂಧ ಇಟ್ಟುಕೊಂಡು ಅನ್ಯೂನ್ಯವಾಗಿರೋದಕ್ಕೆ ನಿಮ್ಮ ಧಾರಾವಾಹಿ ಇಷ್ಟು ಚೆನ್ನಾಗಿ ಮೂಡಿ ಬರುತ್ತಿದೆ ಎಂದು ಅಕುಲ್ ಬಾಲಾಜಿ ಹೇಳಿದ್ದಾರೆ.
ಇನ್ನು ಅಮೃತಧಾರೆಯ ಅಪರ್ಣಾ ಕೂಡ ವೇದಿಕೆಯಲ್ಲಿರುತ್ತಾರೆ. ನಾನು ಯಾಕೆ ಈ ಸಾಲಲ್ಲಿ ನಿಂತಿದಿನಿ ಅಂತ ಎಲ್ಲರೂ ಅಂದುಕೊಂಡಿರಬಹುದು. ಯಾಕೆಂದರೆ ಈಗ ನನ್ನ ಪಾತ್ರ ಆರೀತಿಯಾಗಿ ಬದಲಾಗಿದೆ ಎಂದು ಹೇಳುತ್ತಾಳೆ. ಮೊದಲು ಭೂಮಿಕಾ ಜೊತೆ ಅಕ್ಕ, ತಂಗಿಯ ಪ್ರೀತಿ ಇರ್ತಾ ಇತ್ತು. ಆದ್ರೆ ಈಗ ಅದು ಬದಲಾಗಿದ್ದರೂ ಹಿಂದಿನ ದಿನಗಳು ತುಂಬಾ ಖುಷಿಯಾಗಿತ್ತು ಎಂದು ಹೇಳಿದ್ದಾರೆ.
