ಕನ್ನಡ ಸುದ್ದಿ  /  Entertainment  /  Televison News Aamruthadhaare Serial Episode 205 Jaidev Planned To Finish Malli Bhumika Enters Pcp

Aamruthadhaare: ಲೋಕಿ ಮುಂದಿಟ್ಟುಕೊಂಡು ಜೈದೇವ್‌ ಹೊಸ ನಾಟಕ, ಪಿಸ್ತೂಲ್‌ ಹಿಡಿದು ಗೂಂಡಾಗಳನ್ನು ಹಿಮ್ಮೆಟ್ಟಿಸಿದ ಭೂಮಿಕಾ

Aamruthadhaare serial episode: ಗೂಂಡಾಗಳು ಮಲ್ಲಿ ಮನೆಗೆ ಆಗಮಿಸುತ್ತಾರೆ. ಗೂಂಡಾಗಳಿಂದ ಪೆಟ್ಟು ತಿಂದಂತೆ ಜೈದೇವ್‌ ನಾಟಕವಾಡುತ್ತಾನೆ. ಗೂಂಡಾಗಳು ಮಲ್ಲಿಯನ್ನು ಹಿಡಿಯುತ್ತಾರೆ. ಭೂಮಿಕಾಳ ಎಂಟ್ರಿ ಆಗುತ್ತದೆ.

ಗೂಂಡಾಗಳನ್ನು ಹಿಮ್ಮೆಟ್ಟಿಸಿದ ಭೂಮಿಕಾ
ಗೂಂಡಾಗಳನ್ನು ಹಿಮ್ಮೆಟ್ಟಿಸಿದ ಭೂಮಿಕಾ

Aamruthadhaare serial: ಶಕುಂತಲಾದೇವಿ ಮತ್ತು ಜೈದೇವ್‌ ನಾಟಕದ ಭಾಗವಾಗಿ ಮನೆಯಿಂದ ಎಲ್ಲರನ್ನೂ ಹೊರಕ್ಕೆ ಕಳುಹಿಸಲಾಗಿರುತ್ತದೆ. ಈ ಸಮಯದಲ್ಲಿ ಮಲ್ಲಿಯನ್ನು ಮುಗಿಸಲು ಜೈದೇವ್‌ ಗೂಂಡಾಗಳನ್ನು ಕರೆಸಿಕೊಂಡಿರುತ್ತಾನೆ. ತವರು ಮನೆಯಲ್ಲಿದ್ದ ಭೂಮಿಕಾಗೆ ಏನೋ ಅನುಮಾನ ಬರುತ್ತದೆ. ಶಿವರಾತ್ರಿ ನಡೆಯುತ್ತಿದ್ದ ತವರು ಮನೆಯಿಂದ ಅನುಮಾನಗೊಂಡ ಭೂಮಿಕಾ ವಾಪಸ್‌ ಬರುತ್ತಾಳೆ. ಇನ್ನೊಂದೆಡೆ ಏನೂ ಗೊತ್ತಿಲ್ಲದ ಮಲ್ಲಿ ಮನೆಯಲ್ಲಿ ಇರುತ್ತಾಳೆ. ಆ ಸಮಯದಲ್ಲಿ ನಾಲ್ಕೈದು ಗೂಂಡಗಳು ಮನೆಗೆ ಆಗಮಿಸುತ್ತಾರೆ. ಅವರನ್ನು ನೋಡಿ ಮಲ್ಲಿ ಬೆಚ್ಚಿ ಬೀಳುತ್ತಾಳೆ. "ಯಾರ್ರೋ ನೀವು" ಎನ್ನುತ್ತಾಳೆ. ಇವಳನ್ನು ನೋಡಿದ ಗೂಂಡಗಳು "ಇವಳೇ ಕಣ್ರೋ" ಎಂದು ಹೇಳುತ್ತ ಇವಳತ್ತ ಬರುತ್ತಾಳೆ. ಜೈದೇವ್‌ ಇವರನ್ನು ಕಳಿಸಿದ್ದು ಎಂದು ತಿಳಿಯದೇ "ತಾತಾ" ರೀ" ಎಂದೆಲ್ಲ ಇವಳು ಕರೆಯುತ್ತಾಳೆ. ಈ ಸಮಯದಲ್ಲಿ ಜೈದೇವ್‌ ಆಗಮಿಸಿ ನಾಟಕೀಯವಾಗಿ "ಯಾರ್ರೋ ನೀವೆಲ್ಲ" ಎಂದೆಲ್ಲ ಕೇಳುತ್ತಾರೆ. ಆ ಸಮಯದಲ್ಲಿ ಒಬ್ಬ ಮುಖವಾಡ ತೆಗೆಯುತ್ತಾನೆ. ಮಲ್ಲಿ ಕೆಲಸದವನ ಜತೆ ಓಡಿ ಹೋಗಿದ್ದಾಳೆ ಅಂತ ಅಂದು ನಾಟಕವಾಡಿದ ಆ ವ್ಯಕ್ತಿಯೇ ಆಗಿರುತ್ತಾನೆ.

ಇನ್ನೊಂದೆಡೆ ಆಟೋದಲ್ಲಿ ಭೂಮಿಕಾ ಬರುತ್ತಾಳೆ. ಆ ಕೆಲಸದವಳು "ನಿಮ್ಮ ಅಣ್ಣ ಅತ್ತಿಗೆ ಬಂದು ಎಲ್ಲಾ ಹಾಳು ಮಾಡಿದ್ದಾರೆ. ನನಗೆ ಸಿಗಬೇಕಾದ ಹಣ ಸಿಗಲಿಲ್ಲ" ಎಂದೆಲ್ಲ ಹೇಳುತ್ತಾನೆ. "ಎಲ್ಲದಕ್ಕೂ ಇವಳೇ ಕಾರಣ" ಎಂದೆಲ್ಲ ಹೇಳುತ್ತಾನೆ. ಇಬ್ಬರು ಜೈದೇವ್‌ನನ್ನೇ ಹಿಡಿಯತ್ತಾರೆ. ಎರಡು ಪೆಟ್ಟು ಕೊಟ್ಟು ಆತನನ್ನು ರೂಂನಲ್ಲಿ ಕೂಡಿ ಹಾಕುತ್ತಾರೆ. ಒಂದು ಕಣ್ಣು ತೆರೆದು ಆತ ತಾನು ಮಾಡುತ್ತಿರುವುದು ನಾಟಕ ಎಂದು ವೀಕ್ಷಕರಿಗೆ ತಿಳಿಸುತ್ತಾನೆ. ಇನ್ನೊಂದೆಡೆ ಮಲ್ಲಿ ಓಡುತ್ತಾಳೆ. ಇವರು ಬೆನ್ನಟ್ಟುತ್ತಾರೆ. ಆಕೆ ಅಡಗಿಕೊಳ್ಳುತ್ತಾಳೆ. ಮನೆಯಲ್ಲಿ ಗೂಂಡಗಳು ಹುಡುಕಾಟ ನಡೆಸುತ್ತಾರೆ. ಮತ್ತೆ ಇವಳನ್ನು ನೋಡಿದ ಅವರೆಲ್ಲ ಬೆನ್ನಟ್ಟುತ್ತಾರೆ.

ಇದೇ ಸಮಯದಲ್ಲಿ ಹೊರಗೆ ತಾತಾನ ನೋಡಿ ಮಲ್ಲಿ ಜೋರಾಗಿ ತಾತಾ ಎಂದು ಕರೆಯುತ್ತಾಳೆ. ತಾತಾನ ಕಣ್ಣಿಗೆ ಗೂಂಡಾಗಳು ಬೀಳುತ್ತಾರೆ. ತಾತಾ ಓಡೋಡಿ ಬರುತ್ತಾನೆ. ತಾತಾನಿಗೆ ಹೊಡೆಯುತ್ತಾರೆ. ತಾತಾ ಬೀಳುತ್ತಾನೆ. ಇನ್ನೊಂದೆಡೆ ಭೂಮಿಕಾ ಮನೆಗೆ ಆಗಮಿಸುತ್ತಾಳೆ. ಮಲ್ಲಿಯನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಭೂಮಿಕಾಳ ಕಣ್ಣಿಗೆ ಬಿದ್ದಿರುವ ತಾತಾ ಕಾಣಿಸುತ್ತಾರೆ. ಭೂಮಿಕಾ ಮನೆಯೆಲ್ಲ ಮಲ್ಲಿಯನ್ನು ಹುಡುಕುತ್ತಾರೆ.

ಮತ್ತೊಂದೆಡೆ ಪಾರ್ಥ ಮತ್ತು ಅಪೇಕ್ಷಾಳ ಲವ್‌ ಸ್ಟೋರಿ ನಡೆಯುತ್ತ ಇರುತ್ತದೆ. ಶಿವರಾತ್ರಿಗೆ ಪಾರ್ಥ ಅಪೇಕ್ಷಾ ಮನೆಯಲ್ಲಿ ಇರುತ್ತಾನೆ. "ದೇವರ ಪೂಜೆ ಮುಗಿಯಿತು, ದೇವಿ ಪೂಜೆ ಮುಗಿದಿಲ್ಲ" ಎಂದೆಲ್ಲ ಪಾರ್ಥ ಹೇಳುತ್ತಾನೆ. ಪೂಜೆಗೆ ಬಂದರೂ ಪ್ರಸಾದ ಸಿಗಲಿಲ್ಲ ಎನ್ನುತ್ತಾನೆ.

ಮಲ್ಲಿಯನ್ನು ಗೂಂಡಗಳು ಎಳೆದುಕೊಂಡು ಹೋಗುತ್ತ ಇರುತ್ತಾರೆ. ಮರೆಯಲ್ಲಿ ನಿಂತು ನೋಡುತ್ತ ಜೈದೇವ್‌ ಖುಷಿ ಪಡುತ್ತಾನೆ. ಆ ಸಮಯದಲ್ಲಿ ಭೂಮಿಕಾ ನಿಂತುಕೊಳ್ಳಿ ಎನ್ನುತ್ತಾಳೆ. ಲೋಕಿಯನ್ನು ನೋಡಿ ಆಶ್ಚರ್ಯವಾಗುತ್ತದೆ. ಲೋಕಿ ಭೂಮಿಕಾಳಿಗೆ ಅವಾಜ್‌ ಹಾಕುತ್ತಾನೆ. ಆ ಸಮಯದಲ್ಲಿ ಭೂಮಿ ಕೈಯಲ್ಲಿ ಪಿಸ್ತೂಲ್‌ ತೋರಿಸಿ ಎಲ್ಲರನ್ನೂ ಬೆದರಿಸುತ್ತಾಳೆ. ಆಕೆ ಮನೆಯಿಂದ ರಿವಾಲ್ವರ್‌ ಹಿಡಿದುಕೊಂಡು ಬಂದಿರುತ್ತಾಳೆ. ಗೂಂಡಾಗಳು ಓಡಿ ಹೋಗುತ್ತಾರೆ. ಜೈದೇವ್‌ ತಲೆಮೇಲೆ ಕೈಯಿಟ್ಟುಕೊಳ್ಳುತ್ತಾನೆ. ಭೂಮಿಕಾಳನ್ನು ಮಲ್ಲಿ ಸಂತೈಸುತ್ತಾಳೆ. ಮತ್ತೆ ಗೌತಮ್‌ ಬರುತ್ತಾನೆ. "ಮಲ್ಲಿ ಹುಷಾರಿಲ್ಲ ಅಂದ್ಲು ಅದಕ್ಕೆ ಬಂದೆ" ಅನ್ನುತ್ತಾಳೆ. "ಅಕ್ಕಾ ಯಾಕೆ ಸುಳ್ಳು ಹೇಳಿದ್ರು" ಎಂದು ಮಲ್ಲಿ ಆಲೋಚಿಸುತ್ತಾಳೆ. ಅಕ್ಕಾರೆ ಯಾಕೆ ಹೀಗೆ ಹೇಳಿದ್ರಿ ಎಂದು ಮಲ್ಲಿ ಕೇಳುತ್ತಾಳೆ. "ವಿಷಯದ ಕುರಿತು ಸರಿಯಾಗಿ ತಿಳಿಯುವ ತನಕ ಮುಂದುವರೆಯುವುದು ಬೇಡ" ಎಂದು ಭೂಮಿಕಾಆ ಹೇಳುತ್ತಾಳೆ. ಭೂಮಿಕಾಳ ಮನಸ್ಸಲ್ಲಿ ಏನೇನೋ ಯೋಚನೆಗಳು. ಸೀರಿಯಲ್‌ ಮುಂದುವರೆಯುತ್ತದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)
ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್‌: ಜೈದೇವ್‌
ಚಂದನ್‌: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)
ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

IPL_Entry_Point