Amruthadhaare: ನಮ್ಮ ನಡುವೆ ಏನೂ ಇಲ್ಲ ಅಗ್ರಿಮೆಂಟ್ ಮದುವೆ ಅನ್ತಾನೆ ಗೌತಮ್; ಇದೀಗ ಭೂಮಿಕಾಳಿಗೆ ಸಿಹಿಮುತ್ತು ಕೊಡುವ ಸನ್ನಿವೇಶ ಸೃಷ್ಟಿ
Amruthadhaare serial: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ಗೆ ಹೊಸ ಸವಾಲು ಎದುರಾಗಿದೆ. ಅದು ಭೂಮಿಕಾಳಿಗೆ ಮುತ್ತು ಕೊಡುವ ಟಾಸ್ಕ್. ಗೌತಮ್ ಭೂಮಿಕಾರ ಮದುವೆ ಅಗ್ರಿಮೆಂಟ್ ತಿಳಿದ ಬಳಿಕ ಆನಂದ್ ಈ ಚುಂಬನದ ಟಾಸ್ಕ್ ನೀಡಿರುತ್ತಾನೆ.
ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿಯನ್ನು ಸಾಯಿಸುವ ಸಂಚು ವಿಫಲವಾಗಿದೆ. ವಿಷದ ಆಹಾರ ಸೇವಿಸಿ ಶಕುಂತಲಾದೇವಿ ಔಷಧಿ ಸೇವಿಸಿ ಗುಣಮುಖರಾಗ್ತಾ ಇದ್ದಾರೆ. ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಬುಧವಾರದ ಸಂಚಿಕೆಯಲ್ಲಿ ಏನೆಲ್ಲ ನಡೀತು ಎನ್ನುವುದನ್ನು ನೋಡೋಣ. "ನೀವೇ ಹೇಳಿ ಜೈದೇವ್ ಅವರಿಗೆ, ಈ ರೀತಿ ಚೀಪ್ ಟ್ರಿಕ್ಸ್ ಮಾಡಬೇಡಿ" ಎಂದು ಶಕುಂತಲಾದೇವಿಗೆ ಭೂಮಿಕಾ ಸಲಹೆ ನೀಡುತ್ತಾಳೆ. "ಮಲ್ಲಿಯನ್ನು ಮನೆ ಸೊಸೆಯಾಗಿ ಒಪ್ಪಿಕೊಳ್ಳಿ, ಇಲ್ಲಾಂದ್ರೆ ಇದು ಮನೆಯಾಗಿರುವುದಿಲ್ಲ" ಎಂದೆಲ್ಲ ಭೂಮಿಕಾ ಹೇಳುತ್ತಾಳೆ.
ಇನ್ನೊಂದೆಡೆ ಗೌತಮ್ ಆಫೀಸ್‌ನಲ್ಲಿ ಮೊಬೈಲ್‌ನಲ್ಲಿ "ಭೂಮಿಕಾ ಮುತ್ತು ನೀಡಿದ ಆ ದಿನದ ಘಟನೆಯ" ಫೋಟೋವನ್ನು ನೋಡುತ್ತಾ ಇರುತ್ತಾನೆ. ಆ ಸಮಯದಲ್ಲಿ ಆನಂದ್ ಬರುತ್ತಾನೆ. "ನಾನು ಬರುತ್ತಿದ್ದಾಗ ಮೊಬೈಲ್ ಅನ್ನು ಉಲ್ಟಾ ಇಟ್ನಾ" ಎಂದು ಅನುಮಾನದಿಂದ ನೋಡುತ್ತಾನೆ. ಇದೇ ಸಂದರ್ಭದಲ್ಲಿ ಮೆಲ್ಲಗೆ ಹೋಗಿ ಮೊಬೈಲ್ ಎತ್ತಿಕೊಳ್ಳುತ್ತಾನೆ. ಮೊಬೈಲ್‌ನಲ್ಲಿ ಕಿಸ್ಸಿಂಗ್ ಫೋಟೋ ನೋಡುತ್ತಾನೆ. "ಆದ್ರೂ ಅಮೇಜಿಂಗ್ ಕಣೋ" ಎಂದೆಲ್ಲ ಗೆಳೆಯನಿಗೆ ಕಾಮೆಂಟ್ ಮಾಡುತ್ತಾನೆ ಆನಂದ. ನನಗೆ ಮದುವೆ ಬೇಡ ಅನ್ನುತ್ತಿದ್ದ ನೀನು ಈ ಲೆವೆಲ್‌ಗೆ ಬದಲಾಗಿದ್ದಿ ಎಂದೆಲ್ಲ ಕಾಮೆಂಟ್ ಮಾಡುತ್ತಾನೆ. "ನಾನು ಮೊದಲಿನ ಹಾಗೆ ಇದ್ದೀನಿ, ಏನೂ ಬದಲಾಗಿಲ್ಲ" ಎಂದೆಲ್ಲ ಗೌತಮ್ ಹೇಳುತ್ತಾನೆ.
ಇದನ್ನು ಓದಿ: ಅಮೃತಧಾರೆ ಧಾರಾವಾಹಿಯ ಎಲ್ಲಾ ಸಂಚಿಕೆಗಳು
"ನಮ್ಮಿಬ್ಬರ ನಡುವಿನ ಸಂಬಂಧ ನೀನು ಅಂದುಕೊಂಡಂತೆ ಇಲ್ಲ. ನಮ್ಮಿಬ್ಬರ ನಡುವೆ ದೊಡ್ಡ ಗೋಡೆ ಇದೆ" ಎಂದು ಹಳೆಯ ಕಥೆ ಹೇಳುತ್ತಾನೆ. "ಭೂಮಿಕಾಳ ಜತೆ ಮದುವೆಯಾದ ಆ ದಿನದ ಘಟನೆ, ಗಂಡಹೆಂಡತಿಯರಾಗಿದ್ರು ಫ್ರೆಂಡ್ಸ್ ರೀತಿ ಇದ್ದೇವೆ" ಎಂದು ಹೇಳುತ್ತಾನೆ. "ಅದುವೇ ನಿಜವೇ ಆಗಿದ್ರೆ ಈ ಕಿಸ್ ಹೇಗೆ?" ಎಂದು ಆನಂದ್ ಕೇಳುತ್ತಾನೆ. "ಪಾರ್ಟಿಯಲ್ಲಿ ನೀನು ಅಪರ್ಣಾ ಮಾಡಿದ್ದು" ಎಂದೆಲ್ಲ ಗೌತಮ್ ಹೇಳುತ್ತಾನೆ. ಅಂದಿನ ಘಟನೆಯನ್ನು ನೆನಪಿಸಿ ಆನಂದ್‌ಗೆ ಹೇಳುತ್ತಾನೆ.
ಇನ್ನೊಂದೆಡೆ ಶಕುಂತಲಾದೇವಿ, ಜೈದೇವ್, ಮಾವನ ಮಾತುಕತೆ ಇರುತ್ತದೆ. "ನನಗೆ ಏನೂ ಆಗೋದಿಲ್ಲ. ನಿನ್ನ ಲೈಫ್ ಸರಿ ಮಾಡೋದೇ ನನ್ನ ಮುಂದಿರುವ ಪ್ರಮುಖ ಕೆಲಸ" ಎಂದು ಶಕುಂತಲಾದೇವಿ ಹೇಳುತ್ತಾಳೆ. ಜೈದೇವ್ ಬಗ್ಗೆ ಒಂದಿಷ್ಟು ಕಾಳಜಿಯ ಮಾತನಾಡುತ್ತಾರೆ. "ಇನ್ಮುಂದೆ ಏನಾದರೂ ಮಾಡೋಕ್ಕೆ ಹೋದ್ರೆ ನನಗೆ ಹೇಳಿಬಿಟ್ಟೇ ಮಾಡು" ಎಂದು ಶಕುಂತಲಾದೇವಿ ಹೇಳುತ್ತಾರೆ. "ಏನೇ ಮಾಡಿದ್ರೂ ರಕ್ತ ಕೈಗೆ ಅಂಟಿಕೊಳ್ಳಬಾರದು. ಆಮೇಲೆ ಎಷ್ಟು ತೊಳೆದ್ರು ಅದು ಹೋಗೋದಿಲ್ಲ. ರಕ್ತದ ವಾಸನೆ ತುಂಬಾ ಕೆಟ್ಟದ್ದಾಗಿರುತ್ತದೆ. ಅದು ನಮ್ಮ ನೆಮ್ಮದಿ, ನಿದ್ದೆ ಕಸಿದುಕೊಳ್ಳುತ್ತದೆ" ಎಂದು ಶಕುಂತಲಾದೇವಿ ಹೇಳುತ್ತಾರೆ. "ಬಾಳೆಹಣ್ಣಿಗೆ ಸೂಜಿ ಚುಚ್ಚುವ ರೀತಿ ಮಾಡಬೇಕು" ಎಂದು ಮಾವ ಸಲಹೆ ನೀಡುತ್ತಾನೆ. "ಸದ್ಯ ಸೈಲೆಂಟ್ ಆಗಿರು, ಮುಂದೆ ಏನು ಮಾಡಬೇಕು ನಾನು ಹೇಳ್ತಿನಿ" ಎಂದು ಶಕುಂತಲಾದೇವಿ ಹೇಳುತ್ತಾರೆ.
"ಮಲ್ಲಿ ನನಗೆ ಯಾವತ್ತೂ ನಿನ್ನ ಜತೆ ಇರಲು ಆಗುವುದಿಲ್ಲ. ನಿನ್ನ ಕೋಣೆಗೆ ಯಾವಾಗಲೂ ಬರಲು ಆಗೋದಿಲ್ಲ. ನೀನು ಗಟ್ಟಿಯಾಗಿರಬೇಕು" ಎಂದು ಭೂಮಿಕಾ ಮಲ್ಲಿಗೆ ಸಲಹೆ ನೀಡುತ್ತಾಳೆ. ಕುಗ್ಗಬೇಡ, ಹೋಪ್ಸ್ ಕಳೆದುಕೊಳ್ಳಬೇಡ, ನಿನ್ನ ಜೀವನದಲ್ಲಿ ಒಳ್ಳೆಯ ದಿನ ವಾಪಸ್ ಬರುತ್ತದೆ. ಕೊನೆಗೆ ಪ್ರೀತಿಯೇ ಗೆಲ್ಲೋದು, ಸ್ವಲ್ಪ ತಾಳ್ಮೆ ಇರಲಿ ಎಂದೆಲ್ಲ ಭೂಮಿಕಾ ಸಲಹೆ ನೀಡುತ್ತಾಳೆ. "ನೀನು ಧೈರ್ಯವಾಗಿರು, ಜೈದೇವ್‌ಗೆ ನಿನ್ನ ಮೇಲೆ ಪ್ರೀತಿ ಬರುವ ಹಾಗೆ ನಾನು ಮಾಡ್ತಿನಿ" ಎಂದು ಭರವಸೆ ತುಂಬುತ್ತಾಳೆ. ಮಲ್ಲಿಯೂ ತನಗೆ ಜೈದೇವ್ ಮೇಲಿರುವ ಪ್ರೀತಿಯ ಕುರಿತು ಹೇಳುತ್ತಾಳೆ.
ಇನ್ನೊಂದೆಡೆ ಆನಂದ್ ಗೌತಮ್‌ಗೆ "ಭೂಮಿಕಾ ಎಲ್ಲಾ ಮಾಡಿದ್ದಾರೆ. ಈಗಾಗಲೇ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ನೀನು ಏನೂ ಮಾಡಿಲ್ಲ" ಎಂದೆಲ್ಲ ಹೇಳುತ್ತಾನೆ. "ನೀನೂ ಒಂದು ಅತ್ತಿಗೆಗೆ ಮುತ್ತು ಕೊಡಬೇಕು" ಎಂದು ಹೇಳುತ್ತಾನೆ. ಆ ಸಮಯದಲ್ಲಿ ಆಫೀಸ್‌ನ ಅಂಕಲ್ ಒಬ್ಬರು ಮೂರನೇ ಮಗುವಾದ ಲೆಕ್ಕದಲ್ಲಿ ಸ್ವೀಟ್ ತಂದುಕೊಡುತ್ತಾರೆ. "ನೀನು ಒಂದಾದರೂ ಮಾಡಬೇಕು" ಎಂದು ಆನಂದ್ ಹೇಳುತ್ತಾನೆ. ಅತ್ತಿಗೆಗೆ ನಿನ್ನ ಮೇಲೆ ಸಿಕ್ಕಾಪಟ್ಟೆ ಲವ್ ಇದೆ, ನಿನಗೂ ಇದೆ, ಒಂದು ಕಿಸ್ ನೀಡು, ಆಗ ನಿನ್ನ ಪ್ರೀತಿಯನ್ನು ತೋರಿಸಿದಂತೆ ಆಗುತ್ತದೆ. ನೀನು ಕಿಸ್ ನೀಡದೆ ಇದ್ದರೆ ಮದುವೆ ಅಗ್ರಿಮೆಂಟ್ ವಿಷಯ ಎಲ್ಲರಿಗೂ ಹೇಳುತ್ತೇನೆ. ಅಜ್ಜಿಗಾದರೂ ಹೇಳ್ತಿನಿ" ಎನ್ನುತ್ತಾನೆ. ಒಟ್ಟಾರೆ ಭೂಮಿಕಾಳಿಗೆ ಮುತ್ತು ಕೊಡುವುದು ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಾಣ ಮಾಡುತ್ತಾನೆ.
ಗೌತಮ್ ಮನೆಗೆ ಬರುತ್ತಾನೆ. ಆನಂದ್ ಹೇಳಿರುವ "ಭೂಮಿಕಾಳಿಗೆ ನಿನ್ನ ಮೇಲೆ ಇರುವ ಲವ್" ಸಂಗತಿಗಳು ನೆನಪಿಗೆ ಬರುತ್ತವೆ. ಶಕುಂತಲಾದೇವಿಗೆ ಕೆಲಸದವಳು ಹಾಲು ತಂದುಕೊಡುತ್ತಾಳೆ. ಮಲ್ಲಿಗೆ ಟೆಸ್ಟ್ ಮಾಡಿ ನೀಡಲು. ಇದನ್ನು ಗೌತಮ್ ನೋಡಿ ಅಚ್ಚರಿ ಪಡುತ್ತಾನೆ. "ಮಲ್ಲಿ ಪ್ರೆಗ್ನೆಟ್ ಅಲ್ವ, ಎಚ್ಚರಿಕೆ ವಹಿಸ್ತಾ ಇದ್ದೇವೆ" ಎಂದು ಭೂಮಿಕಾ ಹೇಳುತ್ತಾಳೆ. ಸೀರಿಯಲ್ ಮುಂದುವರೆಯುತ್ತದೆ.
ವಿಭಾಗ