ಕನ್ನಡ ಸುದ್ದಿ  /  Entertainment  /  Televison News Aamruthadhaare Serial Yesterday Episode Mahashivaratri Festival Jaidev Plan To Finish Malli Pcp

Maha Shivratri: ಮಲ್ಲಿಗೆ ಈ ಭೂಮಿಯಲ್ಲಿ ಕೊನೆಯ ಶಿವರಾತ್ರಿ; ಭೂಮಿಕಾ ಗೌತಮ್‌ ಇಲ್ಲದೆ ಇರುವಾಗ ಜೈದೇವ್‌ ಖತರ್ನಾಕ್‌ ಪ್ಲ್ಯಾನ್‌

Aamruthadhaare serial episode: ಅಮೃತಧಾರೆ ಧಾರಾವಾಹಿಯಲ್ಲಿ ನಿನ್ನೆಯ ಸಂಚಿಕೆಯಲ್ಲಿ ಮಹಿಳಾ ದಿನ ಮುಗಿದು ಶಿವರಾತ್ರಿಗೆ ಎಂಟ್ರಿ ನೀಡಿದೆ. ಶಿವರಾತ್ರಿಯಂದು ಮನೆಯಿಂದ ಎಲ್ಲರನ್ನೂ ಹೊರಕ್ಕೆ ಕಳುಹಿಸಿ ಮಲ್ಲಿಯನ್ನು ಮುಗಿಸುವ ಪ್ಲ್ಯಾನ್‌ನಲ್ಲಿದ್ದಾನೆ ಜೈದೇವ್‌. ಶಕುಂತಲಾದೇವಿಯ ಅಣತಿಯಂತೆ ಇಂತಹ ಕೆಟ್ಟ ನಿರ್ಧಾರವನ್ನು ಮಹಾಶಿವರಾತ್ರಿಯಂದು ಕೈಗೊಂಡಿದ್ದಾನೆ.

Maha Shivratri: ಮಲ್ಲಿಗೆ ಈ ಭೂಮಿಯಲ್ಲಿ ಕೊನೆಯ ಶಿವರಾತ್ರಿ; ಜೈದೇವ್‌ ಖತರ್ನಾಕ್‌ ಪ್ಲ್ಯಾನ್‌
Maha Shivratri: ಮಲ್ಲಿಗೆ ಈ ಭೂಮಿಯಲ್ಲಿ ಕೊನೆಯ ಶಿವರಾತ್ರಿ; ಜೈದೇವ್‌ ಖತರ್ನಾಕ್‌ ಪ್ಲ್ಯಾನ್‌

Aamruthadhaare Kannada Serial: ಅಮೃತಧಾರೆ ಧಾರಾವಾಹಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ ಮತ್ತು ಮಹಾಶಿವರಾತ್ರಿ ಹಬ್ಬದ ಸೊಬಗನ್ನು ಪ್ರೇಕ್ಷಕರಿಗೆ ನೀಡಲಾಗಿದೆ. ನಿನ್ನೆಯ ಸಂಚಿಕೆಯಲ್ಲಿ ಮಹಿಳಾ ದಿನದ ಅಂಗವಾಗಿ ಆಫೀಸ್‌ನವರನ್ನು ಮನೆಗೆ ಕರೆಯಿಸಿ ಮನೆಯಲ್ಲಿಯೇ ಮಹಿಳಾ ದಿನ ಆಚರಿಸಲಾಗಿದೆ. (ಓದಿ: ಅಮೃತಧಾರೆ ಮಹಿಳಾ ದಿನ ಸಂಚಿಕೆ) ಈ ಸಮಾರಂಭದಲ್ಲಿ ಮುಖ್ಯ ಅತಿಥಿ ಸ್ಥಾನವನ್ನು ಗೌತಮ್‌ ಭೂಮಿಕಾಳಿಗೆ ನೀಡಿರುವುದರಿಂದ ಶಕುಂತಲಾದೇವಿಗೆ ಅವಮಾನವಾಗಿದೆ. ಇದೇ ಸಮಯದಲ್ಲಿ ಮಲ್ಲಿಗೆ ವೇದಿಕೆಯಲ್ಲಿ ಸ್ಥಾನ ದೊರಕಿದೆ. ತನ್ನ ಪಕ್ಕ ಮಲ್ಲಿ ಕುಳಿತಿರುವುದು ಶಕುಂತಲಾದೇವಿಗೆ ತಡೆಯಲಾಗಿಲ್ಲ. ಹೇಗಾದರೂ ಮಾಡಿ ಭೂಮಿಕಾಳ ಆಟಕ್ಕೆ ಅಂತ್ಯ ತರಬೇಕು ಎಂದು ಶಕುಂತಲಾದೇವಿ ಯೋಜಿಸುತ್ತಾರೆ. ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಶಿವರಾತ್ರಿ ಹಬ್ಬಕ್ಕೆ ಆರಂಭ ನೀಡಲಾಗಿದೆ. ಇಂದು ರಾತ್ರಿಯ ಸಂಚಿಕೆಯಲ್ಲಿ ಶಿವರಾತ್ರಿಯ ಆಚರಣೆಯ ಕುರಿತು ಹೆಚ್ಚಿನ ಕಥೆ ಇರಲಿದೆ. ಇದೇ ಸಮಯದಲ್ಲಿ ಶಿವರಾತ್ರಿಯಂದು ಮಲ್ಲಿಯನ್ನು ಶಾಶ್ವತವಾಗಿ ಈ ಭೂಮಿಯಿಂದ ಆಚೆ ಹಾಕಲು ಖತರ್ನಾಕ್‌ ಯೋಜನೆ ರೂಪಿಸಲಾಗುತ್ತಿದೆ.

ಮಹಿಳಾ ದಿನ ಕಾರ್ಯಕ್ರಮ ಮುಗಿದ ಬಳಿಕ ಮಲ್ಲಿ ಮತ್ತು ಭೂಮಿಕಾ ಮಾತನಾಡುತ್ತಾರೆ. "ನೀನು ಒಂದು ದಿನ ಓದಿ ಸಕ್ಸಸ್‌ಫುಲ್‌ ಆಗಬೇಕು" ಎಂದು ಮಲ್ಲಿಗೆ ಭೂಮಿಕಾ ಸಲಹೆ ನೀಡುತ್ತಾರೆ. "ಓಕೆ ಟೀಚರ್‌" ಎಂದು ಮಲ್ಲಿ ಹೇಳಿದಾಗ ಭೂಮಿಕಾಳಿಗೆ ಅಚ್ಚರಿ. ಈ ರೀತಿ ಮಲ್ಲಿ ಕಣ್ಣಿನಲ್ಲಿ ಭೂಮಿಕಾ ದೊಡ್ಡ ಕನಸು ಬಿತ್ತುತ್ತಾಳೆ. ಮುಂದೆ ಮಲ್ಲಿ ಓದಿ ಯಶಸ್ಸು ಪಡೆಯುವ ಸೂಚನೆ ಈ ಮೂಲಕ ದೊರಕಿದೆ.

ಮಲ್ಲಿಯನ್ನು ಮುಗಿಸುವ ಯೋಜನೆ

ಇದಾದ ಬಳಿಕ ಶಕುಂತಲಾದೇವಿ, ಜೈದೇವ್‌, ಮಾವನ ಮಾತುಕತೆ ಇರುತ್ತದೆ. "ಮಲ್ಲಿಯನ್ನು ಫಂಕ್ಷನ್‌ಗೆ ಕರೆದು ಭೂಮಿಕಾ ನಮ್ಮ ಮಾನಮರ್ಯಾದೆ ಕಳೆದ್ಲು" ಎಂದು ಜೈದೇವ್‌ ಹೇಳುತ್ತಾನೆ. "ಕಳೆಯೋಕ್ಕೆ ಮಾನ ಎಲ್ಲಿ ಉಳಿಸಿದ್ದಿ" ಎಂದು ಅಮ್ಮನ ಬೈಗುಳ ಇರುತ್ತದೆ. "ತನ್ನ ಆಟಕ್ಕೆ ಮಲ್ಲಿಯನ್ನು ಭೂಮಿಕಾ ಬಳಸಿಕೊಳ್ತಾ ಇದ್ದಾಳೆ" ಎಂದು ಶಕುಂತಲಾದೇವಿ ಹೇಳುತ್ತಾಳೆ. "ನಮ್ಮ ಪಾಡು ನಾಯಿಪಾಡು" ಎಂದು ಮಾವ ಹೇಳುತ್ತಾನೆ. ಜೈದೇವ್‌ ಕೋಪದಿಂದ ಮೀಸೆ ತಿರುವುತ್ತ ಇರುತ್ತಾನೆ. "ಆ ಕೆಲಸದವಳು ಇರೋ ಕಾರಣ ಈ ಆಟ ನಡೆಯೋದು. ಅವಳೇ ಇಲ್ಲಾಂದ್ರೆ" ಎಂದು ಶಕುಂತಲಾದೇವಿ ಹೊಸ ಪ್ಲಾನ್‌ ಮಾಡ್ತಾರೆ. "ಆ ಕೆಲಸದವಳು ಈ ಮನೆಯಲ್ಲಿ ಇರಕೂಡದು. ನೀನು ಏನು ಮಾಡ್ತಿಯೋ ಮಾಡು" ಎಂದು ಜೈದೇವ್‌ಗೆ ಶಕುಂತಲಾದೇವಿ ಹೇಳ್ತಾಳೆ. "ಹಾಕೋದಾದ್ರೆ ಸಣ್ಣ ಬಾಂಬ್‌ ಹಾಕಬೇಡ. ಆಟೋಬಾಂಬ್‌ ಹಾಕು" ಎಂದೆಲ್ಲ ಮನೆಹಾಳ ಮಾವನೂ ಸಲಹೆ ನೀಡುತ್ತಾನೆ. ಮಲ್ಲಿಯನ್ನು ಭೂಮಿಯಿಂದ ಪಾರ್ಸೆಲ್‌ ಮಾಡೋದು ನನ್ನ ಕೆಲಸ ಎಂದು ಜೈದೇವ್‌ ಮೀಸೆ ತಿರುವುತ್ತಾನೆ.

ಮತ್ತೊಂದೆಡೆ ಭೂಮಿಕಾ ಗೌತಮ್‌ ಪ್ರೀತಿಯ ಮಾತುಕತೆ ಇರುತ್ತದೆ. ಮನಸ್ಸಲ್ಲಿ ಫೀಲಿಂಗ್‌ ಇದೆ ಅಂತ ಗೊತ್ತಾಯ್ತಲ್ವ ಎಂದೆಲ್ಲ ಹೇಳಿದಾಗ ಗೌತಮ್‌ಗೆ ಒಂಥರ ಆಗುತ್ತದೆ. ಒಟ್ಟಾರೆ ಮನಸ್ಸಲ್ಲಿ ಇರುವ ಪ್ರೀತಿ ಹೊರಕ್ಕೆ ಬರುವ ಸೂಚನೆ ಇದೆ. ಸದಾಶಿವ ಮಂದಾಕಿಣಿ ಮನೆಯಲ್ಲಿ ಶಿವರಾತ್ರಿ ಪೂಜೆ ನಡೆಯುತ್ತ ಇರುತ್ತದೆ.

ಶಿವರಾತ್ರಿ ಜಾಗರಣೆ, ಮಲ್ಲಿ ವಿರುದ್ಧ ಪ್ಲ್ಯಾನ್‌

ಈ ಶಿವರಾತ್ರಿಗೆ ನಾನು ಮಲ್ಲಿಯನ್ನು ಮುಗಿಸುತ್ತೇನೆ ಎಂದು ಜೈದೇವ್‌ ಹೇಳುತ್ತಾನೆ. ನೀನು ಹೇಗಾದರೂ ಮನೆಯವರನ್ನು ಮನೆಯಿಂದ ಹೊರಕ್ಕೆ ಕಳುಹಿಸು ಎಂದು ಶಕುಂತಲಾದೇವಿಗೆ ಹೇಳುತ್ತಾನೆ. ಶಿವರಾತ್ರಿ ಪೂಜೆಯಲ್ಲಿ ಎಲ್ಲರೂ ಇರುವಾಗ ಶಕುಂತಲಾದೇವಿ ಏನೋ ಯೋಚನೆ ಮಾಡುತ್ತಾಳೆ. ಪೂಜೆ ಮುಗಿಸಿದ ಬಳಿಕ "ಇಂದು ಶಿವರಾತ್ರಿ ಎಲ್ಲರೂ ಜಾಗರಣೆ ಮಾಡಬೇಕು. ನಾನು ದೇವಸ್ಥಾನದಲ್ಲಿ ಪೂಜೆ ಮಾಡುತ್ತೇನೆ" ಎಂದು ಶಕುಂತಲಾದೇವಿ ಹೇಳುತ್ತಾರೆ. ಇದೇ ಸಮಯದಲ್ಲಿ "ಜಾಗರಣೆ ಅಂದಾಗ ಮನೆಯ ನೆನಪಾಗುತ್ತದೆ" ಎಂದು ಮನೆಯ ವಿಷಯ ಹೇಳಿದಾಗ "ಭೂಮಿಕಾ ನೀನು ಗೌತಮ್‌ ಜತೆ ತವರುಮನೆಗೆ ಹೋಗಿಬಿಡು" ಎಂದು ಸಲಹೆ ನೀಡುತ್ತಾರೆ. ಇವರಾಗಿಯೇ ತವರುಮನೆಗೆ ಹೋಗು ಅನ್ತಾರೆ, ಏನಿರಬಹುದು ಎಂದು ಭೂಮಿಕಾ ಯೋಚಿಸಿದಾಗ ಸೀರಿಯಲ್‌ ಮುಂದುವರೆಯುತ್ತದೆ. ಭೂಮಿಕಾ ಗೌತಮ್‌ ತವರುಮನೆಗೆ ಹೋಗ್ತಾರ? ಇಂದು ರಾತ್ರಿ ಶಿವರಾತ್ರಿ ಜಾಗರಣೆಯಲ್ಲಿ ಮಲ್ಲಿಗೆ ಜೈದೇವ್‌ ಏನು ಮಾಡುತ್ತಾನೆ? ಮಲ್ಲಿಯನ್ನು ಕೊಲೆ ಮಾಡಲು ಪ್ರಯತ್ನಿಸಿದರೆ ಅದು ವಿಫಲವಾಗುತ್ತದೆಯೇ? ಜೈದೇವ್‌ನ ಆಟ ಈ ಬಾರಿ ಯಶಸ್ಸು ಆಗುತ್ತದ? ಇತ್ಯಾದಿ ಪ್ರಶ್ನೆಗಳಿಗೆ ಶಿವರಾತ್ರಿಯ ಇಂದಿನ ಸಂಚಿಕೆಯಲ್ಲಿ ಉತ್ತರ ದೊರಕಲಿದೆ.

ಅಮೃತಧಾರೆ ಧಾರಾವಾಹಿ ಕಲಾವಿದರ ಪರಿಚಯ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)
ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್‌: ಜೈದೇವ್‌
ಚಂದನ್‌: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)
ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

IPL_Entry_Point