ಕನ್ನಡ ಸುದ್ದಿ  /  ಮನರಂಜನೆ  /  Dance Video: ಕಿಶನ್‌ ಬಿಳಗಲಿ ಸಂಯುಕ್ತ ಹೆಗ್ಡೆ ಜೋಡಿಯ ಇನ್ನೊಂದು ವಿಡಿಯೋ ಔಟ್‌; ಜೊತೆಜೊತೆಯಲಿ ಹಾಡಿಗೆ ಹೇಗೆ ಕುಣಿದಿದ್ದಾರೆ ನೋಡಿ

Dance Video: ಕಿಶನ್‌ ಬಿಳಗಲಿ ಸಂಯುಕ್ತ ಹೆಗ್ಡೆ ಜೋಡಿಯ ಇನ್ನೊಂದು ವಿಡಿಯೋ ಔಟ್‌; ಜೊತೆಜೊತೆಯಲಿ ಹಾಡಿಗೆ ಹೇಗೆ ಕುಣಿದಿದ್ದಾರೆ ನೋಡಿ

Samyuktha hegde Kishen Bilagali Dance: ಬಿಗ್‌ಬಾಸ್‌ ಕನ್ನಡ ಸೀಸನ್‌ 7ರ ಸ್ಪರ್ಧಿ ಮತ್ತು ಡ್ಯಾನ್ಸರ್‌ ಕಿಶನ್‌ ಬಿಳಗಲಿ ಅವರು ಇದೀಗ ನಟಿ ಸಂಯುಕ್ತ ಹೆಗ್ಡೆ ಜತೆಗೆ ಮತ್ತೊಂದು ಡ್ಯಾನ್ಸ್‌ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ಇವರಿಬ್ಬರ ಬೋಲ್ಡ್‌ ಡ್ಯಾನ್ಸ್‌ ವಿಡಿಯೋ ವೈರಲ್‌ ಆಗಿತ್ತು.

Dance Video: ಕಿಶನ್‌ ಬಿಳಗಲಿ ಸಂಯುಕ್ತ ಹೆಗ್ಡೆ ಜೋಡಿಯ ಇನ್ನೊಂದು ವಿಡಿಯೋ ಔಟ್‌
Dance Video: ಕಿಶನ್‌ ಬಿಳಗಲಿ ಸಂಯುಕ್ತ ಹೆಗ್ಡೆ ಜೋಡಿಯ ಇನ್ನೊಂದು ವಿಡಿಯೋ ಔಟ್‌

ಬೆಂಗಳೂರು: ಈ ದೀಪಾವಳಿ ಹಬ್ಬದ ಸಂಭ್ರಮದ ಸಮಯದಲ್ಲಿ ಬಿಗ್‌ಬಾಸ್‌ ಕನ್ನಡ ಸೀಸನ್‌ 7ರ ಸ್ಪರ್ಧಿ ಮತ್ತು ಡ್ಯಾನ್ಸರ್‌ ಕಿಶನ್‌ ಬಿಳಗಲಿ ಹಾಗೂ ನಟಿ ಸಂಯುಕ್ತ ಹೆಗ್ಡೆ ಜತೆಯಾಗಿ ಡ್ಯಾನ್ಸ್‌ ಮಾಡಿದ್ದಾರೆ. ದೀಪಗಳ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು ಎಂದು ಕಿಶನ್‌ ಬಿಳಗಲಿ ಅವರು ವಿಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ. ಈ ವಿಡಿಯೋದಲ್ಲಿ ಇವರಿಬ್ಬರು ಜೊತೆಯಲಿ ಜೊತೆಜೊತೆಯಲಿ ಎಂಬ ಕನ್ನಡ ಹಾಡಿಗೆ ಸ್ಟೆಪ್‌ ಹಾಕಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು, ಹೊಸ ಹರುಷವ ತರುವೆನು ಇನ್ನೂ ಎಂದು, ಓ ಎಂಥ ಮಾತಾಡಿದೆ ಇಂದು ನೀ ಎಂಥ ಮಾತಾಡಿದೆ, ನನ್ನ ಮನಸಿನ ಭಾವನೆ ನೀನೇ ಹೇಳಿದೆ, ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು ಎಂಬ ಹಾಡು ಹಿನ್ನೆಲೆಯಲ್ಲಿ ಕೇಳುತ್ತಿದ್ದರೆ ಇವರಿಬ್ಬರು ಅದ್ಭುತವಾದ ಸ್ಟೆಪ್‌ ಹಾಕಿದ್ದಾರೆ. "ಕಿಶನ್‌ ಜತೆ ಡ್ಯಾನ್ಸ್‌ ಮಾಡುವುದು ಯಾವಾಗಲೂ ಅತ್ಯುತ್ತಮವಾಗಿರುತ್ತದೆ" ಎಂದು ಈ ವಿಡಿಯೋಗೆ ಸಂಯುಕ್ತ ಹೆಗ್ಡೆ ಕಾಮೆಂಟ್‌ ಮಾಡಿದ್ದಾರೆ.

ಈ ವಿಡಿಯೋಗೆ ಸಾಕಷ್ಟು ಜನರು ಅದ್ಭುತವಾಗಿದೆ ಎಂದು ಕಾಮೆಂಟ್‌ ಮಾಡಿದ್ದಾರೆ. "ಅದೇ ಜೋಡಿ, ಈಗ ಮೈತುಂಬಾ ಬಟ್ಟೆ" ಎಂಬ ಕಾಮೆಂಟ್‌ಗಳೂ ಬಂದಿದ್ದು, ಈ ಹಿಂದಿನ ಡ್ಯಾನ್ಸ್‌ ವಿಡಿಯೋವನ್ನು ಕೆಲವರು ನೆನಪಿಸಿಕೊಂಡಿದ್ದಾರೆ. "ರೆಟ್ರೊ ಹಾಡಿಗೆ ಆಧುನಿಕ ಡ್ಯಾನ್ಸ್‌ನ ಟಚ್‌ ನೀಡಿ ಅದ್ಭುತವಾಗಿ ನರ್ತಿಸಿದ್ದೀರಿ" ಎಂದು ಹಲವು ಜನರು ಅಭಿನಂದಿಸಿದ್ದಾರೆ.

ಹಳೆ ವಿಡಿಯೋದ ನೆನಪು

ಈ ಹಿಂದೆ ಇವರಿಬ್ಬರು ಮಾದಕವಾಗಿ ನೃತ್ಯ ಮಾಡಿದ್ದರು. ಆ ವಿಡಿಯೋದಲ್ಲಿ ನಟಿ ಸಂಯಕ್ತ ಹೆಗ್ಡೆ ಬಿಳಿ ಬಣ್ಣದ ತುಂಡುಡುಗೆ ಧರಿಸಿದ್ದರು. ಅವರ ಅರೆನಗ್ನ ವಿಡಿಯೋಗೆ ಸಾಕಷ್ಟು ಜನರು ಕ್ಲಾಸ್‌ ತೆಗೆದುಕೊಂಡಿದ್ದರು. ಆದರೆ, ಈ ದೀಪಾವಳಿ ಹಬ್ಬದ ವೇಳೆಗೆ ಮಾತ್ರ ಇಬ್ಬರೂ ಉಡುಗೆಯ ವಿಷಯದಲ್ಲಿ ಎಚ್ಚರವಹಿಸಿದ್ದಾರೆ. ಆ ವಿಡಿಯೋಗೆ ಸಾಕಷ್ಟು ಜನರು ಕೆಟ್ಟದ್ದಾಗಿ ಕಾಮೆಂಟ್‌ ಮಾಡಿದ್ದರು. ಕೊನೆಗೆ ಮೌನ ಮುರಿದ ಕಿಶನ್‌ ಪ್ರತಿಕ್ರಿಯೆ ನೀಡಿದ್ದರು. "ಆರಂಭದಲ್ಲಿ ನಾನು ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಬಾರದು ಎಂದುಕೊಂಡಿದ್ದೆ., ಆದರೆ ಬಂದಿರುವ ಕಾಮೆಂಟ್ಸ್ ನೋಡಿ ರಿಯಾಕ್ಟ್ ಮಾಡಬೇಕು ಅನಿಸಿತು. ನೀವು ಟಿವಿ, ಚಲನಚಿತ್ರಗಳು, ರೊಮ್ಯಾಂಟಿಕ್ ಸಿನಿಮಾಗಳನ್ನ ನೋಡುವುದಿಲ್ಲವೇ? ಅದಕ್ಕಿಂತ ಇದು ಹೇಗೆ ಭಿನ್ನವಾಗಿದೆ. ನೀವು ನಿಮ್ಮ ಕುಟುಂಬ ಮತ್ತು ಮಕ್ಕಳೊಂದಿಗೆ ಸಿನಿಮಾಗಳನ್ನ ನೋಡುತ್ತಿದ್ದೀರಿ, ಅಲ್ಲಿ ರೂಪದರ್ಶಿಗಳು ಬೀಚ್‌ಗಳಿಂದ ಹೊರಬರುತ್ತಾರೆ ಅಲ್ಲವೇ?" ಎಂದು ಕಿಶನ್‌ ಅವರು ಪ್ರತಿಕ್ರಿಯೆ ನೀಡಿದ್ದರು.

ಯಾರಿದು ಕಿಶನ್‌ ಬಿಳಗಲಿ

ಬಿಗ್‌ಬಾಸ್‌ ಕನ್ನಡ ಸೀಸನ್‌ 7ರ ಬಳಿಕ ಕಿಶನ್‌ ಬಿಳಗಲಿ ಹೆಚ್ಚಿನ ಜನಪ್ರಿಯತೆ ಪಡೆದಿದ್ದಾರೆ. ಮೂಲತಃ ಚಿಕ್ಕಮಗಳೂರಿನವರಾದ ಇವರು ಅದ್ಭುತ ಡ್ಯಾನ್ಸ್‌. 1989ರ ಏಪ್ರಿಲ್‌ನಲ್ಲಿ ಜನಿಸಿದರು. ಕಿಶನ್‌ ಕನ್ನಡ ಮಾತ್ರವಲ್ಲದೆ ಹಿಂದಿ ಕಿರುತೆರೆಯಲ್ಲೂ ಫೇಮಸ್‌. 2018 ರ ಹಿಂದಿ ರಿಯಾಲಿಟಿ ಶೋ ಡ್ಯಾನ್ಸ್ ದಿವಾನಿ ಶೋ ಕಾರ್ಯಕ್ರಮದಲ್ಲಿ ಗೆಲುವು ಪಡೆದಿದ್ದರು.

ಡ್ಯಾನ್ಸ್‌ ಮೂಲಕ ಜನಪ್ರಿಯತೆ ಪಡೆದಿರುವ ಕಿಶನ್‌ ಬೆಂಗಳೂರಿನಲ್ಲಿ ಬಿರಿಯಾನಿ ಪ್ಯಾಲೇಸ್‌ ಫ್ರಾಂಚೈಸಿ ಹೊಂದಿದ್ದಾರೆ. ಇವರು ಆಗಾಗ ತನ್ನ ಹೋಟೆಲ್‌ಗೆ ಭೇಟಿ ನೀಡುತ್ತಾರೆ. ಕಿಶನ್‌ ಬಿರಿಯಾನಿ ಮಾಡುತ್ತಿರುವ ವಿಡಿಯೋವೊಂದು ಈ ಹಿಂದೆ ವೈರಲ್‌ ಆಗಿತ್ತು. ಇದನ್ನು ಓದಿ: ಕನ್ನಡ ನಟ ನಟಿಯರ ಹೋಟೆಲ್‌ ಬಿಸ್ನೆಸ್‌: ಸೃಜನ್‌ ಲೋಕೇಶ್‌ ಕೋಕು, ಶೈನ್‌ ಶೆಟ್ಟಿ ಗಲ್ಲಿ ಕಿಚನ್‌, ಮೈಸೂರು ಮಿರ್ಚಿ ನಡೆಸುತ್ತಿದ್ದಾರೆ ಶೃತಿ

IPL_Entry_Point