Amruthadhaare: ಆನಂದ್‌ಗೆ ಆಕ್ಸಿಡೆಂಟ್ , ಪಾರ್ಥನ ಕೊಲೆ ಯತ್ನ, ಟೆಂಡರ್ ತಪ್ಪಿಸಿದ್ದು ಜೈದೇವ್ ಎಂಬ ಸತ್ಯ ಬಹಿರಂಗ, ಜೈಲು ಸೇರ್ತಾನ ಜೆಡಿ
Amrithadhaare Kannada Serial: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಬುಧವಾರದ (ಅಕ್ಟೋಬರ್ 02) ಸಂಚಿಕೆಯಲ್ಲಿ ಮಹತ್ವದ ವಿದ್ಯಮಾನಗಳು ನಡೆದಿದೆ. ಆನಂದ್ ಮತ್ತು ಅಪರ್ಣಾಗೆ ಜೈದೇವ್ ಮಾಡಿರುವ ಆಕ್ಸಿಡೆಂಟ್ ಬಗ್ಗೆ ಗೊತ್ತಾಗಿದೆ. ಇದೇ ಸಮಯದಲ್ಲಿ ಪಾರ್ಥನಿಗೆ ಜೈದೇವ್ ಮಾಡಿರುವ ಪಾಪಕಾರ್ಯಗಳ ಸಾಕ್ಷಿ ದೊರಕಿದ್ದು, ಭೂಮಿಕಾ ಜತೆ ಹಂಚಿಕೊಂಡಿದ್ದಾನೆ.
Amrithadhaare Kannada Serial: ಗೌತಮ್ ಆಫೀಸ್‌ಗೆ ಹೊರಡುತ್ತಿದ್ದಾರೆ. ಭೂಮಿಕಾ ಮತ್ತು ಗೌತಮ್ ಖುಷಿಖುಷಿಯಾಗಿ ಮಾತನಾಡುತ್ತಿದ್ದಾರೆ. ಇಷ್ಟು ವರ್ಷ ನಾನು ಯಾರನ್ನೇ ನೋಡಿದರೂ ಅಮ್ಮನನ್ನೇ ಹುಡುಕುತ್ತಿದ್ದೆ. ಯಾರಲ್ಲೂ ಅಮ್ಮನ ಪ್ರೀತಿ ಸಿಗುತ್ತಿರಲಿಲ್ಲ. ಆದರೆ, ನಿಮ್ಮ ಮೂಲಕ ಆ ಪ್ರೀತಿ ಸಿಗ್ತಾ ಇತ್ತು. ಅಮ್ಮ ಇಲ್ಲದೆ ಇದ್ದರೂ ಅಮ್ಮನ ಕೊರತೆಯನ್ನು ನೀವು ನೀಗಿಸಿದ್ದೀರಾ" ಎಂದು ಗೌತಮ್ ಹೇಳಿದಾಗ ಭೂಮಿಕಾ ಭಾವುಕರಾಗುತ್ತಾರೆ. "ಈ ಅಮ್ಮನಂತಹ ನಿನ್ನನ್ನು ನನ್ನ ಅಮ್ಮನಿಗೆ ತೋರಿಸಬೇಕು" ಎಂದು ಗೌತಮ್ ಹೇಳುತ್ತಾರೆ. "ಅಮ್ಮ ಸಿಗಲಿ ಎಂಬ ನಿಮ್ಮ ಪ್ರಾರ್ಥನೆ ಬಿಡಬೇಡಿ. ಅಮ್ಮ ಸಿಕ್ಕೇ ಸಿಗುತ್ತಾರೆ. ನನಗೆ ಆ ನಂಬಿಕೆ ಇದೆ. ಆ ದೇವರು ನಿಮ್ಮಿಬ್ಬರನ್ನು ಒಂದು ಮಾಡೇ ಮಾಡುತ್ತಾರೆ" ಎಂದು ಗೌತಮ್‌ಗೆ ಭೂಮಿಕಾ ಭರವಸೆಯ ಮಾತುಗಳನ್ನಾಡುತ್ತಾರೆ. ಗೌತಮ್ ಆಫೀಸ್‌ಗೆ ಹೋದ ಬಳಿಕ ಭೂಮಿಕಾ "ಗೌತಮ್ ತಾಯಿ ಎಲ್ಲೇ ಇದ್ದರೂ ಬೇಗ ಸಿಗುವಂತೆ ಮಾಡಪ್ಪ ದೇವರೇ" ಎಂದು ಪ್ರಾರ್ಥಿಸುತ್ತಾರೆ.
ಆನಂದ್‌ಗೆ ಆಕ್ಸಿಡೆಂಟ್ ಮಾಡಿದ್ದು ಯಾರು? ಸತ್ಯ ಗೊತ್ತಾಗೋ ಸಮಯ
ಅಪರ್ಣಾ ಮನೆಗೆ ಆಕೆಯ ಫ್ರೆಂಡ್ ಲೇಡಿ ಸಬ್ ಇನ್‌ಸ್ಪೆಕ್ಟರ್ ಬಂದಿದ್ದಾರೆ. "ಒಂದೇ ಏರಿಯಾದಲ್ಲಿದ್ದರೂ ನಮ್ಮಿಬ್ಬರಿಗೆ ಭೇಟಿಯಾಗಲು ಸಾಧ್ಯವಾಗಿಲ್ಲ" ಎಂದು ಉಭಯ ಕುಶಲೋಪರಿ ಮಾತನಾಡಿದ ಬಳಿಕ ಆಕೆಯ ಗೆಳತಿ ಪೊಲೀಸ್ "ಏನೋ ಇಂಪಾರ್ಟೆಂಟ್ ವಿಷಯ ಇದೆ ಅಂದ್ಯಲ್ಲ" ಎಂದು ಕೇಳುತ್ತಾರೆ. "ಸ್ವಲ್ಪ ದಿನದ ಹಿಂದೆ ನನ್ನ ಗಂಡನಿಗೆ ಆಕ್ಸಿಡೆಂಟ್ ಆಯ್ತು. ಮನೆ ಮುಂದೆ, ನನ್ನ ಕಣ್ಣ ಮುಂದೆಯೇ ನಡೆಯಿತು. ಮೇಲ್ನೋಟಕ್ಕೆ ಅದು ಆಕ್ಸಿಡೆಂಟ್ ತರಹನೇ ಇತ್ತು. ಇವತ್ತು ಸಿಟಿ ಟಿವಿ ನೋಡಿದಾಗ ಯಾರೋ ಅದನ್ನು ಇಂಟೆನ್ಷಿಯಲಿ ಮಾಡಿಸಿದ್ದಾರೆ ಅನಿಸ್ತಾ ಇದೆ" ಎಂದು ಹೇಳುತ್ತಾಳೆ. "ನಿನಗೆ ಯಾಕೆ ಹಾಗೇ ಅನಿಸ್ತು" ಎಂದು ಲೇಡಿ ಪೊಲೀಸ್ ಕೇಳುತ್ತಾರೆ. "ಆ ಗಾಡಿ ಸಾಕಷ್ಟು ಹೊತ್ತಿನಿಂದ ಮನೆಯ ಹತ್ತಿರವೇ ಇತ್ತು. ಇವರು ಆಫೀಸ್‌ಗೆ ಹೊರಟಾಗ ಸ್ಟಾರ್ಟ್ ಆಗಿ ಸ್ಪೀಡಾಗಿ ಬಂದು ಗುದ್ದಿತು. ಇವರು ರೋಡ್ ಮಧ್ಯೆ ಇರಲಿಲ್ಲ. ಸೈಡ್‌ಗೆ ಬಂದು ಗುದ್ದಿತು. ಆಕ್ಸಿಡೆಂಟ್ ಆದ ಮೇಲೆ ಗಾಡಿ ನಿಲ್ಲಿಸಿಲ್ಲ." ಎಂದು ಅಪರ್ಣಾ ಹೇಳುತ್ತಾರೆ. ಇದಾದ ಬಳಿಕ ಸಿಸಿಟಿವಿ ಫೂಟೇಜ್ ಇದೆ. ನೋಡಿ ತಿಳಿಸಿ. ಇದನ್ನು ಕಂಪ್ಲೆಂಟ್ ಅನ್ನಬೇಡ. ಫ್ರೆಂಡ್‌ಗಾಗಿ ಮಾಡು" ಎಂದು ಅಪರ್ಣಾ ಹೇಳಿದಾಗ ಪೊಲೀಸ್ ಸರಿ ಅನ್ನುತ್ತಾರೆ.
ಸಬ್ ಇನ್‌ಸ್ಪೆಕ್ಟರ್ ಹೋದ ಸಮಯದಲ್ಲೇ ಅಲ್ಲಿಗೆ ಆನಂದ್ ಬರುತ್ತಾರೆ. "ಏನು ಸಬ್ ಇನ್‌ಸ್ಪೆಕ್ಟರ್ ಬಂದಿದ್ದರು. ಏನು ಸಮಾಚಾರ" ಎಂದು ಆನಂದ್ ಕೇಳುತ್ತಾರೆ. ಆಕೆ ಏನೋ ಹೇಳುತ್ತಾಳೆ.
ಪಾರ್ಥನಿಗೆ ಸಿಗ್ತು ಜೈದೇವ್ ದುಷ್ಕೃತ್ಯದ ದಾಖಲೆಗಳು
ಮಲ್ಲಿ ಬಳಿಗೆ ಬಂದ ಪಾರ್ಥ "ಜೈದೇವ್ ಇಲ್ವ. ಆಫೀಸ್ ಫೈಲೋಂದು ಬೇಕಿತ್ತು" ಎನ್ನುತ್ತಾನೆ. "ನನಗೆ ಗೊತ್ತಾಗೋಲ್ಲ. ನೀವೇ ಕಬೋರ್ಡ್ ನೋಡಿ" ಎನ್ನುತ್ತಾಳೆ. ಪಾರ್ಥ ಕಬೋರ್ಡ್‌ನಲ್ಲಿ ಫೈಲ್ ಚೆಕ್ ಮಾಡುತ್ತಾನೆ. ಇದೇ ಸಮಯದಲ್ಲಿ ಪಾರ್ಥನಿಗೆ ಒಂದು ಕಾಂಟ್ರ್ಯಾಕ್ಟ್ ಫೈಲ್ ಸಿಗುತ್ತದೆ. ಆಫೀಸ್ ಲಾಕರ್‌ನಲ್ಲಿರಬೇಕಾದ ಫೈಲ್ ಇಲ್ಲಿಗೆ ಹೇಗೆ ಬಂತು ಎಂದು ಪಾರ್ಥ ಅನುಮಾನದಲ್ಲಿ ಯೋಚಿಸುತ್ತಾನೆ. "ಎಲ್ಲೋ ಏನೋ ಮಿಸ್ ಹೊಡಿತಾ ಇದೆ. ಸಮ್‌ಥಿಂಗ್ ಈಸ್ ಫಿಶಿ. ಲಾಸ್ಟ್ ಟೈಮ್ ಒಂದು ಟೆಂಡರ್ ಮಿಸ್ ಆಗಿತ್ತು. ಟೆಂಡರ್ ಡಾಕ್ಯುಮೆಂಟ್ಸ್ ಇಲ್ಲಿದೆ. ಜೈದೇವ್ ಬ್ರೋ ಏನಾದ್ರೂ ಮೋಸ ಮಾಡಿರಬಹುದಾ. ಇದಕ್ಕೆ ಸಂಬಂಧಪಟ್ಟಂತೆ ಬೇರೆ ಏನಾದ್ರೂ ಸಿಗುತ್ತಾ ನೋಡೋಣ" ಎಂದು ಪಾರ್ಥ ಹುಡುಕುತ್ತಾನೆ. ಈ ಸಮಯದಲ್ಲಿ ಬೇರೆ ಫೈಲ್ ಎಳೆಯುವಾಗ ಟವಲೊಂದು ಬೀಳುತ್ತದೆ. ಅದೇ ಟವಲ್, ಅವತ್ತು ಪಾರ್ಥನಿಗೆ ಹೊಡೆಯಲು ಬಂದಾಗ ಜೈದೇವ್ ಕಟ್ಟಿಕೊಂಡ ಟವಲ್. "ಈ ಮಫ್ಲರ್... ಅವತ್ತು ನನ್ನನ್ನು ಸಾಯಿಸಲು ಬಂದವ ಕಟ್ಟಿಕೊಂಡಿದ್ದ. ನನ್ನ ಮತ್ತು ಅಪೇಕ್ಷಾನಿಗೆ ಹೊಡೆಯಲು ಬಂದದ್ದು ಜೈದೇವ್‌ನ ಬ್ರೋನ" ಎಂದು ಯೋಚಿಸುತ್ತಾನೆ. "ಅತ್ತಿಗೆ ಈ ಮಫ್ಲರ್ ಯಾರದ್ದು" ಎಂದು ಕೇಳುತ್ತಾನೆ. ಇದು ಜೈದೇವ್‌ನದ್ದು. ಇವರು ಯಾವಾಗಲೂ ಹಾಕ್ತಾ ಇರಲಿಲ್ಲ. ಯಾವತ್ತೋ ಒಂದು ದಿನ ಹಾಕಿದ್ರು" ಎಂದು ಹೇಳುತ್ತಾಳೆ. "ಜೈದೇವ್ ಬ್ರೋನೇ ನಮ್ಮ ಕೊಲೆ ಮಾಡಲು ಬಂದದ್ದು. ಇದು ಕನ್‌ಫರ್ಮ್" ಎಂದು ಪಾರ್ಥ ಯೋಚಿಸುತ್ತಾನೆ. ಆ ಮಫ್ಲರ್ ಮತ್ತು ಫೈಲ್‌ನ ಫೋಟೋ ತೆಗೆದುಕೊಂಡು ಹೋಗುತ್ತಾನೆ. ಪಾರ್ಥನಿಗ ಘಟನೆಗಳು ನೆನಪಾಗುತ್ತವೆ. ತನಗೆ ಚಾಕು ಹಾಕಲು ಪ್ರಯತ್ನಿಸಿದ್ದೆಲ್ಲ ನೆನಪಿಗೆ ಬರುತ್ತದೆ.
ಭೂಮಿಕಾಳಿಗೆ ಮಾಹಿತಿ ನೀಡಿದ ಪಾರ್ಥ, ಜೈಲು ಸೇರ್ತಾನ ಜೆಡಿ?
ಆ ಸಮಯದಲ್ಲಿ ಭೂಮಿಕಾ ಅಲ್ಲಿಗೆ ಬರುತ್ತಾರೆ. "ಏನಾಯ್ತು. ಯಾಕೆ ಹೀಗೆ ಇದ್ದೀರ" ಎಂದು ಕೇಳುತ್ತಾನೆ. "ಮನಸ್ಸಲ್ಲಿ ಏನೋ ಕೊರೆಯುತ್ತ ಇದೆ ಎಂದರೆ ಹತ್ತಿರದವರ ಬಳಿ ಹೇಳಬೇಕು" ಎಂದು ಭೂಮಿಕಾ ಹೇಳುತ್ತಾಳೆ. "ಅತ್ತಿಗೆ ಅವತ್ತು ಮದುವೆ ದಿನ ನಮ್ಮ ಮೇಲೆ ಅಟ್ಯಾಕ್ ಆಯ್ತಲ್ವ. ಅವತ್ತು ಒಬ್ಬ ಮುಖಕ್ಕೆ ಮಫ್ಲರ್ ಸುತ್ತಿಕೊಂಡಿದ್ದ. ಆ ಗ್ಯಾಂಗ್ ಲೀಡರ್ ರೀತಿ ಇದ್ದ. ಇವತ್ತು ಅದೇ ರೀತಿ ಮಫ್ಲರ್ ಅನ್ನು ಜೈದೇವ್ ಬ್ರೋ ವಾರ್ಡ್‌ರೋಬ್‌ನಲ್ಲಿ ನೋಡಿದೆ ಅತ್ತಿಗೆ" ಎಂದು ಪಾರ್ಥ ಹೇಳಿದಾಗ ಭೂಮಿಕಾಗೆ ಆತಂಕವಾಗುತ್ತದೆ. "ಅದೇ ರೀತಿ ಮಫ್ಲರ್ ಬೇರೆಯವರ ಬಳಿಯೂ ಇರಬಹುದಲ್ವ" ಎಂದು ಭೂಮಿಕಾ ಹೇಳುತ್ತಾಳೆ. "ಇಲ್ಲ ಅತ್ತಿಗೆ, ಎಲ್ಲವನ್ನೂ ಸರಿಯಾಗಿ ರಿಕಾಲ್ ಮಾಡಿಕೊಂಡು ನೋಡಿದಾಗ ಆ ಗ್ಯಾಂಗ್ ಲೀಡರ್ ಥೇಟ್ ಜೈದೇವ್ ಬ್ರೋ ರೀತಿಯೇ ಇದ್ದ. ಸೇಮ್ ಹೈಟ್, ಸೇಮ್ ಫಿಸಿಕ್ಸ್, ಅವನ ಕಣ್ಣು ಕೂಡ ಥೇಟ್ ಜೈದೇವ್ ರೀತಿಯೇ ಇತ್ತು ಅತ್ತಿಗೆ" ಎಂದು ಹೇಳುತ್ತಾನೆ ಪಾರ್ಥ. ಯಾಕೋ ಅದೇ ಜೈದೇವ್ ಅಂತ ಅನಿಸ್ತಾ ಇದೆ ಎಂದು ಹೇಳುತ್ತಾನೆ. "ನಿಮ್ಮ ಸಂಶಯ ಪಕ್ಕನಾ?" ಎಂದು ಕೇಳುತ್ತಾಳೆ. "ಅದೇ ಕಣ್ಣು, ಅದೇ ಮಫ್ಲರ್....ಹೌದು ಅತ್ತಿಗೆ" ಎಂದು ಪಾರ್ಥ ಭರವಸೆಯಿಂದ ಹೇಳುತ್ತಾನೆ.
ಜೈದೇವ್ ವಿರುದ್ಧ ಕೇಸ್ ದಾಖಲಿಸ್ತಾರ ಆನಂದ್?
ಇನ್ನೊಂದೆಡೆ ಅಪರ್ಣಾ ಮನೆಗೆ ಗೆಳತಿ ಸಬ್ ಇನ್‌ಸ್ಪೆಕ್ಟರ್ ಬಂದಿದ್ದಾರೆ. "ಸಿಸಿಟಿವಿ ಫೂಟೇಜ್ ನೋಡಿದ್ಯ. ಏನಾದರೂ ಇನ್‌ಫಾರ್ಮೆಷನ್ ಸಿಗ್ತಾ?" ಎಂದು ಅಪರ್ಣಾ ಕೇಳುತ್ತಾಳೆ. ಆನಂದ್ ಕೂಡ ಅಲ್ಲಿದ್ದಾರೆ. "ನಿಮಗೆ ಹೇಗೆ ಹೇಳಬೇಕು ಗೊತ್ತಾಗ್ತಾ ಇಲ್ಲ. ಈ ಹಲ್ಕಾ ಕೆಲಸ ಮಾಡಿದ್ದು ಬೇರೆ ಯಾರೂ ಅಲ್ಲ. ಗೌತಮ್ ದಿವಾನ್ ತಮ್ಮ ಜೈದೇವ್" ಎಂದು ಇನ್‌ಸ್ಪೆಕ್ಟರ್ ಹೇಳುತ್ತಾರೆ. ಇದನ್ನು ಕೇಳಿ ಅಪರ್ಣಾ ಮತ್ತು ಆನಂದ್‌ಗೆ ಆಘಾತವಾಗುತ್ತದೆ. "ಶ್ರೀಮಂತರ ಮಕ್ಕಳು ಮಾಡೋದು ಹೀಗೆ. ನೀವೊಂದು ಕಂಪ್ಲೇಂಟ್ ಬರೆದುಕೊಡಿ. ಮಿಕ್ಕಿದ್ದನ್ನು ನಾನು ನೋಡಿಕೊಳ್ತಿನಿ" ಎಂದು ಸಬ್ ಇನ್‌ಸ್ಪೆಕ್ಟರ್ ಹೇಳುತ್ತಾರೆ. "ಬೇಡ" ಎಂದು ಆನಂದ್ ಹೇಳಿದಾಗ "ಯಾಕೆ ಬೇಡ, ಕಂಪ್ಲೆಂಟ್ ಕೊಡಲೇಬೇಕು, ಆ ಜೈದೇವ್‌ಗೆ ಶಿಕ್ಷೆಯಾಗಬೇಕು" ಎಂದು ಅಪರ್ಣಾ ಹೇಳುತ್ತಾಳೆ. ಆನಂದ್ ಏನೇ ಹೇಳಿದ್ರೂ ಅಪರ್ಣಾ ಕೇಳುವುದಿಲ್ಲ. ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಕೂಡ ಅದೇ ಮಾತನ್ನು ಹೇಳುತ್ತಾರೆ.
ಆನಂದ್ ಕಂಪ್ಲೇಟ್ ಬೇಡ ಅಂದರೂ ಅಪರ್ಣಾ ಕೇಳುವುದಿಲ್ಲ. "ಅವನು ದೊಡ್ಡ ಕ್ರೈಮ್ ಮಾಡಿದ್ದಾನೆ. ನಡೀ, ಈಗಲೇ ಅವನ ಮೇಲೆ ಎಫ್‌ಐಆರ್ ಮಾಡೋಣ" ಎಂದು ಅಪರ್ಣಾ ಹೇಳುತ್ತಾಳೆ. "ಬೇಡ, ನಾವು ಅವಸರ ಮಾಡೋದು ಬೇಡ. ಅವನು ಗೆಳೆಯನ ತಮ್ಮ. ಗೆಳೆಯನಿಗೆ ಬೇಜಾರಾಗುತ್ತದೆ" ಎಂದು ಆನಂದ್ ಹೇಳುತ್ತಾರೆ. "ನಾನು ಮೊದಲು ಈ ವಿಚಾರನ ಗೌತಮ್‌ಗೆ ಹೇಳುವೆ" ಎಂದೆಲ್ಲ ಆನಂದ್ ಹೇಳುತ್ತಾರೆ.
ಟೆಂಡರ್ ತಪ್ಪಿಸಿದ ಜೈದೇವ್ ಬಗ್ಗೆಯೂ ಭೂಮಿಕಾಗೆ ಮಾಹಿತಿ
ಪಾರ್ಥ ಮತ್ತು ಭೂಮಿಕಾ ಮಾತನಾಡುತ್ತ ಇದ್ದಾರೆ. "ಅವನೇ ಅಂತ ನನ್ನ ಮನಸ್ಸು ಹೇಳ್ತಾ ಇದೆ. ಯಾಕೆ ಅಂತ ಗೊತ್ತಾಗ್ತ ಇಲ್ಲ. ಆದರೆ, ಏನೋ ಹಿಂಟ್ ಸಿಗ್ತಾ ಇದೆ. ಜೈದೇವ್ ಬ್ರೋಗೆ ನಾನು ಅಪೇಕ್ಷಾಳನ್ನು ಮದುವೆಯಾಗೋದು ಇಷ್ಟ ಇರಲಿಲ್ಲ. ಅದಕ್ಕೆ ನನ್ನ ಮೇಲೆ ಅಟ್ಯಾಕ್ ಮಾಡಿಸಿದ್ದಾನೆ ಅನಿಸ್ತಾ ಇದೆ" ಎಂದು ಪಾರ್ಥ ಹೇಳುತ್ತಾನೆ. ಭೂಮಿಕಾ ಗಂಭೀರವಾಗಿ ಯೋಚಿಸುತ್ತಾರೆ. "ಆದರೆ, ನಾನು ಮಾಮ್‌ನ ಅನುಮತಿ ಪಡೆದೇ ಮದುವೆಯಾದದ್ದು. ಆದರೂ, ಜೈದೇವ್ ಯಾಕೆ ಅಟ್ಯಾಕ್ ಮಾಡಿಸ್ದ ಅಂತ ಗೊತ್ತಾಗ್ತ ಇಲ್ಲ" ಎಂದು ಹೇಳುತ್ತಾನೆ. "ಮದುವೆ ಇಷ್ಟ ಇಲ್ಲ ಎಂದು ಅಟ್ಯಾಕ್ ಮಾಡಿದ್ದಾರೆ ಅಂದರೆ ನಂಬೋಕ್ಕೆ ಆಗೋದಿಲ್ಲ" ಎಂದು ಭೂಮಿಕಾ ಹೇಳುತ್ತಾರೆ. "ಇಲ್ಲ ಅತ್ತಿಗೆ, ಜೈದೇವ್ ಬ್ರೋ ನಾವು ಅಂದುಕೊಂಡಂತೆ ಇಲ್ಲ. ಹಾಗೇ ಹೇಳಲು ಇನ್ನೊಂದು ರೀಸನ್ ಇದೆ" ಎಂದು ಪಾರ್ಥ ಹೇಳುತ್ತಾನೆ. "ಈ ನಡುವೆ ಜೈದೇವ್ ಆಕ್ಟಿವಿಟಿ ತುಂಬಾ ಸಂಶಯಸ್ಪದವಾಗಿದೆ. ಇವತ್ತು ಅವನ ವಾರ್ಡ್‌ರೋಬ್‌ನಲ್ಲಿ ನಮ್ಮ ಟೆಂಡರ್‌ಗೆ ಸಂಬಂಧಪಟ್ಟ ಡಾಕ್ಯುಮೆಂಟ್ಸ್ ಇತ್ತು. ಅತ್ತಿಗೆ, ಬಿಗ್ ಬ್ರೋ ಆ ಡಾಕ್ಯುಮೆಂಟ್ಸ್ ಎಲ್ಲ ಮನೆಗೆ ತರೋದಿಲ್ಲ. ಅದು ತುಂಬಾ ಕಾನ್ಫಿಡೆನ್ಸಿಯಲ್. ಇಂತಹ ವಿಚಾರನ ಆನಂದ್ ಬ್ರೋ ಬಳಿ ಬಿಟ್ರೆ ಬೇರೆ ಯಾರ ಹತ್ರನೂ ಶೇರ್ ಮಾಡಿಕೊಳ್ಳೋದಿಲ್ಲ. ಅದು ಆಫೀಸ್ ಲಾಕರ್‌ನಲ್ಲೇ ಇರಬೇಕು. ಅದು ಸಿಗೋದು ಆನಂದ್ ಮತ್ತು ಗೌತಮ್‌ಗೆ ಮಾತ್ರ. ಎಲ್ಲಾದರೂ ಆ ಫೈಲ್ ಬಿಗ್ ಬ್ರೋ ಮನೆಗೆ ತಂದ್ರು ಅಂದಿರಲಿ, ಆ ಫೈಲ್ ನಿಮ್ಮ ರೂಂನಲ್ಲಿ ಇರಬೇಕಿತ್ತು, ಜೈದೇವ್ ವಾರ್ಡ್‌ರೋಬ್‌ನಲ್ಲಿ ಯಾಕಿದೆ. ಮೊನ್ನೆ ಇನ್‌ಫಾರ್ಮೆಷನ್ ಲೀಕ್ ಆಗಿ ಟೆಂಡರ್ ತಪ್ಪಿ ಹೋಯ್ತಲ್ವ. ಆ ಫೈಲ್ ಕೂಡ ಅಲ್ಲಿತ್ತು" ಎಂದು ಪಾರ್ಥ ಹೇಳುತ್ತಾನೆ. ಭೂಮಿಕಾಳ ಮನಸ್ಸಲ್ಲೂ ಅನುಮಾನ ಹೆಚ್ಚಾಗುತ್ತಿದೆ. ಪಾರ್ಥ ತಾನು ತೆಗೆದ ಫೋಟೋಗಳನ್ನು ಭೂಮಿಕಾಗೆ ತೋರಿಸುತ್ತಾನೆ. ಸೀರಿಯಲ್ ಮುಂದುವರೆಯುತ್ತದೆ.
ಅಮೃತಧಾರೆ ಸೀರಿಯಲ್ ಪಾತ್ರವರ್ಗ
ಛಾಯಾ ಸಿಂಗ್: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ)
ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್: ಜೈದೇವ್
ಚಂದನ್: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ)
ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ)
ವಿಭಾಗ