ಕನ್ನಡ ಸುದ್ದಿ  /  ಮನರಂಜನೆ  /  ಅಮೃತಧಾರೆ ಸೀರಿಯಲ್‌: ಜಯದೇವ್‌ ಕಣ್ಣಿಗೆ ಬಿತ್ತು ಪಾರ್ಥ ಅಪೇಕ್ಷಾ ಲವ್‌ಸ್ಟೋರಿ, ಗೌತಮ್‌ಗೆ ರೋಸ್‌ ನೀಡಲು ರೆಡಿಯಾದ ಭೂಮಿಕಾ

ಅಮೃತಧಾರೆ ಸೀರಿಯಲ್‌: ಜಯದೇವ್‌ ಕಣ್ಣಿಗೆ ಬಿತ್ತು ಪಾರ್ಥ ಅಪೇಕ್ಷಾ ಲವ್‌ಸ್ಟೋರಿ, ಗೌತಮ್‌ಗೆ ರೋಸ್‌ ನೀಡಲು ರೆಡಿಯಾದ ಭೂಮಿಕಾ

Amruthadhaare Kannada Serial Episode 182: ಝೀ ಕನ್ನಡದ ಅಮೃತಧಾರೆ ಸೀರಿಯಲ್‌ನ ಮಂಗಳವಾರದ (ಫೆಬ್ರವರಿ 7) ಸಂಚಿಕೆಯಲ್ಲಿ ಪಾರ್ಥ ಮತ್ತು ಅಪೇಕ್ಷಾ ಲವ್‌ ಸ್ಟೋರಿ ಜಯದೇವ್‌ ಕಣ್ಣಿಗೆ ಬೀಳುತ್ತದೆ. ಇನ್ನೊಂದೆಡೆ ಗೌತಮ್‌ಗೆ ಪ್ರೀತಿಯ ರೋಸ್‌ ನೀಡುವ ತವಕದಲ್ಲಿ ಭೂಮಿಕಾ ಇದ್ದಾಳೆ.

ಅಮೃತಧಾರೆ ಸೀರಿಯಲ್‌: ಜಯದೇವ್‌ ಕಣ್ಣಿಗೆ ಬಿತ್ತು ಪಾರ್ಥ ಅಪೇಕ್ಷಾ ಲವ್‌ಸ್ಟೋರಿ
ಅಮೃತಧಾರೆ ಸೀರಿಯಲ್‌: ಜಯದೇವ್‌ ಕಣ್ಣಿಗೆ ಬಿತ್ತು ಪಾರ್ಥ ಅಪೇಕ್ಷಾ ಲವ್‌ಸ್ಟೋರಿ

Amruthadhaare Kannada Serial: ಝೀ ಕನ್ನಡದ ಅಮೃತಧಾರೆ ಸೀರಿಯಲ್‌ನಲ್ಲಿ ಮಂಗಳವಾರದ ಸಂಚಿಕೆ ಕುತೂಹಲಕಾರಿಯಾಗಿದೆ. ಪಾರ್ಥನಿಗೆ ಅಪೇಕ್ಷಾ ಕಾಯುತ್ತಿರುವ ಸಮಯದಲ್ಲಿ ಅಲ್ಲಿಗೆ ಜಯದೇವ್‌ ಆಗಮಿಸುತ್ತಾನೆ. ಜಯದೇವ್‌ನಿಂದ ತಪ್ಪಿಸಿಕೊಳ್ಳುವ ಯತ್ನವನ್ನು ಅಪೇಕ್ಷಾ ಮಾಡುತ್ತಾಳೆ. ಏನ್ರಿ ಅತ್ತಿಗೆ ತಂಗಿ ಎಂದು ಪಾರ್ಥ ತನ್ನ ಗರ್ಲ್‌ ಫ್ರೆಂಡ್‌ಗೆ ಕರೆ ಮಾಡುತ್ತಾನೆ. ಹೇಗೋ ಗೆಳತಿಯಲ್ಲಿ ಮಾತನಾಡುವಂತೆ ವರ್ತಿಸಿ ಪಾರ್ಥನಿಗೆ ಜಯದೇವ್‌ ಕುರಿತು ಮಾಹಿತಿ ನೀಡುತ್ತಾಳೆ. ಇಲ್ಲೇ ಬೇಕರಿ ಹತ್ತಿರ ಗೆಳತಿ ಇದ್ದಾಳೆ ಎಂದು ಜಯದೇವ್‌ನಿಂದ ಪಾರಾಗುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ಇನ್ನೊಂದೆಡೆ ಭೂಮಿಕಾ ಮತ್ತು ಆಕೆಯ ಅಮ್ಮನ ಮಾತುಕತೆ ನಡೆಯುತ್ತದೆ. ಅಪ್ಪನ ಮರೆತಿದ್ದಿ ಎಂದು ಅಮ್ಮ ಸುಮ್ಮನೆ ಹೇಳಿದಾಗ ಭೂಮಿಕಾ ಗೊಂದಲಕ್ಕೆ ಈಡಾಗುತ್ತಾಳೆ. ಈ ಹಿಂದೆ ತನ್ನ ಹೆಸರಿನ ಜತೆ ಅಪ್ಪನ ಹೆಸರು ಹೇಳುತ್ತಿದ್ದೆ. ಈಗ ನೋಡಿದರೆ ಸಹಿಯಲ್ಲಿ ಭೂಮಿಕಾ ಗೌತಮ್‌ ಎಂದು ಹಾಕಿರುವೆ ಎಂದು ಅಮ್ಮ ತಮಾಷೆ ಮಾಡುತ್ತಾರೆ.

ಜಯದೇವ್‌ ಕಣ್ಣಿಗೆ ಬಿತ್ತು ಪಾರ್ಥ ಅಪೇಕ್ಷಾ ಲವ್‌ಸ್ಟೋರಿ

ಅತ್ತಿಗೆ ತಂಗಿ ಹೇಗೋ ಜಯದೇವ್‌ರಿಂದ ತಪ್ಪಿಸಿಕೊಂಡು ಪಾರ್ಥನನ್ನು ಭೇಟಿಯಾಗುತ್ತಾಳೆ. ಬಳಿಕ ಬೈಕ್‌ನಲ್ಲಿ ಇವರಿಬ್ಬರು ಹೋಗುತ್ತಾರೆ. ಪಾರ್ಥನ ಬೈಕ್‌ನಲ್ಲಿ ಗಟ್ಟಿಯಾಗಿ ಹಿಡಿದುಕೊಂಡು ಅತ್ತಿಗೆ ತಂಗಿ ಸಾಗುತ್ತಾಳೆ. ಈ ದೃಶ್ಯ ಮರೆಯಲ್ಲಿ ನಿಂತಿರುವ ಜಯದೇವ್‌ ಕಣ್ಣಿಗೆ ಬೀಳುತ್ತದೆ. "ಪಾರ್ಥನ? ಇಷ್ಟು ದಿನ ಸೈಲೆಂಟ್‌ ಇದ್ದವನು ನನ್ನ ಹುಡುಗಿನ ಪಟಾಯಿಸ್ತನ? ಅವತ್ತು ಪ್ರಪೋಸ್‌ ಮಾಡಿದ್ದು ಇವನ? ನಾನು ಸುಮ್ಮನೆ ಬಿಡೋಲ್ಲ" ಎಂದು ಜಯದೇವ್‌ ರೋಷಗೊಳ್ಳುತ್ತಾನೆ.

ಭೂಮಿಕಾಳಿಗೆ ಅಮ್ಮನ ಪ್ರೇಮಪಾಠ

ಬಳಿಕ ಭೂಮಿಕಾ ಮತ್ತು ಅಮ್ಮನ ಮಾತುಕತೆ ನಡೆಯುತ್ತದೆ. ಗೌತಮ್‌ ಜತೆ ಪ್ರೀತಿ ದೊಡ್ಡ ಮಟ್ಟಕ್ಕೆ ಬೆಳೆದಿರುವುದೇ ಎಂದು ಅಮ್ಮ ಕೇಳುತ್ತಾಳೆ. "ನಿನ್ನ ಮತ್ತು ಗೌತಮ್‌ ಸಂಬಂಧ ಯಾವ ಸ್ಟೇಜ್‌ನಲ್ಲಿ ಇದೆ" ಎಂದು ಅಮ್ಮ ಕೇಳುತ್ತಾರೆ. "ನಾವಿಬ್ಬರು ಮದುವೆಯಾದದ್ದು ಜೀವ ಮತ್ತು ಮಹಿಗೋಷ್ಕರ" ಎಂದು ಭೂಮಿಕಾ ಹೇಳುತ್ತಾಳೆ. "ಅದು ಆಗ, ಈಗ ಏನಾಗಿದೆ" ಎಂದು ಅಮ್ಮ ಕೇಳುತ್ತಾರೆ. "ನನಗೆ ಅವರು ಸ್ವಲ್ಪ ಸ್ವಲ್ಪ ಇಷ್ಟವಾಗುತ್ತಾರೆ. ಆದರೆ, ನನ್ನ ತರಹ ಅವರಿಗೂ ಆ ಭಾವನೆ ಇದೆಯ ಗೊತ್ತಾಗ್ತಿಲ್ಲ. ನನಗೆ ಅವರ ಒಂದೊಂದು ಗುಣ ಇಷ್ಟವಾಗುತ್ತದೆ. ಅವರ ಕೈ ಹಿಡಿಯೋಕ್ಕೆ ನಾನು ಲಕ್ಕಿ ಎನಿಸುತ್ತದೆ" ಎನ್ನುತ್ತಿರುವಾಗಲೇ ಭೂಮಿಕಾಳಿಗೆ ಗೌತಮ್‌ ಕಾಲ್‌ ಬರುತ್ತದೆ. "ಆಟೋದಲ್ಲಿ ಬರಬೇಡ, ಕಾರು ಕಳುಹಿಸ್ತಿನಿ" ಎನ್ನುತ್ತಾರೆ.

ನೀನು ಗೌತಮ್‌ನಲ್ಲಿ ಪ್ರೀತಿಯ ಕುರಿತು ಹೇಳಿದ್ದೀಯಾ ಎಂದು ಅಮ್ಮ ಕೇಳುತ್ತಾಳೆ. ಪ್ರೀತಿ ಇರೋದೇ ಹೇಳಿಕೊಳ್ಳೊಕ್ಕೆ ಎಂದು ಅಮ್ಮ ಪ್ರೇಮಪಾಠ ಮಾಡುತ್ತಾಳೆ. ಬಳಿಕ ರೆಡ್‌ ರೋಸ್‌ ಕೊಟ್ಟು ಇದನ್ನು ಗೌತಮ್‌ಗೆ ನೀಡಿ ಪ್ರಪೋಸ್‌ ಮಾಡು ಅನ್ನುತ್ತಾಳೆ. ಒಟ್ಟಾರೆ, ಪ್ರೇಮಿಗಳ ದಿನ ಹತ್ತಿರ ಇರುವಾಗ ಅಮೃತಧಾರೆ ಸೀರಿಯಲ್‌ನಲ್ಲೂ ಪ್ರೇಮಕಥೆ ಡೀಪ್‌ ಆಗೋ ಲಕ್ಷಣಗಳು ಇವೆ.

ಇದಾದ ಬಳಿಕ ಪಾರ್ಥ ಅಪೇಕ್ಷಾ ಲವ್‌ ಸ್ಟೋರಿ ಮುಂದುವರೆಯುತ್ತದೆ. ಅತ್ತಿಗೆ ತಂಗಿ ಮತ್ತು ಭಾವನ ತಮ್ಮನ ಲಾಂಗ್‌ ರೈಡ್‌, ಬೋಟಿಂಗ್‌ ದೃಶ್ಯಗಳು ಮತ್ತು ಸಲ್ಲಾಪಗಳು ಮುಂದುವರೆಯುತ್ತವೆ.

ಭೂಮಿಕಾ ಮನೆಗೆ ಬಂದಾಗ ಮನೆಯಲ್ಲಿ ಎಲ್ಲರೂ ಸುತ್ತ ಕುಳಿತು ಮಾತನಾಡುತ್ತ ಇರುತ್ತಾರೆ. ಅಲ್ಲಿ ಮಹಿಮಾ ಕುರಿತು ಚರ್ಚೆಯಾಗುತ್ತದೆ. ಮನೆಯಲ್ಲಿ ಶುಭ ಕಾರ್ಯ ನಡೆದರೆ ಎಲ್ಲವೂ ಸರಿ ಹೋಗುತ್ತೆ ಎಂದು ಅತ್ತೆ ಹೇಳಿದಾಗ ಬಾಯ್ತಪ್ಪಿ ಭೂಮಿಕಾ "ಪ್ರಪೋಸ್‌ ಮಾಡಬಹುದು" ಎನ್ನುತ್ತಾಳೆ. ಅವಳ ಮನಸ್ಸಿನಲ್ಲಿ ಅಮ್ಮ ಹೇಳಿಕೊಟ್ಟ ಲವ್‌ ಟಿಪ್ಸ್‌ ಇರುವ ಕಾರಣ ಬಾಯಿತಪ್ಪಿ ಹಾಗೆ ಹೇಳುತ್ತಾಳೆ. ಸೀರಿಯಲ್‌ ಸಶೇಷ ಆಗುತ್ತದೆ.

ಅಮೃತಧಾರೆ ಧಾರಾವಾಹಿ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)
ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್‌: ಜೈದೇವ್‌
ಚಂದನ್‌: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)
ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

ಅಮೃತಧಾರೆ ಧಾರಾವಾಹಿಯ ಈ ಹಿಂದಿನ ಸಂಚಿಕೆಗಳು

ಟಿ20 ವರ್ಲ್ಡ್‌ಕಪ್ 2024