Amruthadhaare: ಈ ಮನೆಯಲ್ಲಿ ನಿಮ್ಮ ಸ್ಥಾನ ಏನೆಂದು ತಿಳಿದುಕೊಳ್ಳಿ, ಭೂಮಿಕಾಳ ವಿರುದ್ಧ ತಿರುಗಿಬಿದ್ದ ಗೌತಮ್‌; ಶಕುಂತಲಾ ನಾಟಕಕ್ಕೆ ಗೆಲುವು
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಈ ಮನೆಯಲ್ಲಿ ನಿಮ್ಮ ಸ್ಥಾನ ಏನೆಂದು ತಿಳಿದುಕೊಳ್ಳಿ, ಭೂಮಿಕಾಳ ವಿರುದ್ಧ ತಿರುಗಿಬಿದ್ದ ಗೌತಮ್‌; ಶಕುಂತಲಾ ನಾಟಕಕ್ಕೆ ಗೆಲುವು

Amruthadhaare: ಈ ಮನೆಯಲ್ಲಿ ನಿಮ್ಮ ಸ್ಥಾನ ಏನೆಂದು ತಿಳಿದುಕೊಳ್ಳಿ, ಭೂಮಿಕಾಳ ವಿರುದ್ಧ ತಿರುಗಿಬಿದ್ದ ಗೌತಮ್‌; ಶಕುಂತಲಾ ನಾಟಕಕ್ಕೆ ಗೆಲುವು

Amruthadhaare Serial yesterday Episode: ತನ್ನದ್ದೇನೂ ತಪ್ಪಿಲ್ಲ ಎಂದು ಭೂಮಿಕಾ ಹೇಳುತ್ತಿರುವಾಗ ಗೌತಮ್‌ ಕೋಪಗೊಳ್ಳುತ್ತಾನೆ. ಯಾವತ್ತೂ ಅಮ್ಮನಿಗೆ ಎದುರು ಮಾತನಾಡಬಾರದು" ಎಂದು ಭೂಮಿಕಾಳಿಗೆ ಬಯ್ಯುತ್ತಾನೆ. ಗೌತಮ್‌ಗೆ ಬಳಿಕ ಆನಂದ್‌ ಒಂದಿಷ್ಟು ಮನವರಿಕೆ ಮಾಡುತ್ತಾನೆ. ಗೌತಮ್‌ ಭೂಮಿಕಾಳ ಕ್ಷಮಾಪಣೆ ಕೇಳುತ್ತಾನೆ.

ಭೂಮಿಕಾಳ ವಿರುದ್ಧ ತಿರುಗಿಬಿದ್ದ ಗೌತಮ್‌; ಶಕುಂತಲಾ ನಾಟಕಕ್ಕೆ ಗೆಲುವು
ಭೂಮಿಕಾಳ ವಿರುದ್ಧ ತಿರುಗಿಬಿದ್ದ ಗೌತಮ್‌; ಶಕುಂತಲಾ ನಾಟಕಕ್ಕೆ ಗೆಲುವು

Amruthadhaare Serial: ಜೈದೇವ್‌ ಮಲ್ಲಿ ಮೇಲೆ ದೌರ್ಜನ್ಯ ಮಾಡಿದ ವಿಷಯದಲ್ಲಿ ಮನೆಯಲ್ಲಿ ರಂಪಾಟ ನಡೆಯುತ್ತದೆ. ಭೂಮಿಕಾಳ ಹೆಸರಲ್ಲಿ ಯಾರೋ ಜೈದೇವ್‌ ವಿರುದ್ಧ ಪೊಲೀಸ್‌ ಕಂಪ್ಲೆಂಟ್‌ ನೀಡಿರುತ್ತಾರೆ. ನಾನು ಕಂಪ್ಲೆಂಟ್‌ ಕೊಟ್ಟಿಲ್ಲ ಎಂದು ಭೂಮಿಕಾ ಹೇಳಿದರೂ ಯಾರೂ ನಂಬುವುದಿಲ್ಲ. ಮನೆ ಮರ್ಯಾದೆ ಗೌರವ ಕಳೆದೆ ಎಂದು ಶಕುಂತಲಾದೇವಿ ಭೂಮಿಕಾಳ ಮೇಲೆ ಆರೋಪ ಮಾಡುತ್ತಾಳೆ. ಭೂಮಿಕಾ ಕಂಪ್ಲೆಂಟ್‌ ಕೊಟ್ಟಿಲ್ಲ ಎಂದು ಹೇಳುತ್ತಿದ್ದಾಳೆ ಎಂದು ಗೌತಮ್‌ ಬೆಂಬಲಕ್ಕೆ ಬಂದರೂ ಪ್ರಯೋಜನವಾಗುವುದಿಲ್ಲ. ಹೀಗಿದ್ದರೂ ಶಕುಂತಲಾದೇವಿ ಕೇಳುವುದಿಲ್ಲ.

ಭೂಮಿಕಾಳ ವಿರುದ್ಧ ತಿರುಗಿಬಿದ್ದ ಗೌತಮ್‌

ಈ ಸಂದರ್ಭದಲ್ಲಿ ಗೌತಮ್‌ "ಯಾವತ್ತೂ ಅಮ್ಮನಿಗೆ ಎದುರು ಮಾತನಾಡಬಾರದು. ನಾನು ಸಪೋರ್ಟ್‌ ಮಾಡ್ತಿನಿ ಎಂದು ಏನೂ ಬೇಕಾದರೂ ಮಾತನಾಡಬೇಡಿ. ಈ ಮನೆಯಲ್ಲಿ ನಿಮ್ಮ ಸ್ಥಾನ ಏನೆಂದು ತಿಳಿದುಕೊಳ್ಳಿ" ಎಂದು ಗೌತಮ್‌ ಹೇಳುತ್ತಾನೆ. ಶಕುಂತಲಾದೇವಿ ಬಯಸಿರುವುದು ಇದೇ. "ಸಾರಿ" ಎಂದು ಹೇಳಿ ಭೂಮಿಕಾ ಅಲ್ಲಿಂದ ಹೋಗುತ್ತಾಳೆ. "ಕೊನೆಗೂ ನಾನು ಕೊಟ್ಟ ಡೋಸ್‌ ವರ್ಕೌಟ್‌ ಆಯ್ತು. ನನಗೆ ಇದೇ ಬೇಕಾಗಿರುವುದು" ಎಂದು ಶಕುಂತಲಾದೇವಿಯ ಸ್ವಗತ ಇರುತ್ತದೆ.

ಭೂಮಿಕಾ ದುಃಖದಲ್ಲಿರುತ್ತಾಳೆ. ಮಲ್ಲಿ ಬಂದು "ನನ್ನನ್ನು ಕ್ಷಮಿಸಿಬಿಡಿ ಅಕ್ಕಾವ್ರೆ" ಎಂದು ಮಲ್ಲಿ ಅಳುತ್ತಾಳೆ. ಒಂದಿಷ್ಟು ಸೆಂಟಿಮೆಂಟ್‌ ಮಾತನಾಡುತ್ತಾರೆ."ನಾವು ಅತಿಯಾಗಿ ಪ್ರೀತಿಸ್ತಿವಿ ಅಲ್ವ, ಅವರು ಏನೂದ್ರೂ ಹೇಳಿದ್ರೆ ಆಗೋ ನೋವು" "ನಾವಿಬ್ಬರು ಈಗ ಒಂದೇ ದೋಣಿಯಲ್ಲಿ ಪ್ರಯಾಣಿಸ್ತ ಇದ್ದೇವೆ. ನಾವಿಬ್ಬರು ಈಗ ಒಂದೇ ದೋಣಿಯ ಪ್ರಯಾಣಿಗರು" ಎಂದೆಲ್ಲ ಭೂಮಿಕಾ ಸಮಧಾನ ಹೇಳುತ್ತಾಳೆ.

ಗೌತಮ್‌ಗೆ ಆನಂದ್‌ ಬುದ್ದಿವಾದ

ಇನ್ನೊಂದೆಡೆ ಗೌತಮ್‌ ದುಃಖದಲ್ಲಿದ್ದಾನೆ. ಆನಂದ್‌ ಬಂದು "ಯಾಕೆ ಈ ರೀತಿ ಮಾತನಾಡುತ್ತ ಇದ್ದೀಯ. ನನಗೆ ಇದು ಇಷ್ಟ ಆಗಲಿಲ್ಲ" ಎಂದು ಆನಂದ್‌ ಹೇಳುತ್ತಾನೆ. "ಕೋಪದಲ್ಲಿ ಒಂದು ಮಾತು ಹೇಳಿದೆ" ಎಂದು ಗೌತಮ್‌ ಹೇಳುತ್ತಾನೆ. ಹೀಗೆ ಗೌತಮ್‌ ಮತ್ತು ಆನಂದ್‌ ನಡುವೆ ಒಂದಿಷ್ಟು ಮಾತುಕತೆ ನಡೆಯುತ್ತದೆ. "ಅಮ್ಮ ಮತ್ತು ಹೆಂಡತಿ ಬಂದಾಗ ಅಮ್ಮನನ್ನೇ ಆಯ್ಕೆ ಮಾಡೋದು" ಎಂದು ಗೌತಮ್‌ ಹೇಳುತ್ತಾನೆ. "ಆಸ್ತಿಪಾಸ್ತಿ ಸಂಪಾದನೆ ಮಾಡಿದರೆ ಸಾಲದು, ಮಕ್ಕಳನ್ನು ಆಸ್ತಿ ರೀತಿ ಬೆಳೆಸಬೇಕು" ಎಂದು ಆನಂದ್‌ ಹೇಳುತ್ತಾನೆ. ಹೀಗೆ, ಭೂಮಿಕಾಳ ತಪ್ಪಿರಲು ಸಾಧ್ಯವೇ ಇಲ್ಲ ಎನ್ನುವ ರೀತಿ ಸಾಕಷ್ಟು ವಿಚಾರ ಆನಂದ್‌ ಹೇಳಿದಾಗ ಗೌತಮ್‌ ಯೋಚನೆ ಮಾಡುತ್ತಾನೆ. "ಅತ್ತಿಗೆನ ಒಂದುಬಾರಿ ಸಾರಿ ಹೇಳು" ಎನ್ನುತ್ತಾನೆ.

ಭೂಮಿಕಾಳ ಕ್ಷಮಾಪಣೆ ಕೇಳಿದ ಗೌತಮ್‌

ಗೌತಮ್‌ ಭೂಮಿಕಾಳ ಬಳಿಗೆ ಹೋಗುತ್ತಾನೆ. "ಆ ಕ್ಷಣಕ್ಕೆ ನಾನು ಆ ರೀತಿ ರಿಯಾಕ್ಟ್‌ ಮಾಡಬಾರದು" ಎಂದೆಲ್ಲ ಹೇಳುತ್ತಾನೆ. "ಅಮ್ಮ ಬೇಜಾರಲ್ಲಿ ಇರುವಾಗ ನೀವು ಹಾಗೆ ಮಾತನಾಡಬಾರದಿತ್ತು. ಯಾವ ಕಾರಣಕ್ಕೂ ನಾನು ಅಮ್ಮನ ಬಿಟ್ಟುಕೊಡುವುದಿಲ್ಲ" ಎಂದೆಲ್ಲ ಅಮ್ಮನ ಪರವಾಗಿಯೇ ಮಾತನಾಡುತ್ತಾನೆ. "ದಯವಿಟ್ಟು ನನ್ನನ್ನು ಕ್ಷಮಿಸಿ" ಎಂದು ಕೈಮುಗಿಯುತ್ತಾನೆ. "ಏನ್‌ ಮಾಡ್ತಾ ಇದ್ದೀರಾ, ನೀವು ನನಗೆ ಏನು ಬೇಕಾದರೂ ಹೇಳಬಹುದು" ಎಂದು ಭೂಮಿಕಾ ಹೇಳುತ್ತಾಳೆ. "ನೀವು ಮತ್ತು ಅಮ್ಮ ಮಾತಿಗೆ ಮಾತು ಬೆಳೆಸಬೇಡಿ. ಅಮ್ಮನಿಗೆ ಯಾವತ್ತೂ ಎದುರು ಮಾತನಾಡಬೇಡಿ" ಎಂದೆಲ್ಲ ಮಾತುಕತೆ ನಡೆಯುತ್ತದೆ.

ಇದಾದ ಬಳಿಕ ಗೌತಮ್‌ ತನ್ನ ಅಮ್ಮನ ಬಳಿ ಹೋಗುತ್ತಾಳೆ. ಶಕುಂತಲಾದೇವಿ ದುಃಖದಲ್ಲಿದ್ದಂತೆ ಇರುತ್ತಾರೆ. "ನಿಮ್ಮ ಜತೆ ಮಾತನಾಡಬೇಕಿತ್ತು. ಜೈದೇವ್‌ ಬಗ್ಗೆ" ಎಂದು ಗೌತಮ್‌ ಹೇಳುತ್ತಾನೆ. ಶಕುಂತಲಾದೇವಿ ಒಂದಿಷ್ಟು ತಾಯಿ ಸೆಂಟಿಮೆಂಟ್‌ ಮಾತನಾಡುತ್ತಾಳೆ. ಜತೆಗೆ ಭೂಮಿಕಾಳ ವಿರುದ್ಧ ಆರೋಪ ಮಾಡುತ್ತಾಳೆ. ಅಮ್ಮ ಮತ್ತು ಹೆಂಡತಿ ನಡುವೆ ಗೌತಮ್‌ ಸಿಕ್ಕಿದ್ದಾನೆ. ಸೀರಿಯಲ್‌ ಮುಂದುವರೆಯುತ್ತದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)
ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್‌: ಜೈದೇವ್‌
ಚಂದನ್‌: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)
ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

Whats_app_banner