ಕನ್ನಡ ಸುದ್ದಿ  /  ಮನರಂಜನೆ  /  Amruthadhaare Serial: ತವರು ಮನೆಗೆ ಹೆಣ್ಣು ಕೇಳೋಕ್ಕೆ ಬಂದ್ರು ಭೂಮಿಕಾ; ಪಾರ್ಥನ ಜತೆ ಮದುವೆ ಅಂತ ತಪ್ಪು ತಿಳ್ಕೊಂಡ್ಲು ಅಪೇಕ್ಷಾ

Amruthadhaare Serial: ತವರು ಮನೆಗೆ ಹೆಣ್ಣು ಕೇಳೋಕ್ಕೆ ಬಂದ್ರು ಭೂಮಿಕಾ; ಪಾರ್ಥನ ಜತೆ ಮದುವೆ ಅಂತ ತಪ್ಪು ತಿಳ್ಕೊಂಡ್ಲು ಅಪೇಕ್ಷಾ

Amruthadhaare TV Serial Episode: ಝೀ ಕನ್ನಡದ ಅಮೃತಧಾರೆ ಸೀರಿಯಲ್‌ನ ಫೆಬ್ರವರಿ 9ರ ಸಂಚಿಕೆಯಲ್ಲಿ ಅಪೇಕ್ಷಾ ತನ್ನ ಮದುವೆ ಮಾತುಕತೆ ಕುರಿತು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಾಳೆ. ಭೂಮಿಕಾ-ಗೌತಮ್‌ ಹೆಣ್ಣು ಕೇಳಲು ಬಂದಾಗ "ಇದು ಪಾರ್ಥನ ಜತೆ ಮದುವೆ ವಿಚಾರ" ಎಂದುಕೊಳ್ಳುತ್ತಾಳೆ. ಆದರೆ, ತಾಳಿ ಕಟ್ಟೋದು ಜೈದೇವ್‌ ಎಂದು ಆಕೆಗೆ ಗೊತ್ತಿರುವುದಿಲ್ಲ.

Amruthadhaare Serial: ತವರು ಮನೆಗೆ ಹೆಣ್ಣು ಕೇಳೋಕ್ಕೆ ಬಂದ್ರು ಭೂಮಿಕಾ
Amruthadhaare Serial: ತವರು ಮನೆಗೆ ಹೆಣ್ಣು ಕೇಳೋಕ್ಕೆ ಬಂದ್ರು ಭೂಮಿಕಾ

ಅಪೇಕ್ಷಾಳನ್ನು ಮದುವೆಯಾಗಲೇಬೇಕೆಂದು ಜೆಡಿ ತೀರ್ಮಾನಿಸುತ್ತಾನೆ. ಇವನ ಒತ್ತಡಕ್ಕೆ ಶಕುಂತಲಾದೇವಿ ಮಣಿಯಬೇಕಾಗುತ್ತದೆ. ಅಪೇಕ್ಷಾ ಮತ್ತು ಜೈದೇವ್‌ ಮದುವೆ ಕುರಿತು ಭೂಮಿಕಾ- ಗೌತಮ್‌ ಬಳಿ ಶಕುಂತಲಾದೇವಿ ಮಾತನಾಡುತ್ತಾರೆ. ಅಪೇಕ್ಷಾ ಮತ್ತು ಮನೆಯವರನ್ನು ನಾನು ಒಪ್ಪಿಸುತ್ತೇನೆ ಎಂದು ಖುಷಿಯಿಂದ ಭೂಮಿಕಾ ಹೇಳುತ್ತಾಳೆ. ಈ ಮದುವೆ ಕುರಿತು ಜೈದೇವ್‌ ಅಭಿಪ್ರಾಯವನ್ನೂ ಭೂಮಿಕಾ ಪಡೆಯುತ್ತಾಳೆ. "ಅಮ್ಮ ನನಗಾಗಿ ಯಾವ ನಿರ್ಧಾರ ತೆಗೆದುಕೊಂಡರೂ ಸರಿಯಾಗಿರುತ್ತದೆ" ಎಂದೆಲ್ಲ ಜೈದೇವ್‌ ಹೇಳುತ್ತಾನೆ.

ಟ್ರೆಂಡಿಂಗ್​ ಸುದ್ದಿ

ನೆಟ್‌ವರ್ಕ್‌ ಇಲ್ಲದ ಜೋಯಿಡಾ ಬಂಗಲೆಗೆ ಹೋದ ಪಾರ್ಥ

ನಮ್ಮ ಮನೆಯವರನ್ನು ನಾನು ಒಪ್ಪಿಸುತ್ತೇನೆ. ಇದು ನಿಮಗೆ ನಾನು ನೀಡುವ ಭರವಸೆ ಎಂದು ಜೈದೇವ್‌ಗೆ ಸಮಧಾನ ಹೇಳಿ ಭೂಮಿಕಾ ಹೊರಹೋಗುತ್ತಾರೆ. "ಒಳ್ಳೆಯವರ ರೀತಿ ಮಾಸ್ಕ್‌ ಹಾಕಿಕೊಳ್ಳುವುದೇ ಈ ಜಗತ್ತು. ನನಗೆ ಉಳಿದಿರುವ ಒಂದೇ ಸಮಸ್ಯೆ ಅಂದರೆ ಪಾರ್ಥ. ಮದುವೆ ಮುಗಿಯುವ ತನಕ ಎರಡು ದಿನ ಆತನನ್ನು ಎಲ್ಲಾದರೂ ಕಳುಹಿಸಬೇಕು. ಇದಕ್ಕೆ ಮನೆಹಾಳ ಮಾವನ ನೆರವು ಪಡೆಯಬೇಕು" ಎಂದು ಜೈದೀಪ್‌ ಅಂದುಕೊಳ್ಳುತ್ತಾನೆ. ಮನೆಹಾಳ ಮಾವನ ನೆರವು ಪಡೆದು ಜೋಯಿಡಾ ಬಂಗಲೆಗೆ ಕಳುಹಿಸಲು ಯೋಜಿಸುತ್ತಾನೆ. ಬಳಿಕ ಪಾರ್ಥನ ಭೇಟಿಯಾಗುತ್ತಾನೆ. "ಜೋಯಿಡಾದ ನಮ್ಮ ಪ್ರಾಪರ್ಟಿಗೆ ನನ್ನ ಬದಲು ನೀನು ಹೋಗು" ಎಂದು ಜೈದೀಪ್‌ ಹೇಳುತ್ತಾನೆ. ಅದಕ್ಕೆ ಪಾರ್ಥ ಖುಷಿಯಿಂದ ಒಪ್ಪುತ್ತಾನೆ. ಬಳಿಕ ಅಪೇಕ್ಷಾಗೆ ಫೋನ್‌ ಮಾಡಿ ಈ ವಿಚಾರ ತಿಳಿಸುತ್ತಾನೆ.

ತವರು ಮನೆಗೆ ಹೆಣ್ಣು ಕೇಳಲು ಬಂದ ಭೂಮಿಕಾ

ಗೌತಮ್‌ ತನ್ನ ಅತ್ತೆ ಮತ್ತು ಮಾವನ ಮನೆಗೆ ಬರುತ್ತಾನೆ. ಮಹಿಮಾನ ನೋಡೋಕ್ಕೆ ಬಂದ್ರ ಎಂದಾಗ "ಇಲ್ಲ ನಿಮ್ಮನ್ನು ನೋಡೋಕ್ಕೆ ಬಂದೆ" ಎನ್ನುತ್ತಾನೆ. ಬಳಿಕ ಮನೆಗೆ ಭೂಮಿಕಾ ಎಂಟ್ರಿ ನೀಡುತ್ತಾರೆ. ಹಣ್ಣುಹಂಪಲು ಹಿಡಿದುಕೊಂಡೇ ಮನೆಗೆ ಭೂಮಿಕಾ ಬಂದಿರುತ್ತಾರೆ. "ನನ್ನ ತಮ್ಮನಿಗೆ ಅಪೇಕ್ಷಾನ ತಂದುಕೊಡಬೇಕೆಂದು ಬಯಸಿದ್ದೇವೆ" ಎಂದು ಗೌತಮ್‌ ನೇರವಾಗಿ ವಿಚಾರ ತಿಳಿಸುತ್ತಾನೆ. ಇದನ್ನು ಕೇಳಿಸಿಕೊಂಡ ಅಪೇಕ್ಷಾ "ಬಹುಶಃ ಪಾರ್ಥನನ್ನು ನನಗೆ ಮದುವೆ ಮಾಡ್ತಾರೆ" ಅಂದುಕೊಂಡು ಖುಷಿಯಾಗ್ತಾಳೆ. ಈ ಖುಷಿಯ ಸಂಗತಿ ತಿಳಿಸಬೇಕೆಂದು ಪಾರ್ಥನಿಗೆ ಫೋನ್‌ ಮಾಡಿದಾಗ ಅವನು ನಾನ್‌ ರೀಚೇಬಲ್‌ ಆಗಿರುತ್ತಾನೆ. ಅವನು ಈಗಾಗಲೇ ಜೋಯಿಡಾಕ್ಕೆ ಹೋಗಿರುತ್ತಾನೆ.

ಬಳಿಕ ಜೈದೇವ್‌ ಮತ್ತು ಮಾವನ ಮಾತುಕತೆ ನಡೆಯುತ್ತದೆ. ಬಳಿಕ ಜೈದೇವ್‌ ತನ್ನ ಮಾವನ ಮುಂದೆ "ನನಗೆ ತಮ್ಮ ಅಣ್ಣ ಯಾರೂ ಮುಖ್ಯವಲ್ಲ. ಈ ಜೆಡಿಗೆ ಜೇಡಿಯೇ ಮುಖ್ಯ" ಎಂದು ಹೇಳುತ್ತಾನೆ. "ಅಟ್‌ ಎನೀ ಕಾಸ್ಟ್‌ ನನಗೆ ಅವಳು ಬೇಕೇಬೇಕು" ಎಂದು ಜೈದೇವ್‌ ಹೇಳುತ್ತಾನೆ.

ಇನ್ನೊಂದೆಡೆ ಅಪೇಕ್ಷಾ ಭಾವನತಮ್ಮನ ಕನಸು ಕಾಣುತ್ತ ಇರುತ್ತಾಳೆ. ಆಗ ಅಲ್ಲಿಗೆ ಆಕೆಯ ಅಮ್ಮ ಬರುತ್ತಾರೆ. ಬಳಿಕ ಮದುವೆಯ ವಿಷಯವನ್ನು ಅಮ್ಮ ಹೇಳುತ್ತಾರೆ. ಸ್ವಲ್ಪ ಹೊತ್ತು ಯೋಚನೆ ಮಾಡಬೇಕು ಎಂದು ಅಪೇಕ್ಷಾ ಹೇಳುತ್ತಾಳೆ. ಅವಳು ನನ್ನ ಮದುವೆ "ಪಾರ್ಥ"ನ ಜತೆ ಎಂದುಕೊಳ್ಳುತ್ತಾನೆ. ಆದರೆ, ಮದುವೆ ನಡೆಯಲಿರುವುದು ಜೈದೀಪ್‌ ಜತೆ ಎಂದು ಆಕೆಗೆ ತಿಳಿದಿರುವುದಿಲ್ಲ. ಬಳಿಕ ಭೂಮಿಕಾ "ಈ ಮದುವೆ ನಿನಗೆ ಒಪ್ಪಿಗೆನ" ಎಂದು ಅಪೇಕ್ಷಾನ ಬಳಿ ಕೇಳುತ್ತಾರೆ. ಎಲ್ಲೂ ಜೈದೇವ್‌ ಎಂಬ ಹೆಸರು ಬಾರದೆ ಇರುವುದರಿಂದ ಪಾರ್ಥನ ವಿಚಾರವನ್ನೇ ಮಾತನಾಡುತ್ತಾರೆ ಎಂದುಕೊಳ್ಳುತ್ತಾಳೆ. ಎಪಿಸೋಡ್‌ ಮುಂದಿನ ದಿನಕ್ಕೆ ಮುಂದುವರೆಯುತ್ತದೆ.

ಅಮೃತಧಾರೆ ಧಾರಾವಾಹಿ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)
ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್‌: ಜೈದೇವ್‌
ಚಂದನ್‌: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)
ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

ಟಿ20 ವರ್ಲ್ಡ್‌ಕಪ್ 2024