Amruthadhaare Serial: ಗೌತಮ್‌ಗೆ ರೋಸ್‌ ನೀಡಲು ಭೂಮಿಕಾ ಪರದಾಟ ; ಅಪೇಕ್ಷಾ ಬೇಕು ಎಂದು ಜಯ್‌ದೇವ್‌ ರಂಪಾಟ, ಅಮೃತಧಾರೆಯಲ್ಲಿ ಪ್ರೇಮಧಾರೆ
ಕನ್ನಡ ಸುದ್ದಿ  /  ಮನರಂಜನೆ  /  Amruthadhaare Serial: ಗೌತಮ್‌ಗೆ ರೋಸ್‌ ನೀಡಲು ಭೂಮಿಕಾ ಪರದಾಟ ; ಅಪೇಕ್ಷಾ ಬೇಕು ಎಂದು ಜಯ್‌ದೇವ್‌ ರಂಪಾಟ, ಅಮೃತಧಾರೆಯಲ್ಲಿ ಪ್ರೇಮಧಾರೆ

Amruthadhaare Serial: ಗೌತಮ್‌ಗೆ ರೋಸ್‌ ನೀಡಲು ಭೂಮಿಕಾ ಪರದಾಟ ; ಅಪೇಕ್ಷಾ ಬೇಕು ಎಂದು ಜಯ್‌ದೇವ್‌ ರಂಪಾಟ, ಅಮೃತಧಾರೆಯಲ್ಲಿ ಪ್ರೇಮಧಾರೆ

Amruthadhaare Serial February 7 Episode: ಝೀ ಕನ್ನಡದ ಅಮೃತಧಾರೆ ಸೀರಿಯಲ್‌ನ ಬುಧವಾರದ ಸಂಚಿಕೆಯಲ್ಲಿ ಒಂದೆಡೆ ಗೌತಮ್‌ಗೆ ಪ್ರಪೋಸ್‌ ಮಾಡಲು ಭೂಮಿಕಾ ಪ್ರಯತ್ನಿಸುತ್ತಾ ಇರುತ್ತಾರೆ. ಇನ್ನೊಂದೆಡೆ ಅಪೇಕ್ಷಾ ಮತ್ತು ಪಾರ್ಥನ ಲವ್‌ಸ್ಟೋರಿ ತಿಳಿದು "ನಾನು ಅಪೇಕ್ಷಾಳನ್ನು ಮದುವೆಯಾಗ್ತಿನಿ" ಎಂದು ತಾಯಿ ಬಳಿ ಜಯ್‌ದೇವ್‌ ಗಲಾಟೆ ಮಾಡುತ್ತಾನೆ.

ಅಮೃತಧಾರೆ ಧಾರಾವಾಹಿ: ಗೌತಮ್‌ಗೆ ರೋಸ್‌ ನೀಡಲು ಭೂಮಿಕಾ ಪರದಾಟ
ಅಮೃತಧಾರೆ ಧಾರಾವಾಹಿ: ಗೌತಮ್‌ಗೆ ರೋಸ್‌ ನೀಡಲು ಭೂಮಿಕಾ ಪರದಾಟ

Amruthadhaare TV Serial Episode: ಝೀ ಕನ್ನಡದ ಅಮೃತಧಾರೆ ಧಾರಾವಾಹಿಯ ಮಂಗಳವಾರದ ಸಂಚಿಕೆಯ ಕೊನೆಯಲ್ಲಿ ಗೌತಮ್‌ಗೆ ಪ್ರಪೋಸ್‌ ಮಾಡಲು ಯೋಚನೆ ಮಾಡುತ್ತಾ ಮನೆಗೆ ಬಂದಾಗ ಅಲ್ಲಿ ಕುಟುಂಬದ ಸದಸ್ಯರು ಕುಳಿತು ಚರ್ಚಿಸುತ್ತಾ ಇರುತ್ತಾರೆ. ಮನೆಯಲ್ಲಿ ಶುಭ ಕಾರ್ಯ ನಡೆದರೆ ಎಲ್ಲವೂ ಸರಿ ಹೋಗುತ್ತೆ. ಇದಕ್ಕೆ ನಿನ್ನ ಅಭಿಪ್ರಾಯ ಏನು ಎಂದು ಎಂದು ಅತ್ತೆ ಹೇಳಿದಾಗ ಬಾಯ್ತಪ್ಪಿ ಭೂಮಿಕಾ "ಪ್ರಪೋಸ್‌ ಮಾಡಬಹುದು" ಎನ್ನುತ್ತಾಳೆ. ಅವಳ ಮನಸ್ಸಿನಲ್ಲಿ ಅಮ್ಮ ಹೇಳಿಕೊಟ್ಟ ಲವ್‌ ಟಿಪ್ಸ್‌ ಇರುವ ಕಾರಣ ಬಾಯಿತಪ್ಪಿ ಹಾಗೆ ಹೇಳುತ್ತಾಳೆ. ಬುಧವಾರದ ಎಪಿಸೋಡ್‌ನಲ್ಲಿ ಈ ಪ್ರಪೋಸ್‌ ಮಾಡಬಹುದು ಎನ್ನುವ ವಿಚಾರವನ್ನು "ಶಾಸ್ತ್ರಿಗಳ ಬಳಿ ಶುಭಕಾರ್ಯಕ್ಕೆ ಪ್ರಪೋಸ್‌ ಮಾಡಬಹುದು" ಎಂದು ಜಾಣತನದಿಂದ ಭೂಮಿಕಾ ತಪ್ಪಿಸಿಕೊಳ್ಳುತ್ತಾಳೆ.

ಅಪೇಕ್ಷಾಳನ್ನು ಮದುವೆಯಾಗ್ತಿನಿ ಅಂದ ಜಯ್‌ದೇವ್‌

ಮತ್ತೊಂದು ಕಡೆ ಜಯ್‌ ರಾ ಕುಡೀತ ಇದ್ದಾನೆ. ಪಾರ್ಥ ಮತ್ತು ಅಪೇಕ್ಷಾ ಲವ್‌ ಸ್ಟೋರಿ ಕಣ್ಣಿಗೆ ಬಿದ್ದಿರುವುದರಿಂದ ಆತ ಅಪ್‌ಸೆಟ್‌ ಆಗಿದ್ದಾನೆ. ಇದನ್ನು ನೋಡಿದ ಅವನ ತಾಯಿ ಮತ್ತು ಇತರರು ಕಂಗಲಾಗುತ್ತಾರೆ. "ನಿನಗೆ ಏನು ಕಡಿಮೆ ಮಾಡಿದ್ದೇವೆ. ನೀನು ಕೇಳಿದ್ದಕ್ಕೆ ಬೇಡ ಅಂದಿದ್ದೇವ" ಎಂದು ತಾಯಿ ಆತನಿಗೆ ಸಮಧಾನ ಹೇಳುತ್ತಾರೆ. "ಹಾಗಾದರೆ, ನಾನು ಒಂದು ಕೇಳುವೆ, ನೀಡ್ತಿನಿ ಅಂತ ಪ್ರಾಮೀಸ್‌ ಮಾಡಿ" ಎಂದು ಜಯ್‌ದೇವ್‌ ಹೇಳುತ್ತಾನೆ. ತಾಯಿ ಅವನ ಪ್ರಾಮೀಸ್‌ಗೆ ಒಪ್ಪುತ್ತಾಳೆ. "ನಾನು ಮದುವೆಯಾಗಬೇಕು" ಎಂದು ಜಯ್‌ದೀಪ್‌ ಹೇಳುತ್ತಾನೆ. "ನಾನು ಮದುವೆಯಾಗಬೇಕು ಎಂದುಕೊಳ್ಳುವುದು ನಾನು ಅಂದುಕೊಂಡ ಹುಡುಗಿ ಜತೆ" ಎಂದು ಹೇಳುತ್ತಾನೆ. "ಯಾರು ಆ ಹುಡುಗಿ" ಎಂದು ತಾಯಿ ಕೇಳಿದಾಗ ಜಯ್‌ದೇವ್‌ "ಅಪೇಕ್ಷಾ" ಅನ್ನುತ್ತಾನೆ.

ಗೌತಮ್‌ಗೆ ರೋಸ್‌ ನೀಡಲು ಪ್ರಯತ್ನಿಸಿದ ಭೂಮಿಕಾ

ಇನ್ನೊಂದೆಡೆ ಕೊಠಡಿಯಲ್ಲಿ ಪುಸ್ತಕ ಓದುತ್ತಿರುವ ಗೌತಮ್‌ ಬಳಿಗೆ ಭೂಮಿಕಾ ಬರುತ್ತಾಳೆ. "ಯಾಕ್ರಿ ಒಂಥರಾ ಇದ್ದೀರ" ಎಂದು ಗೌತಮ್‌ ಕೇಳುತ್ತಾರೆ. ಧೈರ್ಯ ತೆಗೆದುಕೊಂಡು ಪ್ರಪೋಸ್‌ ಮಾಡ್ತಿನಿ ಎಂದುಕೊಳ್ಳುತ್ತಾಳೆ. ಆದರೆ, ಧೈರ್ಯ ಸಾಲದೆ ಪರದಾಡುತ್ತಾಳೆ ಭೂಮಿಕಾ. ರೋಸ್‌ ಹಿಡಿದುಕೊಂಡು ಕುಳಿತುಕೊಳ್ಳುತ್ತಾಳೆ. ಕೈಗಳು ನಡುಗುತ್ತವೆ. ಆಗ ಆತ ತಿರುಗುತ್ತಾನೆ. ಕೈಯಲ್ಲಿರುವ ಹೂವು ಬೀಳುತ್ತದೆ. ಆ ಹೂವನ್ನು ಹೆಕ್ಕಿಕೊಂಡು ಗೌತಮ್‌ ಅವಳಿಗೆ ಹೂವು ನೀಡುತ್ತಾನೆ. ಹೀಗೆ, ರೋಸ್‌ ಡೇಗೆ ರೋಸ್‌ ನೀಡುವ ಭೂಮಿಕಾಳ ಪ್ಲಾನ್‌ ಪ್ಲಾಪ್‌ ಆಗುತ್ತದೆ.

ತಾಯಿ ಫೋನ್‌ ಮಾಡಿದಾಗ ಭೂಮಿಕಾ "ಪ್ರಪೋಸ್‌ ಮಾಡಲು ಹೇಳಿದ ಪ್ಲಾನ್‌ ಠುಸ್‌ ಆಯ್ತು" ಎಂದು ಹೇಳುತ್ತಾಳೆ. "ಮತ್ತೆ ಕರೆಕ್ಟ್‌ ಟೈಮ್‌ ನೋಡಿಕೊಂಡು ಅಳಿಯಂದ್ರಿಗೆ ಪ್ರಪೋಸ್‌ ಮಾಡು" ಎಂದು ತಾಯಿ ಹೇಳುತ್ತಾಳೆ. (ಒಟ್ಟಾರೆ ಈ ವ್ಯಾಲೆಂಟಿನ್‌ ಡೇ ಸಮಯದಲ್ಲಿ ರೋಸ್‌ ಡೇ, ಪ್ರಪೋಸ್‌ ಡೇ ಇತ್ಯಾದಿ ಎಲ್ಲವೂ ಅಮೃತಧಾರೆಯಲ್ಲಿ ಇರುವ ಸೂಚನೆಯಿದೆ).

ಜಯ್‌ದೇವ್‌ ಕಥೆ ಮುಂದುವರೆಯುತ್ತದೆ. "ಅಪೇಕ್ಷಾ ಅಂದರೆ ಯಾರು?" ಎಂದು ತಾಯಿ ಕೇಳುತ್ತಾಳೆ. "ಭೂಮಿಕಾಳ ತಂಗಿ ಅಪೇಕ್ಷಾ" ಎಂದು ಹೇಳುತ್ತಾನೆ. ಇದರಿಂದ ತಾಯಿ ಕೋಪಗೊಳ್ಳುತ್ತಾರೆ. "ನನ್ನ ಅಕ್ಕನ ಮದುವೆಯಾಗದೆ ನಾನು ಮದುವೆಗೆ ಒಪ್ಪಿದೆ. ಇಲ್ಲಿ ಸ್ಟೇಟಸ್‌ ಮುಖ್ಯವಾಗುತ್ತದೆ. ಆ ಮನೆಯಿಂದ ಹೆಣ್ಣು ತರುವುದು ಆಗದ ವಿಷಯ. ಮಾತುಕೊಟ್ಟೆ ಅಂತ ಏನೇನೂ ಮಾಡಲಾಗದು. ನೀನು ಸೆಲೆಕ್ಟ್‌ ಮಾಡಿದ ಹುಡುಗಿ ನಮ್ಮ ಯೋಗ್ಯತೆಗೆ ತಕ್ಕಂತೆ ಇರಬೇಕು" ಎಂದು ತಾಯಿ ಹೇಳುತ್ತಾರೆ. ಇವಳನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದ ತಾಯಿಗೆ "ಇದೇ ನಿನ್ನ ಫೈನಲ್‌ ಡಿಸಿಷನ?" ಎಂದು ಕೇಳಿ ಹೊರಕ್ಕೆ ಹೋಗುತ್ತಾನೆ.

ಅತ್ತಿಗೆ ತಂಗಿ -ಭಾವನ ತಮ್ಮನ ಲವ್‌ ಸ್ಟೋರಿ

ಅತ್ತಿಗೆ ತಂಗಿ ಭಾವನ ತಮ್ಮನ ಲವ್‌ ಸ್ಟೋರಿ ಮುಂದುವರೆದಿದೆ. "ಸದ್ಯ ನನಗೆ ಐಡೆಂಟೆಟಿ ಇಲ್ಲ. ನಾನು ಭಾವನ ತಮ್ಮ ಅಷ್ಟೇ. ನಾನು ಲೈಫ್‌ನಲ್ಲಿ ಏನಾದರೂ ಅಚೀವ್‌ ಮಾಡಬೇಕು. ಇಲ್ಲದೆ ಇದ್ದರೆ ಯಾರೂ ನಮ್ಮ ಲವ್‌ ಅನ್ನು ಯಾರೂ ಕನ್ಸಿಡರ್‌ ಮಾಡೋದಿಲ್ಲ" ಎಂದು ಪಾರ್ಥ ಹೇಳುತ್ತಾನೆ. "ಹಾಗಾದರೆ ನೀವು ಏನು ಕೆಲಸ ಮಾಡೋದು. ಮನೆಯವರು ಕೇಳಿದರೆ ಹೇಳಬೇಕು" ಎಂದು ಅಪೇಕ್ಷಾ ಹೇಳುತ್ತಾಳೆ. "ಈಗ ನಾನು ಝೀರೋ. ನಾನೊಂದು ಸ್ಟಾರ್ಟ್‌ಅಪ್‌ ಪ್ಲಾನ್‌ ಹೊಂದಿದ್ದೇನೆ" ಎಂದು ಪಾರ್ಥ ಹೇಳುತ್ತಾನೆ. ಬಳಿಕ ಸಕ್ಸಸ್‌ ಬಗ್ಗೆ ತುಂಬಾ ಮಾತನಾಡುತ್ತಾನೆ. "ಇವನು ನನ್ನ ಹುಡುಗ. ಎಂದು ಎಲ್ಲರಲ್ಲಿಯೂ ಬಿಲ್ಡಪ್‌ ನೀಡುತ್ತ ಹೋಗಬೇಕು" ಎಂದು ಹೇಳುತ್ತಾನೆ. ಇದು ಅಪೇಕ್ಷಾಳಿಗೆ ಇಂಪ್ರೆಸ್‌ ಆಗುತ್ತದೆ. ಆಕೆಗೆ ಖುಷಿಯಲ್ಲಿ ಕಣ್ಣೀರು ಬರುತ್ತದೆ. "ನಾವಿಬ್ಬರು ನಮ್ಮ ಅಚೀವ್‌ಮೆಂಟ್‌ ಸಾಧಿಸುವ ತನಕ ಮನೆಯಲ್ಲಿ ರಿಲೇಷನ್‌ಶಿಪ್‌ ಬಗ್ಗೆ ಹೇಳುವುದು ಬೇಡ" ಎಂದು ಅಪೇಕ್ಷಾ ಹೇಳಿದಾಗ ಪಾರ್ಥ ಒಪ್ಪುತ್ತಾನೆ. ಇವರಿಬ್ಬರ ಪ್ರೇಮ ಸಲ್ಲಾಪ ಮುಂದುವರೆಯುತ್ತದೆ. ಮದುವೆಯ ಡ್ರೀಮ್‌ ಕುರಿತು ಮಾತನಾಡುತ್ತಾರೆ.

ಪಾರ್ಥ ಮನೆಗೆ ಬರುತ್ತಾನೆ. ಆಗ ಭೂಮಿಕಾ ಎದುರಿಗೆ ಕಾಣಿಸುತ್ತಾರೆ. "ನಿಮ್ಮ ಮುಖದ ಹೊಳಪು, ಬಾಡಿ ಲ್ಯಾಂಗ್ವೇಜ್‌ ಬದಲಾಗಿದೆ. ಏನೋ ಬದಲಾವಣೆಯಾಗಿದೆ?" ಎಂದು ಭೂಮಿಕಾ ಕೇಳುತ್ತಾಳೆ. ಅಯ್ಯೋ ಅತ್ತಿಗೆಗೆ ಗೊತ್ತಾಯ್ತ ಎಂದು ಪಾರ್ಥ ಟೆನ್ಷನ್‌ ಆಗುತ್ತಾನೆ. "ನಿಮಗೆ ಯಾರ ಮೇಲೋ ಲವ್‌ ಆಗಿದೆ ಅಲ್ವ?" ಎಂದು ಭೂಮಿಕಾ ಕೇಳುತ್ತಾರೆ. "ಲವ್ವ ಅದರ ಸ್ಪೆಲ್ಲಿಂಗ್‌ ಮಾತ್ರ ಗೊತ್ತಿರೋದು" ಎಂದು ಹೇಳುತ್ತಾನೆ. "ಲವ್‌ ಮ್ಯಾಟರ್‌ನಲ್ಲಿ ತುಂಬಾ ಇನ್ನೋಸೆಂಟ್‌" ಎಂದು ಬುರುಡೆ ಬಿಡುತ್ತಾನೆ. "ಮಕ್ಕಳು ಏನು ಮಾಡಿದರೂ ಮೊದಲು ಮನೆಯವರಿಗೆ ಗೊತ್ತಾಗುತ್ತದೆ. ಆದರೆ, ಮಕ್ಕಳು ಪ್ರೀತಿ ಮಾಡಿದರೆ ಇಡೀ ಜಗತ್ತಿಗೆ ಗೊತ್ತಾದ ಬಳಿಕ ಮನೆಯವರಿಗೆ ಗೊತ್ತಾಗುತ್ತದೆ" ಎಂದು ಭೂಮಿಕಾ ಹೇಳುತ್ತಾರೆ. ಹೇಗೋ ಪಾರ್ಥ ತಪ್ಪಿಸಿಕೊಂಡು ಹೋಗುತ್ತಾನೆ. "ಲವ್‌ ಅನ್ನೋದು ಓಪನ್‌ ಸಿಕ್ರೇಟ್‌, ನಾವು ಮುಚ್ಚಿಟ್ಟಷ್ಟು ಅದು ಎಲ್ಲರಿಗೂ ಗೊತ್ತಾಗುತ್ತದೆ" ಎಂದು ಭೂಮಿಕಾಳ ಸ್ವಗತ ಕೇಳಿಸುತ್ತದೆ.

ಅಪೇಕ್ಷಾ ಮನೆಗೆ ಬಂದಾಗ ತಾಯಿಯಿಂದ ವಿಚಾರಣೆ ನಡೆಯುತ್ತದೆ. ಜೀವನೂ "ಇವಳೇನೂ ಸಿಕ್ರೇಟ್‌ ಮಾಡ್ತಾಳೆ" ಎಂದು ಹೇಳುತ್ತಾನೆ. "ನಿದ್ರೆಯಲ್ಲಿ ಹೆಸರೆಲ್ಲ ಹೇಳ್ತಾ ಇದ್ದೆ" ಎಂದು ತಾಯಿ ಹೇಳುತ್ತಾಳೆ. "ಅಪ್ಪಿತಪ್ಪಿ ಪಾರ್ಥನ ಹೆಸರು ಹೇಳಿಬಿಟ್ನ" ಎಂದು ಅಪೇಕ್ಷಾ ಟೆನ್ಷನ್‌ಗೆ ಒಳಗಾಗುತ್ತಾಳೆ. ಇದಾದ ಬಳಿಕ ಇನ್ನೊಂದು ಕಡೆ ಜಯ್‌ದೇವ್‌ ತನ್ನ ತಾಯಿಯ ಮುಂದೆ ವಾದ ಮುಂದುವರೆಯುತ್ತದೆ. ಅಂತಿಮವಾಗಿ "ಈ ಮದುವೆಗೆ ನಾನು ಒಪೋದಿಲ್ಲ" ಎಂದು ತಾಯಿ ಹೇಳುತ್ತಾಳೆ. "ಇದೇ ಅಂತಿಮ ಮಾತಾ" ಎಂದು ಹೇಳಿದ ಜಯ್‌ದೇವ್‌ ಪಿಸ್ತೂಲ್‌ನಲ್ಲಿ ತನ್ನ ತಲೆಗೆ ಗುರಿ ಇಡುತ್ತಾನೆ. ಅಲ್ಲಿಗೆ ಈ ಅಮೃತಧಾರೆ ಸಂಚಿಕೆ ಕೊನೆಗೊಳ್ಳುತ್ತದೆ.

ಅಮೃತಧಾರೆ ಧಾರಾವಾಹಿ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)
ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್‌: ಜೈದೇವ್‌
ಚಂದನ್‌: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)
ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

Whats_app_banner