ಅಮೃತಧಾರೆ ಧಾರಾವಾಹಿ ಇಂದಿನ ಸಂಚಿಕೆ: ಮಲ್ಲಿ ಮನೆಯಲ್ಲಿ ಸಿಗ್ತು ಜಯದೇವ್‌ ವಾಚ್‌, ಭೂಮಿಕಾಗೆ ಹೂವು ಮುಡಿಸಿದ ಗೌತಮ್‌
ಕನ್ನಡ ಸುದ್ದಿ  /  ಮನರಂಜನೆ  /  ಅಮೃತಧಾರೆ ಧಾರಾವಾಹಿ ಇಂದಿನ ಸಂಚಿಕೆ: ಮಲ್ಲಿ ಮನೆಯಲ್ಲಿ ಸಿಗ್ತು ಜಯದೇವ್‌ ವಾಚ್‌, ಭೂಮಿಕಾಗೆ ಹೂವು ಮುಡಿಸಿದ ಗೌತಮ್‌

ಅಮೃತಧಾರೆ ಧಾರಾವಾಹಿ ಇಂದಿನ ಸಂಚಿಕೆ: ಮಲ್ಲಿ ಮನೆಯಲ್ಲಿ ಸಿಗ್ತು ಜಯದೇವ್‌ ವಾಚ್‌, ಭೂಮಿಕಾಗೆ ಹೂವು ಮುಡಿಸಿದ ಗೌತಮ್‌

Amruthadhaare Kannada Serial Today Episode Feb 5: ಝೀ ಕನ್ನಡದ ಅಮೃತಧಾರೆ ಧಾರಾವಾಹಿಯ ಸೋಮವಾರದ ರಾತ್ರಿಯ ಎಪಿಸೋಡ್‌ನಲ್ಲಿ ಗೌತಮ್‌ ತಾಯಿಯ ಕುರಿತು ಭೂಮಿಕಾ ತನ್ನ ಅಜ್ಜಿಯಲ್ಲಿ ವಿಚಾರಿಸುತ್ತಾರೆ. ಮಲ್ಲಿ ಮನೆಯಲ್ಲಿ ಜಯದೇವ್‌ ವಾಚ್‌ ದೊರಕುತ್ತದೆ. ಹೂವಿನ ಅಲರ್ಜಿ ಇದ್ದರೂ ಭೂಮಿಕಾಳಿಗಾಗಿ ಹೂವನ್ನು ತಂದಿರುವ ಗೌತಮ್‌ ಆಕೆಯ ಮುಡಿಗೆ ಮುಡಿಸುತ್ತಾನೆ.

ಅಮೃತಧಾರೆ ಧಾರಾವಾಹಿ ಇಂದಿನ ಸಂಚಿಕೆ: ಮಲ್ಲಿ ಮನೆಯಲ್ಲಿ ಸಿಗ್ತು ಜಯದೇವ್‌ ವಾಚ್‌
ಅಮೃತಧಾರೆ ಧಾರಾವಾಹಿ ಇಂದಿನ ಸಂಚಿಕೆ: ಮಲ್ಲಿ ಮನೆಯಲ್ಲಿ ಸಿಗ್ತು ಜಯದೇವ್‌ ವಾಚ್‌

ಅಮೃತಧಾರೆ ಧಾರಾವಾಹಿ ಇಂದಿನ ಸಂಚಿಕೆ: ಝೀ ಕನ್ನಡದ (Zee Kannada) ಕಳೆದ ಶುಕ್ರವಾರದ ಅಮೃತಧಾರೆ ಎಪಿಸೋಡ್‌ನಲ್ಲಿ ಗೌತಮ್‌ ಮತ್ತು ಭೂಮಿಕಾ ನವಿರಾದ ಪ್ರೇಮ ಸಲ್ಲಾಪವಿತ್ತು. ಮಲ್ಲಿ ಮತ್ತು ಜೈದೇವನ ಕುರಿತಾದ ಸಂಗತಿಗಳು ಲಕ್ಷ್ಮಿಕಾಂತನಿಗೆ ತಿಳಿಯುತ್ತದೆ. ಅತ್ತಿಗೆ ತಂಗಿಗೆ ಪಾರ್ಥ ಪ್ರಪೋಸ್‌ ಕೂಡ ಮಾಡಿರುತ್ತಾನೆ. ಈ ಘಟನೆಗಳ ನಡುವೆ ಇನ್ನೊಂದು ಕಡೆ ಭೂಮಿಕಾ ಪಾರ್ಥನ ನೆರವು ಪಡೆದು ಮನೆಯವರನ್ನು ಸಿನಿಮಾಕ್ಕೆ ಕಳುಹಿಸುತ್ತಾಳೆ. ಗೌತಮ್‌ಗಾಗಿ ಮೊಟ್ಟೆ ಕರಿ ಮತ್ತು ವಿಶೇಷ ಅಡುಗೆ ಮಾಡುತ್ತಾಳೆ. ಇವರು ಸಿನಿಮಾಕ್ಕೆ ಹೋದ ಬಳಿಕ ಮನೆಯ ಅಂಗಳದಲ್ಲಿ ಕ್ಯಾಂಡಲ್‌ಲೈಟ್‌ ಡಿನ್ನರ್‌ ನಡೆದಿತ್ತು.ಅಮೃತಧಾರೆ ಧಾರಾವಾಹಿ ಸೋಮವಾರದ ಸಂಚಿಕೆಯ ಸ್ಟೋರಿ ಇಲ್ಲಿದೆ.

ಗೌತಮ್‌ ತಾಯಿಯ ಕುರಿತು ವಿಚಾರಿಸಿದ ಭೂಮಿಕಾ

ಭೂಮಿಕಾ ತನ್ನ ಅಜ್ಜಿಯ ಬಳಿ ಗೌತಮ್‌ನ ತಾಯಿಯ ಬಗ್ಗೆ ಕೇಳುತ್ತಾಳೆ. ಗೌತಮ್‌ ತಾಯಿಯೂ ಹೂವನ್ನು ಇಷ್ಟಪಡುತ್ತಿದ್ದರು, ಗೌತಮ್‌ ತಂದೆ ಅವರ ತಾಯಿಗೆ ಹೂವನ್ನು ತಂದುಕೊಡುತ್ತಿದ್ದರು... ಹೀಗೆ ಮಾತನಾಡುತ್ತ ಅಜ್ಜಿ ಬಳಿ ಗೌತಮ್‌ ತಾಯಿ ಬಗ್ಗೆ ತಿಳಿದುಕೊಳ್ಳಲು ಯತ್ನಿಸುತ್ತಾಳೆ. "ಯಾರೂ ಕೂಡ ಗೌತಮ್‌ ತಾಯಿಯ ಬಗ್ಗೆ ಮಾತನಾಡುವುದಿಲ್ಲ. ಅವರ ತಾಯಿಯ ಬಗ್ಗೆ ಯಾರೂ ಒಂದೂ ಮಾತು ಆಡುವುದಿಲ್ಲ. ಅವರ ತಾಯಿ ಬಗ್ಗೆ ಏನಾದರೂ ಹೇಳಿ" ಎಂದು ಅಜ್ಜಿ ಬಳಿ ವಿನಂತಿಸುತ್ತಾಳೆ. "ಈ ಮನೆಯಲ್ಲಿ ಯಾವುದರ ಬಗ್ಗೆ ಕೇಳು. ಆದರೆ, ಈ ವಿಷಯದ ಬಗ್ಗೆ ಕೇಳಬೇಡ. ಸಮಯ ಬಂದಾಗ ನಿನಗೆ ಎಲ್ಲವೂ ಗೊತ್ತಾಗುತ್ತದೆ" ಎಂದು ಅಜ್ಜಿ ಹೇಳುತ್ತಾರೆ. "ನನ್ನನ್ನು ಕೇಳಿದ ರೀತಿ ಗೌತಮ್‌ನ ಬಳಿಕ ಅವನ ತಾಯಿ ಬಗ್ಗೆ ಕೇಳಬೇಡ" ಎಂಬ ಎಚ್ಚರಿಕೆಯನ್ನೂ ಅಜ್ಜಿ ನೀಡುತ್ತಾರೆ. "ಇಲ್ಲಿಯವರೆಗೆ ನೀನು ಗೌತಮ್‌ನನ್ನು ಒಂದು ರೀತಿ ನೋಡಿರುವೆ. ನನ್ನಲ್ಲಿ ಕೇಳಿದ ಪ್ರಶ್ನೆಯನ್ನು ಅವನಲ್ಲಿ ಕೇಳಿದರೆ ನೀನು ಬೇರೆಯ ಗೌತಮ್‌ನನ್ನು ನೋಡುವೆ" ಎಂಬ ಎಚ್ಚರಿಕೆಯನ್ನು ಅಜ್ಜಿಯನ್ನು ನೀಡಿದ್ದಾರೆ. "ಸಮಯ ಬಂದಾಗ ಈ ರಹಸ್ಯ ಗೊತ್ತಾಗುತ್ತದೆ " ಎಂದು ಭೂಮಿಕಾ ತನ್ನನ್ನು ತಾನು ಸಮಧಾನ ಮಾಡಿಕೊಳ್ಳುತ್ತಾಳೆ.

ಮಲ್ಲಿ ಮನೆಯಲ್ಲಿ ಜಯದೇವ್‌ ವಾಚ್‌

ಭೂಮಿಕಾ ಮಲ್ಲಿ ಮನೆಗೆ ಆಗಮಿಸುತ್ತಾಳೆ. ಮನೆಯಲ್ಲಿ ಒಂದು ರಾಶಿ ಹೂವು ಇತ್ತು. ಒಂದು ಕಡೆಯಿಂದ ಎಲ್ಲರಿಗೂ ಕೊಡುತ್ತ ಬಂದೆ ನಿಮಗೂ ಬಂದೆ ಎಂದು ಭೂಮಿಕಾ ಹೇಳುತ್ತಾರೆ. "ನಿಮ್ಮ ಮಾತು ಕೂಡ ಹೂವ ರೀತಿ" ಎಂದು ಮಲ್ಲಿ ಹೇಳಿ ಮನೆಯೊಳಗೆ ಆಹ್ವಾನಿಸುತ್ತಾಳೆ. ಮನೆಯೊಳಗೆ ಇದ್ದಾಗ ಅಲ್ಲಿದ್ದ ಪುಸ್ತಕಗಳ ಮೇಲೆ ಭೂಮಿಕಾ ಗಮನ ಬೀಳುತ್ತದೆ. "ಯಾರ ಮನೆಯಲ್ಲಿ ಬುಕ್ಸ್‌ ಇರುತ್ತದೆಯೋ ಅವರೇ ಶ್ರೀಮಂತರು" ಎಂದು ಭೂಮಿಕಾ ಹೇಳುತ್ತಾರೆ. ಬಳಿಕ ಪುಸ್ತಕದ ಬಳಿ ಬಂದಾಗ ಆಶ್ವರ್ಯಕ್ಕೆ ಈಡಾಗುತ್ತಾಳೆ. ಅಲ್ಲಿ ಜಯದೇವ್‌ ವಾಚ್‌ ಕಾಣಿಸುತ್ತದೆ. ಈ ಹಿಂದೆ ಈ ವಾಚ್‌ಗಾಗಿ ನಡೆದ ರಾದ್ಧಾಂತ ನೆನಪಾಗುತ್ತದೆ. ಈ ವಾಚ್‌ ಇಲ್ಲಿಗೆ ಹೇಗೆ ಬಂತು ಎಂಬ ಸಂದೇಹ ಭೂಮಿಕಾಳಿಗೆ ಉಂಟಾಗುತ್ತದೆ. ಬಳಿಕ ಈ ವಾಚ್‌ ಹಿಡಿದುಕೊಂಡು ಮಲ್ಲಿ ಮನೆಯಿಂದ ಭೂಮಿಕಾ ಹೊರಗೆ ಹೋಗುತ್ತಾಳೆ.

ಅಂಕಲ್‌ನಲ್ಲಿ ವಾಚ್‌ ಬಗ್ಗೆ ವಿಚಾರಣೆ

ಇದಾದ ಬಳಿಕ ಮಲ್ಲಿ ಮನೆಯಿಂದ ಭೂಮಿಕಾ ತನ್ನ ಮನೆಗೆ ವಾಪಸ್‌ ಬರುತ್ತಾರೆ. ಆ ಸಮಯದಲ್ಲಿ ಮನೆಯ ಹೊರಗೆ ಅಂಕಲ್‌ ಕುಳಿತುಕೊಂಡಿರುತ್ತಾರೆ. ಈ ಸಮಯದಲ್ಲಿ ಅಂಕಲ್‌ ಬಳಿ "ಜಯದೇವ್‌ ವಾಚ್‌" ಬಗ್ಗೆ ವಿಚಾರಿಸುತ್ತಾರೆ. ಆರಂಭದಲ್ಲಿ ಇದು ಬೇರೆ ಯಾರದ್ದೋ ವಾಚ್‌ ಆಗಿರಬಹುದು ಎಂದು ಸಾಗಹಾಕಲು ಅಂಕಲ್‌ ಪ್ರಯತ್ನಿಸುತ್ತಾರೆ. "ಇವನು ಮಾನಮರ್ಯಾದೆ ಬಿಟ್ಟು ಬರುವುದಲ್ಲದೆ ವಾಚ್‌ ಕೂಡ ಬಿಟ್ಟುಬಂದಿದ್ದಾನೆ" ಎಂದು ಮನಸ್ಸಲ್ಲಿಯೇ ಅಂದುಕೊಳ್ಳುತ್ತಾ ಅಂಕಲ್‌ ಈ ಘಟನೆಯನ್ನು ಹೇಗಾದರೂ ಮರೆಸಲು ಪ್ರಯತ್ನಿಸುತ್ತಾರೆ. "ಇದು ಎಲ್ಲೋ ಬಿದ್ದಿರಬಹುದು" "ಕೆಲಸದವರು ಕದ್ದಿರಬಹುದು, ಕಂಪ್ಲೆಟ್‌ ಕೊಡೋಣ" ಹೀಗೆಲ್ಲ ಹೇಳುತ್ತಾ ಕೊನೆಗೆ "ಕೊಡಮ್ಮ ನಾನೇ ಜಯದೇವ್‌ಗೆ ಕೊಡ್ತಿನಿ" ಎಂದು ವಾಚ್‌ ಅನ್ನು ಪಡೆದುಕೊಳ್ಳುತ್ತಾರೆ.

ಭೂಮಿಕಾಗೆ ಹೂವು ಮುಡಿಸಿದ ಗೌತಮ್‌

ಇದಾದ ಬಳಿಕ ಗೌತಮ್‌ ಜತೆ ಭೂಮಿಕಾ ಮಾತುಕತೆ ಇರುತ್ತದೆ. ಹೂವನ್ನು ಇತರರಿಗೆ ಕೊಡಲು ಹೋದ ಭೂಮಿಕಾಳ ಗುಣವನ್ನು ಗೌತಮ್‌ ಇಷ್ಟಪಡುತ್ತಾನೆ. ಇದೇ ಸಮಯದಲ್ಲಿ ಹೂವಿನ ಬಗ್ಗೆ ಅಲರ್ಜಿ ಇರುವ ಗೌತಮ್‌ ತನ್ನ ಪತ್ನಿ ಭೂಮಿಕಾಳಿಗೆ ಹೂವು ತಂದಿಟ್ಟಿರುತ್ತಾನೆ. ಹೂವಿನ ಅಲರ್ಜಿಯಿಂದ ಸೀನು ಬಂದರೂ ಇದು ಐಸ್‌ಕ್ರಿಮ್‌ ತಿಂದ ಕಾರಣ ಆಗಿರುವುದು ಎಂದು ಹೇಳುತ್ತಾನೆ. ಬಳಿಕ ಗೌತಮ್‌ ಅವರೇ ಭೂಮಿಕಾಳಿಗೆ ಹೂವು ಮುಡಿಸುತ್ತಾನೆ. ಪತಿಯ ಕೈಯಿಂದ ಹೂವು ಮುಡಿಸಿಕೊಂಡು ಭೂಮಿಕಾ ಖುಷಿಪಡುತ್ತಾಳೆ. ಇದೇ ಸಮಯದಲ್ಲಿ ಅಲ್ಲಿಗೆ ಬಂದ ಪಾರ್ಥ ಇದನ್ನು ಫೋಟೋ ತೆಗೆಯುತ್ತಾನೆ. ಈ ಫೋಟೋವನ್ನು ಡಿಪಿ, ಸ್ಟೇಟಸ್‌ ಎಲ್ಲಾ ಕಡೆ ಹಾಕುತ್ತೇನೆ ಎನ್ನುತ್ತಾನೆ. ಇದು ವೈರಲ್‌ ಆಗುತ್ತದೆ. ನನ್ನ ಅತ್ತಿಗೆ ಅಣ್ಣನದೇ ಎಲ್ಲೆಡೆ ಹವಾ ಎಂದು ಕಾಲೆಳೆಯುತ್ತಾನೆ. ಬಳಿಕ ಅಲ್ಲಿಂದ ಹೊರಹೋಗುತ್ತಾನೆ. ಬಳಿಕ ಹೂವಿನ ಸಲ್ಲಾಪ ಮುಂದುವರೆಯುತ್ತದೆ. "ಹೂವನ್ನೇ ಹೂವು ಮುಡಿದುಕೊಂಡ ರೀತಿ ಕಾಣಿಸುತ್ತದೆ" ಎಂದು ಗೌತಮ್‌ ಹೇಳಿದಾಗ ಭೂಮಿಕಾಳಿಗೆ ಆಶ್ವರ್ಯವಾಗುತ್ತದೆ. "ಏನ್ರಿ ನೀವು ಕವಿಗಳ ರೀತಿ ಮಾತನಾಡ್ತಿರಿ" ಎನ್ನುತ್ತಾರೆ. ಒಲವ ಅಮೃತಧಾರೆ ಹಾಡು ಹಿನ್ನೆಲೆಯಲ್ಲಿ ಕೇಳಿಸುತ್ತದೆ.

ಜಯದೇವ್‌ ಮತ್ತು ಅಂಕಲ್‌ ಮಾತುಕತೆ ನಡೆಯುತ್ತದೆ. ಮಲ್ಲಿ ಜತೆ ಸಂಬಂಧ ಇಟ್ಟುಕೊಂಡ ಜಯದೇವ್‌ಗೆ ಮಾಮ್ಸ್‌ ಪಾಠ ಮಾಡುತ್ತಾರೆ. ಎಲ್ಲಾದರೂ ಭೂಮಿಕಾ ಈ ವಾಚ್‌ ಅನ್ನು ಅಣ್ಣನ ಕೈಗೆ ಕೊಟ್ಟಿದ್ದರೆ ನಿನ್ನ ಕಥೆ ಏನಾಗುತ್ತಿತ್ತು ಎಂದು ಎಚ್ಚರಿಸುತ್ತಾನೆ. ಇದಾದ ಬಳಿಕ ಭೂಮಿಕಾ ಮತ್ತು ಅವಳ ತಾಯಿಯ ಫೋನ್‌ ಮಾತುಕತೆ ನಡೆಯುತ್ತದೆ. ಮಗಳಿಗೆ ಅಪ್ಪ ಆಸ್ತಿ ನೀಡಲು ಬಯಸಿರುವ ಕುರಿತು ತಾಯಿ ಮಾತನಾಡುತ್ತಾರೆ. ಅಪ್ಪನ ಮಮಕಾರದ ಮುಂದೆ ಇಂತಹ ವಿಷಯಗಳಿಗೆ ಬೇಡ ಎನ್ನಲು ಭೂಮಿಗೆ ಮನಸ್ಸು ಬರುವುದಿಲ್ಲ. "ಹೆತ್ತವರ ಪ್ರೀತಿ ಮುಂದೆ ಬೇರೆ ಯಾವುದೂ ದೊಡ್ಡದ್ದಲ್ಲ" ಎಂದು ಭೂಮಿಕಾಳ ಸ್ವಗತ ಇರುತ್ತದೆ. ಇದಾದ ಬಳಿಕ ಜಯದೇವ್‌ಗೆ ಪಾರ್ಥನ ಕಾಯುತ್ತಿರುವ ಅಪ್ಪಿ ಕಾಣಿಸುತ್ತಾಳೆ. ಅವನಿಂದ ತಪ್ಪಿಸಿಕೊಳ್ಳಲು "ಏನಪ್ಪ ಮಾಡೋದು" ಎಂಬ ಸಂದಿಗ್ಧತೆಯಲ್ಲಿದ್ದಾಗ ಸೀರಿಯಲ್‌ "ಸಶೇಷ" ಆಗುತ್ತದೆ.

ಅಮೃತಧಾರೆ ಧಾರಾವಾಹಿ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)
ಚೈತ್ರಾ ಶೆಣೈ: ಮಂದಾಕಿನಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)
ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್‌: ಜೈದೇವ್‌
ಚಂದನ್‌: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)
ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

Whats_app_banner