Amruthadhaare September 13th Episode: ಕಾರಿನಲ್ಲೇ ಜೈದೇವ್‌-ದಿಯಾ ರೋಮಾನ್ಸ್‌, ಡಿವೋರ್ಸ್‌ ಮಾತುಕತೆ ಮಲ್ಲಿಗೆ ಕೇಳಿಸ್ತಾ?-televison news amruthadhaare september 13th episode diya and jaidev romance in car talk malli divorce subject pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Amruthadhaare September 13th Episode: ಕಾರಿನಲ್ಲೇ ಜೈದೇವ್‌-ದಿಯಾ ರೋಮಾನ್ಸ್‌, ಡಿವೋರ್ಸ್‌ ಮಾತುಕತೆ ಮಲ್ಲಿಗೆ ಕೇಳಿಸ್ತಾ?

Amruthadhaare September 13th Episode: ಕಾರಿನಲ್ಲೇ ಜೈದೇವ್‌-ದಿಯಾ ರೋಮಾನ್ಸ್‌, ಡಿವೋರ್ಸ್‌ ಮಾತುಕತೆ ಮಲ್ಲಿಗೆ ಕೇಳಿಸ್ತಾ?

Amruthadhaare September 13th Episode: ಅಮೃತಧಾರೆ ಸೀರಿಯಲ್‌ನ ಸೆಪ್ಟೆಂಬರ್‌ 13ರ ಸಂಚಿಕೆಯಲ್ಲಿ ಒಂದಿಷ್ಟು ರೊಮ್ಯಾಂಟಿಕ್‌ ವಿದ್ಯಮಾನಗಳು ನಡೆದಿವೆ. ಪಾರ್ಥನ ಮೇಲೆ ನೀರು ಚೆಲ್ಲಿ ಅಪೇಕ್ಷಾ ಆತನನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸಿದ್ದಾಳೆ. ದಿಯಾ ಮತ್ತು ಜೈದೇವ್‌ ಕಾರಿನಲ್ಲೇ ರೋಮಾನ್ಸ್‌ ಮಾಡಿದ್ದಾರೆ.

Amruthadhaare September 13th Episode: ಕಾರಿನಲ್ಲೇ ಜೈದೇವ್‌-ದಿಯಾ ರೋಮಾನ್ಸ್‌
Amruthadhaare September 13th Episode: ಕಾರಿನಲ್ಲೇ ಜೈದೇವ್‌-ದಿಯಾ ರೋಮಾನ್ಸ್‌

Amruthadhaare September 13th Episode: ಗೌತಮ್‌ ಮತ್ತು ಭೂಮಿಕಾ ಟೆನ್ಷನ್‌ನಲ್ಲಿದ್ದಾರೆ. ಮಲ್ಲಿ ಮತ್ತು ಪಾರ್ಥ ಇನ್ನೂ ಬಂದಿಲ್ಲ ಎಂಬ ಆತಂಕ ಅವರದ್ದು. ಗೌತಮ್‌ ಕಾಲ್‌ ಮಾಡಿದಾಗ "ಲಾಂಗ್‌ ಡ್ರೈವ್‌ಗೆ ಹೋಗಿರುವ ವಿಚಾರ"ವನ್ನು ಜೈದೇವ್‌ ಹೇಳುತ್ತಾನೆ. ದಿಯಾಳನ್ನು ಭೇಟಿಯಾಗಲು ಹೋಗಿದ್ದಾರೆಯೇ ಎನ್ನುವ ಆತಂಕ ಭೂಮಿಕಾಳದ್ದು. ಇದೇ ಸಮಯದಲ್ಲಿ ಬೆಂಗಳೂರು ಹೊರವಲಯದಲ್ಲಿ ಪಾರ್ಥ ಮತ್ತು ಅಪೇಕ್ಷಾ ನಿಂತಿದ್ದಾರೆ. ನಿನಗೆ ಒಂದು ಗಿಫ್ಟ್‌ ತರ್ತಿನಿ ಇಲ್ಲೇ ಪಕ್ಕದ ಮನೆಗೆ ಹೋಗಿ ಬರ್ತಿನಿ ಎಂದು ಜೈದೇವ್‌ ಹೇಳುತ್ತಾನೆ. "ನೀನು ಕಾರ್‌ನಲ್ಲಿ ಕುಳಿತಿರು" ಎಂದು ಒತ್ತಾಯದಿಂದ ಕಾರಲ್ಲಿ ಕುಳ್ಳಿರಿಸಿ ಆತ ಹೊರಗೆ ಹೋಗುತ್ತಾನೆ. ಅಲ್ಲಿಂದ ನೇರವಾಗಿ ಹೋಗಿ ದಿಯಾಳ ಕಾರಿಗೆ ಹತ್ತುತ್ತಾನೆ. ದಿಯಾಳ ಜತೆ ಪ್ರೀತಿಯ ಮಾತುಗಳನ್ನಾಡುತ್ತಾನೆ. "ನಮ್ಮಿಬ್ಬರನ್ನು ಯಾರಿಗೂ ದೂರ ಮಾಡಲು ಸಾಧ್ಯವಿಲ್ಲ. ನಮ್ಮ ಲವ್‌ಗೆ ಬ್ರೇಕ್‌ ಹಾಕಲು ಸಾಧ್ಯವೇ ಇಲ್ಲ" ಎಂದು ಮಾತನಾಡುತ್ತಾರೆ. ಇದೇ ಸಮಯದಲ್ಲಿ ಕಾರಿನ ಸೀಟು ಇಳಿಸಿ ಇಬ್ಬರು ಕಾರಲ್ಲಿಯೇ ರೋಮಾನ್ಸ್‌ ಆರಂಭಿಸುತ್ತಾರೆ.

ನೀರು ಚೆಲ್ಲಿ ಪಾರ್ಥನ ತೆಕ್ಕೆಗೆ ತೆಗೆದುಕೊಳ್ಳಲು ಅಪೇಕ್ಷಾ ಪ್ರಯತ್ನ

ಇನ್ನೊಂದೆಡೆ ಪಾರ್ಥನ ಪ್ರೀತಿ ಗಳಿಸಲು ಅಪೇಕ್ಷಾ ಐಡಿಯಾ ಮಾಡಿದ್ದಾಳೆ. ನೀರು ತರುವ ನೆಪದಲ್ಲಿ ಆತನ ಅಂಗಿ ಮೇಲೆ ನೀರು ಚೆಲ್ಲುವ ಯೋಜನೆ ಹಾಕಿಕೊಂಡಿದ್ದಾಳೆ. ಈತನಿಗೆ ನನ್ನ ಪ್ರೀತಿ ತೋರಿಸಬೇಕು. ನನ್ನ ಬಿಟ್ಟು ಆತನಿಗೆ ಬೇರೆ ಯೋಚನೆ ಇರಬಾರದು. ಅತ್ತಿಗೆ ಅತ್ತಿಗೆ ಅನ್ನಬಾರದು ಎಂದುಕೊಳ್ಳುತ್ತಾಳೆ. ಅಂದುಕೊಂಡಂತೆ ನೀರು ಚೆಲ್ಲುತ್ತಾಳೆ. ಮುಂದೆ ಹೋಗಿ ಬನಿಯಾನ್‌ ತೆಗೆಯುತ್ತಾಳೆ. ಆ ಸಮಯದಲ್ಲಿ ಹಿಂದಿನಿಂದ ಹೋಗಿ ಹಗ್‌ ಮಾಡುತ್ತಾಳೆ. ಇಬ್ಬರೂ ರೋಮಾನ್ಸ್‌ಗೆ ಜಾರುತ್ತಾರೆ.

ಆನಂದ್‌ ಅಪರ್ಣಾಳ ಜತೆ ಪ್ರೀತಿಯ ಮಾತುಗಳನ್ನಾಡುತ್ತಾನೆ. ತನ್ನ ಕಾಲೇಜು ಲೈಫ್‌, ಲವ್‌ ಸ್ಟೋರಿ ಎಲ್ಲವನ್ನೂ ನೆನಪಿಸುತ್ತಾನೆ.

ಡಿವೋರ್ಸ್‌ ಮಾತುಕತೆ ಮಲ್ಲಿಗೆ ಕೇಳಿಸ್ತಾ?

ಕಾರಿನ ಸೀಟು ಜಾರಿಸಿ ಜೈದೇವ್‌ ಮತ್ತು ದಿಯಾ ರೋಮಾನ್ಸ್‌ ಮಾಡುತ್ತಿದ್ದಾರೆ. ಆ ಸಮಯದಲ್ಲಿ ತಮ್ಮ ಪ್ರೀತಿಯ ಬಗ್ಗೆ ಮಾತನಾಡುತ್ತಾರೆ. ಇದೇ ಸಮಯದಲ್ಲಿ ಕಾರಲ್ಲಿ ಕುಳಿತು ಬೇಸರಗೊಂಡ ಮಲ್ಲಿ ಕಾರಿನಿಂದ ಇಳಿಯುತ್ತಾಳೆ. ಎಲ್ಲಿ ಹೋದ್ರು ಇವರು ಎಂದು ಮುಂದಕ್ಕೆ ಹೋದಾಗ ಕಾರನೊಳಗೆ ಇವರು ಮಾತನಾಡುತ್ತಾರೆ. "ನಾನು ಬೇಕಂದ್ರೆ ಮಲ್ಲಿಗೆ ಡಿವೋರ್ಸ್‌ ಕೊಡಿ" ಎಂದು ದಿಯಾ ಹೇಳುತ್ತಾಳೆ. "ನಾನು ಡಿವೋಸ್‌ ನೀಡಲು ಟ್ರೈ ಮಾಡ್ತಿನಿ" ಎಂದು ಇವರಿಬ್ಬರು ಮಾತನಾಡುವಾಗ ಮಲ್ಲಿ ಅಲ್ಲೇ ಕಾರಿನ ಹೊರಗೆ ಇರುತ್ತಾಳೆ. ಮಲ್ಲಿ ಅಲ್ಲಿಂದ ಹೋದ ಬಳಿಕ ಜೈದೇವ್‌ ಹೊರಕ್ಕೆ ಹೋಗುತ್ತಾನೆ. ಮಲ್ಲಿಯನ್ನು ನೋಡಿದಾಗ "ಕಾರಿನಿಂದ ಹೊರಗೆ ಎಲ್ಲಿಗೆ ಹೋದೆ" ಎಂದು ಬೈಯ್ಯುತ್ತಾನೆ. "ಗಿಫ್ಟ್‌ ಎಲ್ಲಿ" ಎಂದು ಕೇಳುತ್ತಾಳೆ. "ಮನೆಯಲ್ಲಿ ಅವನು ಇಲ್ಲ. ಗಿಫ್ಟ್‌ ಇಲ್ಲ. ಅದಕ್ಕೆ ಲೇಟ್‌ ಆಯ್ತು" ಎಂದು ಹೇಳುತ್ತಾನೆ. ಅಲ್ಲಿಂದ ಹೊರಡುತ್ತಾರೆ.

ಭೂಮಿಕಾ ಮನೆಯ ಹೊರಗೆ ಕಾಯುತ್ತಿದ್ದಾರೆ. ಜೈದೇವ್‌ ಮತ್ತು ಮಲ್ಲಿ ಬಂದಾಗ ಜೋರಾಗಿ ಬಯ್ಯುತ್ತಾಳೆ. "ಇಬ್ಬರು ಈ ರೀತಿ ಮಾಡ್ತಿರಿ ಅಂದುಕೊಂಡಿರಲಿಲ್ಲ" ಎಂದೆಲ್ಲ ಇಬ್ಬರಿಗೂ ಒಂದಿಷ್ಟು ಬಯ್ಗುಳ ಇರುತ್ತದೆ. ಮರುದಿನ ಆನಂದ್‌ ಆಫೀಸ್‌ಗೆ ಹೊರಟಿದ್ದಾನೆ. ಗೆಳೆಯನ ನೋಡಲು ಹೋಗುತ್ತಿದ್ದೇನೆ ಎನ್ನುತ್ತಾನೆ. "ನಮ್ಮ ಜೀವನದಲ್ಲಿ ಗೆಳೆಯನ ಕೊಡುಗೆ ಸಾಕಷ್ಟಿದೆ. ಅದಕ್ಕೆ ಅವನನ್ನು ಭೇಟಿಯಾಗಲು ಹೋಗುವೆ" ಎಂದು ಹೇಳುತ್ತಾನೆ. "ಅಲ್ಲ ಆನಂದ್‌" ಎಂದು ಅಪರ್ಣಾ ಹೇಳಿದಾಗ ಆತ ಕೇಳುವುದಿಲ್ಲ. ಹೇಗೋ ಅಪರ್ಣಾಳನ್ನು ಒಪ್ಪಿಸಿ ಆಫೀಸ್‌ಗೆ ಹೊರಡುತ್ತಾನೆ.

 

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

mysore-dasara_Entry_Point