ಜೈದೇವ್‌ನ ಕ್ರೂರ ಮುಖ ತಿಳಿದು ದಿಯಾಳಿಗೆ ಶುರುವಾಗಿದೆ ಭಯ, ಎಚ್ಚರಗೊಂಡ ಆನಂದ್‌ ಸತ್ಯ ಹೇಳುತ್ತಾನ? - ಅಮೃತಧಾರೆ ಧಾರಾವಾಹಿ-televison news amruthadhaare serial anand pretends to be comatose diya jaidev fear anand goutham happy moments pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಜೈದೇವ್‌ನ ಕ್ರೂರ ಮುಖ ತಿಳಿದು ದಿಯಾಳಿಗೆ ಶುರುವಾಗಿದೆ ಭಯ, ಎಚ್ಚರಗೊಂಡ ಆನಂದ್‌ ಸತ್ಯ ಹೇಳುತ್ತಾನ? - ಅಮೃತಧಾರೆ ಧಾರಾವಾಹಿ

ಜೈದೇವ್‌ನ ಕ್ರೂರ ಮುಖ ತಿಳಿದು ದಿಯಾಳಿಗೆ ಶುರುವಾಗಿದೆ ಭಯ, ಎಚ್ಚರಗೊಂಡ ಆನಂದ್‌ ಸತ್ಯ ಹೇಳುತ್ತಾನ? - ಅಮೃತಧಾರೆ ಧಾರಾವಾಹಿ

Amruthadhaare serial: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ವಿಶೇಷ ಘಟನೆಗಳು ನಡೆದಿಲ್ಲ. ಆನಂದ್‌ ಎಚ್ಚರಗೊಂಡಿರುವುದನ್ನು ನೋಡಿ ಗೌತಮ್‌ ಖುಷಿಗೊಂಡಿದ್ದಾನೆ. ಇನ್ನೊಂದೆಡೆ ವಿಷಯ ತಿಳಿದು ಜೈದೇವ್‌ ಭಯಗೊಂಡಿದ್ದಾನೆ.

ಅಮೃತಧಾರೆ ಧಾರಾವಾಹಿ ನಿನ್ನೆಯ (ಆಗಸ್ಟ್‌ 29) ಸಂಚಿಕೆ
ಅಮೃತಧಾರೆ ಧಾರಾವಾಹಿ ನಿನ್ನೆಯ (ಆಗಸ್ಟ್‌ 29) ಸಂಚಿಕೆ

ಅಮೃತಧಾರೆ ಧಾರಾವಾಹಿ ನಿನ್ನೆಯ (ಆಗಸ್ಟ್‌ 29) ಸಂಚಿಕೆ: ಕಣ್ಣು ತೆರೆದ ಆನಂದ್‌ಗೆ ಎಲ್ಲದಕ್ಕೂ ಜೈದೇವ್‌ ಕಾರಣ ಎಂಬ ವಿಚಾರ ನೆನಪಿಗೆ ಬರುತ್ತದೆ. ಜೈದೇವ್‌ ತನ್ನನ್ನು ತಾನು ತಿದ್ದಿಕೊಳ್ಳುತ್ತಾನೆ ಎಂದಿದ್ದಾನೆ. ಆದರೆ, ಅವನನ್ನು ಹೇಗೆ ನಂಬೋದು? ವಿಷದ ಹಾವು ಎಂದಿಗೂ ವಿಷದ ಹಾವೇ. ಯಾವುದಕ್ಕೂ ನನಗೆ ಗೊತ್ತಿರುವ ಸತ್ಯವನ್ನು ಗೌತಮ್‌ಗೆ ಹೇಳಬೇಕು. ತಡಮಾಡಬಾರದು. ಗೆಳೆಯನಿಗೆ ಎಲ್ಲವನ್ನೂ ಹೇಳ್ತಿನಿ ಎಂದು ಆನಂದ್‌ ಯೋಚಿಸುತ್ತಾನೆ. ಆನಂದ್‌ ಎಚ್ಚರಗೊಂಡಿರುವುದನ್ನು ತಿಳಿಯದ ಜೈದೇವ್‌ ಚಮಕ್‌ ಚಲ್ಲೋ ಬಳಿ ಪ್ರೇಮ ಸಲ್ಲಾಪದಲ್ಲಿ ತೊಡಗಿದ್ದಾನೆ. ಆದರೆ, ದಿಯಾ ಏನೋ ಯೋಚಿಸುತ್ತಿದ್ದಾಳೆ. ನಿನ್ನಲ್ಲಿ ಏನೋ ಚೇಂಜಸ್‌ ಆಗಿದೆ ಎನ್ನುತ್ತಾನೆ. "ಮೊನ್ನೆ ನೀವು ಡ್ರಿಂಕ್ಸ್‌ ಮಾಡಿದ ಮತ್ತಲ್ಲಿ ಆನಂದ್‌ಗೆ ಆಕ್ಸಿಡೆಂಟ್‌ ಮಾಡಿದ ವಿಷಯ ಹೇಳಿದ್ರಿ. ನಾನು ಏನಾದರೂ ತಪ್ಪು ಮಾಡಿದ್ರೂ ನನಗೂ ಆಕ್ಸಿಡೆಂಟ್‌ ಮಾಡ್ತಿರಾ?" ಎಂದು ಕೇಳುತ್ತಾಳೆ. "ಅಯ್ಯೋ ಕುಡಿದ ಮತ್ತಲ್ಲಿ ಏನೋ ಹೇಳಿಬಿಟ್ಟೆ" ಎಂದು ಜೈದೇವ್‌ ಯೋಚಿಸುತ್ತಾನೆ. "ನಮ್ಮಿಬ್ಬರ ಲವ್‌ಗೆ ಫಿಟ್ಟಿಂಗ್‌ ಇಟ್ಟಿರೋದು ಅವನೇ" ಎಂದೆಲ್ಲ ಹೇಳಿ ಜೈದೇವ್‌ ಅವಳನ್ನು ಸಮಧಾನಪಡಿಸುತ್ತಾನೆ.

ಎಚ್ಚರಗೊಂಡ ಆನಂದ

ಗೌತಮ್‌ ಆಗಮಿಸಿದಾಗ ಸುಮ್ಮನೆ ಕೋಮದಲ್ಲಿದ್ದಂತೆ ಆನಂದ್‌ ನಾಟಕವಾಡುತ್ತಾನೆ. "ಎಷ್ಟೊತ್ತು ಹೀಗೆ ಇರ್ತಿ. ಹಸಿವಾಗೋದಿಲ್ವ. ಏನಾದರೂ ತಿನ್ತಿಯಾ" ಎಂದೆಲ್ಲ ಮಾತನಾಡುತ್ತ ಗೌತಮ್‌ ಆಪಲ್‌ ಕಟ್‌ ಮಾಡುತ್ತಾರೆ. "ಮಣ್ಣು ಕೊಟ್ರೂ ತಿನ್ತಿನಿ ಅಷ್ಟು ಹಸಿವಾಗಿದೆ" ಎಂದು ಆನಂದ್‌ ಮನಸ್ಸಲ್ಲಿಯೇ ಅಂದುಕೊಳ್ಳುತ್ತಾನೆ. ಮೆಲ್ಲಗೆ ಕಣ್ಣು ತೆರೆದು ಗೌತಮ್‌ಗೆ ಕಾಣಿಸಿದಂತೆ ಒಂದು ಆಪಲ್‌ ತುಂಡು ಎತ್ತಿಕೊಂಡಿದ್ದಾನೆ. ಆಗ ಅಲ್ಲಿಗೆ ಬಂದ ಅಪರ್ಣಾ ಖುಷಿಗೊಂಡಿದ್ದಾಳೆ. ತಕ್ಷಣ ಅಪರ್ಣಾಗೆ ಸುಮ್ಮನಿರುವಂತೆ ಆನಂದ್‌ ಕೈಸನ್ನೆ ಮಾಡಿದ್ದಾನೆ. ಎಂದಿನಂತೆ ಗೌತಮ್‌ ಗೆಳೆಯನ ಮುಂದೆ ದುಃಖ ವ್ಯಕ್ತಪಡಿಸುತ್ತಾನೆ.

ಗೌತಮ್‌ನನ್ನು ಹೊರಗೆ ಕಳುಹಿಸುತ್ತಾಳೆ ಅಪರ್ಣಾ. ಬಳಿಕ ಅಪರ್ಣಾ ಮತ್ತು ಆನಂದ್‌ ಮಾತನಾಡುತ್ತಾರೆ. ನಡೆದ ಎಲ್ಲಾ ವಿಚಾರಗಳನ್ನು ಆನಂದ್‌ಗೆ ತಿಳಿಸುತ್ತಾಳೆ. ಇದೇ ಸಮಯದಲ್ಲಿ ಗೌತಮ್‌ ವಹಿಸಿದ ಕಾಳಜಿ, ಸ್ನೇಹದ ವಿಚಾರಗಳನ್ನು ತಿಳಿಸುತ್ತಾಳೆ.

ದಿಯಾ ಮತ್ತು ಜೈದೇವ್‌ ಮಾತನಾಡುತ್ತ ಇದ್ದಾರೆ. "ನನಗೆ ಅಲ್ಲಿ ಇರಲು ಆಗುತ್ತಿಲ್ಲ, ಇಲ್ಲೂ ಇರಲು ಆಗುತ್ತಿಲ್ಲ. ಒಂದು ಸರಿಯಾದ ಸಮಯ ಬರಲಿ. ಆಗ ನಾನು ನಿನ್ನನ್ನು ಸಂಪೂರ್ಣವಾಗಿ ನನ್ನವಳಾಗಿಸುವೆ" ಎಂದೆಲ್ಲ ಭರವಸೆ ನೀಡುತ್ತಾನೆ. "ಎಲ್ಲದಕ್ಕೂ ಒಂದು ಸೊಲ್ಯುಷನ್‌ ಬೇಗ ಹುಡುಕುವೆ" ಎನ್ನುತ್ತಾನೆ.

ಆನಂದ್‌ ಬಳಿಗೆ ಗೌತಮ್‌ ಬರುತ್ತಾನೆ. "ಎಷ್ಟು ನಗಿಸ್ತಾ ಇದ್ದಿಯೋ, ಈಗ ಮಲಗಿಬಿಟ್ಟಿದ್ದಿ. ಮಾತಾಡೋ ಆನಂದ" ಎಂದೆಲ್ಲ ಹೇಳುತ್ತಾ ಇದ್ದಾನೆ ಗೌತಮ್‌. ಹೇಯ್‌ ಆನಂದ್‌, ಒಂದು ಸಾರಿ ಗೆಳೆಯ ಎಂದು ಕರೆಯೋ ಎನ್ನುತ್ತಾನೆ. ಮಲಗಿದ್ದ ಆನಂದ್‌ ತಡೆಯಲಾರದೆ "ಗೆಳೆಯ" ಎನ್ನುತ್ತಾನೆ. ಆಪ್ತಮಿತ್ರ ಎಚ್ಚರಗೊಂಡಿರುವುದನ್ನು ನೋಡಿ ಗೌತಮ್‌ಗೆ ಖುಷಿ ತಡೆಯಲಾಗುವುದಿಲ್ಲ. ಎಲ್ಲರೂ ಬರುತ್ತಾರೆ. ಆನಂದ್‌ಗೆ ಪ್ರಜ್ಞೆ ಬಂದ ವಿಚಾರ ತಿಳಿದು ಎಲ್ಲರೂ ಖುಷಿಯಾಗುತ್ತಾರೆ.

ಜೈದೇವ್‌ಗೆ ಶುರುವಾಯ್ತು ಭಯ

ಮಲ್ಲಿ ಕಾಲ್‌ ಮಾಡಿ ಆನಂದ್‌ ಎಚ್ಚರಗೊಂಡಿರುವ ವಿಚಾರವನ್ನು ಜೈದೇವ್‌ಗೆ ಹೇಳುತ್ತಾಳೆ. ಚಮಕ್‌ ಚಲ್ಲೋ ಬಳಿ ಸಲ್ಲಾಪದಲ್ಲಿ ತೊಡಗಿದ ಜೈದೇವ್‌ ಈ ವಿಚಾರ ತಿಳಿದು ಗಾಬರಿಗೊಳ್ಳುತ್ತಾನೆ. ನಾನು ಈಗಲೇ ಬರುತ್ತೇನೆ ಎಂದು ಮಲ್ಲಿಗೆ ತಿಳಿಸುತ್ತಾನೆ. ಜೈ ಏನಾಯ್ತು ಎಂದು ದಿಯಾ ಕೇಳುತ್ತಾಳೆ. "ಆನಂದ್‌ಗೆ ಪ್ರಜ್ಞೆ ಬಂದಿದೆ. ನಾನು ಈಗಲೇ ಹೋಗ್ತಿನಿ" ಎಂದು ಹೊರಡುತ್ತಾನೆ.

ಕನ್ನಡ ಧಾರಾವಾಹಿ ಎಪಿಸೋಡ್‌ಗಳು

ಅಮೃತಧಾರೆ ಧಾರಾವಾಹಿ ಎಲ್ಲಾ ಎಪಿಸೋಡ್‌