ಅಮೃತಧಾರೆ ಸೀರಿಯಲ್ ಸ್ಟೋರಿ: ಗೌತಮ್ ಮುಂದೆ ಅಬ್ಬರಿಸಿದ್ನ ಜೈದೇವ್, ಮಲ್ಲಿಗೆ ಡಿವೋರ್ಸ್ ನೀಡಿ ಅಂದ್ಲು ದಿಯಾ
Amruthadhaare serial Story: ಜೈದೇವ್ ಮತ್ತು ದಿಯಾ ಶೋರೂಂನಲ್ಲಿ ಮುದ್ದಾಡುತ್ತಿರುವುದನ್ನು ನೋಡಿ ಗೌತಮ್ ಪ್ರತಿಕ್ರಿಯೆ ಏನಿರುತ್ತದೆ. ಮಲ್ಲಿಗೆ ಡಿವೋರ್ಸ್ ನೀಡು ಎಂದು ಜೈದೇವ್ ಮನಸ್ಸಲ್ಲಿ ಹೊಸ ಆಸೆ ಮೂಡಿಸುತ್ತಾಳೆ ದಿಯಾ. ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯ ಸ್ಟೋರಿ ಓದೋಣ ಬನ್ನಿ.
Amruthadhaare serial: ಶೋರೂಂಗೆ ಬಂದ ಜೈದೇವ್ ಮತ್ತು ದಿಯಾ ಕುಳಿತುಕೊಳ್ಳುತ್ತಾರೆ. ಡಾಕ್ಯುಮೆಂಟ್ ರೆಡಿಯಾಗಲು ಐದು ನಿಮಿಷ ಇರುತ್ತದೆ. ಜೈದೇವ್ ಶೇವ್ ಮಾಡಿರುವುದು ಆಕೆಗೆ ಇಷ್ಟ ಆಗಿರುತ್ತದೆ. ಒಂದಿಷ್ಟು ಪ್ರೀತಿಯ ಮಾತುಗಳು ಇರುತ್ತವೆ. "ನೀನು ನನ್ನ ಪಾಲಿಗೆ ಜಸ್ಟ್ ಲವರ್ ಅಲ್ಲ. ಅದಕ್ಕಿಂತ ಮೇಲೆ" ಎನ್ನುತ್ತಾನೆ. "ನಿಮ್ಮ ಹೆಂಡತಿಗೂ ಮೇಲಾ?" ಎನ್ನುತ್ತಾಳೆ. "ಹೌದು" ಅನ್ನುತ್ತಾನೆ. ಅದೇ ಸಂದರ್ಭದಲ್ಲಿ ಅಲ್ಲಿಗೆ ಗೌತಮ್ ಬರುತ್ತಾರೆ. ಇದೇ ಸಂದರ್ಭದಲ್ಲಿ ಗೌತಮ್‌ಗೆ ಸೇಲ್ಸ್ ಬಾಯ್ "ಅವರೂ ಬಂದಿದ್ದಾರೆ, ನೀವೂ ಬಂದಿದ್ದೀರಿ, ಐದು ನಿಮಿಷ ಡಾಕ್ಯುಮೆಂಟ್ಸ್ ರೆಡಿ ಮಾಡುವೆ" ಎನ್ನುತ್ತಾನೆ. "ಅವರೂ ಬಂದಿದ್ದಾರೆ, ನೀವೂ ಬಂದಿದ್ದೀರಿ" ಮಾತು ಕೇಳಿ ಇಬ್ಬರಿಗೂ ಅಚ್ಚರಿಯಾಗುತ್ತದೆ. ಒಳಗೆ ಬಂದು ನೋಡಿದಾಗ ಇಬ್ಬರು ಲವರ್‌ಗಳು ಕುಳಿತಿದ್ದಾರೆ. ತನ್ನ ತಮ್ಮ ಬೇರೊಬ್ಬಳು ಹುಡುಗಿ ಜತೆ ಕುಳಿತುಕೊಂಡಿರುವುದನ್ನು ನೋಡಿ ಶಾಕ್‌ಗೆ ಒಳಗಾಗುತ್ತಾರೆ. ಗೌತಮ್ ಕಣ್ಣ ಮುಂದೆಯೇ ಅವರಿಬ್ಬರು ಕಿಸ್ ಮಾಡಿಕೊಳ್ಳುವುದು ನಡೆಯುತ್ತದೆ.
ಕೋಪದಿಂದ ಗೌತಮ್ ಕಣ್ಣು ಮುಚ್ಚಿಕೊಳ್ಳುತ್ತಾರೆ.
ಗೌತಮ್ ಮುಂದೆ ಅಬ್ಬರಿಸಿದ್ನ ಜೈದೇವ್
ಗೌತಮ್ ಜೈ ಎಂದು ಕರೆಯುತ್ತಾರೆ. ಪ್ರೇಮಿಗಳಿಬ್ಬರು ಶಾಕ್‌ಗೆ ಒಳಗಾಗುತ್ತಾರೆ. "ಏನೋ ಇದೆಲ್ಲ" ಎಂದು ಕೇಳುತ್ತಾರೆ. "ಏನು ನುಡಿಸ್ತಾ ಇದ್ದೀಯಾ. ಬಂಗಾರದಂತಹ ಹೆಂಡತಿಯನ್ನು ಇಟ್ಟುಕೊಂಡು ಇಂತಹ ಕೆಲಸ ಮಾಡಲು ನಾಚಿಕೆ ಆಗೋಲ್ವ" ಎಂದು ಗೌತಮ್ ಅಬ್ಬರಿಸುತ್ತಾರೆ. ಸುಳ್ಳು ಬೊಗಳ್ತಿಯಾ ಎಂದು ಜೈದೇವ್ ಕೆನ್ನೆಗೆ ಒಂದೇಟೂ ಹಾಕುತ್ತಾರೆ. "ನನ್ ನಂಬಿಕೆ ಎಲ್ಲಾ ಹಾಳು ಮಾಡಿದೆಯ. ಹೆಂಡ್ತಿಗೆ ಮೋಸ ಮಾಡಿ ನನಗೂ ಮೋಸ ಮಾಡಿದೆಯಲ್ವ" ಎಂದು ಇನ್ನೊಂದೇಟು ಹಾಕುತ್ತಾನೆ. "ನಮ್ಮ ಮರ್ಯಾದೆ ಎಲ್ಲಾ ಹಾಳು ಮಾಡಿದೆ" ಎಂದು ಇನ್ನೊಂದು ಏಟು ಹೊಡೆಯಲು ಗೌತಮ್ ಕೈ ಬೀಸಿದಾಗ ಜೈದೇವ್ ಆ ಕೈಯನ್ನು ತಡೆಯುತ್ತಾನೆ.
"ಅಣ್ಣ ಎಂಬ ಒಂದೇ ಕಾರಣದಿಂದ ಸುಮ್ಮನಿದ್ದೆ. ನನ್ನ ಮೇಲೆ ಕೈ ಮಾಡ್ತಿಯಾ. ಏನು ಅಂದುಕೊಂಡಿದ್ದೀಯಾ" ಎಂದು ಅಬ್ಬರಿಸುತ್ತಾನೆ ಜೈದೇವ್. "ನಾನು ನಿನ್ನ ಮನೆಯಲ್ಲಿ ಸಾಕಿದ ನಾಯಿಯ" "ನೀನು ಗಾಡ್, ನಾನು ಸೇವಕನ?" "ಇಲ್ಲಿ ತನಕ ಅಣ್ಣ ಅಂತ ಸುಮ್ಮನಿದ್ದೆ. ಪಬ್ಲಿಕ್ ಮುಂದೆ ನನಗೆ ಕೈ ಮಾಡ್ತಿಯಾ. ಇವತ್ತೇ ಲಾಸ್ಟ್. ನಮ್ಮಿಬ್ಬರ ಸಂಬಂಧ ಮುಗೀತು" ಎನ್ನುತ್ತಾನೆ. "ಇಲ್ಲಾಂದ್ರೆ ಅದು ಮನೆಯಾಗಿ ಉಳಿಯೋದಿಲ್ಲ. ಮುಗೀತು. ಆ ಮನೆ ನಿನ್ನ ಮನೆ. ನಾನು ಸಪರೇಟ್ ಹೋಗ್ತಿನಿ. ನನ್ನ ಶೇರ್ ಬರಬೇಕು. ಈ ಜೆಡಿಗೆ ಬರಬೇಕಾದ ಶೇರು ಬರಲೇಬೇಕು" ಎಂದು ಅಬ್ಬರಿಸುತ್ತಾನೆ.
ಇದೆಲ್ಲ ಗೌತಮ್ ತನ್ನ ಮನಸ್ಸಿನಲ್ಲಿ ಆಲೋಚಿಸುವ ಯೋಚನೆ ಆಗಿರುತ್ತದೆ. ನಿಜವಾಗಿಯೂ ನಡೆದಿರುವುದಿಲ್ಲ.
ಈ ಸಂದರ್ಭದಲ್ಲಿ ಸೇಲ್ಸ್ ಮ್ಯಾನ್ ಬಂದು ಕಾರು ಡೆಲಿವರಿಗೆ ರೆಡಿಯಾಗಿದೆ ಅನ್ನುತ್ತಾನೆ. ಗೌತಮ್ ಹೊರಕ್ಕೆ ಹೋಗುತ್ತಾರೆ. "ಕಾರು ಅವರಿಗೆ ಡೆಲಿವರಿ ನೀಡಿ" ಎಂದು ಆನಂದ್ ಹೇಳುತ್ತಾನೆ.
ಶಕುಂತಲಾದೇವಿ ಮತ್ತು ಸಹೋದರ ಮಾತನಾಡುತ್ತಾ ಇರುತ್ತಾರೆ. "ನೀನು ನಿಜಕ್ಕೂ ಅಪೇಕ್ಷಾಳನ್ನು ಪಾರ್ಥನ ಜತೆ ಮದುವೆ ಮಾಡೋದು ನಿಜನಾ?" ಎನ್ನುತ್ತಾನೆ. "ಇದು ನನ್ನ ಡ್ರೀಮ್ಸ್ ಪ್ರಾಜೆಕ್ಟ್. ಮದುವೆ ಮಾಡಿಯೇ ಮಾಡುತ್ತೇನೆ. ಇದು ಒಂದು ಆಗಿಬಿಟ್ಟರೆ, ನಾನು ಅಂದುಕೊಂಡಿರುವುದೆಲ್ಲ ಆಗಿಯೇ ಆಗುತ್ತದೆ" ಎನ್ನುತ್ತಾರೆ.
ಮನೆಗೆ ಬಂದ ಗೌತಮ್ ಜೈದೇವ್‌ನ ಪ್ರೀತಿ ಕುರಿತು ಯೋಚನೆ ಮಾಡುತ್ತಾ ಚಿಂತಿತರಾಗಿದ್ದಾರೆ. ಆಗ ಅಲ್ಲಿಗೆ ಬಂದ ಭೂಮಿಕಾ "ಏನಾಯ್ತು" ಎಂದು ಕೇಳುತ್ತಾಳೆ. "ಯಾವುದು ನನ್ನ ಜೀವನದಲ್ಲಿ ನೋಡಬಾರದು ಎಂದುಕೊಂಡಿದ್ದೇನೋ, ಅದು ಆಗಿದೆ. ಜೈದೇವ್‌ಗೆ ಒಂದು ಹುಡುಗಿ ಜತೆ ಅಫೇರ್ ಇದೆ. ಅಶ್ವಿನಿ ಫ್ರೆಂಡ್ ದಿಯಾ ಜತೆ ಸಂಬಂಧ ಇದೆ" ಎಂದು ತಾನು ನೋಡಿದ ಕಥೆಯೆಲ್ಲ ಹೇಳುತ್ತಾನೆ. ಭೂಮಿಕಾಳಿಗೂ ಸಂಕಟ ಆಗುತ್ತದೆ. "ಜೈದೇವ್ ಈ ರೀತಿ ಮಾಡ್ತಾರೆ" ಎಂದುಕೊಂಡಿರಲಿಲ್ಲ ಇಬ್ಬರೂ ಬೇಸರದಲ್ಲಿ ಮಾತನಾಡುತ್ತಾರೆ.
ಮಲ್ಲಿಗೆ ಡಿವೋರ್ಸ್ ನೀಡಿ ಅಂದ್ಲು ದಿಯಾ
ಇನ್ನೊಂದೆಡೆ ಜೈದೇವ್ ಮತ್ತು ದಿಯಾ ಮನೆಯಲ್ಲಿ ಎಣ್ಣೆ ಕುಡಿಯುತ್ತಾ ಇದ್ದಾರೆ. ಆಕೆಯ ತಂದೆ ಔಟ್ ಆಫ್ ಸ್ಟೇಷನ್‌ಗೆ ಹೋಗಿರುತ್ತಾರೆ. ಇಬ್ಬರೂ ಪ್ರೀತಿಯ ಮಾತುಗಳನ್ನಾಡುತ್ತಾರೆ. "ಅವಳು ನಿಮ್ಮ ಜೀವನದಲ್ಲಿ ಬರಬಾರದಿತ್ತು. ಅವಳು ನಿಮ್ಮ ಚಾಯ್ಸ್ ಅಲ್ಲ" ಎನ್ನುತ್ತಾಳೆ. "ಅವಳು ಆಯ್ಕೆ ಅಲ್ಲ. ಆಕ್ಸಿಡೆಂಟ್" ಎಂದು ಹೇಳುತ್ತಾನೆ. "ಅವಳಿಗೆ ಡಿವೋರ್ಸ್ ಕೊಡಬಹುದಲ್ವ?" ಎನ್ನುತ್ತಾಳೆ. "ಅವಳಿಗೆ ಡಿವೋರ್ಸ್ ಕೊಟ್ರೆ, ನಾನು ನಿನ್ನ ಮದುವೆಯಾಗಲು ರೆಡಿ" ಎನ್ನುತ್ತಾಳೆ. ಜೈದೇವ್ ತನ್ನ ಮನಸ್ಸಲ್ಲೂ ಇದೇ ರೀತಿ ಇದೆ ಎನ್ನುವ ಮುಖ ಭಾವ ಪ್ರದರ್ಶಿಸುತ್ತಾನೆ.
ಭೂಮಿಕಾ ಕೇಳುತ್ತಾರೆ. "ಯಾಕೆ ನೀವು ಜೈದೇವ್‌ನ ಏನೂ ಕೇಳಿಲ್ಲ" ಎನ್ನುತ್ತಾಳೆ. "ಅವನ ಕೊರಳಪಟ್ಟಿ ಹಿಡಿದು ಕೇಳುವುದು ಒಂದೇ ನಿಮಿಷ. ಆದರೆ, ಇದರಿಂದ ಸಂಬಂಧ ಹಾಳಾಗುತ್ತದೆ" ಎಂದೆಲ್ಲ ಗೌತಮ್ ಹೇಳುತ್ತಾರೆ.
ಇಂದಿನ ಸಂಚಿಕೆಯಲ್ಲಿ ಗೌತಮ್ ಮತ್ತು ಭೂಮಿಕಾ ಇಬ್ಬರೂ ದಿಯಾ ಮನೆಗೆ ಹೋಗುವ ಸನ್ನಿವೇಶ ಇರಲಿದೆ. ಇದಕ್ಕೆ ಸಂಬಂಧಪಟ್ಟ ಪ್ರಮೋವನ್ನು ಝೀ ಕನ್ನಡ ಬಿಡುಗಡೆ ಮಾಡಿದೆ.
ವಿಭಾಗ