ಜೈದೇವ್‌ನ ಜತೆ ಅಕ್ರಮ ಸಂಬಂಧ ಹೊಂದಿದ ದಿಯಾಳಿಗೆ ಗೌತಮ್ ದಿವಾನ್ ಬೆದರಿಕೆ; ಮಲ್ಲಿಗೆ ಮಣ್ಣು ತಿನ್ನೋ ಬಯಕೆ- ಅಮೃತಧಾರೆ ಸೀರಿಯಲ್ ಸ್ಟೋರಿ
Amruthadhaare serial: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಗೌತಮ್ ಮತ್ತು ಭೂಮಿಕಾ ನೇರವಾಗಿ ದಿಯಾಳ ಮನೆಗೆ ಹೋಗಿ ದಿಯಾಳಿಗೆ ಎಚ್ಚರಿಕೆ ನೀಡುತ್ತಾರೆ. ಈ ಸಂದರ್ಭದಲ್ಲಿ ಒಂದಿಷ್ಟು ನಾಟಕೀಯ ಆಸಕ್ತಿದಾಯಕ ಸನ್ನಿವೇಶಗಳು ನಡೆದಿವೆ.
ಅಮೃತಧಾರೆ ಧಾರಾವಾಹಿ ಕಥೆ: ಜೈದೇವ್ ಮನೆಗೆ ಬಂದು ಮಲ್ಲಿ ಜತೆ ನಾಟಕೀಯವಾಗಿ ಪ್ರೀತಿಯ ಮಾತುಗಳನ್ನು ಆಡುತ್ತದೆ. ನನಗೆ ಬಸುರಿ ಬಯಕೆ ಆರಂಭವಾಗಿದೆ ಎಂದು ಮಲ್ಲಿ ಹೇಳುತ್ತಾಳೆ. ಉಪ್ಪಿನಕಾಯಿ ತಿನ್ನಬೇಕು ಅನ್ನುತ್ತಾಳೆ. ಮಣ್ಣು ತಿನ್ನಬೇಕು ಎಂದೆನಿಸುತ್ತದೆ ಎಂದು ಮಲ್ಲಿ ಹೇಳಿದಾಗ "ನಿನಗೆ ಮಣ್ಣು ತಿನ್ನಿಸ್ತೀನಿ" ಎಂದು ಮನಸ್ಸಲ್ಲಿ ಅಂದುಕೊಳ್ಳುತ್ತಾನೆ. ನನಗೆ ಮೂರು ದಿನ ಮೈಸೂರಿಗೆ ಹೋಗಬೇಕಿತ್ತು. ಪರ್ಮಿಷನ್ ಬೇಕಿತ್ತು ಎನ್ನುತ್ತಾನೆ. ಅಯ್ಯೋ ಮೂರು ದಿನಾನ ಎಂದು ಮಲ್ಲಿ ಟೆನ್ಷನ್ ಆಗುತ್ತಾನೆ. ಆತನಿಗೆ ದಿಯಾಳ ಜತೆ ತಿರುಗಾಡಲು ಸಮಯ ಬೇಕಿದೆ ಎಂದು ಅವಳಿಗೆ ಗೊತ್ತಿಲ್ಲ. ಒಲ್ಲದ ಮನಸ್ಸಲ್ಲಿ ಪರ್ಮಿಷನ್ ಕೊಡುತ್ತಾಳೆ. ಆಕೆಗೆ ಈತನ ಮತ್ತೊಂದು ಲವ್ ವಿಷಯ ಗೊತ್ತಿರುವುದಿಲ್ಲ. ಆದರೆ, ಈತನ ನಕಲಿ ಪ್ರೀತಿಯನ್ನು ದೂರದಿಂದ ನೋಡಿ ಗೌತಮ್ ಮತ್ತು ಭೂಮಿಕಾ ಕೋಪಗೊಳ್ಳುತ್ತಾರೆ.
ಆನಂದ್ ಗೌತಮ್‌ಗೆ ಫೋನ್ ಮಾಡುತ್ತಾನೆ. "ನೀನು ಕೊಟ್ಟ ಸದರ ಜಾಸ್ತಿ ಆಯ್ತು" ಎಂದು ಹೇಳುತ್ತಾನೆ. "ಮಕ್ಕಳಿಗೆ ಪ್ರೀತಿ ಕೊಟ್ಟರೆ ಸಾಲದು ಕಾಣೋ. ಅವರಿಗೆ ಜೀವನದ ಜವಾಬ್ದಾರಿ ಕೊಡಬೇಕು" ಎನ್ನುತ್ತಾನೆ. "ಅವನ ಮೇಲೆ ಸೀರಿಯಸ್ ಆಕ್ಷನ್ ತೆಗೆದುಕೊಳ್ಳಬೇಕು" ಎಂದು ಆನಂದ್ ಸಲಹೆ ನೀಡುತ್ತಾನೆ.
ಜೈದೇವ್‌ನ ಕರೆದು ಶಕುಂತಲಾ ಮಾತನಾಡುತ್ತಾರೆ. "ಪಾರ್ಥನಿಗೆ ಬಂದ ಸಂಬಂಧ ಬೇಡ. ಬೇರೆ ಹುಡುಗಿನ ನೋಡಿದ್ದೇನೆ" ಎಂದು ಶಕುಂತಲಾ ಹೇಳುತ್ತಾಳೆ. "ಹುಡುಗಿ ನಮ್ಮ ಸ್ಟಾಂಡರ್ಡ್ ಇಲ್ಲ. ಮಿಡಲ್ ಕ್ಲಾಸ್ ಹುಡುಗಿ" ಎನ್ನುತ್ತಾಳೆ. "ನಮಗೆ ಬೇರೆ ಆಯ್ಕೆ ಇಲ್ವ. ನಮ್ಮ ಸ್ಟಾಂಡರ್ಡ್ ಇಲ್ವ" ಎಂದು ಹೇಳುತ್ತಾನೆ ಜೈದೇವ್. "ನೀನು ಡಿಸಿಷನ್ ತೆಗೆದುಕೊಂಡಿದ್ದೀ ಅಂದ್ರೆ ಸಾಕಷ್ಟು ಅಳೆದು ತೆಗೆದುಕೊಂಡಿದ್ದೀಯ. ನನಗೆ ಓಕೆ" ಎಂದು ಜೈದೇವ್ ಹೇಳುತ್ತಾನೆ. ಆತನಿಗೆ ಹುಡುಗಿ ಅಪೇಕ್ಷಾ ಎಂದು ಗೊತ್ತಿಲ್ಲ. "ಅವನಿಗೆ ಸಡನ್ ಶಾಕ್ ಕೊಡೋದು ಬೇಡ ಅಂತ ಸ್ವಲ್ಪ ಸ್ವಲ್ಪ ಹೇಳ್ತಾ ಇದ್ದೀನಿ" ಎಂದು ಶಕುಂತಲಾದೇವಿ ತನ್ನ ಸಹೋದರ ಲಕ್ಕಿ ಲಕ್ಷ್ಮಿಕಾಂತನಲ್ಲಿ ಹೇಳುತ್ತಾರೆ.
ಇದನ್ನು ಓದಿ: ಅಮೃತಧಾರೆ ಧಾರಾವಾಹಿಯ ಎಲ್ಲಾ ಸಂಚಿಕೆಗಳು
ಪಾರ್ಥ ಅಪೇಕ್ಷಾಗೆ ಕಾಲ್ ಮಾಡಿ ಕುಶಲ ಸಮಚಾರ ತಿಳಿಸುತ್ತಾರೆ. "ನಿನ್ನ ಅಪ್ಪ ನನ್ನ ಮಗಳನ್ನು ಮರೆತು ಬಿಡು ಎಂದಾಗ ಭಯವಾಯ್ತು. ಆದರೆ, ಮಾಮ್ ಭರವಸೆ ನೀಡಿದಾಗ ಖುಷಿಯಾಯ್ತು" ಎನ್ನುತ್ತಾನೆ ಪಾರ್ಥ. ಒಟ್ಟಾರೆ ಇವರಿಬ್ಬರು ಪ್ರೀತಿ ಸಕ್ಸಸ್ ಆಗುವ ನಿರೀಕ್ಷೆಯಲ್ಲಿದ್ದಾರೆ.
ಗೌತಮ್ ಮತ್ತು ಭೂಮಿಕಾ ಮಾತನಾಡುತ್ತ ಇದ್ದಾರೆ. "ವಿಷಯ ಗೊತ್ತಾದ ಮೇಲೆ ತಡ ಮಾಡುವುದು ಬೇಡ. ಇದನ್ನು ಬಗೆಹರಿಸುವುದು ಒಳ್ಳೆಯದು" ಎಂದು ಭೂಮಿಕಾ ಹೇಳುತ್ತಾಳೆ. "ಜೈದೇವ್‌ನಲ್ಲಿ ಏನು ಮಾತನಾಡಬಹುದು" ಎನ್ನುತ್ತಾನೆ ಗೌತಮ್. "ನಾವು ದಿಯಾಳ ಬಳಿ ಮಾತನಾಡೋಣ. ನೀನು ತಪ್ಪು ಮಾಡ್ತಾ ಇದ್ದೀಯ. ಒಂದು ಸಂಸಾರ ಹಾಳು ಮಾಡ್ತಿಯ ಎಂದು ತಿಳಿಹೇಳೋಣ" ಎಂದು ಭೂಮಿಕಾ ಹೇಳುತ್ತಾಲೆ. "ಸರಿ ನಾಳೆ ಮಾತನಾಡೋಣ ಅವಳಲ್ಲಿ" ಎನ್ನುತ್ತಾರೆ ಗೌತಮ್.
ದಿಯಾಳ ಮನೆಗೆ ಬಂದ ಗೌತಮ್- ಭೂಮಿಕಾ
ಮರುದಿನ ಬೆಳಗ್ಗೆ ದಿಯಾ ಮನೆಯ ಕಾಲಿಂಗ್ ಬೆಲ್ ಸದ್ದಾಗುತ್ತದೆ. ಬಾಗಿಲು ತೆರೆದಾಗ ಅಲ್ಲಿ ಗೌತಮ್ ಮತ್ತು ಭೂಮಿಕಾ ಇರುತ್ತಾರೆ. ಇವರನ್ನು ನೋಡಿ ಶಾಕ್ ಆಗುತ್ತದೆ ದಿಯಾಳಿಗೆ. "ಒಳಗೆ ಬರಬಹುದಾ" ಎನ್ನುತ್ತಾಳೆ ಭೂಮಿಕಾ. "ಬನ್ನಿ" ಎನ್ನುತ್ತಾರೆ. "ನಾವು ನಿನ್ನತ್ರ ಮಾತನಾಡಬೇಕಿತ್ತು" ಎನ್ನುತ್ತಾರೆ ಗೌತಮ್. "ಅಶ್ವಿನಿ ನೀನು ಫ್ರೆಂಡ್ಸ್ ಅಲ್ವ." ಎನ್ನುತ್ತಾರೆ. "ಹೌದು ಕಾಲೇಜು ಫ್ರೆಂಡ್ಸ್" ಎನ್ನುತ್ತಾಳೆ. "ಹಾಗಾದರೆ ಜೈದೇವ್" ಹೀಗೆ ಒಂದಿಷ್ಟು ವಿಚಾರಣೆ ಮಾಡುತ್ತಾರೆ. "ಜೈದೇವ್ ನಿನ್ನ ಬಳಿ ಸಾಕಷ್ಟು ಕ್ಲೋಸ್ ಆಗಿದ್ದಾನೆ ಅಲ್ವ. ಮೆಸೆಜ್, ಚಾಟಿಂಗ್, ಗಿಫ್ಟಿಂಗ್... ಅವನಿಗೆ ಮದುವೆಯಾಗಿದೆ. ನಿನ್ನ ಕುಮ್ಮಕ್ಕು ಇಲ್ಲದೆ ಹೀಗೆ ಆಗಲು ಸಾಧ್ಯವಿಲ್ಲ" ಎನ್ನುತ್ತಾರೆ ಗೌತಮ್. "ಏನೂ ಗೊತ್ತಿಲ್ಲದೆ ನನ್ನ ಬಗ್ಗೆ ಏನೇನೋ ಮಾತನಾಡ್ತ ಇದ್ದೀಯ. ನನ್ನ ತಂದೆಗೆ ಹೇಳ್ತಿನಿ" ಎಂದು ಹೇಳುತ್ತಾಳೆ. "ಹೇಳು, ಕರೆಸು" ಎನ್ನುತ್ತಾರೆ ಗೌತಮ್.
ದಿಯಾಳ ಜತೆ ಗೌತಮ್ ಮಾತನಾಡುತ್ತಾಳೆ. "ನಿನ್ನ ಸಂಬಂಧಕ್ಕೆ ಏನಾದರೂ ಗ್ಯಾರಂಟಿ ಇದೆಯಾ. ಮಲ್ಲಿಗೆ ಮೋಸ ಮಾಡಿದಂತೆ ನಿನಗೂ ಮೋಸ ಮಾಡೋಲ್ಲ ಏನೂ ಗ್ಯಾರಂಟಿ" ಎಂದಾಗ ದಿಯಾಳಿಗೆ ಟೆನ್ಷನ್ ಆಗುತ್ತದೆ. "ನಿಮ್ಮ ಸಂಬಂಧಕ್ಕೆ ಏನು ಅರ್ಥ. ಜೈದೇವ್‌ಗೆ ಕಾರ್ ಗಿಫ್ಟ್ ಕೊಟ್ಟದ್ದ ಸುಳ್ಳಾ?" ಎನ್ನುತ್ತಾಳೆ. ಆಗ ಅಲ್ಲಿಗೆ ದಿಯಾಳ ತಂದೆ ಬರುತ್ತಾರೆ. "ನೋಡಪ್ಪ ನನ್ನ ಬಗ್ಗೆಯೇ ಏನೇನೋ ಮಾತನಾಡುತ್ತಾರೆ" ಎಂದು ಹೇಳುತ್ತಾಳೆ. ಯಾರೋ ಅದು ಎಂದು ಅಬ್ಬರಿಸಿದ ದಿಯಾಳ ಅಪ್ಪ ಒಳಗೆ ಬಂದು ಗೌತಮ್‌ನನ್ನು ನೋಡಿ ಅಚ್ಚರಿಗೊಳ್ಳುತ್ತಾರೆ. ನೇರವಾಗಿ ಗೌತಮ್ ಕಾಲಿಗೆ ನಮಸ್ಕಾರ ಮಾಡುತ್ತಾರೆ. ಇದನ್ನು ನೋಡಿ ದಿಯಾಳಿಗೆ ಅಚ್ಚರಿಯಾಗುತ್ತದೆ. "ಇವರು ಯಾರು ಗೊತ್ತಮ್ಮ. ಒಂದು ಕಾಲದಲ್ಲಿ ಬಿಸ್ನೆಸ್ ಲಾಸ್ ಆಗಿ ಕಷ್ಟಪಡುತ್ತಿದ್ದಾಗ ನನಗೆ ಕಾಂಟ್ರಾಕ್ಟ್ ಕೊಟ್ಟು ಸಹಾಯ ಮಾಡಿದವರು. ಮುಳುಗಿ ಹೋಗುತ್ತಿದ್ದ ಕಂಪನಿಯನ್ನು ಕಾಪಾಡಿದವರು. ನಾವು ಇವರನ್ನು ನಮ್ಮ ಪಾಲಿನ ದೇವರು ಎಂದರೆ ತಪ್ಪಾಗದು" ಎನ್ನುತ್ತಾರೆ. "ನನ್ನ ಮಗಳು ಏನಾದರೂ ತಪ್ಪು ಮಾಡಿದ್ಲ" ಎಂದು ಕೇಳುತ್ತಾನೆ. "ಇಲ್ಲ ಸುಮ್ಮನೆ ಮಾತನಾಡಲು ಬಂದೆ" ಎಂದು ಹೇಳುತ್ತಾರೆ. "ಮೀಟಿಂಗ್ ಅರ್ಧದಲ್ಲಿ ಬಿಟ್ಟು ಬಂದೆ. ಬರ್ತಿನಿ ಸಾರ್" ಎಂದು ಹೇಳಿ ಹೋಗುತ್ತಾರೆ. "ನಿನ್ನ ಅಪ್ಪ ಹೇಳಿದ್ರಲ್ವ. ಇವತ್ತಿನ ಈ ಸ್ಥಿತಿಗೆ ಯಾರು ಕಾರಣ ಅಂತ. ಅದು ನಿಜ ಆಗುತ್ತದೆ. ಈ ಮನೆಯನ್ನು ಬಿಟ್ಟು ಹೋಗಬೇಕಾಗುತ್ತದೆ. ಬೀದಿಗೆ ಬರಬೇಕಾಗುತ್ತದೆ" ಎಂದು ಬೆದರಿಸುತ್ತಾರೆ ಗೌತಮ್. "ಇನ್ನೊಂದು ಸರ್ತಿ ನನ್ನ ತಮ್ಮನ ತಂಟೆಗೆ ಬರಬೇಡ" ಎಂದು ಹೋಗುತ್ತಾರೆ ಗೌತಮ್. ಸೀರಿಯಲ್ ಮುಂದುವರೆಯುತ್ತದೆ.
ಇಂದಿನ ಸಂಚಿಕೆಯಲ್ಲಿ ಏನಾಗಲಿದೆ ಎಂಬ ಕುತೂಹಲ ನಿಮ್ಮಲ್ಲಿರಬಹುದು. ಝೀ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಇಂದಿನ ಪ್ರಮೋದಲ್ಲಿ ಮಲ್ಲಿ ಮುಂದೆ ಜೈದೇವ್ "ನನಗೆ ದಿಯಾ ಜತೆ ಸಂಬಂಧ ಇದೆ ಎಂದು ಹೇಳ್ತಾ ಇದ್ರಂತೆ" ಎಂದು ನಾಟಕವಾಡುತ್ತಾನೆ.
ಅಮೃತಧಾರೆ ಸೀರಿಯಲ್ ಪಾತ್ರವರ್ಗ
ಛಾಯಾ ಸಿಂಗ್: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ)
ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್: ಜೈದೇವ್
ಚಂದನ್: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ)
ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ)
ವಿಭಾಗ