Amruthadhaare: ಅಮ್ಮ ಫಸ್ಟ್‌ ಹೆಂಡತಿ ನೆಕ್ಸ್ಟ್‌ ಅಂದ್ರು ಗೌತಮ್‌, ಶಕುಂತಲಾ ನಾಟಕದಿಂದ ಅಮೃತಧಾರೆ ಸೀರಿಯಲ್‌ನಲ್ಲಿ ಒಂಟಿಯಾಗ್ತಾರ ಭೂಮಿಕಾ
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಅಮ್ಮ ಫಸ್ಟ್‌ ಹೆಂಡತಿ ನೆಕ್ಸ್ಟ್‌ ಅಂದ್ರು ಗೌತಮ್‌, ಶಕುಂತಲಾ ನಾಟಕದಿಂದ ಅಮೃತಧಾರೆ ಸೀರಿಯಲ್‌ನಲ್ಲಿ ಒಂಟಿಯಾಗ್ತಾರ ಭೂಮಿಕಾ

Amruthadhaare: ಅಮ್ಮ ಫಸ್ಟ್‌ ಹೆಂಡತಿ ನೆಕ್ಸ್ಟ್‌ ಅಂದ್ರು ಗೌತಮ್‌, ಶಕುಂತಲಾ ನಾಟಕದಿಂದ ಅಮೃತಧಾರೆ ಸೀರಿಯಲ್‌ನಲ್ಲಿ ಒಂಟಿಯಾಗ್ತಾರ ಭೂಮಿಕಾ

Amruthadhaare Serial: ಭೂಮಿಕಾಳ ಮುಂದೆ ಜೈದೇವ್‌ ಅಮಾಯಕ ಎಂದು ನಿರೂಪಿಸಲು ಶಕುಂತಲಾದೇವಿ ನಾಟಕ ಮುಂದುವರೆಸುತ್ತಾಳೆ. ಇದೇ ಸಂದರ್ಭದಲ್ಲಿ ಆನಂದ್‌ ಜತೆ ಮಾತನಾಡುವಾಗ ನನಗೆ ಅಮ್ಮ ಮೊದಲು, ಹೆಂಡತಿ ಆಮೇಲೆ ಎಂದು ಹೇಳುತ್ತಾನೆ ಗೌತಮ್‌. ಮದುವೆ ಮನೆಗೆ ಹೆಣ್ಣಿನ ಕಡೆಯವರೂ ಬಂದಾಗಿದೆ.

ಅಮೃತಧಾರೆ ಸೀರಿಯಲ್‌ ಸ್ಟೋರಿ
ಅಮೃತಧಾರೆ ಸೀರಿಯಲ್‌ ಸ್ಟೋರಿ

Amruthadhaare Serial Episode: ಗೌತಮ್‌ ಮತ್ತು ಆನಂದ್‌ ಕಾರಿನಲ್ಲಿ ಮಾತನಾಡುತ್ತ ಪ್ರಯಾಣಿಸುತ್ತಾ ಇದ್ದಾರೆ. ಮನೆಯಲ್ಲಿ ಏನಾದರೂ ಕಾಂಪ್ಲಿಕೇಷನ್‌ ಆರಂಭವಾದಗ ನೀನು ಅಮ್ಮನಿಗೆ ಬೆಂಬಲ ನೀಡ್ತಿಯಾ? ಅಥವಾ ಹೆಂಡತಿಗೆ ನೀಡುತ್ತೀಯಾ ಎಂದು ಆನಂದ್‌ ಪ್ರಶ್ನಿಸುತ್ತಾನೆ. "ಅಮ್ಮನೇ ಫಸ್ಟ್‌" ಎಂದು ಗೌತಮ್‌ ಉತ್ತರ ನೀಡುತ್ತಾನೆ. ಈ ಪ್ರಶ್ನೋತ್ತರ ಸುಮ್ಮನೆ ಆನಂದ್‌ ಕೇಳಿದರೂ ಅಮೃತಧಾರೆ ಸೀರಿಯಲ್‌ನ ಮುಂಬರುವ ಎಪಿಸೋಡ್‌ಗಳಿಗೆ ಈ ಮಾತು ದಿಕ್ಸೂಚಿಯಾಗುವ ಸೂಚನೆಯಿದೆ. "ಮೊದಲು ಅಮ್ಮ, ಹೆಂಡತಿ ಆಮೇಲೆ" ಎಂದು ಗೌತಮ್‌ ಹೇಳುತ್ತಾನೆ. "ಅಮ್ಮನ ಆಸೆಯಂತೆ ಜೈದೇವ್‌ ಮದುವೆಯೊಂದು ಸಾಂಗವಾಗಿ ನಡೆಯಬೇಕು" ಎಂದೆಲ್ಲ ಹೇಳುತ್ತಾನೆ.

ಇದೇ ಸಮಯದಲ್ಲಿ ಭೂಮಿಕಾಳ ಗೊಂದಲ ಮುಂದುವರೆಯುತ್ತದೆ. ಇದೇ ಸಮಯದಲ್ಲಿ ಶಕುಂತಲಾದೇವಿ "ಮಲ್ಲಿ ಇನ್ನೋಸೆಂಟ್‌ ಅಲ್ಲ" ಅನ್ನುವ ರೀತಿ ಮಾತನಾಡುತ್ತಾಳೆ. ಮನೆಹಾಳ ಮಾವನೂ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯುತ್ತಾನೆ. "ಇಂತಹ ಹುಡುಗಿಯನ್ನು ಹೇಗೆ ನಂಬಲು ಸಾಧ್ಯ" ಎಂದೆಲ್ಲ ಭೂಮಿಕಾಳನ್ನು ಶಕುಂತಲಾದೇವಿ ಮಾತನಾಡುತ್ತಾಳೆ.

ನಿಮ್ಮ ಅತ್ತೆ ಎರಡು ಹೆಣ್ಣು ಮಕ್ಕಳನ್ನು ಹೆತ್ರು. ಇನ್ನೊಂದು ಹೆತ್ತಿದ್ರೆ ಪಾರ್ಥನಿಗೂ ಅಲ್ಲಿಂದಲೇ ಹೆಣ್ಣು ತರಬೇಕಿತ್ತು ಎಂದು ಆನಂದ್‌ ತಮಾಷೆ ಮಾಡುತ್ತಾನೆ. ಜೈದೇವ್‌ಗೆ ಸಿಕ್ಕಂತೆ ಪಾರ್ಥನಿಗೂ ಒಳ್ಳೆಯ ಹುಡುಗಿ ಸಿಗಬೇಕು, ನನ್ನ ಜವಾಬ್ದಾರಿ ಮುಗಿಯುತ್ತದೆ ಎಂದು ಗೌತಮ್‌ ಹೇಳುತ್ತಾನೆ. ಹೀಗೆ ಮಾತನಾಡುತ್ತ ಮದುವೆ ಹಾಲ್‌ಗೆ ಬರುತ್ತಾರೆ.

ಗೌತಮ್‌ ಬಂದಾಗ ಮದುವೆ ಮನೆಯಲ್ಲಿ ಅತ್ತೆ, ಸೊಸೆ ಎಲ್ಲರೂ ಮಾತನಾಡುತ್ತಾ ಇರುತ್ತಾರೆ. ಯಾವುದೇ ಕಾರಣಕ್ಕೂ ಈ ವಿಷಯ ಗೌತಮ್‌ಗೆ ಗೊತ್ತಾಗಬಾರದು, ಅವನು ಟೆನ್ಷನ್‌ ತಗೋತಾನೆ ಎಂದು ಭೂಮಿಕಾಳಿಗೆ ಶಕುಂತಲಾದೇವಿ ತಿಳಿಸ್ತಾರೆ. ಮದುವೆ ಮಂಟಪಕ್ಕೆ ಜನರು ಬರುತ್ತಾ ಇರುತ್ತಾರೆ.

ಇದೇ ಸಮಯದಲ್ಲಿ ಗೌತಮ್‌ ಭೂಮಿಕಾಳಿಗೆ ಏನೋ ಉಡುಗೊರೆ ತಂದಿರುತ್ತಾನೆ. ಅದನ್ನು ನೋಡಿ ಭೂಮಿಕಾಳಿಗೆ ಖುಷಿಯಾಗುತ್ತದೆ. ಶಾಪಿಂಗ್‌ಗೆ ಹೋಗಿದ್ದವನು ನೆಕ್ಲೆಸ್‌ ತಂದೆ ಎನ್ನುತ್ತಾನೆ. ಆಮೇಲೆ ನೆಕ್ಲೆಸ್‌ ಹಾಕಲು ಯತ್ನಿಸುತ್ತಾಳೆ. ಬಳಿಕ ಗೌತಮ್‌ ಬಳಿಯೇ ತೊಡಿಸಲು ಹೇಳುತ್ತಾಳೆ. ಈ ಸಮಯದಲ್ಲಿ ಅನುರಾಗ ಇನ್ನಷ್ಟು ಹೆಚ್ಚಾಗುತ್ತದೆ. ಭೂಮಿಕಾಳ ಮುಖದಲ್ಲಿ ಪ್ರೀತಿಯ ನಗೆ ಅರಳುತ್ತದೆ. "ನೆಕ್ಲೆಸ್‌ಗೆ ಈಗ ಕಲೆ ಬಂತು" ಎಂದು ಗೌತಮ್‌ ಹೇಳುತ್ತಾನೆ. "ಒಡವೆ ಇಲ್ಲದೆ ಇದ್ದರೂ ಚೆನ್ನಾಗಿ ಕಾಣ್ತಿರ" "ಚೆನ್ನಾಗಿರೋದು ಯಾವಾಗಲೂ ಚೆನ್ನಾಗಿ ಕಾಣಿಸುತ್ತದೆ" ಎಂಬ ಮಾತುಗಳು ಪ್ರೀತಿ ಹೆಚ್ಚಿಸುತ್ತದೆ.

ಇನ್ನೊಂದೆಡೆ ಜೈದೇವ್‌ ಜತೆ ಶಕುಂತಲಾದೇವಿ ಮತ್ತು ಇತರರು ಕುಳಿತುಕೊಂಡಿರುತ್ತಾರೆ. ತನ್ನ ಮಗನ ಪರವಾಗಿ ಶಕುಂತಲಾ ಮಾತನಾಡುತ್ತ ಇರುತ್ತಾರೆ. ಈ ಮದುವೆ ನಿಲ್ಲಬಾರದು ಅಂತ ಕೊನೆಕ್ಷಣದಲ್ಲಿ ಕೆಲಸದವಳನ್ನು ಸೆಟ್‌ ಮಾಡಿದ್ದು ನಾನೇ ಎಂದು ಶಕುಂತಲಾ ಹೇಳುತ್ತಾರೆ. ಲೋಕಿಗೆ ಮಲ್ಲಿನ ಕರ್ಕೊಂಡು ಹೋಗೋಕ್ಕೆ ಹೇಳಿದ್ದು ನಾನೇ. ಇದು ನನ್ನ ಸಾಮ್ರಾಜ್ಯ, ಇಲ್ಲಿ ನಾನು ಹೇಳಿದ್ದೇ ನಡೆಯಬೇಕು ಎಂದು ಹೇಳುತ್ತಾಳೆ. ಆ ಹುಡುಗಿ ಎಲ್ಲಿ ಎಂಬ ಪ್ರಶ್ನೆಗೆ ಶಕುಂತಲಾದೇವಿ ಉತ್ತರಿಸುವುದಿಲ್ಲ. "ಭೂಮಿಕಾಳ ಮನಸ್ಸಲ್ಲಿ ಈ ಹುಳ ಇನ್ನೂ ಇದೆ" ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಾಳೆ. ಜತೆಗೆ ಭೂಮಿಕಾಳ ಜತೆ ಹೇಗೆ ಇರಬೇಕು, ಏನು ಮಾತನಾಡಬೇಕು ಎಂದು ಜೈದೇವ್‌ಗೆ ಹೇಳಿಕೊಡುತ್ತಾಳೆ.

ಹೀಗೆ ಏನೋ ಮಾತನಾಡುತ್ತ ಇರುವಾಗ ಅಲ್ಲಿಗೆ ಭೂಮಿಕಾ ಬರುತ್ತಾಳೆ. ಈ ಸಮಯದಲ್ಲಿ ಜೈದೇವ್‌ನನ್ನು ಕರೆಯಲು ತಿಳಿಸುತ್ತಾಳೆ ಶಕುಂತಲಾ. ನಿನ್ನ ಮುಂದೆಯೇ ಜೈದೇವ್‌ನನ್ನು ಕೇಳುವೆ ಎಂದು ತಿಳಿಸುತ್ತಾಳೆ. "ಮನೆಯಲ್ಲಿ ಏನು ನಡೀತಾ ಇದೆ ಗೊತ್ತ?" ಎಂದು ಜೈದೇವ್‌ನನ್ನು ಕೇಳುತ್ತಾಳೆ. "ನಮಗೆ ಒಂದು ಡೌಟ್‌ ಇದೆ, ಮಲ್ಲಿ ಗೊತ್ತ ನಿನಗೆ?" ಎಂದು ಕೇಳುತ್ತಾಳೆ. ಏನೂ ಗೊತ್ತಿಲ್ಲದವನಂತೆ "ಯಾವ ಮಲ್ಲಿ?" ಎಂದು ಜೈದೇವ್‌ ಕೇಳುತ್ತಾನೆ. ಹೀಗೆ ಒಂದಿಷ್ಟು ವಿಚಾರಣೆಯ ನಾಟಕ ನಡೆಯುತ್ತದೆ. "ಗಂಗಣ್ಣನಿಗೆ ಮೊಮ್ಮಗಳು ಇದ್ದಾಳ, ಹೇಗೆ ಸಾಧ್ಯ" ಎಂದೆಲ್ಲ ಹೇಳುತ್ತಾನೆ. "ನೀನು ಅವಳನ್ನು ಪ್ರೀತಿಸಿ ಮೋಸ ಮಾಡಿದ್ದೀ ಎಂದು ಅವಳು ಹೇಳಿದ್ದಾಳೆ. ಸತ್ಯ ಒಪ್ಪಿಕೋ" ಎಂದು ಅಮ್ಮ ಕೇಳುತ್ತಾಳೆ. "ಆ ವಾಚ್‌ ಕಳೆದುಹೋಗಿತ್ತು. ನನಗೆ ಏನೂ ಗೊತ್ತಿಲ್ಲ" ಎಂದೆಲ್ಲ ಜೈದೇವ್‌ ಹೇಳುತ್ತಾನೆ. "ಅವಳ ಬಾಯಲ್ಲಿ ನಿನ್ನ ಹೆಸರು ಹೇಗೆ ಬಂತು?" ಎಂದು ಅಮ್ಮ ಕೇಳಿದಾಗಲೂ ಏನೂ ಗೊತ್ತಿಲ್ಲದಂತೆ ಜೈದೇವ್‌ ಹೇಳುತ್ತಾನೆ. "ನಿನ್ನ ಮಗನ ಅಂತಹ ಜನರ ಜತೆ ಇಮ್ಯಾಜಿನ್‌ ಮಾಡ್ತಿಯಾ?" ಎಂದೆಲ್ಲ ಸೆಂಟಿಮೆಂಟ್‌ ಮಾತನಾಡುತ್ತಾನೆ. "ಆ ಹುಡುಗಿ ನಿಮ್ಮ ಅತ್ತಿಗೆಗೆ ಹೇಳಿದ್ದು" ಎಂದು ಶಕುಂತಲಾದೇವಿ ಹೇಳಿದಾಗ ಜೈದೇವ್‌ ಭೂಮಿಕಾಳ ಮುಂದೆ "ಹೌದ ಅತ್ತಿಗೆ ನೀವು ಇದನ್ನು ನಂಬ್ತಿರಾ?" ಎಂದೆಲ್ಲ ಹೇಳುತ್ತಾನೆ. ಅಷ್ಟು ಚೀಪ್‌ ಮೆಂಟಲಿಟಿ ನನಗಿಲ್ಲ ಎನ್ನುತ್ತಾನೆ. ನಾನು ಜವಾಬ್ದಾರಿಯುತ ವ್ಯಕ್ತಿ, ಮಲ್ಲಿ ಅನ್ನೋ ಹೆಸರನ್ನೇ ಕೇಳ್ತಾ ಇದ್ದೀನಿ, ಬಿಲೀವ್‌ ಮಿ ಅತ್ತಿಗೆ ಅನ್ನುತ್ತಾನೆ. ಭೂಮಿಕಾಳ ಮನದಲ್ಲಿ ಅನುಮಾನ ಇದ್ದೇ ಇರುತ್ತದೆ. ಇದೇ ಸಂದರ್ಭದಲ್ಲಿ ಜೈದೇವ್‌ಗೆ ಏನೂ ಗೊತ್ತಿಲ್ಲ ಅನಿಸುತ್ತದೆ ಎಂದುಕೊಳ್ಳುತ್ತಾಳೆ. ಇನ್ನೊಂದೆಡೆ ಮದುವೆ ಮನೆಗೆ ಹೆಣ್ಣಿನ ಕಡೆಯುವರು ಬರುತ್ತಾರೆ. ಸೀರಿಯಲ್‌ ಮುಂದುವರೆಯುತ್ತದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)
ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್‌: ಜೈದೇವ್‌
ಚಂದನ್‌: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)
ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

Whats_app_banner