Amruthadhaare: ಜೈದೇವ್ ಬಗ್ಗೆ ಕೆಟ್ಟ ಮಾತುಗಳನ್ನು ಸಹಿಸದ ಗೌತಮ್; ಮನೆಗೌರವ- ಅಪ್ಪಿ ಜೀವನವೆಂಬ ಎರಡು ದೋಣಿಗಳ ನಡುವೆ ಭೂಮಿಕಾ
Amruthadhaare Serial Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನಲ್ಲಿ ಜೈದೇವ್ ಮತ್ತು ಮಲ್ಲಿ ಸಂಬಂಧದ ವಿವರ ಭೂಮಿಕಾಳ ಕಿವಿಗೆ ಬೀಳುತ್ತದೆ. ಮನೆತನದ ಮರ್ಯಾದೆ ಎಂದು ಶಕುಂತಲಾದೇವಿ ವಾರ್ನಿಂಗ್ ಮಾಡ್ತಾರೆ. ಇನ್ನೊಂದೆಡೆ ಗೌತಮ್‌ನ ಕೋಪದ ಮುಖವೂ ಅನಾವರಣವಾಗುತ್ತದೆ.
Amruthadhaare Serial Episode: ಅಮೃತಧಾರೆ ಧಾರಾವಾಹಿಯ ಈ ಹಿಂದಿನ ಸಂಚಿಕೆಯಲ್ಲಿ ಜೈದೇವ್ ವಿಚಾರಣೆ ನಾಟಕವನ್ನು ಶಕುಂತಲಾದೇವಿ ಮಾಡುತ್ತಾರೆ. ತಾನು ಅಮಾಯಕನ ನಾಟಕ ಮಾಡುತ್ತಾನೆ ಜೈದೇವ್. ಭೂಮಿಕಾಳಿಗೂ ಜೈದೇವ್‌ನ ತಪ್ಪಿಲ್ವ ಎಂಬ ಯೋಚನೆ ಬರುತ್ತದೆ. ಆದರೆ, ಮಲ್ಲಿಯ ಮುಗ್ಧತೆಯ ಮೇಲೆ ಹೆಚ್ಚು ಭರವಸೆ ಇರುತ್ತದೆ.
ಜೈದೇವ್ ಅಪೇಕ್ಷಾ ಅರಸಿನಶಾಸ್ತ್ರ
ಇನ್ನೊಂದೆಡೆ ಅಮೃತಧಾರೆ ಸೀರಿಯಲ್‌ನ ಗುರುವಾರದ ಸಂಚಿಕೆಯಲ್ಲಿ ಜೈದೇವ್ ಅಪೇಕ್ಷಾ ಶುಭವಿವಾಹದ ಕಾರ್ಯಕ್ರಮಗಳು ಆರಂಭವಾಗಿವೆ. ಅತಿಥಿಗಳು ಆಗಮಿಸುತ್ತಿದ್ದಾರೆ. ಮದುಮಗಳು ಬಂದಿದ್ದಾಳೆ. ಪಾರ್ಥನ ಮುಖದಲ್ಲಿ ನೋವಿನ ಛಾಯೆಯಿದೆ. ಅಪೇಕ್ಷಾಳನ್ನು ಆರತಿ ಎತ್ತಿ ಸ್ವಾಗತಿಸಲಾಗಿದೆ. ಅರಸಿನ ಶಾಸ್ತ್ರ ಆರಂಭವಾಗಿದೆ. ಅಪೇಕ್ಷಾ ಮುಖದಲ್ಲಿ ಬೇಸರ ಇರುತ್ತದೆ. ಅಂತೂ ಅರಸಿನ ಶಾಸ್ತ್ರದವರೆಗೆ ಬಂತು ಎಂದು ಶಕುಂತಲಾದೇವಿ ಮತ್ತು ಮಾವ ಖುಷಿಪಡುತ್ತಾರೆ. ಇನ್ನೊಂದೆಡೆ ಜೈದೇವ್‌ಗೂ ಅರಸಿನ ಶಾಸ್ತ್ರ ಕಾರ್ಯಕ್ರಮ ನಡೆಯುತ್ತದೆ. ಅರಸಿನ ಶಾಸ್ತ್ರ ಹಚ್ಚಿದ ಬಳಿಕ ರೂಂನೊಳಗೆ ಇರಬೇಕು ಎಂದು ಅಜ್ಜಿ ಸಲಹೆ ನೀಡುತ್ತಾರೆ.
ಇದೇ ಸಮಯದಲ್ಲಿ ಭೂಮಿಕಾ ಯಾರಿಗೋ ಕಾಲ್ ಮಾಡುತ್ತಾ ಇರುತ್ತಾರೆ. ಆ ಸಂಖ್ಯೆ ವ್ಯಾಪ್ತಿ ಪ್ರದೇಶದಲ್ಲಿ ದೊರಕುವುದಿಲ್ಲ.
ಇದನ್ನು ಓದಿ: ಅಮೃತಧಾರೆ ಧಾರಾವಾಹಿಯ ಎಲ್ಲಾ ಸಂಚಿಕೆಗಳು
ಸತ್ಯ ಬಾಯ್ಬಿಟ್ಟ ಜೈದೇವ್
ಜೈದೇವ್‌ಗೆ ಮಾವ ಡ್ರೆಸ್ ಉಡಿಸ್ತಾ ಇದ್ದಾನೆ. ತಾನು ತುಂಬಾ ಖುಷಿಯಲ್ಲಿದ್ದೇನೆ ಎಂದು ಜೈದೇವ್ ಹೇಳುತ್ತಾನೆ. ಇಷ್ಟುದಿನ ಒಬ್ಬಂಟಿಯಾಗಿದ್ದೆ. ಇನ್ನು ಮುಂದೆ ಜಂಟಿಯಾಗಿ ಮಲಗ್ತಿನಿ ಎಂದು ಜೈದೇವ್ ಹೇಳುತ್ತಾನೆ. ಆಗ ಹೊರಗಡೆ ಭೂಮಿಕಾ ಹೋಗ್ತಾರೆ. "ಆಮೇಲೆ ಮಲ್ಲಿಯಲ್ಲ ಮಲ್ಲಿಯಂತಹ ಸಾವಿರಾರು ಜನರು ಬಂದ್ರೆ ಕ್ಯಾರ್ ಮಾಡೋಲ್ಲ" ಎನ್ನುತ್ತಾನೆ. ಮಲ್ಲಿ ಎಂಬ ಪದ ಕೇಳಿ ಭೂಮಿಕಾ ಮಾತಿಗೆ ಕಿವಿಕೊಡುತ್ತಾರೆ. "ಅವಳು ವಾಮಿಟ್ ಆಗಿದ್ದಾಂಗೆ ಭೂಮಿಕಾಗೆ ಹೇಳಿದ್ದಾರೆ. ನಮ್ಮ ಸೋ ಕಾಲ್ಡ್ ಅತ್ತಿಗೆಗೆ ಎಲ್ಲಾ ವಿಚಾರ ಗೊತ್ತಿದ್ದರೂ ಪ್ರೂವ್ ಮಾಡಲಾಗದೆ ಕುಳಿತಿದಿದ್ದಾಳೆ. ಅವಳಿಗೇನೂ ಗೊತ್ತು ಮಲ್ಲಿ ಹೊಟ್ಟೆಯಲ್ಲಿರುವ ಮಗು ದಿವಾನ್ ವಂಶದ ಕುಡಿ" ಎಂದು ಹೇಳುತ್ತಾನೆ. ಭೂಮಿಕಾಳಿಗ ಎಲ್ಲಾ ಸತ್ಯ ತಿಳಿಯುತ್ತದೆ. ಇವರೆಲ್ಲರ ನಾಟಕ ಗೊತ್ತಾಗುತ್ತದೆ.
ಭೂಮಿಕಾಳಿಗೆ ಶಕುಂತಲಾದೇವಿ ವಾರ್ನಿಂಗ್
ಇನ್ನೊಂದೆಡೆ ಭೂಮಿಕಾ ಓಡಿಕೊಂಡು ಬಂದು ಅತ್ತೆಯಲ್ಲಿ ಮಾತನಾಡುತ್ತಾಳೆ. ಈ ಮದುವೆ ನಿಲ್ಲಬೇಕು ಎಂದು ಹೇಳುತ್ತಾಳೆ. ಅವನದ್ದು ಏನು ತಪ್ಪಿಲ್ಲ ಎಂದು ಆಗಲೇ ಹೇಳಿದ್ನಲ್ಲ ಎಂದು ಶಕುಂತಲಾದೇವಿ ಹೇಳುತ್ತಾರೆ. ಯಾವುದೇ ಕಾರಣಕ್ಕೆ ನನ್ನ ಮಗನ ಮೇಲೆ ಇಂತಹ ಆರೋಪ ಮಾಡಬೇಡ ಎಂದು ಶಕುಂತಲಾದೇವಿ ಹೇಳುತ್ತಾಳೆ. ಈಗ ಇದು ನಮ್ಮ ಮನೆ ಮದುವೆ ಮಾತ್ರವಲ್ಲ, ನಿಮ್ಮ ಮನೆಯ ಮದುವೆ ಕೂಡ ಎಂದೆಲ್ಲ ಹೇಳುತ್ತಾಳೆ. ಜೈದೇವ್ ಹೇಳಿದ್ನ ನಾನು ಕೇಳಿದೆ ಎಂದು ಭೂಮಿಕಾ ಹೇಳಿದಾಗ ಶಕುಂತಲಾದೇವಿ ನಂಬುವುದಿಲ್ಲ. ಜೈದೇವ್ ಎಂತವನು ಎಂದು ನನಗೆ ಗೊತ್ತು. ಈ ಮದುವೆ ನಿಲ್ಲಿಸಬಾರದು. ಇದು ದಿವಾನ್ ಮನೆತನದ ಗೌರವದ ಪ್ರಶ್ನೆ ಎಂದು ಅತ್ತೆ ಹೇಳುತ್ತಾರೆ. ಈ ಮದುವೆ ನಡೆದೇ ನಡೆಯುತ್ತದೆ ಎಂದು ಅತ್ತೆ ಹೇಳುತ್ತಾರೆ. ಇಲ್ಲ ಇದು ನಡೆಯಲು ಸಾಧ್ಯವಿಲ್ಲ. ಇದು ಗೌತಮ್‌ಗೆ ಹೇಳುತ್ತೇನೆ ಎಂದು ಭೂಮಿಕಾ ಹೇಳುತ್ತಾಳೆ.
ಗೌತಮ್ ಏನು ಎಂದು ನನಗೆ ಗೊತ್ತು. ಮುಂದೆ ಏನಾಗುತ್ತದೆ ಎಂದೂ ನನಗೆ ಗೊತ್ತು. ಮುಂದಾಗುವ ಪರಿಣಾಮವನ್ನು ನೀನು ಒಬ್ಬಳೇ ಅನುಭವಿಸಬೇಕಾಗುತ್ತದೆ ಎಂದು ಶಕುಂತಲಾ ದೇವಿ ಹೇಳುತ್ತಾಳೆ. ನನ್ನ ತಮ್ಮನ ಬಗ್ಗೆ ಕೆಟ್ಟದ್ದಾಗಿ ಮಾತನಾಡುತ್ತೀಯ ಎಂದು ಗೌತಮ್ ಯಾರದ್ದೋ ಕುತ್ತಿಗೆ ಹಿಡಿತಾ ಇರುತ್ತಾರೆ. ತನ್ನ ತಮ್ಮನ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ ಎಂದು ಬೈಯುತ್ತಾ ಇರುತ್ತಾರೆ. ತನ್ನ ತಮ್ಮನಿಗೆ ಬೇರೆ ಅಫೇರ್ ಇದೆ ಎಂಬ ಮಾಹಿತಿಯನ್ನು ಆತ ನಂಬುವುದಿಲ್ಲ. ಫ್ಯಾಮಿಲಿ ವಿಷಯಕ್ಕೆ ಯಾರೇ ಬಂದರೂ ಆತ ಬಿಡುವುದಿಲ್ಲ ಎಂದು ಆನಂದ್ ಹೇಳುತ್ತಾನೆ. ಜೈದೇವ್‌ಗೆ ಯಾವುದೋ ಸಂಬಂಧ ಇದೆ ಎಂದು ಆತ ಬಂದಿದ್ದ ಎನ್ನುತ್ತಾರೆ. ಹಾಗಾದ್ರೆ, ನನ್ನ ಮಾತನ್ನೂ ಗೌತಮ್ ನಂಬುವುದಿಲ್ಲ ಎಂದು ಭೂಮಿಕಾ ತಿಳಿಯುತ್ತಾರೆ. ಆದರೆ, ಈ ರೀತಿ ಬೇರೆ ಸಂಬಂಧದ ಕುರಿತು ಮಾತನಾಡಿ ಗೌತಮ್ ಮನಸ್ಸು ಕೆಡಿಸಿದ್ದು ಕೂಡ ಶಕುಂತಲಾದೇವಿ ಪ್ಲಾನ್ ಆಗಿರುತ್ತದೆ.
ಮನೆಗೌರವ- ಅಪ್ಪಿ ಜೀವನ
ಇನ್ನೊಂದೆಡೆ ಭೂಮಿಕಾ ಯಾರಿಗೋ ಫೋನ್ ಮಾಡುತ್ತಾರೆ. ಗೌತಮ್‌ನಲ್ಲಿ ಹೇಳುವುದು ಅಷ್ಟು ಸುಲಭವಲ್ಲ ಎಂದು ಶಕುಂತಲಾದೇವಿ ಹೇಳುತ್ತಾರೆ. ನೀನು ಮದುವೆ ನಿಲ್ಲಿಸುವ ಕುರಿತು ಮಾತನಾಡಿದರೆ ಅದು ನಿಮ್ಮ ಸಂಬಂಧಕ್ಕೆ ಕುತ್ತಾಗುತ್ತದೆ. ನಿಮ್ಮ ಪ್ರೀತಿ ಸ್ನೇಹ ನಂಬಿಕೆ ಯಾವುದೂ ಉಳಿಯೋದಿಲ್ಲ. ಆಮೇಲೆ ನಿನ್ನನ್ನು ದ್ವೇಷಿಸಲು ಆರಂಭಿಸ್ತಾನೆ. ಅವನ ಮನಸ್ಸಲ್ಲಿ ನಿನಗೆ ಇರುವ ಸ್ಥಾನವನ್ನು ಕಳೆದುಕೊಳ್ಳಬೇಡ ಭೂಮಿಕಾ ಎಂದು ಹೇಳುತ್ತಾಳೆ. ಜೈದೇವ್ ಕೆಟ್ಟವನು ಅಂತ ಯಾರು ನಂಬುವುದಿಲ್ಲ, ನೀನು ಯಾಕೆ ನಂಬುತ್ತಿ ಎಂದೆಲ್ಲ ಹೇಳುತ್ತಾಳೆ ಶಕುಂತಲಾದೇವಿ.
ನೀನು ಏನೇ ಹೇಳಿದ್ರು ಅದಕ್ಕೆ ಸಾಕ್ಷಿ ಇಟ್ಟುಕೊಂಡು ಮಾತನಾಡಬೇಕು. ಆ ಹುಡುಗಿಯೇ ಬಂದು ಹೇಳಿದ್ದನ್ನು ಗೌತಮ್ ಒಪ್ಪಿಕೊಳ್ಳಬೇಕು. ಈ ಮನೆ ಮರ್ಯಾದೆ ಕಾಪಾಡಿಕೊಳ್ಳುವುದು ನಿನ್ನ ಕರ್ತವ್ಯ ಕೂಡ ಎಂದು ಶಕುಂತಲಾ ದೇವಿ ಹೇಳುತ್ತಾರೆ. ಒಂದು ಕಡೆ ಮನೆ ಗೌರವ ಮತ್ತು ಇನ್ನೊಂದು ಕಡೆ ಅಪ್ಪಿ ಜೀವನ ಎಂದು ಭೂಮಿಕಾ ಯೋಚಿಸುತ್ತಾಳೆ. ಸೀರಿಯಲ್ ಮುಂದುವರೆಯುತ್ತದೆ.
ಅಮೃತಧಾರೆ ಸೀರಿಯಲ್ ಪಾತ್ರವರ್ಗ
ಛಾಯಾ ಸಿಂಗ್: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ)
ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್: ಜೈದೇವ್
ಚಂದನ್: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ)
ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ)